ಸನ್ಮಾರ್ಗ ಸೀರತ್ ಕ್ವಿಝ್ ಸ್ಪರ್ಧೆ

ನಿಯಮಗಳು
1. ಸ್ಪರ್ಧೆಯಲ್ಲಿ ಭಾಗವಹಿಸುವವರು ಈ ಪ್ರಕಟಿತ ಹಾಳೆಗಳಲ್ಲಿ ಅಥವಾ ಬಿಳಿ ಹಾಳೆಯಲ್ಲಿ ಉತ್ತರಗಳನ್ನು ಬರೆದು ಕಳುಹಿಸಬೇಕು.
2. ನಿಮ್ಮ ಹೆಸರು, ಪೂರ್ಣ ವಿಳಾಸ ಮತ್ತು ಮೊಬೈಲ್ ಸಂಖ್ಯೆಯನ್ನು ಸ್ಪಷ್ಟವಾಗಿ ನಮೂದಿಸಬೇಕು. ಮಕ್ಕಳ ಅಥವಾ ಇತರರ ಹೆಸರಲ್ಲಿ ಸ್ಪರ್ಧಿಸುವುದನ್ನು ಪರಿಗಣಿಸಲಾಗುವುದಿಲ್ಲ.
3. ಸನ್ಮಾರ್ಗ ವೆಬ್‍ಸೈಟ್ (www.sanmarga.com) ನಲ್ಲೂ ಈ ಸ್ಪರ್ಧೆಯ ಪ್ರಶ್ನೆಗಳನ್ನು ಪ್ರಕಟಿಸಲಾಗಿದ್ದು, ಅಲ್ಲಿಯ ಪ್ರಶ್ನೆಗಳನ್ನು ಓದಿ ಬಿಳಿ ಹಾಳೆಯಲ್ಲಿ ಉತ್ತರ ಬರೆದು ಕಳಿಸಿಕೊಡುವುದಕ್ಕೂ ವಾಟ್ಸಪ್ ಮೂಲಕ ಕನ್ನಡ ಲಿಪಿಯಲ್ಲಿ ಟೈಪ್ ಮಾಡಿ ಕಳುಹಿಸಲಿಕ್ಕೂ ಅವಕಾಶ ಇದೆ.
4. ನಿಮ್ಮ ಉತ್ತರಗಳು ಸ್ಪಷ್ಟವಾಗಿರಲಿ.
5. ವಾಟ್ಸಪ್ ಮೂಲಕ ಉತ್ತರಿಸುವವರು (ವಾಟ್ಸಪ್ ಸಂಖ್ಯೆ +8277373059) ತಮ್ಮ ಉತ್ತರಗಳನ್ನು ಕನ್ನಡ ಲಿಪಿಯಲ್ಲಿ ಟೈಪ್ ಮಾಡಿರಬೇಕು.
6. ಉತ್ತರ ಪತ್ರಿಕೆಯಲ್ಲಿ ನಕಲು ಆಗದಂತೆ ಜಾಗ್ರತೆ ವಹಿಸಬೇಕು. ನಾವು ಸ್ಪರ್ಧಿಗಳಿಂದ ಪ್ರಾಮಾಣಿಕತೆಯನ್ನು ನಿರೀಕ್ಷಿಸುತ್ತೇವೆ. ಇದು ಪ್ರವಾದಿಗಳ ಚರಿತ್ರೆಯನ್ನು ಅಧ್ಯಯನ ನಡೆಸಲು ಪ್ರೇರೇಪಿಸುವುದಕ್ಕೆ ಆಯೋಜಿಸಲಾಗಿರುವ ಸ್ಪರ್ಧೆಯಾಗಿದ್ದು, `ನಕಲು’ ಇಡೀ ಉದ್ದೇಶವನ್ನೇ ವ್ಯರ್ಥಗೊಳಿಸಬಹುದು.
7. ಉತ್ತರ ಕಳುಹಿಸಲು ಕೊನೆಯ ದಿನಾಂಕ ನವೆಂಬರ್: 30, 2019
8. ಅಂತಿಮ ತೀರ್ಮಾನ ತೀರ್ಪುಗಾರರದ್ದಾಗಿರುವುದು.
ವಿವರಗಳಿಗಾಗಿ ಸಂಪರ್ಕಿಸಿ: +9880096128

ಬಹುಮಾನಗಳು:
ಪ್ರಥಮ – ರೂ. 3,000,
ದ್ವಿತೀಯ – ರೂ. 2,000,
ತೃತೀಯ – ರೂ. 1,000
10 ಸಮಾಧಾನಕರ ಬಹುಮಾನಗಳು

