ಮೊಬೈಲ್ ಸಂಖ್ಯೆಗೆ ಆಧಾರ್ ಜೋಡಣೆ: ತಾವು ಸುಳ್ಳು ಹೇಳಿದ್ದು ನಿಜ- ಕೋರ್ಟ್ ನಲ್ಲಿ ಒಪ್ಪಿಕೊಂಡ ಕೇಂದ್ರ ಸರಕಾರ 

0
1485

ನ್ಯೂಸ್ ಡೆಸ್ಕ್
ಭಾರತೀಯ ಮೊಬೈಲ್ ಗ್ರಾಹಕರು ತಮ್ಮ ಆಧಾರ್ ಸಂಖ್ಯೆಯನ್ನು ಸಿಮ್ ಕಾರ್ಡ್ ನೊಂದಿಗೆ ಜೋಡಿಸಲು ಸುಪ್ರೀಂ ಕೋರ್ಟ್ ಹೇಳಿರುವುದಾಗಿ ಸುಳ್ಳು ಹೇಳಿ ಗ್ರಾಹಕರನ್ನು ನಂಬಿಸಿರುವುದು ನಿಜ ಎಂದು ಕೇಂದ್ರ ಸರಕಾರವು  ಸು. ಕೋರ್ಟ್ ನಲ್ಲಿ ಒಪ್ಪಿಕೊಂಡಿದೆ. ಆದರೆ,  ಸು. ಕೋರ್ಟು ಹೀಗೆ ಎಲ್ಲೂ ಹೇಳಿಲ್ಲವೆಂದು  ಕೇಂದ್ರ ಸರಕಾರದ ನ್ಯಾಯವಾದಿ ಕೋರ್ಟ್ ನಲ್ಲಿ ಒಪ್ಪಿಕೊಂಡಿದ್ದಾರೆ. ಇದು ಮೊಬೈಲ್ ಕಂಪೆನಿಗಳ ಈವರೆಗಿನ ಧೋರಣೆಗೆ ಸಂಪೂರ್ಣ ವಿರುದ್ಧವಾಗಿದೆ. ನಿಮ್ಮ ಮೊಬೈಲ್ ಸಂಖ್ಯೆಗೆ ಆಧಾರ್ ಜೋಡಿಸಿ,ಇಲ್ಲವೇ ಸಂಪರ್ಕ ಕಡಿತಗೊಳಿಸುತ್ತೇವೆಂದು ಪ್ರತಿದಿನ ಮೊಬೈಲ್ ಸಿಮ್ ಕಂಪೆನಿಗಳು ಗ್ರಾಹಕರ ಮೇಲೆ ಒತ್ತಡ ಹೇರುತ್ತಿದ್ದವು. ಅಲ್ಲದೆ, ಕೇಂದ್ರ ಸರಕಾರವೂ ಇದನ್ನು ಸಮರ್ಥಿಸಿತ್ತು. ಆದರೆ, ಸು. ಕೋರ್ಟು ಈ ಬಗ್ಗೆ ಕಳೆದ ಬುಧವಾರ ಸ್ಪಷ್ಟನೆಯನ್ನು ನೀಡಿದೆ. ಇಂಥ ಆದೇಶವನ್ನು ಕೋರ್ಟು ಎಂದೂ ನೀಡಿಯೇ ಇಲ್ಲ ಎಂದಿದೆಯಲ್ಲದೆ, ಹೀಗೆ ಹೇಳಿರುವುದು ಸರಕಾರದ ಸುತ್ತೋಲೆಯೇ ಹೊರತು ಕೋರ್ಟು ಅಲ್ಲ. ಲೋಕನೀತಿ ಫೌಂಡೇಶನ್ ಸಲ್ಲಿಸಿದ ಅರ್ಜಿಯ ಮೇಲಿನ ವಿಚಾರಣೆಯ ವೇಳೆ ಈ  ಬಗೆಯ ಆದೇಶ ಹೊರಡಿಸಿಯೇ ಇಲ್ಲ ಎಂದು ಸು. ಕೋರ್ಟ್ ನ  ನ್ಯಾಯಾಧೀಶ  ಚಂದ್ರಚೂಡ್ ಹೇಳಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ತಿಳಿಸಿದೆ.
ಇದನ್ನು ಒಪ್ಪಿಕೊಂಡ  ಆಧಾರ್ ಸಂಸ್ಥೆಯ ನ್ಯಾಯವಾದಿ ರಾಕೇಶ್ ದ್ವಿವೇದಿ ಯವರು, ಕೇಂದ್ರವು ಗ್ರಾಹಕರೊಂದಿಗೆ ಸುಳ್ಳು ಹೇಳಿದೆ ಎಂದರು.