ರಝನ್ ಅಲ್ ನಜ್ಜಾರ್: ಫೆಲೆಸ್ತೀನ್ ಹೋರಾಟದ ಹೊಸ ಐಕಾನ್

0
631

ಅಶೀರುದ್ದೀನ್ ಆಲಿಯಾ

ಫೆಲೆಸ್ತೀನ್ ಹೋರಾಟದ ಭೂಮಿ. ಸ್ವಾತಂತ್ರ್ಯದ ರಣಭೂಮಿ. ಸುಮಾರು 70 ದಶಕಗಳ ಇತಿಹಾಸ ಹೊಂದಿದ ಹೋರಾಟ ನಿರಂತರ ಸಾಗುತ್ತಿದೆ. ಲಕ್ಷಾಣುಲಕ್ಷ ವೀರರ ನೆತ್ತರಿನ ಸುವಾಸನೆ ಫೆಲೆಸ್ತೀನ್ ಮಣ್ಣಿನಲ್ಲಿದೆ. 1948ರಲ್ಲಿ ಅಮೇರಿಕ ಇಂಗ್ಲೆಂಡ್‍ನಂತಹ ರಾಷ್ಟ್ರಗಳ ಬೆಂಬಲ ದೊಂದಿಗೆ ವಿಶ್ವ ಭೂಪಟದಲ್ಲೇ ಇಲ್ಲದ ಒಂದು ರಾಷ್ಟ್ರದ ಉದಯಕ್ಕೆ ಕಾರಣವಾಗುತ್ತದೆ. ಲಕ್ಷಗಟ್ಟಲೆ ಫೆಲೆಸ್ತೀನ್ ಮೂಲ ನಿವಾಸಿಗಳನ್ನು ಕೂಲೆ ಮಾಡಿ ಅತ್ಯಾಚಾರವೆಸಗಿ ತಮ್ಮ ತಾಯಿನಾಡಿನಿಂದ ಹೊರಕ್ಕಟ್ಟಿದ ಯಹೂದಿಯರು ಜಗತ್ತಿನ ಸುಮಾರು 60 ರಾಷ್ಟ್ರಗಳಲ್ಲಿ ವ್ಯಾಪಿಸಿದ ಯಹೂದ್ಯರನ್ನು ಒಂದುಗೂಡಿಸಿ ಇಸ್ರೇಲ್ ಸ್ಥಾಪಿಸಿದರು. ಇಲ್ಲಿಂದ ಆರಂಭವಾದ ಫೆಲೆಸ್ತೀನ್ ಮಕ್ಕಳ ಜನ್ಮಭೂಮಿಗಾಗಿರುವ ಹೋರಾಟದ ಕಿಚ್ಚು ಇಂದಿಗೂ ಆರಿ ಹೋಗಿಲ್ಲ. ಫೆಲೆಸ್ತೀನಿಯರನ್ನು ಅವರ ಮಣ್ಣಿ ನಿಂದ ಹೊರಕ್ಕಟ್ಟಿದ ಮಹಾದುರಂತ(ನಕಬ)ದ ನೆನಪಿಗಾಗಿ ಪ್ರತಿ ವರ್ಷವು ಮಾರ್ಚ್ 30 ರಿಂದ ಮೇ 15ರ ತನಕ ನಡೆಯುವ ಗ್ರೇಟ್ ಮಾರ್ಚ್ ಟು ರಿಟರ್ನ್ ಎಂಬ ಪ್ರತಿಭಟನೆ ನಡೆಯುತ್ತದೆ. ಪ್ರತಿಸಲವು ಇಸ್ರೇಲ್ ತನ್ನ ಕ್ರೌರ್ಯವನ್ನು ಮೆರೆಯುವಂತೆ ಈ ವರ್ಷವೂ 150ಕ್ಕಿಂತ ಹೆಚ್ಚು ಫೆಲೆಸ್ತೀನಿಯರನ್ನು ಅಗ್ನಿ ಮಳೆ ಸುರಿಸಿ ಕೊಂದು ಹಾಕಿದೆ. ಎಷ್ಟರವರೆಗೆಂದರೆ ಹೋರಾಟಗಾರರಿಗೆ ಶುಶ್ರೂಷೆಗೆಯ್ಯಲು ಬಂದ ಸೇವಕರನ್ನು ಸಹ ಬಿಟ್ಟು ಬಿಡಲಿಲ್ಲ ಎಂಬುದು ಬಹಳ ಖೇದಕರ. ಅವರಲ್ಲಿ ಸೇವಕಿ ರಝಾನ್ ಅಲ್ ನಜ್ಜಾರ್‍ಳ ಮರಣವು ವಿಶ್ವ ಮಾನವೀಯತೆಯನ್ನು ತಲೆಕೆಳಗಾಗಿಸಿದೆ.
