ವ್ಯರ್ಥ ಪ್ರಲಾಪದ ಸಂಸತ್ತಿನ ಕಲಾಪ

0
1269

@ ಸಲೀಮ್ ಬೋಳಂಗಡಿ
ರಾಷ್ಟ್ರಪತಿಗಳ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲೆ ಉಭಯ ಸದನಗಳಲ್ಲಿ ನಡೆದ ಚರ್ಚೆಗೆ ಉತ್ತರಿಸುತ್ತಾ ಪ್ರಧಾನಿಯವರು ತನ್ನ ವಾಗ್ವೈಖರಿಯನ್ನು ಪ್ರದರ್ಶಿಸಿ ಕಾಂಗ್ರೆಸನ್ನು ಟೀಕಿಸುವುದರಲ್ಲಿಯೇ ಕಳೆದರು. ನಿಜವಾಗಿ ಅವರು ಇದನ್ನು ತನ್ನ ಸರಕಾರದ ನೀತಿಗಳು ಮತ್ತು ಭವಿಷ್ಯದ ಯೋಜನೆಗಳನ್ನು ಸದನದ ಮುಂದಿಡ ಬೇಕಿತ್ತು. ಅಂದರೆ ಅವರ ಭಾಷಣವು ಚುನಾವಣಾ ಪ್ರಚಾರ ಸಭೆಯ ಭಾಷಣದ ಹಂತಕ್ಕೆ ಅದು ತಲುಪಿರುವುದು ಶೋಚನೀಯವೆನ್ನಲೇಬೇಕು. ಕಾಂಗ್ರೆಸ್‍ನಿಂದಾಗಿ 70 ವರ್ಷಗಳ ನಂತರವೂ ದೇಶ ನರಳುವಂತಾಗಿದೆ ಎಂದು ಹರಿಹಾಯ್ದರು. ಮಾತ್ರವಲ್ಲ ಈ ಅಧಿವೇಶನವು ಹಲವು ಅವಾಂತರ ಗಳಿಗೆ ಸಾಕ್ಷಿಯಾಯಿತು.

ನರೇಂದ್ರ ಮೋದಿಯವರು ಆಧಾರ್ ಯೋಜನೆಯು ವಾಜಪೇಯಿ ಸರಕಾರದ ಯೋಜನೆಯೆಂದು ಹೇಳಿ ತಮ್ಮ ಹಕ್ಕು ಪ್ರತಿ ಪಾದಿಸುವ ಶೈಲಿಯಲ್ಲಿ ಮಾತನಾಡಿದಾಗ ಕಾಂಗ್ರೆಸ್ ಎಂ.ಪಿ. ರೇಣುಕಾ ಚೌಧುರಿ ತಮ್ಮ ಸಹಜ ಶೈಲಿಯಲ್ಲಿ ಗಹಗಹಿಸಿ ನಕ್ಕರು. ಇದರಿಂದ ಆಡಳಿತ ಪಕ್ಷ ಕೆರಳಿತ್ತು. ರಾಜ್ಯ ಸಭೆಯ ಅಧ್ಯಕ್ಷ ವೆಂಕಯ್ಯ ನಾಯ್ಡು ರೋಗವಿದ್ದರೆ ಚಿಕಿತ್ಸೆ ಕೊಡಿಸಿ ಎಂಬರ್ಥದ ಮಾತುಗಳನ್ನಾಡಿದರು. ಆದರೂ ನಗು ನಿಲ್ಲಿಸದಿದ್ದಾಗ ಮೋದಿಯವರು ರೇಣುಕಾ ಚೌದುರಿಯವರನ್ನು ರಾಮಾಯಣ ಧಾರವಾಹಿಯ ಕಥಾ ಪಾತ್ರವೊಂದಕ್ಕೆ ಪರೋಕ್ಷ ವಾಗಿ ಹೋಲಿಸುತ್ತಾರೆ. ಬಿಜೆಪಿಯ ಮಾಹಿತಿ ತಂತ್ರಜ್ಞಾನ ಘಟಕದ ಮುಖ್ಯಸ್ಥ ಅಮಿತ್ ಮಾಳವೀಯ ಈ ಕುರಿತು ಮರುದಿನ ನಡೆದ ಘಟನೆಯ ವೀಡಿಯೋ ತುಣುಕನ್ನು ಟ್ವೀಟ್ ಬ ಂದರಲ್ಲಿ ರೇಣುಕಾ ಚೌದುರಿಯವರ ನಗುವನ್ನು ಪ್ರಧಾನಿಯವರು ಯಾವುದಕ್ಕೆ ಹೋಲಿಸಿದರು ಎಂದು ಪ್ರಕಟಿಸಿದರು. ಕೇಂದ್ರ ಸಚಿವ ಕಿರಣ್ ರಿಟ್ಜುರವರು ರಾಮಾಯಣದ ಒಂದು ದೃಶ್ಯವನ್ನು ಟ್ವೀಟ್ ಮಾಡಿದ್ದರು. ಅದರಲ್ಲಿ ರಾಮ ಮತ್ತು ಸೀತೆಯ ಪಾತ್ರಧಾರಿಗಳ ಮಧ್ಯೆ ಸೂರ್ಪನಖಿ ಅಟ್ಟಹಾಸದಿಂದ ನಗುವ ದೃಶ್ಯವಿತ್ತು. ಭಾರೀ ಟೀಕೆ, ಆಕ್ಷೇಪಗಳು ವ್ಯಕ್ತವಾದ ಬಳಿಕ ಅದನ್ನವರು ಅಳಿಸಿ ಹಾಕಿದರು. ಹೀಗೇ ಪ್ರತಿ ಪಕ್ಷದ ತೀವ್ರ ಪ್ರತಿಭಟನೆಯಲ್ಲೂ ಕಾಲಹರಣಗೊಂಡಿತು. ಹೀಗೆ ಉಭಯ ಸದನದ ಅಮೂಲ್ಯ ಸಮಯವು ಒಂದು ನಗುವಿನಲ್ಲಿ ವ್ಯರ್ಥವಾಗಿ ಹೋಯಿತು. ಅನಗತ್ಯ ವಿಚಾರದಲ್ಲಿ ಕಾಲೆಳೆಯುತ್ತಾ ಕಾಲಹರಣ ಮಾಡುವ ಪ್ರವೃತ್ತಿ ಸಂಸತ್ತಿನಲ್ಲಿ ಇತ್ತೀಚೆಗೆ ವ್ಯಾಪಕವಾಗಿ ನಡೆಯುತ್ತಿದೆ.

ಈ ದೇಶದ ಮಧ್ಯಮ ವರ್ಗದ ಜನರು, ರೈತರು ದೇಶದ ಆರ್ಥಿಕ ಸ್ಥಿತಿಯಿಂದ ಕಂಗಾಲಾಗಿ ಅಳುತ್ತಿರುವಾಗ ಅವರ ಕಣ್ಣೀರೊರೆಸಲು ಸಮಯ ವ್ಯಯವಾಗಿ ದ್ದಿದ್ದರೆ ಅದಕ್ಕೊಂದು ಅರ್ಥ ಬರುತ್ತಿತ್ತು. ನಿಜವಾಗಿ ಬಡವರ ಗೋಳನ್ನು ಆಲಿಸಿ ಸಮಸ್ಯೆ ಪರಿಹರಿಸುವ ಕುರಿತು ಇಲ್ಲಿ ಚರ್ಚೆಯಾಗಬೇಕಾ ಗಿತ್ತು. 