ಮ್ಯಾನ್ಮಾರ್ ಅಧ್ಯಕ್ಷರ ರಾಜಿನಾಮೆ: ಅಂತಾರಾಷ್ಟ್ರೀಯ ಒತ್ತಡ ಕಾರಣವೇ?

0
530

ಯಾಂಗೂನ್: ಮ್ಯಾನ್ಮಾರ್ ಅಧ್ಯಕ್ಷ ಹಟಿನ್ ಕ್ಯೂ ತನ್ನ ಹುದ್ದೆಗೆ ರಾಜಿನಾಮೆ ನೀಡಿದ್ದಾರೆ. ಅದಕ್ಕೆ ಕಾರಣವಿನ್ನೂ ಸ್ಪಷ್ಟವಾಗಿಲ್ಲ. ರೋಹಿಂಗ್ಯನ್ ವಿಷಯದಲ್ಲಿ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಟೀಕೆ ಬಂದ ಕಾರಣದಿಂದ ರಾಜಿನಾಮೆ ನೀಡಲಾಗಿದೆಯೆಂಬ ಸೂಚನೆಯಿದೆ. ಆದರೆ 71ರ ಹರೆಯದ ಈ ಅಧ್ಯಕ್ಷರಿಗೆ ವಿಶ್ರಾಂತಿಯ ಅಗತ್ಯವಿದೆ ಎಂಬು ಅವರ ಫೇಸ್ ಬುಕ್ ಪೇಜ್‍ನಲ್ಲಿ ಹೇಳಲಾಗಿದೆ. ದಶಕಗಳ ಕಾಲ ಇದ್ದ ಸೇನಾಡಳಿತವನ್ನು ತಳ್ಳಿ ಆಂಗ್ ಸಾನ್ ಸೂಕಿ ಅಧಿಕಾರಕ್ಕೇರಿದ ಬಳಿಕ 2016ರಲ್ಲಿ ಹಟಿನ್ ಅದ್ಯಕ್ಷರಾಗಿ ಅಧಿಕಾರವಹಿಸಿದ್ದರು.

ಮ್ಯಾನ್ಮಾರ್‍ನ ಆಡಳಿತಗಾರ್ತಿ ಆಂಗ್ ಸಾನ್ ಸೂಕಿಯ ಅಪ್ತರಾಗಿರುವ ಇವರು ರೋಹಿಂಗ್ಯನ್ ವಿಚಾರದಲ್ಲಿ ಆಂಗ್ ಸಾನ್ ಸೂಕಿ ತೀವ್ರ ಟೀಕೆಯನ್ನು ಎದುರಿಸುತ್ತಿರುವಾಗಲೇ ರಾಜಿನಾಮೆ ನೀಡಿ ಹೊರ ಬಂದಿದ್ದಾರೆ. ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡುವ ತನಕ ಉಪಾಧ್ಯಕ್ಷ ಮಿಯಿಂಟ್ ಸ್ಯೂ ಆ ಹುದ್ದೆಯಲ್ಲಿರುವರು. ಇನ್ನು ಏಳು ದಿನಗಳೊಳಗಾಗಿ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಲೇ ಬೇಕಾಗಿದೆ.

ಸೇನಾಡಳಿತದ ಕಾಲಾವಧಿಯಲ್ಲಿ ಸುದೀರ್ಘ ಕಾಲ ಜೈಲುವಾಸ ಅನುಭವಿಸಿದ ಆಂಗ್ ಸಾನ್ ಸೂಕಿಗೆ ಸಂವಿಧಾನ ಪ್ರಕಾರ ಅಧ್ಯಕ್ಷರಾಗುವುದಕ್ಕೆ ಅವಕಾಶವಿಲ್ಲ. ಮಕ್ಕಳಿಗೆ ವಿದೇಶ ಪೌರತ್ವ ಇದ್ದರೆ ಅಧ್ಯಕ್ಷರಾಗಲು ಅವಕಾಶವಿಲ್ಲ. ಪತಿ ಮರಣಹೊಂದಿರುವ ಸೂಕಿಗೆ ಎರಡು ಮಕ್ಕಳಿದ್ದಾರೆ.