ಬಿಲಾಲ್, ಮರ್ಯಮ್ ಹಾಗೂ ಜುಮಾನ ಗೆ ”ನಜ್ಮೆ ಇಖ್ವಾನ್” ಚಿನ್ನದ ಪದಕ

0
718

ಭಟ್ಕಳ: ತರಬಿಯತ್ ಎಜ್ಯುಕೇಶನ್ ಸೂಸೈಟಿ ಶಮ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ, ನ್ಯೂಶಮ್ಸ್ ಸ್ಕೂಲ್ ಇದರ ಪ್ರತಿಷ್ಟಿತ ‘ನಜ್ಮೆ ಇಖ್ವಾನ್’ ಚಿನ್ನದ ಪದಕವನ್ನು ಎಸ್.ಎಸ್.ಎಲ್.ಸಿ. ಯಲ್ಲಿ ವ್ಯಾಸಂಗ ಮಾಡುತ್ತಿರುವ ಮುಹಮ್ಮದ್ ಬಿಲಾಲ್ ಅಝಾದ್, ಮರ್ಯಮ್ ಇಸ್ಹಾಖಿ ಹಾಗೂ ಜುಮಾನಾ ಸಿದ್ದಿ ಆಹ್ಮದಾ ಪಡೆದುಕೊಂಡಿದ್ದಾರೆ. ವಿದ್ಯಾರ್ಥಿಗಳ ಸರ್ವತೋಮುಖ ಬೆಳೆವಣೆಗೆಯನ್ನು ಪರಿಗಣಿಸಿ ವರ್ಷದ ಅತ್ಯುತ್ತಮ ವಿದ್ಯಾರ್ಥಿಗಳಿಗೆ ಈ ಪ್ರಶಸ್ತಿ ನೀಡಲಾಗುತ್ತದೆ.
ಹಬಳೆ ಗ್ರಾ.ಪಂ.ವ್ಯಾಪ್ತಿಯ ಜಾಮಿಯಾಬಾದ್ ರಸ್ತೆಯಲ್ಲಿನ ಸೈಯ್ಯದ್ ಅಲಿ ಕ್ಯಾಂಪಸ್ ನಲ್ಲಿ ಬುಧವಾರ ಹಾಗೂ ಗುರುವಾರ ಎರಡು ದಿನ ನಡೆದ 46ನೇ ಶಾಲಾ ವಾರ್ಷೀಕೋತ್ಸವಾ ಸಮಾರಂಭದಲ್ಲಿ ಅಂಜುಮನ್ ಹಾಮಿಯೆ ಮುಸ್ಲಿಮೀನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅಬ್ದುಲ್ ರಹೀಂ ಜುಕಾಕೋ ಹಾಗೂ ಎಸ್.ಐ.ಓ ಮಾಜಿ ರಾಷ್ಟ್ರಾಧ್ಯಕ್ಷ ಅಶ್ಫಾಖ್ ಆಹ್ಮದ್ ಪ್ರಶಸ್ತಿಯನ್ನು ಪ್ರದಾನಿಸಿದರು.
ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಎಸ್.ಐ.ಓ ಮಾಜಿ ರಾಷ್ಟ್ರಾಧ್ಯಕ್ಷ ಅಶ್ಫಾಖ್ ಆಹ್ಮದ್, ಶಿಕ್ಷಣದ ಒಳ್ಳೆಯ ಉತ್ತಮ ಕಾರ್ಯನಿರ್ವಹಿಸುವ ರೋಬೋಟ್ ಗಳನ್ನು ನಿರ್ಮಿಸುವುದಲ್ಲ ಬದಲಾಗಿ ಉತ್ತಮ ಮನುಷ್ಯರನ್ನು ನಿರ್ಮಿಸುವುದಾಗಿದೆ. ಇಂದು ಉನ್ನತ ಶಿಕ್ಷಣ ಪಡೆಯುತ್ತಿರುವುದು ಡಾಕ್ಟರ್, ಇಂಜೀನಿಯರ್ ಆಗುತ್ತಿರುವುದು ಉತ್ತಮ ಪ್ಯಾಕೇಜ್ ಸಿಗತ್ತದೆ ಎನ್ನುವು ಉದ್ದೇಶದಿಂದಾಗಿದೆ. ಶಿಕ್ಷಣದ ಪಡೆಯುವುದು ಅಂದರೆ ಹಣಗಳಿಕೆಯೊಂದೆ ಅಲ್ಲ. ಅದಕ್ಕೂ ಮೀರಿ ಸಮಾಜ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದು, ಮಾನವೀಯ ಪ್ರಜ್ಞೆ ಬೆಳೆಸಿಕೊಳ್ಳುವುದಾಗಿದೆ ಎಂದರು.
ಅಂಜುಮನ್ ಶಿಕ್ಷಣ ಸಂಸ್ಥೇಯ ಅಧ್ಯಕ್ಷ ಅಬ್ದುಲ್ ರಹೀಮ್ ಜುಕಾಕೋ, ಇದು ಸ್ಮಾರ್ಟ್ ಯುಗವಾಗಿದ್ದು ಪ್ರತಿಯೊಂದು ಸ್ಮಾರ್ಟ್ ಆಗಿದೆ. ಶಿಕ್ಷಣ,ವಿದ್ಯಾರ್ಥಿ,ಪಾಲಕರೂ ಸ್ಮಾರ್ಟ್ ಆಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳ, ಶಿಕ್ಷಣ ಸಂಸ್ಥೆಗಳ ಹೊಣೆಗಾರಿಕೆ ದ್ವಿಗುಣಗೊಳ್ಳುತ್ತದೆ. ಸಮಾಜದ ಉತ್ತಮ ಪ್ರಜೆಗಳನ್ನು ತಯಾರಿಸುವುದರೊಂದಿಗೆ ವಿದ್ಯಾರ್ಥಿಗಳಲ್ಲಿ ಹೊಣೆಗಾರಿಕೆ ಪ್ರಜ್ಞೆಯನ್ನು ಬೆಳೆಸಬೇಕು ಎಂದರು.
ತರಬಿಯತ್ ಎಜ್ಯುಕೇಶನ್ ಸೂಸೈಟಿಯ ಹಣಕಾಸು ಕಾರ್ಯದರ್ಶಿ ಡಾ.ಕ್ವಾಜಾ ಒವೇಸ್ ರುಕ್ನುದ್ದೀನ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.ಶಮ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಎಂ.ಆರ್.ಮಾನ್ವಿ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ತಲ್ಹಾ ಸಿದ್ದಿಬಾಪ ವಾರ್ಷೀಕ ವರದಿಯನ್ನು ಮಂಡಿಸಿದರು. ಉಪಾಧ್ಯಕ್ಷ ಸೈಯ್ಯದ್ ಅಶ್ರಫ್ ಬರ್ಮಾವರ್ ಧನ್ಯವಾದ ಅರ್ಪಿಸಿದರು.