2014ರಲ್ಲಿ ಪ್ರಧಾನ ಮಂತ್ರಿ ಮೋದಿಯವರು 60 ವರ್ಷಗಳ ಕಾಲ ಕಾಂಗ್ರೆಸ್ ಆಳಿದೆ, ತಮಗೆ 60 ತಿಂಗಳು ಅವಕಾಶ ಕೊಟ್ಟು ನೋಡಿ ಎಂದು ಹೇಳಿದ್ದರು. ನೋಡಿ ಕೇಂದ್ರದಲ್ಲಿ ಮಾತ್ರವಲ್ಲ ಹೆಚ್ಚಿನ ಎಲ್ಲಾ ರಾಜ್ಯಗಳಲ್ಲಿ ಬಿಜೆಪಿಯೇ ಆಡಳಿತ ನಡೆಸುತ್ತಿದೆ. ಆದರೆ ದೇಶದ ಪರಿಸ್ಥಿತಿ ಮಾತ್ರ ದಿನೇ ದಿನೇ ಶೋಚನೀಯವಾಗುತ್ತಿದೆ. ಬಿಜೆಪಿಗೆ ಅಭಿವೃದ್ಧಿ ಪರವಾದ ಕೆಲಸ ಮಾಡುವ ಎಲ್ಲ ಅವಕಾಶಗಳಿತ್ತು. ಕಳೆದ 45 ತಿಂಗಳಲ್ಲಿ ಈ ದೇಶದ ಪರಿಸ್ಥಿತಿ ಯಾವ ಮಟ್ಟದಲ್ಲಿದೆ ಎಂಬುದು ಜನರಿಗೆ ತಿಳಿದಿದೆ. ಅದಕ್ಕಾಗಿ ತಮ್ಮ ಆಡಳಿತ ವೈಫಲ್ಯವನ್ನು ಮರೆಮಾಚಲು ಹಿಂದಿನ ಸರ ಕಾರಗಳನ್ನು ಟೀಕಿಸುತ್ತಾ ಕಾಲ ಹರಣ ಮಾಡುತ್ತಿದೆ. ನಮ್ಮ ಸರಕಾರ ಏನು ನಿ ೀಡಿದೆ ಎಂಬುದನ್ನು ಧೈರ್ಯದಿಂದ ಹೇಳುವ ತಾಕತ್ತು ಅದಕ್ಕೆ ನಶಿಸಿ ಹೋಗಿದೆ. ತಮ್ಮ ಬಾಯಿ ಬಡುಕ ಕೆಲ ಸಂಸದರುಗಳಿಂದ ಕೋಮು ಪ್ರಚೋದಿತ ಹೇಳಿಕೆಗಳನ್ನು ಹೊರಡಿಸಿ ಸಮಾಜದ ಸ್ಥಾಸ್ಥ್ಯ ಕೆಡಿಸುವಂತಹ ಪ್ರಯತ್ನದಲ್ಲಿ ಅದು ಲೀನವಾಗಿದೆ ಎಂಬುದಕ್ಕೆ ಇಲ್ಲಿ ಧಾರಾಳ ಉದಾಹರಣೆಯಿದೆ.

ಸಮಾಜವನ್ನು ಕೆರಳಿಸುವ ಪ್ರವೃತ್ತಿಯನ್ನು ಪ್ರೋಸ್ಸಹಿಸುವ ಪ್ರಯತ್ನಗಳೂ ವ್ಯವಸ್ಥಿತವಾಗಿ ನಡೆಯುತ್ತಿದೆ. ಹೌದು, ಅದಿಕಾರ ಪಡೆದು ನಾಲ್ಕು ವರ್ಷ ಕಳೆದರೂ ಹಿಂದಿನ ಸರಕಾರವನ್ನು ದೂಷಿಸುತ್ತಾ ಕಾಲಹರಣ ಮಾಡಿದರೆ ಸಮಸ್ಯೆ ಪರಿಹಾರವಾಗುವುದೇ ಜವಾಬ್ದಾರಿಯುತ ಹುದ್ದೆಯಲ್ಲಿದ್ದುಕೊಂಡು ಅತ್ಯಂತ ಬೇಜವಾಬ್ದಾರಿ ರೀತಿಯ ಮಾತುಗಳನ್ನಾಡಿದ್ದು ವಿಮರ್ಶೆ ಮಾಡುವಂತಹದ್ದೇ. ಯಾಕೆಂದರೆ ಈ ದೇಶದ ಮೊತ್ತ ಮೊದಲ ಪ್ರಧಾನಿ ಜವಹರಲಾಲ್ ನೆಹರೂರವರ ಸ್ಥಾನದಲ್ಲಿ ಸರ್ದಾರ್ ವಲ್ಲಭಯಿ ಪಟೇಲ್ ಇದ್ದಿದ್ದರೆ ಕಾಶ್ಮೀರ ಎಲ್ಲವೂ ಭಾರತದ ಭಾಗವಾಗುತ್ತಿತ್ತು ಎಂಬ ಹೇಳಿಕೆಯಿದೆಯಲ್ಲ ಅದು ಅವಾಸ್ತವಿಕತೆಯಿಂದ ಕೂಡಿದೆ ಎಂದು ಇತಹಾಸ
