ಯು-ಟರ್ನ್ ಪಡೆಯುತ್ತಿರುವ ಜೋಕುಗಳು

0
1377

ಯು-ಟರ್ನ್ ಪಡೆಯುತ್ತಿರುವ ಜೋಕುಗಳು
ಅರಿಂದಮ್ ಚೌದ್ರಿ
ಇಂದಿರಾ ಗಾಂಧಿಯವರ ಮರಣಾನಂತರ ಗಾಂಧಿ ಪರಿವಾರಕ್ಕೆ ರಾಜಕೀಯದಲ್ಲಿ ಮುಂದುವರಿಯುವ ಯಾವುದೇ ಆಸಕ್ತಿ ಇಲ್ಲದಿದ್ದರೂ ಪಕ್ಷವೇ ಅವರನ್ನು ರಾಜಕೀಯಕ್ಕೆ ಎಳೆದು ತಂದಿರುವುದು ಎಲ್ಲರಿಗೂ ಗೊತ್ತು. ಸಂಜಯ್ ಗಾಂಧಿಯಲ್ಲಿದ್ದ ರಾಜಕೀಯದ ಹುರುಪು ಮತ್ತು ರಾಜಕೀಯದಿಂದ ಬಹುದೂರ ಸರಿಯಬೇಕೆಂಬ ಬಯಕೆಯ ಹೊಂದಿದ್ದ ರಾಜೀವ್ ಗಾಂಧಿಯವರ ಇಚ್ಛೆಗಳ್ಯಾವುದೂ ಇದೀಗ ಬಹಿರಂಗವಾಗದೇ ಉಳಿದಿಲ್ಲ. ದುರಾದೃಷ್ಟಕರವೆಂಬಂತೆ ರಾಜಕೀಯದಲ್ಲಿರಬೇಕಾದವರು ಹಾರಿ (ಹೆಲಿಕಾಫ್ಟರ್ ಅಪಘಾತದಲ್ಲಿ) ಅಂತ್ಯ ಕಂಡರೆ ಇನ್ನೊಬ್ಬರು ಹಾರುವುದನ್ನು (ಪೈಲಟ್) ಬಿಟ್ಟು ರಾಜಕೀಯದಿಂದಾಗಿ ತಮ್ಮ ಅಂತ್ಯ ಕಂಡು ಕೊಂಡರು.
ತದನಂತರ ರಾಹುಲ್ ಗಾಂಧಿಗಾಗಲಿ ಅಥವಾ ಸೋನಿಯಾ ಗಾಂಧಿಗೇ ಆಗಿರಲಿ ರಾಜಕೀಯದಲ್ಲಿ ಯಾವುದೇ ಆಸಕ್ತಿ ಇದ್ದಿರ ಲಿಲ್ಲ. ಆದ್ದರಿಂದ ಪಕ್ಷದ ಎಲ್ಲ ಹೊಣೆಗಾರಿಕೆಗಳು ಪಿ.ವಿ. ನರಸಿಂಹ ರಾವ್‍ರವರ ಮೇಲೆ ಹಾಕಿಬಿಟ್ಟು ಕೈ ತೊಳೆದುಕೊಂಡ ರಾದರೂ ನಾಯಕರಲ್ಲಿನ ಏರುಪೇರುಗಳಿಂದಾಗಿ ಪಕ್ಷದ ಬುಡ ಭದ್ರಗೊಳಿಸಲು ಮತ್ತೊಮ್ಮೆ ಅದು ಗಾಂಧೀ ಪರಿವಾರದ ಬಳಿ ಸಹಾಯ ಯಾಚನೆಗಾಗಿ ಬಂದು ನಿಂತು ಬಿಟ್ಟಿತು. ಒಲ್ಲದ ಮನಸ್ಸಿನಿಂದ ಸೋನಿಯಾ ಗಾಂಧಿ ಹೊಣೆಗಾರಿಕೆಯ ಚುಕ್ಕಾಣಿ ಹಿಡಿದರಾದರೂ ಮನ್ ಮೋಹನ್‍ಸಿಂಗ್‍ರವರ ಮೇಲೆ ಎರಡೆರಡು ಹೊಣೆಗಾರಿಕೆಗಳ ಹೊರ ಬಿದ್ದಿತು.