ರಝಾನ್ ಅಶ್ರಫ್ ಅಲ್ ನಜ್ಜಾರ್ ಫೆಲೆಸ್ತೀನ್ ಹೋರಾಟದ ಇತಿಹಾಸ ಪುಟದಲ್ಲಿ ಸೇರಿದ ಧೀರ ಯುವತಿ. ತನ್ನ ಮನೆ ಬಂಧು ಬಳಗವನ್ನು ಬಿಟ್ಟು ನಿಸ್ವಾರ್ಥ ಸೇವೆಗೈಯುತ್ತಿದ್ದ ಮೆಡಿಕಲ್ ವಿದ್ಯಾರ್ಥಿನಿ. ಖಾನ್ ಯೂನುಸ್‍ನಲ್ಲಿರುವ ಬಡ ಕುಟುಂಬದಲ್ಲಿ ರಝಾನ್‍ಳ ತಂದೆ ಅಶ್ರಫ್ ಅಲ್ ನಜ್ಜಾರ್ ವಾಹನುಪಯೋಗಿ ವಸ್ತುಗಳನ್ನು ಮಾರುವವರು. ಕಳೆದ ಹೋರಾಟದ ವೇಳೆ ಅವರ ಅಂಗಡಿಗೆ ಬೆಂಕಿ ಬಿದ್ದು ಈಗ ಅವರು ನಿರುದ್ಯೋಗಿ. ಖಾನ್ ಯೂನುಸ್‍ನಲ್ಲಿರುವ ಆಸ್ಪತ್ರೆ ಯಲ್ಲಿ ಪ್ಯಾರಾ ಮೆಡಿಕಲ್ ತರಬೇತಿ ಹೊಂದಿದ 20ರ ಹರೆಯದ ಯುವತಿಯ ಅಮಾನವೀಯ ಕೊಲೆಯು ಜಗತ್ತಿನ ಕಣ್ಣು ತೆರೆಸಿದೆ. ತಾವು ಗಾಯಾಳುಗಳಿಗೆ ಸುಶ್ರೂಷೆಗೆಯ್ಯಲು ಬಂದ ಸೇವಕರು ಎಂಬ ಗುರುತು ಇದ್ದರೂ ಇಸ್ರೇಲ್ ಸೇನೆ ತನ್ನ ಕ್ರೌರ್ಯತನವನ್ನು ತೋರಿಸಿದೆ. ವೈದ್ಯರು ಪತ್ರಕರ್ತರು ಮಾಧ್ಯಮದವರು ಮಕ್ಕಳನ್ನು ಪ್ರಮುಖ ಗುರಿಯಾಗಿಸಿ ಇಸ್ರೇಲ್ ಬಾಂಬು ಸಿಡಿಸುತ್ತಿದ್ದರೂ ವಿಶ್ವಸಂಸ್ಥೆ ತನ್ನ ಕುರುಡುತನವನ್ನು ತೋರಿಸುತ್ತಿದೆ ಮತ್ತು ಅರಬ್ ಜಗತ್ತು ತನ್ನ ಆಡಂಬರದ ಮೋಜಿನಲ್ಲಿ ಮುಳುಗಿ ಹೋಗಿದೆ.
