ಲೈಬೀರಿಯಾದ ಅಧ್ಯಕ್ಷರಾಗಿ ಫುಟ್ಬಾಲಿಗ ಜಾರ್ಜ್

0
1217

ವರದಿ: ಸೈಫುದ್ದೀನ್ ಕೆ
ಒಬ್ಬ ಫುಟ್‍ಬಾಲ್ ಸೂಪರ್ ಸ್ಟಾರ್ ಒಂದು ದೇಶದ ಅಧ್ಯಕ್ಷನಾದರೆ ಹೇಗೆ? ಜಾರ್ಜ್‍ವಿಯ ಎನ್ನುವ ಫುಟ್‍ಬಾಲ್ ದಂತಕತೆ ಲೈಬೀರಿಯದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಈ ಜಾಜ್‍ವಿಯ 1970ರಲ್ಲಿ ಮೊಂಟೊವಿಯದ ಕೆಸರೇ ತುಂಬಿದ ಗಲ್ಲಿಗಳಿಂದ ಬಡತನದೊಂದಿಗೆ, ಬಡತನದ ವಿರುದ್ಧ ಹೋರಾಡಿ ಎಲುಬು ಗೂಡಿಂತಾಗಿದ್ದ ಒಬ್ಬ ಕರಿಯ ಹುಡುಗ. ನಂತರ ಚೆಂಡಾಟದ ಮೂಲಕ ಅಥವಾ ಸಾಕರ್ ಜಗತ್ತಿನ ಇತಿಹಾಸ ಶ್ರೇಷ್ಠರ ಪಟ್ಟಿಗೆ ಸೇರುತ್ತಾನೆ. ಇಂದಿದೊ ಕೆಸರು ತುಂಬಿದ ಮೊಂಟೊವಿಯ ರಾಜಧಾನಿ ಕೇರಿಗಳ ಜಾಗವಾದ ಲೈಬೀರಿಯ ಎನ್ನುವ ಆಫ್ರಿಕನ್ ರಾಷ್ಟ್ರಕ್ಕೆ ಅಂದಿನ ಹುಡುಗ ಅಧ್ಯಕ್ಷನಾಗಿ ದ್ದಾನೆ. ಹೀಗೆ ಚುನಾಯಿತಗೊಂಡು ಆತ ಇತಿಹಾಸವಾಗುತ್ತಾನೆ. ಜಾಜ್‍ವಿಯ ಫುಟ್ ಬಾಲರ್..!! ಫುಟ್‍ಬಾಲ್ ಕಿಂಗ್ ಜಾಜ್ ಇನ್ನು ಅಧ್ಯಕ್ಷ ಜಾರ್ಜ್.
ದಿನಗೂಲಿ ಕಾರ್ಮಿಕ ವಿಲ್ಯಂ ಟಿ.ವಿಯ ಮತ್ತು ಪತ್ನಿ ಅನ್ನಾ ಕ್ವವೆಯವರ ಪುತ್ರನಾಗಿ 1967ರಲ್ಲಿ ಜನಿಸಿದ ಜಾರ್ಜ್‍ವಿಯ ಜೀವನವು ಹೋರಾಟ, ಶೌರ್ಯ, ಪ್ರತಿಭೆಗೆ ಉದಾಹರಣೆ ಯಾಗಿದೆ. ಮಗುವಾಗಿದ್ದಾಗ ಅಜ್ಜಿ ಎಮ್ಮಾ ಬ್ರೌನ್‍ರ ಸಂರಕ್ಷಣೆಯಲ್ಲಿದ್ದ ಜಾರ್ಜ್‍ವಿಯ ಹದಿಹರೆಯದಲ್ಲಿ ಕೂಳಿಗೆ ದಾರಿ ಮಾಡಿಕೊಂಡರು. ಸ್ವಿಚ್ ಬೋರ್ಡ್ ಟೆಕ್ನಿಸಿಯನ್ ಆಗಿ ಕೆಲಸ ಕಂಡುಕೊಂಡರು. ಅಜ್ಜಿ ಖರೀದಿಸಿ ಕೊಟ್ಟ ಬೂಟ್ ಧರಿಸಿ ಲೈಬೀರಿಯದ ಸ್ಥಳೀಯ ಫುಟ್‍ಬಾಲ್ ಕ್ಲಬ್‍ನಲ್ಲಿ ಫಾರ್ವರ್ಡ್ ಆಟಗಾರನಾಗಿ ಹೊಳೆದ ವಿಯರ ಜೀವನ ಅಲ್ಲಿಂದ ಬದಲಾವಣೆ ಕಂಡಿತು. ಬಾಲ್ಯದ ಗೆಳೆಯರ ಸಲಹೆ ಪ್ರಕಾರ ಯುರೋಪಿಯನ್ ಫುಟ್‍ಬಾಲ್ ಕ್ಲಬ್‍ಗಳ ಸೆಲೆಕ್ಷನ್ ಟ್ರಯಲ್ಸ್‍ನಲ್ಲಿ ಭಾಗವಹಿ¸ ಸುವುದರೊಂದಿಗೆ ಇನ್ನಷ್ಟು ಪ್ರಸಿದ್ಧಿಗೆ ಬಂದರು.