ಉತ್ತರ ಕಳುಹಿಸಬೇಕಾದ ವಿಳಾಸ
ಸಂಚಾಲಕರು, ಸನ್ಮಾರ್ಗ ಸೀರತ್ ಕ್ವಿಝ್ ಸ್ಪರ್ಧೆ ವಿಭಾಗ, ಸನ್ಮಾರ್ಗ ವಾರ ಪತ್ರಿಕೆ
ಹಿದಾಯತ್ ಸೆಂಟರ್, ಬೀಬಿ ಅಲಾಬಿ ರಸ್ತೆ, ಮಂಗಳೂರು- 575001

I. ಬಿಟ್ಟ ಪದ ತುಂಬಿರಿ.

1. ಯೂಸುಫ್(ಅ)ರ ಕನಸು- “ಅಪ್ಪಾ, ಹನ್ನೊಂದು ನಕ್ಷತ್ರಗಳೂ ಸೂರ್ಯನೂ ಚಂದ್ರನೂ ನನಗೆ ಸಾಷ್ಟಾಂಗವೆರಗುವುದನ್ನು ನಾನು ಸ್ವಪ್ನದಲ್ಲಿ ಕಂಡಿರುತ್ತೇನೆ.” ಇಲ್ಲಿ ಸೂರ್ಯ ಎಂದರೆ——-

2. ಅಲ್ಲಾಹನು ——– ರಿಗೆ ಕಬ್ಬಿಣದ ಉಪಯೋಗವನ್ನು ಕಲಿಸಿದ್ದನು.

3.——- ರ ಕಾಲದಲ್ಲಿ ಬನೂ ಇಸ್ರಾಈಲ್ ಶಾಖೆಯು ಬೈತುಲ್ ಮಕ್ದಿಸನ್ನು ತಮ್ಮ ಕೇಂದ್ರವಾಗಿ ಅಂಗೀಕರಿಸಿತು.

4. ಮೂಸಾ(ಅ)ರಿಗೆ ಒಟ್ಟು ——-ನಿದರ್ಶನಗಳನ್ನು ನೀಡಲಾಗಿತ್ತು.

5. ಯೂಸುಫ್(ಅ)ರ ಒಡ ಹುಟ್ಟಿದ ಸಹೋದರ—–

6. ಮದ್‍ಯನ್ ಜನಾಂಗ ಇಬ್ರಾಹೀಮ್(ಅ)ರ ಪತ್ನಿ ——–ರಿಗೆ ಹುಟ್ಟಿದ ಪುತ್ರ ಮಿದ್ ಯಾನ್‍ರ ಸಂತತಿ.

7. ಮೀನಿನ ಹೊಟ್ಟೆಯಿಂದ ಹೊರ ಬಂದಾಗ ಯೂನುಸ್(ಅ)ರಿಗೆ ನೆರಳು ಹಾಗೂ ಆಹಾರಕ್ಕಾಗಿ ಪವಾಡ ಸದೃಶವಾಗಿ ಬೆಳೆದ ಗಿಡ ——–

8. ——–ರ ಕಥೆಯನ್ನು ಪವಿತ್ರ ಕುರ್‍ಆನ್‍ನಲ್ಲಿ ಅತ್ಯುತ್ತಮ ಕಥೆ ಎಂದು ಹೇಳಲಾಗಿದೆ.

9. “ನನ್ನ ಮಕ್ಕಳೇ, ನಿಶ್ಚಯವಾಗಿಯೂ ಅಲ್ಲಾಹನು ನಿಮಗಾಗಿ ಈ ಧರ್ಮವನ್ನೇ ಆಯ್ದಿರುವನು. ಆದುದರಿಂದ ಕೊನೆಯುಸಿರಿನ ತನಕವೂ ಮುಸ್ಲಿಮರಾಗಿಯೇ ಜೀವಿಸಿರಿ.” ಇದು ——–ರ ಉಪದೇಶ

10. “ನಿಮ್ಮ ಪ್ರಭು ನಮಗೆ ಆಕಾಶದಿಂದ ಊಟದ ಹರಿವಾಣವನ್ನು ಇಳಿಸಬಲ್ಲನೇ?”- ಇದು ——–ರ ಅನುಯಾಯಿಗಳ ಬೇಡಿಕೆ.

11. ಯೂಸುಫ್(ಅ)ರ ಚರಿತ್ರೆಯಲ್ಲಿ ಸುಳ್ಳುಸಾಕ್ಷಿ, ಸಾಕ್ಷ್ಯಾಧಾರ ಹಾಗೂ ಪವಾಡವಾಗಿ ಪಾತ್ರವಹಿಸಿದ ವಸ್ತು ——–

12. ಶುಐಬ್(ಅ) ——–ಜನಾಂಗದವರಿಗೆ ಕಳುಹಿಸಲ್ಪಟ್ಟ ಪ್ರವಾದಿ.

13. ——–ರು ಬರೆದ ಪತ್ರ ಪರಮದಯಾಮಯನೂ ಕರುಣಾನಿಧಿಯೂ ಆದ ಅಲ್ಲಾಹನ ನಾಮದಿಂದ ಆರಂಭವಾಗಿತ್ತು.

14. “ನಾವು ನಿಮಗೆ ಓರ್ವ ಮೇಧಾವಿಯಾದ ಪುತ್ರನ ಸುವಾರ್ತೆ ನೀಡುತ್ತೇವೆ.” ಇದು ——–ರ ಜನನದ ಬಗ್ಗೆ ದೇವಚರರು ನೀಡಿದ ಸುವಾರ್ತೆ.

15. ಪವಿತ್ರ ಕುರ್‍ಆನ್‍ನಲ್ಲಿ ಬುಡಮೇಲಾದ ನಾಡು ಎಂದು ——– ಜನಾಂಗದ ಪ್ರದೇಶಗಳನ್ನು ಹೇಳಲಾಗಿದೆ.

II. ಬಿಟ್ಟ ಪದ ತುಂಬಿರಿ.

1. ಸಮೂದ್ ಜನಾಂಗದವರು ಬಂಡೆಗಳನ್ನು ಕೊರೆಯುತ್ತಿದ್ದ ಸ್ಥಳ ——–

2. ನೂಹ್(ಅ)ರ ನೌಕೆಯು ——–ಪರ್ವತದಲ್ಲಿ ತಂಗಿತು.

3. ಮೂಸಾ(ಅ) ತಾಯಿಯು ಮಗುವನ್ನು ——– ನದಿಯಲ್ಲಿ ತೇಲಿಸಿ ಬಿಡುತ್ತಾರೆ.

4. ಮೂಸಾ(ಅ)ರೊಂದಿಗೆ ಅಲ್ಲಾಹನು ಸಂಭಾಷಣೆ ನಡೆಸಿದ ಪವಿತ್ರ ಸ್ಥಳ ——–

5. ಲೂತ್(ಅ)ರ ಜನಾಂಗದ ಅವಶೇಷ ——–

6. ಮೂಸಾ(ಅ) ಮತ್ತು ಅನುಯಾಯಿಗಳು ದಾಟಿದ ಸಮುದ್ರ ——–

III. ಬಿಟ್ಟ ಸ್ಥಳಗಳಲ್ಲಿ ಸೂಕ್ತವಾದ ಜೀವಜಂತುಗಳ ಹೆಸರು ಬರೆಯಿರಿ

1. ಸುಲೈಮಾನರು ಮರಣ ಹೊಂದಿದಾಗ ಅವರ ಮರಣ ಸುದ್ದಿಯನ್ನು ಜಿನ್ನ್‍ಗಳಿಗೆ ತಲುಪಿಸಿದವರು ——–

2. ಓರ್ವ ಪ್ರವಾದಿಯ ಚರಿತ್ರೆಯಲ್ಲಿ ತಾನು ಮಾಡದ ತಪ್ಪಿಗಾಗಿ ಆರೋಪಿಸಲ್ಪಟ್ಟ ಪ್ರಾಣಿ ——–

3. ಮೂಸಾ(ಅ)ರ ಅನುಪಸ್ಥಿತಿಯಲ್ಲಿ ಅವರ ಜನಾಂಗದವರು ತಮ್ಮ ಆಭರಣಗಳಿಂದ ಒಂದು ——– ವಿಗ್ರಹ ತಯಾರಿಸಿದರು.

4. ಫಿರ್‍ಔನನ ಜನಾಂಗದವರು ——–ಹಾವಳಿಯನ್ನು ಅನುಭವಿಸಿದರು.

5. ಸುಲೈಮಾನ್(ಅ)ರು ——–ಮೂಲಕ ಸಬಾ ರಾಣಿಗೆ ಪತ್ರ ರವಾನಿಸುತ್ತಾರೆ.

6. ಇಬ್ರಾಹೀಮ್(ಅ) ಹುರಿದ ——–ವನ್ನು ಭೋಜನಕ್ಕಾಗಿ ತಮ್ಮ ಅಥಿತಿಗಳ ಮುಂದಿಟ್ಟರು.

7. ಸಾಲಿಹ್(ಅ) ಪವಾಡವನ್ನು ಕುರ್‍ಆನ್‍ನಲ್ಲಿ ——– ಎಂಬ ಹೆಸರಿನಲ್ಲಿ ಪ್ರಸ್ತಾಪಿಸಲಾಗಿದೆ.

IV. ಬಿಟ್ಟ ಪದ ತುಂಬಿರಿ.

1. ಪ್ರಾಚೀನ ಅವಶೇಷಗಳು ಮತ್ತು ಭೂಗರ್ಭ ಸಂಶೋಧನೆಗಳ ಪ್ರಕಾರ ನೂಹ್(ಅ)ರ ಕಾಲದಲ್ಲಿ ——–ಮತ್ತು ——–ನದಿಗಳ ಪ್ರದೇಶದಲ್ಲೆಲ್ಲ ಜಲಪ್ರಳಯ ಸಂಭವಿಸಿತ್ತು.

2. ಧರ್ಮದ ಆಹ್ವಾನ ನೀಡುವಂತೆ ಮೂಸ(ಅ)ರನ್ನು ಫಿರ್‍ಔನ್ ——–ಮತ್ತು ——–ರ ಬಳಿಗೆ ಕಳುಹಿಸಲಾಗಿತ್ತು.

3. ——–ಮತ್ತು ——–ಪ್ರವಾದಿಯ ಪತ್ನಿಯರು ಸತ್ಯವಿಶ್ವಾಸ ಸ್ವೀಕರಿಸಲಿಲ್ಲ.

4. ಬನೀ ಇಸ್ರಾಈಲರಿಗೆ ಕೊನೆಯದಾಗಿ ಏಕಕಾಲದಲ್ಲಿ ಕಳುಹಿಸಲ್ಪಟ್ಟ ಇಬ್ಬರು ಪ್ರವಾದಿಯರು ——–ಮತ್ತು ——–

5. ಯೂನುಸ್(ಅ)ರನ್ನು ಕುರ್‍ಆನ್‍ನಲ್ಲಿ ——–ಮತ್ತು ——–ಎಂಬ ಬಿರುದಿನಲ್ಲಿ ಪ್ರಸ್ತಾಪಿಸಲಾಗಿದೆ.

6. ಈಸಾ(ಅ)ರಿಗೆ ಕುಟುಂಬ ಸಂಬಂಧವಿರುವ ಇಬ್ಬರು ಪ್ರವಾದಿಯರು ——–ಮತ್ತು ——–

V. ಇವು ಯಾವ ಪ್ರವಾದಿ ಪ್ರಾರ್ಥಿಸಿದ ಪ್ರಾರ್ಥನೆ ಎಂದು ಬರೆಯಿರಿ.

1. “ನನ್ನ ಪ್ರಭೂ ನನ್ನನ್ನು ಏಕಾಂಗಿಯಾಗಿ ಬಿಟ್ಟುಬಿಡಬೇಡ. ಅತ್ಯುತ್ತಮ ವಾರೀಸುದಾರ ನೀನೇ ಆಗಿರುತ್ತಿ.”

2. “ನಿನ್ನ ಹೊರತು ಅನ್ಯ ದೇವನಿಲ್ಲ. ನೀನು ಪರಮಪಾವನನು. ನಿಶ್ಚಯವಾಗಿಯೂ ನಾನು ಅಪರಾಧವೆಸಗಿದನು.”

3. “ಓ ನಮ್ಮ ಪ್ರಭೂ, ನಾವು ನಮ್ಮ ಮೇಲೆ ಅನ್ಯಾಯವೆಸಗಿಕೊಂಡೆವು. ಈಗ ನೀನು ನಮ್ಮನ್ನು ಕ್ಷಮಿಸದಿದ್ದರೆ ಹಾಗೂ ನಮ್ಮ ಮೇಲೆ ಕೃಪೆದೋರದಿದ್ದರೆ ನಿಶ್ಚಯವಾಗಿಯೂ ನಾವು ನಷ್ಟ ಹೊಂದುವವರಲ್ಲಾಗುವೆವು.”

4. “ನನ್ನ ಪ್ರಭೂ, ನನಗೆ ಹುಕ್ಮ್ (ನಿರ್ಧಾರ ಶಕ್ತಿ) ನೀಡು ಮತ್ತು ನನ್ನನ್ನು ಸಜ್ಜನರೊಂದಿಗೆ ಸೇರಿಸು.”