ಕಳೆದ ಮಾರ್ಚ್ 30 ರಿಂದ ಬೆಳಿಗ್ಗೆ 8 ರಿಂದ ರಾತ್ರಿ 7ರ ತನಕ ಹೋರಾಟದ ಭೂಮಿ ಯಲ್ಲಿ ನಿರಂತರ ಉತ್ಸಾಹ ಭರಿತಳಾಗಿ ರಝಾನ್ ¸ ಸೇವೆಗೆಯ್ಯುತ್ತಿದ್ದಳು ಮತ್ತು ಜನಮನಗೆದ್ದಿದ್ದಳು. ಅಸ್ತ್ರಗಳಿಲ್ಲದೇ ಏನನ್ನೂ ಸಾಧಿಸಲು ಸಾಧ್ಯವಿದೆ ಎಂಬ ಸಂದೇಶಗಳನ್ನು ಜಗತ್ತಿಗೆ ನೀಡುವುದು ನಮ್ಮ ಗುರಿಯಾಗಿದೆ. ಇಸ್ರೇಲ್ ಸೇನೆ ಹುಚ್ಚರಂತೆ ನಮ್ಮನ್ನು ಕೊಲ್ಲುತ್ತಿರುವಾಗ ದೂರ ನಿಂತು ನೋಡುವುದು ಸರಿಯಲ್ಲ. ನನಗೆ ಸೇವೆ ಮಾಡಬೇಕು. ಅದು ನನ್ನ ಕರ್ತವ್ಯ. ಅದು ನನ್ನ ಜವಾಬ್ದಾರಿಯಾಗಿದೆ. ನನ್ನ ದೇಶದ ಪ್ರೀತಿಗಾಗಿ ನಾವು ಕೆಲಸ ಮಾಡುತ್ತೇವೆ. ಇದು ಮಾನವೀಯ ಸೇವೆ. ಹಣಕ್ಕಾಗಿಯಲ್ಲ. ಸಂಬಳ ಪಡೆಯದೆ ನಿಮ್ಮ ಮಗಳು ಏಕೆ ಕೆಲಸ ಮಾಡುತ್ತಾಳೆ ಎಂದು ಹಲವರು ನನ್ನ ತಂದೆಯಲ್ಲಿ ಕೇಳುತ್ತಾರೆ. ನಾಡಿನ ಸ್ವಾತಂತ್ರ್ಯಕ್ಕಾಗಿ ಹೋರಾಡುವ ವೀರ ಜನರ ಸೇವೆಗೆಯ್ಯುವ ಮಗಳ ಮೇಲೆ ನಮಗೆ ಹೆಮ್ಮೆಯಿದೆ ಎಂದು ಅವರು ಹೊಗಳುತ್ತಾರೆ.
ಫೆಲೆಸ್ತೀನ್ ಹೋರಾಟದ ಅಗ್ರಗಣ್ಯರ ಸ್ಥಾನದಲ್ಲಿ ನಝರ್ ಅಲ್ ನಜ್ಜಾರ್ ಹೆಸರು ಶಾಶ್ವತವಾಗುತ್ತದೆ. ಅವಳು ತೋರಿದ ದೃಢತೆ, ಆತ್ಮ¸ ಸ್ಥೈರ್ಯ, ಧೈರ್ಯ, ಚುರುಕು ಎಲ್ಲರಿಗೂ ಮಾದರಿಯಾಗ ಬೇಕಾದದ್ದು. ಆಕೆ ತನ್ನ ಅವಿಶ್ರಾಂತ ಸೇವೆಯಿಂದ ಎರಡು ಸಲ ಮೈದಾನದಲ್ಲಿ ಪ್ರಜ್ಞೆತಪ್ಪಿ ಬಿದ್ದಿದ್ದಳು. ಕೈಗೆ ಗಾಯ ಮಾಡಿಕೊಂಡಿದ್ದಳು. ಆದರೆ ತನ್ನ ಸೇವಾ ಛಲವನ್ನು ಬಿಡಲಿಲ್ಲ “ಮೆಡಿಕಲ್ ಕಾರ್ಯ ಕರ್ತೆಯಾಗಿ ಕೆಲಸ ಮಾಡುವುದಾಗಿದೆ ಅವಳ ಬಯಕೆ. ಧೈರ್ಯ, ನಿಶ್ಚಯದಾಢ್ರ್ಯ ಅವಳಲ್ಲಿ ಪ್ರಕಟವಾಗಿತ್ತು. ಅವಳ ಕೈಯಲ್ಲಿ ಮದ್ದುಗಳಿತ್ತು. ಮದ್ದು ಗುಂಡುಗಳಿರಲಿಲ್ಲ, ಆಯುಧಗಳಿರಲಿಲ್ಲ, ಆದರೆ ಕ್ರೂರಿಗಳು ಅವಳನ್ನು ಕೊಂದರು ಎಂದು ಸಹೋದರಿ ಸಬ್ರೀನ್ ದುಃಖಿತಳಾಗುವಳು.
