By December 20, 2012 0 Comments

ಮತದಾರನಿಗೆ ಗುರುತಿನ ಚೀಟಿಯೇ ಸಿಕ್ಕಿಲ್ಲ,ಇನ್ನು ಆಧಾರ್ ಕಾರ್ಡ್?

ಆಧಾರ್ ಕಾರ್ಡ್  ಸರಕಾರ ಮತ್ತು ಜನರ ನಡುವೆ  ಸೇತುವೆಯಾಗಲಿದೆ ಎಂದಿರುವ ಮನಮೋಹನ್ ಸಿಂಗ್, ಇದು ಪ್ರತಿಯೊಬ್ಬ ಭಾರತೀಯನನ್ನು ಗುರುತಿಸಿ ಮಧ್ಯವರ್ತಿಗಳ ಹಾವಳಿಯ ಸಂಕಟಗಳನ್ನು ದೂರಗೊಳಿಸಲಿದೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ.
ಇಂಥ ಮಹದುಪಕಾರ ಅದರಲ್ಲೇನಿದೆ? ಭವಿಷ್ಯದಲ್ಲಿ ಸರಕಾರದ ಸಕಲ ಕಲ್ಯಾಣಕಾರಿ ಯೋಜನೆಗಳು ಅಂದರೆ ನಿವೃತ್ತಿ ವೇತನ, ವಿದ್ಯಾರ್ಥಿ ವೇತನ, ಚಿಕಿತ್ಸಾ ನೆರವು ಇತ್ಯಾದಿಗಳು ಆಧಾರ್ ಕಾರ್ಡ್‍ನ ಮೂಲಕ ‘ಆಮ್‍ಆದ್ಮಿ’ಗೆ ನೇರವಾಗಿ ತಲುಪಿಸಲಾಗುತ್ತದೆಯಂತೆ. ಇದಕ್ಕೊಂದು ರೋಲ್ ಮಾಡ ಲಾಗಿ ರಾಜಸ್ಥಾನವನ್ನು ಕೇಂದ್ರ ಸರಕಾರ ಆಯ್ಕೆ ಮಾಡಿದೆ. ಜೈಪುರದಲ್ಲಿ ದೂದ್ ತಾಲೂಕು ಕಚೇರಿಯಲ್ಲಿ ಆಧಾರ್ ಕಾರ್ಡ್ ನೀಡುವ ಒಂದು ಕಾರ್ಯಕ್ರಮದಲ್ಲಿ ಕಳೆದ ಆಗಸ್ಟ್ 20ರಂದು ಸ್ವತಃ ಪ್ರಧಾನಿ ಭಾಗವಹಿಸಿ ಈ ಯೋಜನೆಯಿಂದ ಬಡತನ, ನಿರುದ್ಯೋಗ ಮತ್ತು ರೋಗ ದಿಂದ ಬಳಲುತ್ತಿರುವ ಕೋಟ್ಯಂತರ ಜನರಿಗೆ ವಿಶೇಷ ಲಾಭವಿದೆ ಎಂದು ಘೋಷಿಸಿದರು. ಈಗ ಚಿಲ್ಲರೆ ವ್ಯವಹಾರವನ್ನು ವಿದೇಶಿಗಳ ಕೈಗೆ ಹಸ್ತಾಂತರಿಸಿಯೂ ಪ್ರಧಾನಿ ದೇಶದ ಆಮ್‍ಆದ್ಮಿಗೆ ಲಾಭ ಎಂದು ಹೇಳು ತ್ತಾರೆ. ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಉದಯಪುರ ಜಿಲ್ಲೆಯ ಕಂದಾವಾರ್ಡ್ ಗ್ರಾಮದ ಬಾಲಿದೇವಿಗೆ 21ನೇ ಕೋಟಿಯ ಆಧಾರ್ ಕಾರ್ಡನ್ನು ವಿತರಿಸಿದರು. ಆಮ್ ಆದ್ಮಿಗೆ ತಂತ್ರಜ್ಞಾನದ ನೆರವಿನಿಂದ ಸೌಲಭ್ಯಗಳನ್ನು ನೇರವಾಗಿ ತಲುಪಿಸುವುದು ರಾಜೀವ್ ಗಾಂಧಿಯ ಕನಸಾಗಿತ್ತು. ಗ್ರಾಮ ಗ್ರಾಮಗಳಲ್ಲಿ ಟೆಲಿಫೋನ್  ಬೂತ್, ಮೊಬೈಲ್, ಕಂಪ್ಯೂಟರ್, ಇಂಟರ್‍ನೆಟ್‍ಗಳಿದ್ದು ಅದರ ಮೂಲಕ ತ್ವರಿತಗತಿಯಲ್ಲಿ ಸರಕಾರಿ ಸೇವೆ ತಲುಪುತ್ತಿದೆ. ಆಧಾರ್ ಅವರ ಕನಸಿನ ಮುಂದಿನ ಹೆಜ್ಜೆಯಾಗಿದೆ. ಈ ರೀತಿ ದೇಶವು 21ನೇ ಶತಮಾನಕ್ಕೆ ತಲುಪಿದಾಗ ಅವರ ಕನಸು ಸಾಕಾರ ಗೊಳ್ಳಬಹುದೆಂದು ಸೋನಿಯಾರ ಅಭಿಮತವಾಗಿತ್ತು. ದೇಶದ ಎರಡು ಪ್ರಮುಖ ಚೇರ್‍ಪರ್ಸನ್ ಗಳು ದೇಶದ ಮುಂದಿರಿ ಸಿರುವುದು ಉದಾತ್ತ ಕನಸುಗಳಾಗಿವೆ. ಜನರ ಅಡಿಗೆ ಅನಿ ಲಕ್ಕೆ ಪರದಾಡುವ ಸ್ಥಿತಿಯಲ್ಲಿ ನಿಲ್ಲಿಸಿ ಅದರ ಸಬ್ಸಿಡಿಯನ್ನು ಆಧಾರ್ ಕಾರ್ಡಿಗೆ ಕಳುಹಿಸುವುದು ಕಳಾಹೀನ ಗೊಂದಲವಲ್ಲ ಎಂದು ಸಾಬೀತಾಗಬೇಕಾದರೆ ಸರಕಾರದ ಪ್ರಾಮಾಣಿಕತೆ ಮುಖ್ಯವಾಗಿದೆ. ಪೆಟ್ರೋಲು,ಡೀಸೆಲು, ಅಡಿಗೆ ಅನಿಲ, ಅವಶ್ಯಕ ವಸ್ತುಗಳ ಬೆಲೆ ಹೆಚ್ಚಿಸಿ ದಿನಬಳಕೆ ವಸ್ತುಗಳಿಗೆ ಪರದಾಡುವಂತೆ ಮಾಡಿದ ಸರಕಾರದ ಮೇಲೆ ಜನರು ಅಂತಹ ದ್ದೊಂದು ನಂಬಿಕೆಯಿರಿಸಿಕೊಳ್ಳುವರೇ ಎಂಬ ಪ್ರಶ್ನೆಯು ಪ್ರಾಮಾಣಿಕವಾಗಿದೆ. ಸಕಲರ ಕಲ್ಯಾಣಕ್ಕಿಂತ ಬಡವರ ಮರ್ದ ನವೇ ರಾಜಕೀಯ ನೀತಿಯಾಗಿದೆ ಎಂದು ಒಪ್ಪಿಕೊಳ್ಳಲು ಇತ್ತೀಚೆಗಿನ ವರ್ಷಗಳಲ್ಲಿ ನಡೆಯುತ್ತಿರುವ ಲಕ್ಷಾಂತರ ರೈತರ ಆತ್ಮಹತ್ಯೆಯೊಂದೇ ನಮಗೆ ಸಾಕು. ಇಂದಿನ ರಾಜಕಾರಣಿಗಳು ರಾಜೀವರಿಗಿದ್ದ ಆಧಾರ್ ಕಲ್ಪನೆಯಿಂದ ಉಪಕಾರಕ್ಕಿಂತ ಅಪಕಾರವನ್ನೇ ತಂದು ನಿಲ್ಲಿಸಬಹುದೆಂದು ನಾವು ಸದ್ಯ ಚಿಂತಿಸ ಬೇಕಾಗಿದೆ. ಪಂಜಾಬ್‍ನಲ್ಲಿ ದಿನ ವೊಂದಕ್ಕೆ ತಲಾ ಇಬ್ಬರಂತೆ ರೈತರ ಆತ್ಮಹತ್ಯೆ ನಡೆಯುತ್ತಿದೆ ಎಂದೂ ವರದಿಗಳಿವೆ. ಎರಡು ವರ್ಷ ಮೊದಲು ಈ ಆಧಾರ್ ಕಾರ್ಡನ್ನು ಮಾಡುವ ಕೆಲಸ ಶುರುವಾಗಿತ್ತು. ಆದರೆ ಗೃಹ ಸಚಿವಾಲಯ ಮತ್ತು ಯುಐಡಿ ವಿಭಾ ಗದ ಮಧ್ಯೆ ಸಹಮತವೇರ್ಪಡದೆ  ಮುಂದೆ ಸಾಗುವುದು ಕಗ್ಗಂಟಾಗಿತ್ತು. ಆದುದರಿಂದ ಜನಸಂಖ್ಯೆ ನೋಂದಣಿ ಮತ್ತು ಆಧಾರ್ ಕಾರ್ಡ್ ಮಾಡುವ ಕೆಲಸ ಪ್ರತ್ಯಪ್ರತ್ಯೇಕವಾಗಿ ನಡೆಯಿತು. ಎರಡು ವರ್ಷಗಳಲ್ಲಿ 20 ಕೋಟಿ ಜನರಿಗೆ ಆಧಾರ್ ಕಾರ್ಡ್ ನೀಡಲಾಯಿತು. ಇನ್ನೂ 100 ಕೋಟಿ ಜನರ ಬಳಿಗೆ ಆಧಾರ್ ತಲುಪಬೇಕಾ ಗಿದೆ. ರಾಜಸ್ತಾನ, ಆಂಧ್ರ, ಝಾರ್ಖಡ್, ಕರ್ನಾಟಕ ಮತ್ತು ಮಹಾರಾಷ್ಟ್ರಗಳನ್ನು ಆಧಾರ್ ಕಾರ್ಡ್ ಯೋಜನೆಗೆ ಬಳಸಿ ಕೊಳ್ಳಲಾಗುತ್ತಿದೆ. ಈ ಮೂಲಕ ಇಲ್ಲಿ ಮಧ್ಯವರ್ತಿಗಳ ಹಾವಳಿ ಮತ್ತು ಭ್ರಷ್ಟಾ ಚಾರವನ್ನು ಯಶಸ್ವಿಯಾಗಿ ತಡೆಯ ಬಹುದು ಎಂದು ಕೇಂದ್ರ ಸರಕಾರ ಭರವಸೆ ಹೊಂದಿದೆ. ಮನಮೋಹನ್ ಸರಕಾರದ ಸಾಧನೆಗಳು ಇಂತಹ ಭರವಸೆಗಳು ಮಾತ್ರವೇ ಎಂಬ ಪ್ರಶ್ನೆ ವಸ್ತು ನಿಷ್ಠವಾಗಿದೆ. ಚುನಾವಣಾ ಆಯೋಗ ವೋಟರ್ ಐಡಿ ಪ್ರತಿಯೊಬ್ಬ ಭಾರತೀಯನಿಗೂ ಕಡ್ಡಾಯಗೊಳಿಸಿರು ವಂತೆ ಆಧಾರ್ ಕಾರ್ಡಿದ್ದರೆ ಎಲ್ಲ ಸರಕಾರಿ ಸೌಲಭ್ಯ ಸಿಗುವುದೆಂದು ಸರಕಾರ ಕಡ್ಡಾಯಗೊಳಿಸಿದರೆ ಅಂಥ ಖೇದವೇನಿಲ್ಲ. ಆದರೆ ಆಧಾರ್ ಕಾರ್ಡ್ ಮಾಡಲು ಬಳಸಿರುವ ರೀತಿ ಮಾತ್ರ ಸರಿಯಾಗಿಲ್ಲ. ಮನೆಮನೆಗೂ ಸುತ್ತಿ ಯಾರಿಗೂ ಅನ್ಯಾಯವಾಗದಂತೆ ಆಧಾರ್ ಕಾರ್ಡನ್ನು ತಯಾರಿಸು ವಂತಾಗಬೇಕು. ಆದರೆ ಈ ಮಹತ್ವ ಪೂರ್ಣ ಕಾರ್ಯ ಮಾಡುವವರು ಯಾರು ಎಂದು ನಿರ್ಣಯಿಸುವುದು ಕಷ್ಟ. ಖಾಸಗಿಗಳ ಕೈಗೆ ವಹಿಸಿಕೊಟ್ಟರೆ ವೋಟರ್ ಐಡಿಗೆ ನೂರಾರು ಸಲ ಫೆÇೀಟೋ ತೆಗೆಸಿಕೊಂಡ ಗತಿ ಕಟ್ಟಿಟ್ಟ ಬುತ್ತಿ. ಪ್ರಧಾನಿ 2014 ಆಗುವಾಗ ದೇಶದ 60 ಕೋಟಿ ಜನರ ಬಳಿ ಈ ಕಾರ್ಡ್ ಇರುತ್ತದೆ ಎಂಬ ಭರ ವಸೆಯನ್ನು ಹೊಂದಿದ್ದಾರೆ. ಸರಕಾರ ಆಧಾರ್ ಕಾರ್ಡ್‍ಗೆ ದೇಶದ ಎಲ್ಲ ಕಲ್ಯಾಣ ಯೋಜನೆಗಳನ್ನು ಜೋಡಿಸಲು ಬಯಸುತ್ತಿದೆ. ಆದರೆ ದೇಶದ ಎಲ್ಲ ನಾಗರಿಕರಿಗೆ ವೋಟರ್ ಐಡಿಯನ್ನೇ ನೀಡಲು ಇನ್ನೂ ಸಾಧ್ಯವಾಗಿಲ್ಲ. ಆಧಾರ್ ಕಾರ್ಡ್‍ನ ಸ್ಥಿತಿಯೂ ಹಾಗೆಯೇ ಆಗಿ ಹೋದರೆ ಪರಿಸ್ಥಿತಿ ಹೇಗಿದ್ದೀತು? ಆದರೂ ಇದೊಂದು ಉತ್ತಮ ಹೆಜ್ಜೆಯೇ. ಆಧಾರ್ ಸಮರ್ಪಕವಾಗಿ ಎಲ್ಲರ ಬಳಿಗೂ ಕಾರ್ಡಿನ ರೂಪದಲ್ಲಿ ತಲುಪಿದರೆ ಸರಕಾರಿ ಯೋಜನೆಯೂ ಎಲ್ಲರ ಬಳಿಗೂ ತಲುಪಬಹುದು. ಅದನ್ನು ತಲುಪಿಸುವವರು ಮತ್ತು ಕಾರ್ಡ್ ತಯಾರಿಸುವವರ ಪ್ರಾಮಾಣಿ ಕತೆಯದ್ದೇ ಪ್ರಶ್ನೆ ಇಂದು ದೇಶದ ಮುಂದಿರುವ ಬೃಹತ್ ಸಮಸ್ಯೆಯಾಗಿದೆ.

ಅರಫಾ ಮಂಚಿ

Posted in: Uncategorized

Post a Comment