ಯೋಗಿ ಸಭೆಗೆ ಮೈದಾನ ಸಿದ್ಧಪಡಿಸಿದವರು ಇಂದಿರಾ ಕ್ಯಾಂಟೀನ್ ನಲ್ಲಿ ಊಟ ಮಾಡಿದರೇ?

0
1188

ಏ. ಕೆ. ಕುಕ್ಕಿಲ

ಮಂಗಳೂರು: ಯೋಗಿ ಆದಿತ್ಯನಾಥ್ ರ ಇವತ್ತಿನ ( ಮಾ. 6, ಮಂಗಳವಾರ, ಸಂಜೆ 4ಕ್ಕೆ) ಭಾಷಣಕ್ಕೆ ಮಂಗಳೂರಿನ ವಿಶಾಲ ನೆಹರೂ ಮೈದಾನವನ್ನು ಸಜ್ಜುಗೊಳಿಸಿದ ಕಾರ್ಯಕರ್ತರೆಲ್ಲ ಮೈದಾನದ ಪಕ್ಕದಲ್ಲೇ ಇವತ್ತು ಉದ್ಘಾಟನೆಗೊಂಡ ಇಂದಿರಾ ಕ್ಯಾ೦ಟೀನ್ ಗೆ ಬಂದು ಊಟ ಮಾಡಿರುವಂತೆ ಕಾಣಿಸುತ್ತಿದೆ. 2 ಗಂಟೆಯ ಮೊದಲೇ ಊಟ ಬಹುತೇಕ ಖಾಲಿಯಾಗಿದೆ. ಅಪರಾಹ್ನ 2: 45ರ ಹೊತ್ತಿಗೆ ನೆಹರೂ ಮೈದಾನದ ಖಾಲಿ ಕುರ್ಚಿಗಳು ಬಿಸಿಲಿಗೆ ಒಣಗುತ್ತಿರುವಾಗ ಇಂದಿರಾ ಕ್ಯಾ೦ಟೀನ್ ನಲ್ಲಿ ಜನರ ದಂಡೇ ನೆರೆದಿತ್ತು.

ಊಟ ಖಾಲಿಯಾಗಿದ್ದರೂ ಜನರು ಕ್ಯಾ೦ಟೀನನ್ನು ಖುಷಿಯಿಂದ ವೀಕ್ಷಿಸುತ್ತಿದ್ದುದು ಮತ್ತು ರಾತ್ರಿ ಊಟ, ಬೆಳಗ್ಗಿನ ತಿಂಡಿ ಯಾವಾಗ ಎಂದು ವಿಚಾರಿಸುತ್ತಿದ್ದುದು ಕಂಡು ಬಂತು. ಅಲ್ಲೇ ಇದ್ದ ಪೊಲೀಸರಿಬ್ಬರು ಚಾ ಸಿಗಬಹುದೇ ಎಂದು ಪರಸ್ಪರ ಮಾತಾಡಿಕೂಂಡದ್ದು ಕೇಳಿಸಿತು. ಒಂದು ರೀತಿಯ ಸಡಗರ ಮತ್ತು ಖುಷಿ ಜನರ ಮುಖದಲ್ಲಿ ಎದ್ದು ಕಾಣುತ್ತಿತ್ತು. ಯೋಗಿ ಭಾವನೆಯನ್ನು ಕೆರಳಿಸುವಾಗ ಸಿದ್ದರಾಮಯ್ಯ ಹಸಿವನ್ನು ತಣಿಸುತ್ತಾರೆ ಎಂದು ನನಗನಿಸಿತು. ನಿಜವಾಗಿ, ಭಾವನೆಯನ್ನು ಕೆರಳಿಸುವ ಯೋಗಿಯ ತಂತ್ರಕ್ಕೆ ಇಂದಿರಾ ಕ್ಯಾ೦ಟೀನ್ ಮೂಲಕ ಸಿದ್ದರಾಮಯ್ಯ ನೀಡಿರುವ ಈ ಉತ್ತರ ಅತ್ಯಂತ ಮಾರ್ಮಿಕ. ಯೋಗಿ ಆದಿತ್ಯನಾಥ್ ರಿಗೆ ಇಷ್ಟೊಂದು ಸೊಗಸಾದ ಸ್ವಾಗತವನ್ನು ದಕ್ಷಿಣ ಕನ್ನಡ ಜಿಲ್ಲೆ ಈ ಹಿಂದೆಂದೂ ನೀಡಿರಲಿಲ್ಲ.

#ಜೈಇಂದಿರಾಕ್ಯಾ೦ಟೀನ್.