ಭ್ರಷ್ಟಾಚಾರದ ಹಗರಣಗಳು ಎಲ್ಲೆಡೆ ಹರಡಿಕೊಂಡಿದ್ದಾಗ ಇಡೀ ದೇಶದಲ್ಲಿಯೇ ಭ್ರಷ್ಟಾಚಾರ ವಿರೋಧಿ ಆಂದೋಲನವು ಹೆಡೆ ಎತ್ತಿತು. ಮನ್‍ಮೋಹನ್ ಸಿಂಗ್‍ರವರಿಗೆ ತಮ್ಮ ಜವಾಬ್ದಾರಿಗಳ ನಡುವೆ ಮಾತನಾಡಲು ಸಮಯಾವಕಾಶವೇ ಇಲ್ಲದಿದ್ದಾಗ ಮತ್ತೊಮ್ಮೆ ಗಾಂಧಿ ಪರಿವಾರದ ಮೇಲೆ ವಾಕ್ ಚಾತುರ್ಯದ ಹೊಣೆಗಾರಿಕೆ ಬಿದ್ದಿತ್ತು. ಆದರೆ ಹಿಂದಿನಂತೆ ಚತುರ ಮಾತುಗಾರಿಕೆ ಬಲ್ಲ ನಾಯಕರನ್ನು ಸೃಷ್ಟಿಸುವಲ್ಲಿ ಗಾಂಧಿ ಪರಿವಾರವು ಸೋತು ಹೋಯಿತು. ಸನ್ನಿವೇಶಗಳನ್ನು ನಿರ್ವಹಿಸಿಕೊಂಡು ಮಾತನಾಡ ಬಲ್ಲ ನಾಯಕರ ಅಭಾವ ಪಕ್ಷದಲ್ಲಿಯೂ, ಗಾಂಧೀ ಪರಿವಾರ ದಲ್ಲಿಯೂ ತಾಂಡವಾಡುತ್ತಿರುವು ಹೊರ ಜಗತ್ತಿಗೆ ಕಂಡು ಬಂತು. ಯಥಾರ್ಥವಾಗಿ ರಾಹುಲ್ ಗಾಂಧಿ, ತಾನು ಮೋದಿಯವರಂತೆ ವಾಕ್ ಚತುರನಲ್ಲವೆಂಬುದನ್ನು ಬಹಿರಂಗವಾಗಿ ಒಪ್ಪಿಕೊಂಡಿರುವುದು
ಇದಕ್ಕೆ ಪುರಾವೆಯೂ ಆಯ್ತು.
ಆದರೆ ಇದನ್ನೇ ಅಸ್ತ್ರವಾಗಿಟ್ಟುಕೊಂಡ ಬಿಜೆಪಿ ಸಾಮಾಜಿಕ ಜಾಲತಾಣಗಳಲ್ಲಿ ನಾಲ್ಕು ವರುಷಗಳ ಕಾಲ ರಾಹುಲ್ ಗಾಂಧಿಯ ಚಾರಿತ್ರ್ಯ ಹರಣ ಮಾಡುವುದನ್ನೂ ಮತ್ತು ಜೋಕುಗಳೊಂದಿಗೆ ವ್ಯಂಗ್ಯವಾಡುವುದನ್ನೂ ಚಾಚು ತಪ್ಪದೇ ಪಾಲಿಸುತ್ತಾ ಬಂತು. ದುಃಖದ ಸಂಗತಿ ಏನೆಂದರೆ ಭಾರತದಲ್ಲಿ ರಾಜಕೀಯ ವೆಂಬುದು ಇಂದು ಯೋಜನೆಗಳ ನಿರ್ವಹಣೆಯಿಂದಲ್ಲ ಬದಲಾಗಿ ವಿರೋಧ ಪಕ್ಷದಲ್ಲಿರುವ ನಾಯಕರ ಕಾಲನ್ನು ಎಷ್ಟು ಚೆನ್ನಾಗಿ ಜೋಕುಗಳ ಮೂಲಕ ಮತ್ತು ವ್ಯಂಗ್ಯಗಳ ಮೂಲಕ ಎಳೆಯಬಲ್ಲಿರಿ ಎಂಬುದರ ಮೇಲೆ ನಿರ್ಧರಿಸಲ್ಪಡುತ್ತಿದೆ. ಆದರೆ ಈ ಜೋಕುಗಳಿಗೂ ಕೂಡಾ ಇಂದು ಅವನತಿ ಬರುತ್ತಿದೆ ಎನ್ನಿಸುತ್ತದೆ. ಅಲ್ಲದಿ ದ್ದರೂ ಜನರು ಎಷ್ಟು ಸಮಯ ಹೇಳಿದ/ಕೇಳಿದ ವಿಷಯಗಳನ್ನೇ ಮತ್ತೆ ಮತ್ತೆ ಜೋಕ್ ಆಗಿ ತೆಗೆದುಕೊಳ್ಳುತ್ತಾರೆ!