ಸ್ಪಷ್ಟಪಡಿಸುತ್ತದೆ. ನಿಜವಾಗಿ ಕಾಶ್ಮೀರವನ್ನು ಭಾರತದಲ್ಲಿ ಸೇರಿಸಬೇಕೆಂಬ ಬಗ್ಗೆ ಒಲವು ಇದ್ದದು ನೆಹರೂ ರವರಿಗಾಗಿತ್ತು. ಪಟೇಲರಿಗೆ ಅದು ಪಾಕಿಸ್ತಾನದ ಜೊತೆ ಸೇರಲಿ ಎಂಬ ಅಭಿಪ್ರಾಯ ಹೊಂದಿದ್ದರು.

ಈ ಅವಾಸ್ತವಿಕ ವಿಚಾರಗಳನ್ನು ಭಾಷಣದಲ್ಲಿ ಹೇಳುತ್ತಿರುವಾಗ ಅವರು ಮಾತ್ರವಲ್ಲ ಇಡೀ ಸಂಸತ್ತು ನಗೆ ಪಾಟಲಿಗೀಡಾಗುತ್ತದೆ. ಯಾಕೆಂದರೆ ಪ್ರತಿಪಕ್ಷವನ್ನು ಟೀಕಿಸುವ ಭರದಲ್ಲಿ ಏನೇನೋ ಹೇಳುತ್ತಾ ಸಾಗುವುದು ಅವರ ವರ್ಚಸ್ಸಿಗೆ ಕುಂದುಂಟಾಗುತ್ತಿದೆ ಎಂಬ ಸಾಮಾನ್ಯ ಜ್ಞಾನವೂ ಪ್ರಧಾನಿಯವರಿಗೆ ಇಲ್ಲವಾಯಿತೇ? ಸಾಮಾನ್ಯ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡುವ ಶೈಲಿಯ ಮಾತುಗಳನ್ನಾಡಿ ಸಂಸತ್ತಿನಲ್ಲಿ ತನ್ನ ವಾಕ್ಚಾತುರ್ಯವನ್ನಷ್ಟೇ ಪ್ರದರ್ಶಿಸಿದರು. ದೇಶದ ಆರ್ಥಿಕ ಸ್ಥಿತಿಯು ತೀರಾ ಕಳವಳಕಾರಿ ಸ್ಥಿತಿಯಲ್ಲಿರುವಾಗ ತಮ್ಮ ವೈಫಲ್ಯವನ್ನು ಮರೆ ಮಾಚಲು ಕಾಲಹರಣಗೊಳಿಸುವುದು ಯಾವ ನ್ಯಾಯ. ಈ ದೇಶದ ಜನರು ತಮ್ಮನ್ನು ಆರಿಸಿ ಕಳಹಿಸಿರುವುದೇತಕ್ಕೆ? ತಾವು ಪಡೆಯುತ್ತಿರುವ ವೇತನಕ್ಕಾದರೂ ನ್ಯಾಯ ಒದಗಿಸುವಷ್ಟಾದರೂ ಸಂಸತ್ತಿನ ಕಲಾಪಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕಲ್ಲವೇ.