ಆರ್ಸನಲ್ ಎಫ್‍ಸಿ ಫುಟ್‍ಬಾಲ್ ಕ್ಲಬ್‍ನ ತರಬೇತುದಾರ ಮತ್ತು ಆಧುನಿಕ ಫುಟ್‍ಬಾಲ್ ಇತಿಹಾಸದಲ್ಲಿ ಅದ್ವಿತೀಯ ಸ್ಥಾನಗಳಿಸಿರುವ ಫ್ರೆಂಚ್ ಐತಿಹಾಸಿಕ ಪ್ರಾಮುಖ್ಯತೆ ಹೊಂದಿದ ವ್ಯಕ್ತಿ ಆರ್ಸಿನ್ ವೆಂಗರ್‍ರ ಕಣ್ಣಿಗೆ ಬೀಳುವುದರೊಂದಿಗೆ ಜಾಜ್ ವಿಯ ಆಟದಂಗಳದ ಯಾತ್ರೆ ಆರಂಭಿಸಿದರು. ಎಎಸ್ ಮೊನೊಕ್ಕೊ ತರಬೇತಿ ದಾರನಾಗಿದ್ದಾಗ 1988ರಲ್ಲಿ ವೆಮಗರ್ ಜಾಜ್ ವಿಯರನ್ನು ತಂಡದ ಪ್ರಧಾನ ಸ್ಟ್ರೈಕರ್ ಆಗಿ ಮಾಡಿದರು.
ಅಸಮಾನ ವೇಗ, ದೃಢತೆ, ಡ್ರಿಬ್ಲಿಂಗ್ ಸಾಮಥ್ರ್ಯ, ಅತ್ಯಧಿಕ ಪರಿಶ್ರಮಗಳನ್ನು ಮೈದಾನ ದಲ್ಲಿ ಪ್ರದರ್ಶಿಸಿದ ವಿಯ ಮೊನೊಕ್ಕೊದ ಮೊದಲ ವರ್ಷದಲ್ಲಿ ಆಫ್ರಿಕನ್ ಫುಟ್‍ಬಾಲ್ ಆಫ್ ದ ಇಯರ್ ಅವಾರ್ಡ್‍ಗೆ ಭಾಜನರಾದರು. 1991ರಲ್ಲಿ ಎಎಸ್ ಮೊನೊಕ್ಕೊ ಫ್ರೆಂಚ್ ಪ್ರಶಸ್ತಿ ಗೆದ್ದಾಗ ಜಾರ್ಜ್ ವಿಯ ಸ್ಟಾರ್ ಆದರು. 1992ರಲ್ಲಿ ಎಎಸ್ ಮೊನೊಕ್ಕೊ ಯುರೋಪಿ ಯನ್ ಕಪ್ ವಿನ್ನಸ್ ಕಪ್ ರನ್ನರ್ ಆದಾಗ ಜಾಜ್ ವಿಯ ಪ್ರತಿಭೆ ಧಾರಾಳವಾಗಿ ಯುರೋಪಿ ನಾದ್ಯಂತ ಖ್ಯಾತಿ ಗಳಿಸಿಕೊಟ್ಟಿತು. ಉನ್ನತ ಕ್ಲಬ್‍ಗಳು ವಿಯರಿಗಾಗಿ ಬಲೆ ಬೀಸಿದವು. 