ಹಾಗೆಯೇ, ಇದೀಗ ಬಿಜೆಪಿ ತನ್ನ ಕಲ್ಲು-ಮುಳ್ಳು ತುಂಬಿದ ಕಠಿಣ ಮಾರ್ಗದ ಮೇಲಿಂದು ನಡೆಯುತ್ತಿದೆ. ನಾಲ್ಕು ವರ್ಷಗಳ ರಸಿಕತೆಯ ದಿನಗಳ ನಂತರ ಈ ಜೋಕುಗಳು ಯು-ಟರ್ನ್ ಪಡೆಯುತ್ತಿವೆ. ಕಳೆದ ಕೆಲವು ತಿಂಗಳುಗಳಲ್ಲಿ ನನಗೆ ರಾಹುಲ್ ಗಾಂಧಿಯ ಕುರಿತಾದ ಯಾವುದೇ ಜೋಕುಗಳಾಗಲಿ, ವ್ಯಂಗ್ಯ ಕುಹಕಗಳಾ ಗಲಿ ಲಭಿಸಿಲ್ಲ. ಆದರೆ ದಿನಂಪ್ರತಿ ಕನಿಷ್ಠ 10 ಜೋಕುಗಳಾದರೂ ಮಾನ್ಯ ಪ್ರಧಾನಿಯವರ ಬಗ್ಗೆ, ಹಣಕಾಸು ಸಚಿವರು, ಬಿಜೆಪಿ ರಾಷ್ಟ್ರಾಧ್ಯಕ್ಷ, ಯುಪಿಯ ಮುಖ್ಯಮಂತ್ರಿ ಮತ್ತು ಬಿಜೆಪಿ ಅಥವಾ ಆರ್‍ಎಸ್‍ಎಸ್‍ನ ಕುರಿತಾಗಿ ಲಭಿಸುತ್ತದೆ. ಸಮಗ್ರವಾಗಿ ಹೇಳುವುದಾದರೆ ಕಾಂಗ್ರೆಸ್ ಪಕ್ಷದ ಸಾಮಾಜಿಕ ಮಾಧ್ಯಮಗಳು 4 ವರ್ಷ ಗಳ ನಂತರ ಇದೀಗ ನಿದ್ರೆಯಿಂದ ಎದ್ದಂತೆ ಕಾಣುತ್ತಿದೆ. 2019ರ ಚುನಾ ವಣೆಗಳಿಗೆ ಭರಾಟೆಯ ತಯಾರಿಯಲ್ಲಿ ರುವಂತೆ ಕಾಣುತ್ತಿರುವ ಕಾಂಗ್ರೆಸಿನ ನಡೆಯು ಬಿಜೆಪಿಗೆ ಕಠಿಣ ದಿನಗಳನ್ನೂ ಮುಂಬರಲಿರುವ ಅಪಾಯ ಕರೆಗಂಟೆ ಯನ್ನೂ ಹೊಡೆದು ಹೊಡೆದು ಕೆಣಕಿದಂತಿದೆ.
