ಯಹೂದಿ ಮಹಿಳೆಯನ್ನು ಪ್ರವಾದಿ ವಿವಾಹವಾಗಿದ್ದಾರೆ, ಇಸ್ರೇಲ್ ನೊಂದಿಗೆ ನಾವು ಸಂಬಂಧ ಬೆಳೆಸುತ್ತೇವೆ- ಸೌದಿ ರಾಜಕುಮಾರ

0
6453

ವಾಷಿಂಗ್ಟನ್: ಇಸ್ರೇಲ್ ಮತ್ತು ಫೆಲೆಸ್ತೀನ್ ಒಂದೇ ರೀತಿ ಹಕ್ಕುದಾರರು ಎಂದು ಸೌದಿ ಅರೇಬಿಯಾದ ರಾಜಕುಮಾರ ಮುಹಮ್ಮದ್ ಬಿನ್ ಸಲ್ಮಾನ್ ಹೇಳಿದ್ದಾರೆ.
ಅಮೇರಿಕಾ ಕೇಂದ್ರೀಕೃತವಾಗಿರುವ ದ ಅಟ್ಲಾಂಟಿಕ್ ಮ್ಯಾಗಝಿನ್‍ಗೆ ನೀಡಿದ ಸಂದರ್ಶನದಲ್ಲಿ ಈ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದ್ದಾರೆ. ಫೆಲೆಸ್ತೀನಿಯರು ಯಾವ ರೀತಿ ಅವರ ಭೂಮಿಯ ಮೇಲೆ ಹಕ್ಕುದಾರರೋ ಅದೇ ರೀತಿ ಇಸ್ರೇಲಿಗರೂ ಹಕ್ಕುದಾರರು. ಎಲ್ಲರಿಗೂ ಶಾಂತಿಯುತವಾಗಿ ಜೀವಿಸುವ ಹಕ್ಕು ಇದೆ. ತಮ್ಮ ದೇಶವು ಇಸ್ರೇಲಿನೊಂದಿಗೆ ಸಂಬಂಧ ಬೆಳೆಸಲು ಉತ್ಸುಕವಾಗಿದೆ ಎಂದೂ ಅವರು ಹೇಳಿದ್ದಾರೆ.
ಇಸ್ರೇಲ್ ಆರ್ಥಿಕವಾಗಿ ಪ್ರಬಲವಾದ ದೇಶವಾಗಿದೆ. ಇಲ್ಲಿ ಆರ್ಥಿಕ ವ್ಯವಸ್ಥೆ ದಿನೇ ದಿನೇ ಅಭಿವೃದ್ದಿ ಹೊಂದುತ್ತಿದೆ. ಇಸ್ರೇಲ್ ಮತ್ತು ಜಿಸಿಸಿ ದೇಶಗಳೂ ತಮ್ಮ ಸಂಬಂಧ ಸುದೃಡಗೊಳಿಸಲು ಇಚ್ಚಿಸುತ್ತಿವೆ. ವಿಶೇಷವಾಗಿ ಈಜಿಪ್ತ್ ಮತ್ತು ಜೋರ್ಡಾನ್ ಕೂಡಾ ಮುಂಚೂಣಿಯಲ್ಲಿದೆ.
ಜೆರೂಸಲೇಮ್‍ನ ಪವಿತ್ರ ಮಸೀದಿಯ ಕುರಿತ ಫೆಲೆಸ್ತೀನಿಯರ ಹಕ್ಕುಗಳ ಬಗ್ಗೆ ನನಗೆ ಆತಂಕವಿದೆ. ಆ ವಿಚಾರದಲ್ಲಿ ಯಾರೊಂದಿಗೂ ನಮಗೆ ವಿರೋಧವಿಲ್ಲ. ನಮ್ಮ ದೇಶಕ್ಕೆ ಯಹೂದಿಯರೊಂದಿಗೆ ಯಾವುದೇ ಸಮಸ್ಯೆಯಿಲ್ಲ. ನಮ್ಮ ಪ್ರವಾದಿ ಓರ್ವ ಯಹೂದಿ ಮಹಿಳೆಯನ್ನು ವಿವಾಹವಾಗಿದ್ದಾರೆ. ಕ್ರೈಸ್ತರೊಂದಿಗೂ, ಮುಸ್ಲಿಮರೊಂದಿಗೂ, ಯಹೂದಿಯರೊಂದಿಗೂ ನಮಗೆ ಯಾವುದೇ ರೀತಿಯ ತಕರಾರಿಲ್ಲ ಎಂದೂ ಅವರು ಹೇಳಿದ್ದಾರೆ