1992 ರಿಂದ 95ರ ವರೆಗೆ ಪ್ಯಾರಿಸ್ ಸೇಂಟ್ ಜರ್ಮನ್‍ನಲ್ಲಿ ಸೇರಿದ ವಿಯ ತನ್ನ ಕೆರಿಯರ್‍ನಲ್ಲಿ ಮೊದಲ ಬಾರಿಗೆ ಫ್ರಾನ್ಸ್‍ನಿಂದ ಹೊರಬಂದರು. 1995ರಲ್ಲಿ ಇಟಲಿಯ ಎಸಿ ಮಿಲನ್ ಕ್ಲಬ್‍ನಲ್ಲಿ ಸೇರಿದರು. ಜಗತ್ತಿನ ಅತ್ಯಂತ ಟಫ್ ಲೀಗ್ ಆದ ಇಟಲಿಯನ್ ಸೀರಿ ಎಯಲ್ಲಿ ಮೊದಲ ಸೀಸನ್ ನಲ್ಲಿಯೇ ಟಾಪ್ ಸ್ಕೋರರ್ ಆದರು. ಆ ವರ್ಷ ಫಿಫ ಫುಟ್‍ಬಾ¯ರ್ ಆಫ್ ಇಯರ್, ಬಾಲನ್ ದಿ ಓರ್, ಇಟಲಿಯನ್ ಸೀರಿಎ ಗೋಲ್ಡನ್ ಬೂಟ್ ನಂತರ ಇಂಗ್ಲಿಷ್ ಪ್ರಿಮಿಯರ್ ಲೀಗ್ ಚೆಲ್ಸಿ, ಮ್ಯಾಂಚೆಸ್ಟರ್ ಸಿಟಿಯಲ್ಲಿ ವಿಯ ಆಟವಾಡಿದರೂ ಅಲ್ಲಿಯೂ ತಾರೆಯರ ತಾರೆಯಾಗಿ ಮಿಂಚಿದರು.
ಅಂತಾರಾಷ್ಟ್ರೀಯ ಫುಟ್‍ಬಾಲ್‍ನಲ್ಲಿ ಲೈಬಿರಿಯ ಪರಿಚಿತವಾದದ್ದೇ ಜಾರ್ಜ್ ವಿಯರ ದೇಶ ಎಂದಾಗಿದೆ. 60 ಸ್ಪರ್ಧೆಗಳಲ್ಲಿ ದೇಶಕ್ಕಾಗಿ 22 ಗೋಲ್ ಹೊಡೆದಿದ್ದಾರೆ. ಇವೆಲ್ಲ ಇದ್ದರೂ ವಿಶ್ವಕಪ್‍ನಲ್ಲಿ ಆಡಲು ತನಗೋ ತನ್ನ ದೇಶಕ್ಕೋ ಸಾಧ್ಯವಾಗಲಿಲ್ಲವಲ್ಲ ಎನ್ನುವ ದುಃಖವನ್ನು ಉಳಿಸಿ ಕೊಂಡಿದ್ದಾರೆ. 2003ರಲ್ಲಿ ಫುಟ್‍ಬಾಲ್ ಕೆರಿಯರ್ ಕೊನೆಗೊಳಿಸಿದ ಬಳಿಕ 2005ರಲ್ಲಿ ಜಾರ್ಜ್ ವಿಯ ಲೈಬಿರಿಯದ ರಾಜಕೀಯ ಪ್ರವೇಶಿಸಿದರು. ದಶಕಗಳಷ್ಟು ಕಾಲ ಅಮೆರಿಕದ ಕಾಲನಿಯಾಗಿದ್ದ ದೇಶ ಅದು. 