ಗೋರಕ್‍ಪುರ್ ಮತ್ತು ಇತರೆ ಪ್ರದೇಶಗಳಲ್ಲಿ ನಡೆದ ಗೋರಕ್ಷಕರ ಅಟ್ಟಹಾಸದಿಂದಾಗಿ ಸಾಮಾನ್ಯ ಜನರು ತತ್ತರಿಸಿ ಮಮ್ಮಲ ಮರುಗುತ್ತಿದ್ದಾರೆ. ಬಿಜೆಪಿ ಎಲ್ಲವೂ ಸರಿಯಾಗಿದೆ ಎಂಬಂತೆ ವರ್ತಿಸುತ್ತಿರುವುದು ಈಗಾ ಗಲೇ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ. ‘ಹಿಂದೂ’ ಪಕ್ಷದ ಹೆಸರಲ್ಲಿ ನೀವು ಹಿಂದೂಗಳ ಮತ ಬ್ಯಾಂಕನ್ನು ಕಟ್ಟಿಕೊಳ್ಳ ಬಹುದಾದರೇ, ಹಿಂದೂಗಳನ್ನು ಇತರರ ಸಾವಿಗೂ-ನೋವಿಗೂ ಕುಣಿದು ಕುಪ್ಪಳಿಸಿ ಸಂತೋಷಪಡಿರೆಂದು ಹೇಳಲು ಸಾಧ್ಯವಿಲ್ಲ. ಇಂತಹ ಹ್ಯೇಯ ಕೃತ್ಯಗಳಿಗೆ ಬದಲಾಗಿ ಹಿಂದೂಗಳು ಇತರರಿಗೆ ಮತಹಾಕಬಲ್ಲರೇ ಹೊರತು ಇಂತಹವರ ಪರವಾಗಿಯಂತೂ ನಿಲ್ಲಲಾರರು ಮತ್ತು ಇದು ಇಂದು ಪ್ರಚಲಿತವಾಗಿರುವ ವಾಸ್ತವವೂ ಹೌದು. ದೆಹಲಿ ವಿವಿ ಚುನಾವಣೆಯಿಂದ, ಜೆಎನ್‍ಯು ವಿವಿ ಚುನಾವಣೆಯಿಂದ, ಅಲಹಾಬಾದ್ ವಿವಿ ಚುನಾವಣೆ ಯಿಂದ, ಗುರ್ದಾಸ್ಪುರ್ ಚುನಾವಣೆ ಯಿಂದ ಗುರ್ಗಾಂವ್ ಮುನ್ಸಿಪಲ್ ಚುನಾವಣೆಗಳವರೆಗೆ ಒಂದರ ನಂತರ ಒಂದರಂತೆ ಸೋಲಿನ ಮೇಲೆ ಸೋಲಿನ ಆಘಾತವನ್ನು ಬಿಜೆಪಿ ಪಡೆಯುತ್ತಲೇ ಇದೆ. ಇದರೊಂದಿಗೆ ಜಾಗತಿಕವಾಗಿ ವ್ಯಕ್ತವಾಗುತ್ತಿರುವ ಅಮಾನ್ಯೀಕರಣದ ವಿಫಲತೆ, ಜಿಎಸ್‍ಟಿಯ ಕಳಪೆ ಆಧಾರ ಗಳ ಹೇರಿಕೆ, ಕಾಂಗ್ರೆಸ್‍ನ್ನು ಮುಚ್ಚಿ ಹಾಕಲು ಅಸ್ತ್ರವಾಗಿಸಿಟ್ಟ ಆಧಾರ್ ಕಾರ್ಡ್‍ನ್ನು ಭಾರೀ ಪ್ರಚಾರ ನೀಡಿ ಜಾರಿಗೆ ತಂದಿರುವುದೆಲ್ಲವೂ ಮೇಲಿಂದ ಮೇಲೆ ಬಿಜೆಪಿ ತನ್ನ ಮೇಲೆ ತಾನೇ ಎಳೆದುಕೊಂಡು ಜೋಕುಗಳ ಸೃಷ್ಟಿಗೆ ಪುಂಖಾನು ಪುಂಖವಾಗಿ ನೀಡಿದ ಮೂರು ಪ್ರಮುಖ ವಿಷಯಗಳಾಗಿವೆ.