ಗುರುವಾರ ಮಹಿಳೆಯರಿಗಾಗಿ ನಡೆದ ಸಮಾರಂಭದಲ್ಲಿ ಭಟ್ಕಳ ಪುರಸಭೆ ಮುಖ್ಯಾಧಿಕಾರಿ ಆಯಿಶಾ ಖಾನಂ, ಮಕ್ಕಳ ತಜ್ಞೆ ಡಾ. ಆಲೀಯ ನಾಝ್ನೀನ್ ಜುಕಾಕೋ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಪ್ರಾಂಶುಪಾಲೆ ಫಹಮಿದಾ ಡಾಟಾ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಭಟ್ಕಳ ಶಾಖೆಯ ಅಧ್ಯಕ್ಷ ಮುಜಾಹಿದ್ ಮುಸ್ತಫಾ, ಸ್ಕೂಲ್ ಬೋರ್ಡ ಚೇರಮನ್ ಕಾದಿರ್ ಮೀರಾ ಪಟೇಲ್, ತರಬಿಯತ್ ಎಜುಕೇಶನ್ ಸೂಸೈಟಿಯ ಪದಾಧಿಕಾರಿಗಳಾದ ಮೌಲಾನ ಅಝೀಝುರ್ರಹ್ಮಾನ್ ರುಕ್ನುದ್ದೀನ್,ಡಾ.ಮುಹಮ್ಮದ್ ಹನೀಫ್ ಶಬಾಬ್, ಸಲೀಮ್ ಸಾದಾ, ಶಮ್ಸ್ ಅಲುಮ್ನಿ ಅಸೋಸಿಯೇಶನ್ ಮುಸಾಬ್ ಆಬಿದಾ ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕಳೆದ ವರ್ಷ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇ.90ಕ್ಕೂ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿ ಪುರಸ್ಕರಿಸಲಾಯಿತು. ಹಳೆ ವಿದ್ಯಾರ್ಥಿ ಸಂಘದ ಸಾಧಕ ವಿದ್ಯಾರ್ಥಿಗಳಾದ ಅರ್ಕಮ್ ಮುಅಲ್ಲಿಮ್ ಹಾಗೂ ನವಾಝ್ ಖಾನ್ ರಿಗೆ ’ಪ್ರೈಡ್ ಆಫ್ ಶಮ್ಸ್-2017′ ಬಿರುದು ಫಲಕ ನೀಡಿ ಗೌರವಿಸಲಾಯಿತು. (ಫೋಟೊ: 21-ಬಿಕೆಎಲ್-01)