ಫೆಲೆಸ್ತೀನ್ ಗಡಿಯಲ್ಲಿ ಬಿರುಗಾಳಿಯಂತೆ ಮುನ್ನುಗ್ಗಲು ಸಿದ್ಧರಾಗಿರಿ. : ಫೆಲೆಸ್ತೀನ್ ಜನತೆಗೆ ಇಸ್ಮಾಈಲ್ ಹನಿಯ್ಯ ಕರೆ

0
262

 

ಗಾಝಾ: ಇಸ್ರೇಲ್ ವಸಾಹತು ಶಾಹಿಗಳ ವಿರುದ್ಧ ಫೆಲೆಸ್ತೀನೀಯರ ಗ್ರೇಟ್ ರಿಟರ್ನ್ ಮಾರ್ಚ್ ಮೇ 15 ರ ನಂತರ ಪ್ರಾರಂಭಿಸುವುದಾಗಿ ಹಮಾಸ್ ನೇತಾರ ಇಸ್ಮಾಈಲ್ ಹನಿಯ್ಯ ಹೇಳಿದ್ದಾರೆಂದು “ಖುದ್ಸ್ ಪ್ರೆಸ್” ವರದಿ ಮಾಡಿದೆ. ಅವರು ಗಾಝಾದಲ್ಲಿ ನಡೆದ ಹಮಾಸ್ ನ ವಾರ್ಷಿಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು. ಈ ರಾಲಿಯು ಪಶ್ಚಿಮ ದಂಡೆ ಮತ್ತು ಸ್ಥಳೀಯ ಪ್ರದೇಶಗಳೆಡೆಗೂ ತಲುಪಲಿದೆಯೆಂದು ಇದರ ಉನ್ನತ ನೇತಾರರ ಸಮಿತಿ ತೀರ್ಮಾನಿಸಿದೆ. ಇಸ್ರೇಲ್ ನ ದಿಗ್ಬಂಧನವನ್ನುಧ್ವಂಸಗೊಳಿಸಲು ಮೇ 15ರಂದು ಪ್ರಬಲ ಹೋರಾಟವನ್ನು ಪ್ರಾರಂಭಿಸಲಿದ್ದೇವೆ. ಫೆಲೆಸ್ತೀನ್ ಗಡಿಯಲ್ಲಿ ಮನುಷ್ಯನು ಬಿರುಗಾಳಿಯಂತೆ ಮುನ್ನುಗ್ಗಬೇಕು ಎಂದವರು ಫೆಲೆಸ್ತೀನ್ ಜನತೆಗೆ ಕರೆ ನೀಡಿದರು.
ಕಳೆದ ಮಾರ್ಚ್ ಮೂವತ್ತರಂದು ಇಸ್ರೇಲ್ ವಸಾಹತು ಶಾಹಿಗಳ ವಿರುದ್ಧ ನಡೆದ ಬ್ರಹತ್ ಗ್ರೇಟ್ ಮಾರ್ಚ್ ಆಫ್ ರಿಟರ್ನ್ ವಿರುದ್ಧ ಇಸ್ರೇಲ್ ಸೇನೆಯು ಗುಂಡು ಹಾರಿಸಿದಾಗ ನಲವತ್ತೊಂದು ಫೆಲೆಸ್ತೀನಿಯರು ಬಲಿಯಾಗಿದ್ದರು. ಇದರ ವಿರುದ್ಧ ಫೆಲೆಸ್ತೀನಿಯರ ಪ್ರತಿಭಟನೆ ಈಗಲೂ ಮುಂದುವರಿದಿದೆ.