ಬಿಜೆಪಿ ನಿರ್ಮಿಸಿರುವ ಅದಾನಿ, ಅಂಬಾನಿ ಮತ್ತು ರಾಮ್ ದೇವ್‍ರವ ರಂತಹ ಅಲ್ಪ ಜನರ ಜನಾಧಿಪತ್ಯದ ಕುರಿತು ಕಳೆದ ಮೂರು ವರ್ಷಗಳಿಂದ ಸಾಮಾನ್ಯ ಪ್ರಜೆಗಳು ಪ್ರಶ್ನಿಸುತ್ತಲೇ ಇದ್ದಾರೆ. ಆದರೆ ಅಮಿತ್ ಶಾ ಪುತ್ರನ ಕುರಿತಾದ ಹಗರಣಗಳು ಬಿಜೆಪಿಯನ್ನು ಘಾಸಿಗೊಳಿಸಿದಷ್ಟು ಬಹುಶಃ ಇನ್ಯಾ ವುದೂ ಮಾಡಿರಲಿಕ್ಕಿಲ್ಲ. ಸಕಲ ಬಿಜೆಪಿಯ ತಂತ್ರ ತಂತಿಗಳು “ನಾನು ಭ್ರಷ್ಟಾಚಾರಿ ಆಗುವುದಿಲ್ಲ ಮತ್ತು ಇತರ ರಿಗೆ ಭ್ರಷ್ಟಾಚಾರ ಮಾಡಲು ಬಿಡುವು ದಿಲ್ಲ” ಎಂಬ ಘೋಷಣೆಯಲ್ಲಿ ಸಿಲುಕಿ ಕೊಂಡಿರುವಾಗ ಅಮಿತ್ ಶಾ ಪುತ್ರನ ಕುರಿತಾದ 50,000 ದಿಂದ 80 ಕೋಟಿ ವರೆಗಿನ ಹಗರಣಗಳ ಹುತ್ತವು ಜನರ ಮನಸ್ಸಲ್ಲಿ ಬುಸುಗುಡದಿರುವಷ್ಟು ಬೇರಾವ ವಿಷಯಗಳೂ ಬಹುಶಃ ಮನೆ ಮಾಡಿರಲಿಕ್ಕಿಲ್ಲ. ಈ ಹಗರಣವು ಬಿಜೆಪಿಯನ್ನು ಅಲುಗಡಿಸಿದ್ದಂತೂ ಸತ್ಯವಾಗಿದೆ. ಈ ಕುರಿತಾದ ಜೋಕುಗಳು ಎಷ್ಟೊಂದು ದಷ್ಟ-ಪುಷ್ಟವಾಗಿ ಬೆಳೆದಿವೆ ಎಂದರೆ ಇನ್ನೊಮೆ ಯಾರೂ ಕೂಡಾ ಬಿಜೆಪಿಯ ಭ್ರಷ್ಟಾ ಚಾರ ವಿರೋಧಿ ನಿಲುವುಗಳ ಕುರಿತಾದ ಪುಂಗಿ ಹಾಡನ್ನು ಕೇಳಲು ಎಂದಿಗೂ ಕಿವಿಗೊಡಲಾರರು. ಯಾಕೆಂದರೆ ಇದೀಗ ಎಲ್ಲ ಜೋಕುಗಳು ತಿರುಗು ಬಾಣಗಳಾಗಿವೆ. ಆದರೆ ಇದೀಗ ಉದ್ಭ ವಿಸಿರುವ ಪ್ರಶ್ನೆ ಏನೆಂದರೆ; ಕಾಂಗ್ರೆಸ್ ಇದನ್ನೇ ಅಸ್ತ್ರವಾಗಿಟ್ಟುಕೊಂಡು ಬಿಜೆಪಿ ಯನ್ನು ಎದುರಿಸಲು 2019ರ ಚುನಾವ ಣೆಗೆ ತಯಾರಾಗುವುದೇ? ಇದಕ್ಕಿಂತಲೂ ಮಿಗಿಲಾದ ಪ್ರಶ್ನೆ ಏನೆಂದರೆ;
ಈ ಎಲ್ಲ ಅಪಮಾನಗಳನ್ನು ಮೀರಿ ನಿಲ್ಲಲು ದಿಟವಾಗಿ ಸಂದರ್ಭಗಳನ್ನು ನಿಭಾಯಿಸಲು ಸಮರ್ಥ ನಾಯಕನಾಗು ವರು ಕಾಂಗ್ರೆಸಿನಲ್ಲಿ ಯಾರಿದ್ದಾರೆ?
ರಾಹುಲ್ ಗಾಂಧಿ ಎಲ್ಲ ತಿರುಗು ಬಾಣಗಳನ್ನು ಮೆಟ್ಟಿ ಗಟ್ಟಿಯಾಗಿ ನಿಲ್ಲುವರೇ? ಅಥವಾ, ಬಿಜೆಪಿ ತನ್ನ ಎಲ್ಲ ಜವಾಬ್ದಾರಿಗಳ ಚುಕ್ಕಾಣಿಯನ್ನು ಭದ್ರಪಡಿಸಿ ಎದ್ದು ನಿಲ್ಲುವುದೇ? ಎಂಬುದಾಗಿದೆ.
ಕೃಪೆ ;ಡೈಲಿಹಂಟ್.ಕಾಂ