ಫೆಲೆಸ್ತೀನ್ ನಿರಾಶ್ರಿತರಿಗೆ ಕುವೈತ್ ನಿಂದ ಎರಡು ಮಿಲಿಯನ್ ಡಾಲರ್ ನೆರವು 

0
1416

ಕುವೈತ್: ವಿಶ್ವಸಂಸ್ಥೆಯ ನಿರಾಶ್ರಿತರ ನೆರವಿಗಾಗಿನ ಸಂಘಟನೆಯಾದ ಯು.ಎನ್.ಆರ್.ಡಬ್ಲ್ಯೂ.ಎ ಗೆ ಕುವೈತ್ ದೇಶವು ನೀಡಿದ ಎರಡು ಮಿಲಿಯನ್ ಡಾಲರ್ ಅನ್ನು ನಿರಾಶ್ರಿತರಲ್ಲಿ  ನವಿತರಿಸಲಾಯ. ಫೆಲೆಸ್ತೀನ್ ನಿರಾಶ್ರಿತರಿಗೆ ನೆರವಾಗಲು ಈ ಮೊತ್ತವನ್ನು ನೀಡಿದೆ, ಪ್ರತೀವರ್ಷ ವಿಶ್ವ ಸಂಸ್ಥೆಗೆ ನೀಡುವ ನೆರವಿನ ಭಾಗವಿದು ಎಂದು ಜೋರ್ಡಾನ್‍ನಲ್ಲಿರುವ ಕುವೈತ್ ರಾಯಭಾರಿ ಡಾ. ಹಮದ್ ಅಲ್ ದುಏಜ್ ಹೇಳಿದ್ದಾರೆ.
ಫೆಲೆಸ್ತೀನ್ ನಿರಾಶ್ರಿತರಿಗೆ ವಿವಿಧ ಸಂಸ್ಥೆಗಳ ಮುಖಾಂತರ ನೆರವಾಗಲು ಕುವೈತ್ ಸಿದ್ದವಾಗಿದೆ.  ಕಳೆದ ಕೆಲವಾರು ವರ್ಷಗಳಿಂದ ಅದು ಈ ರೀತಿಯ ನೆರವು ನೀಡುತ್ತಾ ಬಂದಿದೆ. ನಿರಾಶ್ರಿತರ ಆರೋಗ್ಯ, ಶಿಕ್ಷಣ, ಸಾಮಾಜಿಕ ಅಭಿವೃದ್ದಿ ಕಾರ್ಯಗಳನ್ನು ಗುರಿಯಾಗಿಸಿ ಈ ಕ್ರಮ ಕೈಗೊಳ್ಳಲಾಗಿದೆಯೆಂದು ಅವರು ಹೇಳಿದರು. ಇದರಿಂದಾಗಿ ಅವರು ಅನುಭವಿಸುತ್ತಿರುವ ಮಾನಸಿಕ ಯಾತನೆಯನ್ನು ಪರಿಹರಿಸಲು ಸಹಾಯಕವಾಗುತ್ತದೆ. ಅಮೇರಿಕವು ಪ್ರತಿವರ್ಷ ವಿಶ್ವ ಸಂಸ್ಥೆಗೆ ನೀಡುವ ನೆರವನ್ನು 65 ಮಿಲಿಯನ್ ಡಾಲರ್‍ಗಳಿಗೆ ಇಳಿಸಿತ್ತು. ಆದ್ದರಿಂದ ನೆರವಿನ ಈ ಸಂಸ್ಥೆಯು ಆರ್ಥಿಕ ಸಂಕಷ್ಟಕ್ಕೆ ಸಿಲುಕಿತ್ತು. ಆ ಬಳಿಕ ಈ ಸಂಸ್ಥೆಗೆ ಉದಾರವಾಗಿ ನೆರವು ನೀಡುವಂತೆ ವಿಶ್ವಸಂಸ್ಥೆಯು ವಿಶ್ವದ ವಿವಿಧ ರಾಷ್ಟ್ರಗಳೋಂದಿಗೆ ನೆರವು ಯಾಚಿಸಿತ್ತು.