ಮೋದಿ ಸರಕಾರವನ್ನು ತರಾಟೆಗೆ ತೆಗೆದುಕೊಂಡ ಚರ್ಚ್ ಆಫ್ ಸೌತ್ ಇಂಡಿಯ

0
731

ನ್ಯೂಸ್ ಡೆಸ್ಕ್
ಸುಮಾರು 4.5 ಮಿಲಿಯನ್ ಸದಸ್ಯರನ್ನು ಹೊಂದಿರುವ ಭಾರತದಲ್ಲಿ ದ್ವಿತೀಯ ಬೃಹತ್ ಚರ್ಚ್ ಆದ ಚರ್ಚ್ ಆಫ್ ಸೌತ್ ಇಂಡಿಯಾವು (ಸಿಎಸ್ ಐ) ಬಿಜೆಪಿ ವಿರುದ್ಧ ತನ್ನ ಆಕ್ರೋಶವನ್ನು ವ್ಯಕ್ತಪಡಿಸಿದೆ. ಚರ್ಚ್ ನ ಮುಖ್ಯ ಗುರುಗಳಾದ ಬಿಷಪ್ ಥಾಮಸ್ ಕೆ. ಓಮ್ಮೇನ್ ರವರು ಶುಕ್ರವಾರದಂದು ಬಹಿರಂಗ ಪತ್ರವನ್ನು ಬಿಡುಗಡೆ ಗೊಳಿಸುವ ಮೂಲಕ ಬಿಜೆಪಿಯ ವಿರುದ್ಧ ತಮ್ಮ ಧ್ವನಿಯನ್ನೆತ್ತಿದ್ದಾರೆ.
“ಎನ್ ಡಿಎ ಸರಕಾರವು ಬಡವರಿಗೆ ಮತ್ತು ಅಲ್ಪಸಂಖ್ಯಾತರಿಗೆ ಒಂದು ಕರಾಳ ಸ್ವಪ್ನದಂತಾಗಿದೆ. ಭಾರತೀಯ ಸಂವಿಧಾನವು ತನ್ನ ಪೀಠಿಕೆಯಲ್ಲಿ ಸಾರುವ ಸಮಾನತೆ, ಸಹೋದರತ್ವ, ಸ್ವಾತಂತ್ರ್ಯ ಗಳಂತಹ ತತ್ವಗಳನ್ನು ಗಾಳಿಗೆ ತೂರಿ ಭಾರತೀಯ ಪ್ರಜೆಗಳಿಗೆ ನೀಡಬೇಕಾದ ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯವನ್ನು ಬದಿಗಿಟ್ಟು ಕೇವಲ ಹಿಂದುತ್ವ ಸಿದ್ಧಾಂತಗಳ ಬೇರನ್ನು ಬಿಚ್ಚಲು ಪ್ರಯತ್ನಿಸುತ್ತಿದೆ” ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.
ಸರಕಾರವು ದೊಡ್ಡ ದೊಡ್ಡ ಕಾರ್ಪೊರೇಟ್ ಹಗರಣಗಾರರಿಗೆ ಹಣವನ್ನು ಸಾಲ ನೀಡಿ ಅವರ ಹೊಟ್ಟೆ ತುಂಬಿಸುತ್ತಿದೆಯಾದರೆ ಬಡವರಿಗೆ, ಬಡ ರೈತರಿಗೆ ಸಾಲ ಒದಗಿಸಲು ಆಸಕ್ತಿ ತೋರುತ್ತಿಲ್ಲ. ಎಸ್‌ಸಿ /ಎಸ್ ಟಿ ಕಾಯ್ದೆಯ ದುರ್ಬಲೀಕರಣದ ವಿರುದ್ಧ ನ್ಯಾಯ ಮತ್ತು ಸಮಾನತೆಗಾಗಿ ಹೋರಾಡುತ್ತಿರುವ ದಲಿತರು ಮತ್ತು ಬುಡಕಟ್ಟು ಸಮುದಾಯದವರನ್ನು ಚರ್ಚ್ ಬೆಂಬಲಿಸುತ್ತದೆಯಲ್ಲದೇ ಹಿಂದು ಭಯೋತ್ಪಾದಕರಿಂದ ದಲಿತ ರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ವಿರುದ್ಧ ಧ್ವನಿ ಎತ್ತುತ್ತದೆ ಎಂದವರು ಹೇಳಿದ್ದಾರೆ.
ಎನ್ ಡಿ ಎ ಸರಕಾರವು ತನ್ನ ನಾಲ್ಕು ವರ್ಷದ ಆಳ್ವಿಕೆಯಲ್ಲಿ ತಾನು ಕೊಟ್ಟ ಮಾತುಗಳನ್ನು ಪಾಲಿಸುವಲ್ಲಿ ವಿಫಲವಾದುದರ ಕುರಿತು ಬಿಷಪ್ ರವರು ಅಸಮಾಧಾನ ವ್ಯಕ್ತ ಪಡಿಸಿದ್ದು, ಸರಕಾರ ಘೋಷಿಸಿರುವ, ಸಬ್ ಕಾ ಸಾಥ್ ಸಬಾ ಕಾ ವಿಕಾಸ್, ಕಪ್ಪು ಹಣ ಹಿಂತರುವಿಕೆ, ಮಹಿಳಾ ಸುರಕ್ಷತೆ ಮತ್ತು ಸಂರಕ್ಷಣೆಯಲ್ಲಿನ ವಿಫಲತೆ,ರೈತರಿಗೆ ನೀಡಿದ ಭರವಸೆಗಳು, ಪ್ರತಿ ವರ್ಷ ಯುವ ಜನತೆಗೆ 20 ಮಿಲಿಯನ್ ಉದ್ಯೋಗ ಸೃಷ್ಟಿಸುತ್ತೇವೆಂಬ ಭರವಸೆಗಳು ಸೇರಿದಂತೆ ಹಲವು ಭರವಸೆಗಳನ್ನು ನೀಡಿದ್ದು ಯಾವುದನ್ನೂ ಪೂರೈಸಿಲ್ಲವೆಂಬುದರ ಕುರಿತು ಬಹಿರಂಗ ಪತ್ರದಲ್ಲಿ ನಮೂದಿಸಿದ್ದಾರೆ‌.

(ಭಾರತದ ದ್ವಿತೀಯ ಬೃಹತ್ ಚರ್ಚ್ ಆದ ಚರ್ಚ್ ಆಫ್ ಸೌತ್ ಇಂಡಿಯಾವು (ಸಿಎಸ್ ಐ) . ಚರ್ಚ್ ನ ಮುಖ್ಯ ಗುರುಗಳಾದ ಬಿಷಪ್ ಥಾಮಸ್ ಕೆ. ಓಮ್ಮೇನ್ ರವರು BJP ಯ ವಿರುದ್ಧ ಬಿಡುಗಡೆ ಮಾಡಿದ ಬಹಿರಂಗ ಪತ್ರದ ಲಿಂಕ್ ಕೆಳಗಡೆ ಕೊಡಲಾಗಿದೆ)

An Open Letter from Bishop Most Revd Thomas K. Oommen (Moderator, Church of South India) to the Fellow Citizens of India.