1980ರ ವರೆಗೆ ಅಮೆರಿಕದ ಲೈಬೀರಿಯನ್ ಸರಕಾರ ಅಲಿ ್ಲರುತ್ತಿತ್ತು. 1989 ರಿಂದ 96ರ ವರೆಗೆ ನಡೆದ ಪ್ರಥಮ ಆಂತರಿಕ ಯುದ್ಧ ಮತ್ತು 2003ರ ವರೆಗೆ ನಡೆದ ಎರಡನೆ ಆಂತರಿಕ ಯುದ್ಧ ಆ ದೇಶದ ಆರ್ಥಿಕತೆ, ಸಾಮಾಜಿಕ, ರಾಜಕೀಯ ವ್ಯವಸ್ಥೆ ಯನ್ನೇ ಬುಡಮೇಲು ಗೊಳಿಸಿತು. ಅರಾಜಕತೆ ಅನಿಶ್ಚಿತತೆ ರಾರಾಜಿಸಿತು. ¯ ಲೈಬೀರಿಯದ ಈ ಸ್ಥಿತಿಯಿಂದ ಬದಲಾವಣೆ ತರುವ ಶಾಂತಿಯ ವಾಗ್ದಾನ ಕೊಟ್ಟು ಜಾರ್ಜ್ ವಿಯ ಕಾಂಗ್ರೆಸ್ ಫಾರ್ ಡೆಮಕ್ರಟಿಕ್ ಚೇಂಜ್ ಎನ್ನುವ ರಾಜಕೀಯ ಪಾರ್ಟಿ ರೂಪಿಸಿ ರಾಜಕೀಯಕ್ಕಿಳಿದರು. 2005ರ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಿದರೂ ರಾಜಕೀಯದಲ್ಲಿ ಗೋಲು ಹೊಡೆಯಲು ಅವರಿಂದ ಸಾಧ್ಯವಾಗಲಿಲ್ಲ. ಇದು ಸುಲಭ ವಿಚಾರವಲ್ಲ ಎಂದು ವಿಯ ಮನಗಂಡರು. ದೇಶದ ಪ್ರಥಮ ಮಹಿಳಾ ಅಧ್ಯಕ್ಷೆಯಾಗಿ ನೊಬೆಲ್ ಪ್ರಶಸ್ತಿ ವಿಜೇತೆ ಜೆತ್ರಿ ಎಲನ್ ಜಾನ್ಸನ್ ಸರ್‍ಲಿಫ್‍ರ ನಂತರ ಶೇ. 40ರಷ್ಟು ವೋಟು ಗಳಿಸಿ ಎರಡನೆ ಸ್ಥಾನ ಗಳಿ ಸಿದರು. ಚುನಾವಣೆ ಪ್ರಚಾರದ ವೇಳೆ ವಿಯ ಎದುರಿಸಿದ ಪ್ರಧಾನ ಆರೋಪ ಏನೆಂದರೆ ವಿಯಗೆ ಹೆಚ್ಚು ವಿದ್ಯಾಭ್ಯಾಸ ವಿಲ್ಲ. ಅನಕ್ಷರಸ್ಥ ಅಯೋಗ್ಯ ಎನ್ನುವುದಾಗಿತ್ತು.
