ಫೆಲೆಸ್ತೀನ್ ಜನತೆಗೆ ನಮ್ಮ ಬೆಂಬಲ ಅಚಲ: ಕತಾರ್

0
297

ದೋಹಾ: ಫೆಲೆಸ್ತೀನ್ ಜನತೆಯ ನ್ಯಾಯೋಚಿತ ಬೇಡಿಕೆಗಳು ಈಡೇರುವ ತನಕ ಅದರ ಬೆಂಬಲಕ್ಕೆ ಅಚಲವಾಗಿ ನಿಲ್ಲುವೆವು ಎಂದು ಕತಾರ್ ಹೇಳಿಕೊಂಡಿದೆ. ಇತ್ತೀಚೆಗೆ ನಡೆದ ಸಚಿವ ಮಟ್ಟದ ಸಭೆಯಲ್ಲಿ ಫೆಲೆಸ್ತೀನ್ ಜನತೆಗೆ  ತನ್ನ ಬೆಂಬಲವನ್ನು ಮುಂದುವರಿಸುವುದಾಗಿ ಕತಾರ್ ಪುನರುಚ್ಚರಿಸಿದೆ. ಫೆಲೆಸ್ತೀನೀ ಜನತೆಯ ವಿರುದ್ದ ನಡೆಯುತ್ತಿರುವ ದೌರ್ಜನ್ಯದ ವಿರುದ್ಧ ಜಗತ್ತು ಒಂದಾಗಿ  ಪ್ರತಿಭಟಿಸಬೇಕೆಂದು  ಸಚಿವ ಸಭೆ ಆಗ್ರಹಿಸಿದೆ. ಸ್ವಾತಂತ್ರ್ಯಕ್ಕಾಗಿ  ಹೋರಾಡುತ್ತಿರುವ ಫೆಲೆಸ್ತೀನ್ ಜನತೆಯು ಪ್ರತೀ ವರ್ಷ ರಾಲಿಯನ್ನು ಸಂಘಟಿಸುತ್ತಿದೆ. ಈ ಬಾರಿಯ ರಾಲಿಯ ಮೇಲೆ ಇಸ್ರೇಲ್  ನಡೆಸಿದ  ದಾಳಿಗೆ ಸಿಲುಕಿ ಹದಿನೇಳು ಮಂದಿ ಬಲಿಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು. ಫೆಲೆಸ್ತೀನಿಯರ ಹಕ್ಕುಗಳನ್ನು ಕಬಳಿಸುತ್ತಿರುವ ಇಸ್ರೇಲ್‍ನ ವಿರುದ್ಧ ವಿಶ್ವದ ವೇದಿಕೆಗಳಲ್ಲಿ ದನಿಯೆತ್ತಲು ನಾವು ಮುಂದಾಗುವೆವು ಎಂಬ ಠರಾವನ್ನು  ಕತಾರ್ ಸಚಿವ  ಸಬೆಯು ಅಂಗೀಕರಿಸಿದೆ.