ಇಸ್ರೇಲ್ ಸೇನೆ ರಝಾನ್‍ಳ ಮೇಲೆ ಗುಂಡು ಹಾರಿಸಿದುದನ್ನು ಕಂಡ ಪ್ರತ್ಯಕ್ಷದರ್ಶಿ ಇಬ್ರಾಹೀಮ್ ಹೀಗೆ ಹೇಳುತ್ತಾರೆ, ಆಕೆ ಒಬ್ಬನಿಗೆ ಶುಶ್ರೂಷೆ ಮಾಡುತ್ತಿದ್ದಳು. ಆಗ ಗಡಿ ಪ್ರದೇಶದಲ್ಲಿ ಸ್ಫೋಟದ ಸುರಿಮಳೆಯಾಯಿತು. ನಾವೆಲ್ಲರೂ ಅಲ್ಲಿಗೆ ಧಾವಿಸಿದೆವು. ಆಕೆ ಪ್ರತಿಭಟನೆ ನಡೆಸುತ್ತಿರಲಿಲ್ಲ. ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಳು. ನಾವು ಗಡಿ ಭಾಗದ ಹತ್ತಿರ ತಲುಪುತ್ತಿದ್ದಂತೆ ಸ್ಫೋಟದ ಹೊಗೆಯು ದಟ್ಟವಾಗಿ ಹರಡಲಾರಂಭಿಸಿತು. ನಾವು ವೈದ್ಯಕೀಯ ಶುಶ್ರೂಷಕರು, ಸೇವಕರು ಎಂಬ ಸೂಚನೆಯನ್ನು ತೋರಿಸಲು ಬೆಳ್ಳಗಿನ ವಸ್ತ್ರಧಾರಿಗಳಾಗಿದ್ದೆವು ಮತ್ತು ಕೈಗಳನ್ನು ಮೇಲಕ್ಕೆತ್ತಿ ದ್ದೆವು. ಆದರೆ ಕ್ಷಣ ಮಾತ್ರದಲ್ಲಿ ಸೈನಿಕರೋರ್ವರು ಗುಂಡು ಹೊಡೆದರು. ರಝಾನ್‍ಳ ಮೇಲೆ ಗುಂಡು ತಗಲಿದಾಗ ಕುಸಿದು ಬೀಳುತ್ತಾಳೆ. ತನಗೆ ಗುಂಡು ಬಿದ್ದಿದೆ ಎಂಬ ಅರಿವು ಇಲ್ಲದಂತೆ ರಕ್ತದ ಮಡುವಿನಲ್ಲಿ ಅವಳು ನೆಲಕ್ಕೆ ಕುಸಿದು ಬೀತ್ತಾಳೆ ಎಂದು ಇನ್ನೋರ್ವ ಸಹ ಸೇವಕ ಮತ್ತು ಪ್ರತ್ಯಕ್ಷದರ್ಶಿ ರಿದಾ ನಜ್ಜಾರ್ ಕಣ್ಣೀರು ಹರಿಸುತ್ತಾರೆ.
ಇದು ಮಾನವೀಯತೆಯ ಕೊಲೆ. ಸ್ವಾತಂತ್ರ್ಯದ ಕೊಲೆ. ಝಿಯೋನಿಸ್ಟರ ವಿರುದ್ಧ ನನ್ನ ಪುತ್ರಿ ಹೋರಾಡಿದ್ದು ಇದೇ ಅಸ್ತ್ರದಿಂದ ಎಂದು ಅವಳ ತಾಯಿ ರಕ್ತದ ಕಲೆ ತುಂಬಿದ ಉಡುಪನ್ನು ತೋರಿಸಿ ಅಭಿಮಾನದಿಂದ ಕಣ್ಣೀರು ಹರಿಸುತ್ತಾರೆ. ಆಕೆಯ ತ್ಯಾಗದ ಬಲಿದಾನ ವಿಶ್ವದ ಎಲ್ಲೆಡೆ ಕಣ್ಣೀರು ತರಿಸಿದೆ. ಪ್ರತಿಭಟನೆಗಳು ನಡೆದಿವೆ.
“ನಾನು ಹೋಗಲಿದ್ದೇನೆ. ಆದರೆ ಹಿಂದೆಜ್ಜೆ ಇಡುವುದಿಲ್ಲ. ನಿಮ್ಮ ಬುಲೆಟ್‍ಗಳಿಂದ ಕೊಲ್ಲಿ ನಾನು ಹೆದರುವುದಿಲ್ಲ” ಎಂದು ಕೊನೆಯದಾಗಿ ಆಕೆ ತನ್ನ ಫೇಸ್‍ಬುಕ್‍ನಲ್ಲಿ ಬರೆದ ಬರಹ ಫೆಲೆಸ್ತೀನ್ ಹೋರಾಟಗಾರರ ಹೃದಯದಲ್ಲಿ ಸ್ವಾತಂತ್ರ್ಯದ ಜ್ವಾಲೆ ಹೊತ್ತಿ ಉರಿಯಲೆಂದು ಪ್ರಾರ್ಥಿಸುತ್ತೇನೆ.