ಕೇರಿಯಲ್ಲಿ ಹಸಿವಿನಲ್ಲಿ ಹೋರಾಡುತ್ತಾ ಕಲಿಯಲು ಆಗದ ಲಕ್ಷಾಂತರ ಲೈಬೀರಿಯನ್ನರ ಪ್ರತಿನಿಧಿ ಈ ವಿಯ; ಹಾಗಂತ ಅವರು ಮಣಿ ಯಲು ಸಿದ್ಧರಿಲ್ಲ. ಶಿಕ್ಷಣ ಯೋಗ್ಯತೆ ಕಡಿಮೆಯಿದ್ದರೆ ಅದನ್ನು ಗಳಿಸಬಹುದಲ್ಲ ಎಂದು ಜಾರ್ಜ್ ತೀರ್ಮಾನಿಸಿಬಿಟ್ಟರು. 39ನೇ ವರ್ಷ ವಯಸ್ಸಿನಲ್ಲಿ ವಿದ್ಯಾರ್ಥಿಯ ವೇಷದಲ್ಲಿ ಮಿಯಾಮಿಯ ಡೆವರಿ ಯುನಿವರ್ಸಿಟಿಯಿಂದ ಬಿಸಿನಸ್ ಅಡ್ಮಿಸ್ಟ್ರೇಶನ್‍ನಲ್ಲಿ ಉನ್ನತ ಪದವಿಗಳಿಸಿ ಲೈಬೀರಿಯಕ್ಕೆ ಮರಳಿದರು. ಸಕ್ರಿಯ ರಾಜಕೀಯಕ್ಕೆ ಮರಳಿದರು. ಮೊಂಟೊ ವಿಯ ಎಫ್‍ಸಿ ಎನ್ನುವ ಫುಟ್‍ಬಾಲ್ ಕ್ಲಬ್ ರೂಪಸಿದರು. ತನ್ನ ಕ್ಲಬ್ ಸೇರಬೇಕಾದರೆ ಶಾಲೆಗೆ ಪ್ರವೇಶ ಪಡೆದಿರಬೇಕೆನ್ನುವುದು ವಿಯರ ಘೋಷಣೆಯಾಗಿದೆ. ಇದು ಲೈಬಿರಿಯದ ಕೇರಿಗಳ ಯುವಕರಿಗೆ ಬಲವಾದ ಸಂದೇಶವಾಗಿಯೂ ಬದಲಾಯಿತು.
ಭಾರತದ ಸಂಸ್ಥೆ ದಿಯ ಗ್ರೂ ಚೇರ್‍ಮೆನ್ ನೀರಜ್ ತ್ರಿಪಾಟಿಯೊಂದಿಗೆ ಸೇರಿ ಮೂರನೆ ಜಾಗತಿಕ ದೇಶಗಳಲ್ಲಿ ಫುಟ್‍ಬಾಲ್ ಬೆಳೆಯುವಂತೆ ಯೋಜನೆಯನ್ನು ರೂಪಿಸಿದರು. ಫುಟ್‍ಬಾಲ್‍ನ ರಾಜಕೀಯ ವಿಯಗೆ ಲೈಬರಿಯದ ರಾಜಕೀಯ ದಲ್ಲಿ ಸ್ಥಾನ ಕಲ್ಪಿಸಿಕೊಟ್ಟಿತು. ಆದರೆ 2011ರ ಚುನಾವಣೆಯಲ್ಲಿ ಉಪಾಧ್ಯಕ್ಷ ಸ್ಥಾನದ ಚುನಾ ವಣೆಯಲ್ಲಿಯೂ ಅವರು ಸೋತರು. ಹುಟ್ಟಿದಂದಿ ನಿಂದ ಹೋರಾಟವೇ ಜೀವನ ಆದ ಜಾಜ್‍ವಿಯ ಧೈರ್ಯ ಗುಂದಲಿಲ್ಲ. ಅಸಾಧಾರಣ ಸಾಮಥ್ರ್ಯ ವನ್ನು ಹಾಕಿ ರಾಜಕೀಯದಲ್ಲಿಯೂ ಹೋರಾಡಿ ದರು. ಜಗತ್ತಿನ ಫುಟ್‍ಬಾಲ್‍ಗಳಲ್ಲಿ ಇತಿಹಾಸ ತಾರೆಯಾಗಿ ಬದಲಾದ ವಿಯ ಗೆಲುವಿನ ಕನಸು ಕಂಡವರು. ರಾಜಕೀಯದಲ್ಲಿ ಸೋಲುತ್ತಲೇ ಇರಲು ¸ ಸಾಧ್ಯವಿಲ್ಲವಲ್ಲ.
