ರಾವಣ್ ಉಪವಾಸ ಸತ್ಯಾಗ್ರಹ: ಜೈಲಧಿಕಾರಿಗಳು ಮುಚ್ಚಿಡುತ್ತಿದ್ದಾರೆಯೇ?

0
269

ಭೀಮ್ ಆರ್ಮಿ ಸಂಘಟನೆಯ ಮುಖಂಡ ಚಂದ್ರಶೇಖರ್ ಅಝಾದ್ ರಾವಣ್ ಜೈಲಿನಲ್ಲಿ ಕಳೆದ ನಾಲ್ಕು ದಿನಗಳಿಂದ ಉಪವಾಸ ಸತ್ಯಾಗ್ರಹವನ್ನು ನಡೆಸುತ್ತಿರುವುದಾಗಿ ವರದಿಗಳು ತಿಳಿಸಿವೆ. ಅಷ್ಟಕ್ಕೂ ಈ ವಿಷಯವನ್ನು ಬಿಚ್ಚಿಟ್ಟಿದ್ದು ಆತನ ತಾಯಿ ಕಮಲೇಶ್ ದೇವಿಯಾಗಿದ್ದಾರೆ.

ಚಂದ್ರಶೇಖರ್ ಅಝಾದ್ ರಾವಣ್ ತಾಯಿ ಕಮಲೇಶ್ ದೇವಿ(ಚಿತ್ರ : ಟು ಸರ್ಕಲ್ ಡಾಟ್ ನೆಟ್ )

ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ( ದೌರ್ಜನ್ಯ ತಡೆಗಟ್ಟವಿಕೆ) ಕಾಯಿದೆಯನ್ನು ಸುಪ್ರೀಮ್ ಕೋರ್ಟ್ ದುರ್ಬಲೀಕರಣಕ್ಕೆ ಒಳಪಡಿಸಲು ಮುಂದಾದಾಗ ದಲಿತರು ಮತ್ತು ಬುಡಕಟ್ಟು ಜನಾಂಗದವರು ಸೇರಿ ಎಪ್ರಿಲ್ 2 ರಂದು ಬಂದ್‌ಗೆ ಕರೆ ನೀಡಿದ್ದರು. ಆದರೆ ಅವರ ಬಂದ್ ಮೇಲೆ ಮೇಲ್ವರ್ಗದವರು ದಾಳಿ ನಡೆಸಿದರಲ್ಲದೇ ಹಲವರನ್ನು ಈ ಬಂದ್ ನಲ್ಲಿ ಭಾಗವಹಿಸದಂತೆ ಅಟ್ಟಾಡಿಸಿ ಹೊಡೆದಿದ್ದರು. ದಿನೇ ದಿನೇ ದಲಿತರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯಗಳು ಸುಪ್ರೀಂ ‌ಕೋರ್ಟ್ ಗಮನಿಸದೇ ಕಾಯಿದೆಯನ್ನು ದುರ್ಬಲಗೊಳಿಸಲು ಮುಂದಾದುದು ದಲಿತರಿಗೆ ನುಂಗಲಾರದ ತುತ್ತಾಗಿತ್ತು.
ಆದರೆ ದಲಿತರ ಬಂಧನದಲ್ಲಿ ಜೈಲು ಪಾಲಾಗಿದ್ದ ಚಂದ್ರಶೇಖರ್ ರಾವಣ್ ಇದರಿಂದ ತೀವ್ರ ಘಾಸಿಗೊಳಗಾಗಿದ್ದು ಜೈಲಿನಲ್ಲಿಯೇ ಆಜೀವ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಹೇಳಿಕೊಂಡಿದ್ದಾನರೆ ಎಂದು ಆತನ ತಾಯಿ ಹೇಳಿದ್ದಾರೆ. ಈ ಕುರಿತು ಜೈಲಧಿಕಾರಿಯಾದ ವೀರಜ್ ಕುಮಾರ್ ಶರ್ಮಾ ರವರ ಬಳಿ ಪ್ರಶ್ನಿಸಿದಾಗ ” ಜೈಲು ಸೇರಿದಂದಿನಿಂದ ಇಂದ್ರಶೇಖರ್ ಇತರೆ ಕೈದಿಗಳೊಂದಿಗೆ ಊಟ ಸೇವಿಸುತ್ತಿದ್ದನು. ಆದರೆ ಆತ ಕಳೆದೆರಡು ದಿನಗಳಿಂದ ಏಕಾಂಗಿಯಾಗಿ ಊಟ ಸೇವಿಸುತ್ತಿದ್ದಾನೆ” ಎನ್ನುತ್ತಾರೆ.
ಜೈಲಧಿಕಾರಿಗಳ ಹೇಳಿಕೆಯನ್ನು ಖಂಡಿಸಿದ ಆತನ ತಾಯಿ” ಜೈಲಿನ ಅಧಿಕಾರಿಗಳು ಆರಂಭದಲ್ಲಿ ಆತನಿಗೆ ಅನುಮತಿ ನೀಡಿರಲಿಲ್ಲವಾದರೂ ಆತ ಕೇವಲ ನೀರನ್ನು ಮಾತ್ರ ಸೇವಿಸುತ್ತಿದ್ದ. ಅನಂತರ ಆತ ಅದನ್ನೂ ಕೂಡ ನಿಲ್ಲಿಸಿದ್ದಾನೆ. ಜೈಲಿನಲ್ಲಿ ಏಕಾಂತವಾಗಿರುವುದೆಂದರೆ ಆತನ ಚಲನವಲನಗಳ ಮೇಲೆ ತೀವ್ರನಿಗಾ ಇರಿಸಿ ಅಧಿಕಾರಿಗಳ ದಬ್ಬಾಳಿಕೆ ನಡೆಯುತ್ತಿದೆ ಎಂಬುದೇ ಅರ್ಥವಾಗಿದೆ” ಎಂದು ಅವರು ಟು ಸರ್ಕಲ್ ಗೆ ತಿಳಿಸಿದ್ದಾರೆ.
ಇತ್ತ ಚಂದ್ರಶೇಖರ್ ರಾವಣ್ ಜೈಲಿನಲ್ಲಿ ಉಪವಾಸ ಸತ್ಯಾಗ್ರಹವನ್ನು ನಡೆಸುತ್ತಿರುವ ಕುರಿತು ವರದಿಗಳು ಬಹಿರಂಗಗೊಳ್ಳುತ್ತಲೇ ದಲಿತರು ಅವರ ಆರೋಗ್ಯದ ಕುರಿತು ತೀವ್ರ ಚಿಂತಿತರಾಗಿದ್ದಾರೆ.