2014ರಲ್ಲಿ ಜಾರ್ಜ್‍ವಿಯ ಮೊದಲಬಾರಿ ಚುನಾವಣಾ ವಿಜಯ ಗಳಿಸಿದರು. 2005ರಲ್ಲಿ ತನ್ನನ್ನು ಸೋಲಿಸಿದ್ದ ಸರ್ಲಿಫ್‍ರ ಪುತ್ರ ಆಲ್ಬರ್ಟ್‍ರ ವಿರುದ್ಧ ಶೇ. 78 ಮತಗಳಿಕೆಯೊಂದಿಗೆ ಗೆದ್ದು ಸೆನೆಟ್‍ಗೆ ಆಯ್ಕೆಯಾದರು. ಈಗ 2017ರ, ಡಿಸೆಂಬರ್‍ನಲ್ಲಿ ಈಗಿನ ಉಪಾಧ್ಯಕ್ಷ ಜೋಸೆಫ್ ಬಕ್ಕ ವಿರುದ್ಧ ಶೇ. 61.5 ವೋಟು ಗಳಿಸಿ ಲೈಬೀರಿಯದ ಇತಿಹಾಸದಲ್ಲಿ 25ನೆ ಅಧ್ಯಕ್ಷರಾಗಿ ಆಯ್ಕೆಯಾದರು. ವಿಯರ ಪರ 15ರಲ್ಲಿ 13 ಪ್ರಾಂತಗಳು ನಿಂತವು.
1, 10000 ಚದರ ಅಡಿ ಕಿಲೊಮೀಟರ್ ವಿಸ್ತಾರದ ಲೈಬೀರಿಯದಲ್ಲಿ ಶೇ. 54ರಷ್ಟು ಜನರೂ ಬಡವರು. ಬಡತನದ ರೇಖೆಗಿಂತ ಕೇಳಗಿನವರು. 2.1 ಮಿಲಿಯನ್ ಜನರು ಒಂದು ಹೊತ್ತಿನ ಆಹಾರಕ್ಕೆ ಗತಿಯಿಲ್ಲದವರು. ಇಂತಹ ಒಂದು ರಾಷ್ಟ್ರದ ಚುಕ್ಕಾಣಿ ವಿಯ ಎನ್ನುವ ಫುಟ್‍ಬಾಲರ್ ಕೈಗೆ ಸಿಕ್ಕಿದೆ. ಅವರು ಗೋಲು ಹೊಡೆಯುತ್ತಾರೋ ಎನ್ನುವ ಪ್ರಶ್ನೆ ಇದೆ. ವಸಾಹತುಶಾಹಿ, ಆಂತರಿಕ ಯುದ್ಧದಿಂದ ಬಹಳಷ್ಟು ಹಾನಿಗೊಂಡಿರುವ ಒಂದು ರಾಷ್ಟ್ರ ಒಂದು ರಾಷ್ಟ್ರ ಮಾತ್ರವಾಗಿದೆ. ಶೇ. 60ರಷ್ಟು ಜನರು 30 ವರ್ಷಕ್ಕಿಂತ ಕೆಳ ವಯೊಮಾನದವರು. 51 ವರ್ಷದ ಜಾಜ್‍ವಿಯ ಮುಂದೆ ದೇಶದ ಅಭಿವೃದ್ಧಿಯ ಬಹುದೊಡ್ಡ ಹೊರೆಯೇ ಹಿಮಾಲಯದೆತ್ತರ ಇದೆ ಅಥವಾ ಆಹಾದಿಯಲ್ಲಿ ಬಹಳಷ್ಟು ಅಡೆತಡೆಗಳಿವೆ. ಫುಟ್‍ಬಾಲ್ ಹೋರಾಟಗಾರನಾದ ರಾಜಕಾರಣಿಗೆ ಇದನ್ನೆಲ್ಲ ಮೀರಿ ಯಶಸ್ಸು ಪಡೆಯುವುದು ಅಷ್ಟು ಸುಲಭವೂ ಅಲ್ಲ, ಅಸಾಧ್ಯವೂ ಅಲ್ಲ. ಲೈಬೀರಿಯದ 25ನೆ ಅಧ್ಯಕ್ಷರಾಗಿ ಜನವರಿ 16ಕ್ಕೆ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಹೀಗೆ ಜಾರ್ಜ್ ಬ ರುವಾಗ ಅವರ ಪುತ್ರ ತಿಮೊತಿ ವಿಯ. ಭಾರತದಲ್ಲಿ ನಡೆದ ಯು 17 ವಿಶ್ವಕಪ್ ಫುಟ್‍ಬಾಲ್‍ನಲ್ಲಿ ಅಮೆರಿಕಕ್ಕಾಗಿ ಆಡಿ ಗೋಲು ಹೊಡೆದಿ ದ್ದಾರೆ.