5. “ನನ್ನ ಪ್ರಭೂ, ನೀನು ನನ್ನ ಮೇಲೂ ನನ್ನ ಮಾತಾಪಿತರ ಮೇಲೂ ಮಾಡಿದಂತಹ ಉಪಕಾರಕ್ಕಾಗಿ ನಾನು ಕೃತಜ್ಞತೆ ತೋರಿಸುತ್ತಿರುವಂತೆಯೂ ನೀನು ಮೆಚ್ಚುವಂತಹ ಸತ್ಕರ್ಮವೆಸಗುವಂತೆಯೂ ನನ್ನನ್ನು ನಿಯಂತ್ರಿಸಿಡು.”

6. “ನನ್ನ ಪ್ರಭೂ, ನನ್ನನ್ನು, ನನ್ನ ಮಾತಾಪಿತರನ್ನು, ಸತ್ಯವಿಶ್ವಾಸಿಯಾಗಿ ನನ್ನ ಮನೆಗೆ ಪ್ರವೇಶಿಸಿದ ಪ್ರತಿಯೊಬ್ಬನನ್ನು ಮತ್ತು ಎಲ್ಲ ಸತ್ಯವಿಶ್ವಾಸಿ ಸ್ತ್ರೀ-ಪುರುಷರನ್ನು ಕ್ಷಮಿಸಿಬಿಡು ಮತ್ತು ಅಕ್ರಮಿಗಳಿಗೆ ವಿನಾಶದ ಹೊರತು ಇನ್ನೇನನ್ನೂ ವೃದ್ಧಿಸಬೇಡ”.

7. “ಓ ಆಕಾಶಗಳ ಮತ್ತು ಭೂಮಿಯ ನಿರ್ಮಾಪಕನೇ! ಇಹದಲ್ಲೂ ಪರದಲ್ಲೂ ನೀನೇ ನನ್ನ ರಕ್ಷಕ ಮಿತ್ರನು. ನನ್ನನ್ನು ಮುಸ್ಲಿಮನನ್ನಾಗಿ ಅಂತ್ಯಗೊಳಿಸು ಮತ್ತು ಅಂತಿಮವಾಗಿ ಸಜ್ಜನರೊಂ ದಿಗೆ ಸೇರಿಸು.”

8. “ಓ ನನ್ನ ಪ್ರಭೂ, ನೀನು ನನ್ನನ್ನು ನಮಾಝ್ ಸಂಸ್ಥಾಪಿಸುವವನನ್ನಾಗಿ ಮಾಡು. ನನ್ನ ಸಂತತಿಯಿಂದಲೂ (ಈ ಕಾರ್ಯವೆಸಗುವವರನ್ನು ಎಬ್ಬಿಸು.)”

9. “ಓ ಪ್ರಭೂ, ನಮ್ಮೀರ್ವರನ್ನೂ ನಿನ್ನ ಆಜ್ಞಾನುಸಾರಿಗಳಾಗಿ ಮಾಡು. ನಮ್ಮ ಸಂತತಿಯಲ್ಲಿ ನಿನ್ನ ಆಜ್ಞಾನುಸಾರಿಯಾದ ಒಂದು ಸಮುದಾಯವನ್ನು ಎಬ್ಬಿಸು.”

10. “ನನಗೆ ರೋಗ ತಗಲಿ ಹೋಗಿದೆ. ನೀನು ಕರುಣಾಳುಗಳಲ್ಲಿ ಅತ್ಯಂತ ಕರುಣಾಳು ಆಗಿರುತ್ತೀ.”

11. “ಓ ನನ್ನ ಪ್ರಭೂ ನನ್ನನ್ನೂ ನನ್ನ ಸಹೋದರನನ್ನೂ ಕ್ಷಮಿಸು ಮತ್ತು ನಮ್ಮನ್ನು ನಿನ್ನ ಕರುಣೆಯಲ್ಲಿ ಸೇರಿಸು, ನೀನು ಅತ್ಯಂತ ಕೃಪಾಳುವಾಗಿರುವೆ.”

12. “ಓ ನಮ್ಮ ಪ್ರಭೂ, ನಮ್ಮ ಮತ್ತು ನಮ್ಮ ಜನಾಂಗದ ನಡುವೆ ಸರಿಯಾದ ತೀರ್ಮಾನ ಮಾಡಿ ಬಿಡು. ನೀನು ಅತ್ಯುತ್ತಮ ತೀರ್ಪು ನೀಡುವವನಾಗಿರುತ್ತೀ.”

13. “ಓ ನನ್ನ ಪ್ರಭೂ, ನನ್ನ ಹೃದಯವನ್ನು ವಿಶಾಲಗೊಳಿಸು. ನನ್ನ ಕಾರ್ಯವನ್ನು ನನಗೆ ಸುಲಭಗೊಳಿಸು. ಜನರು ನನ್ನ ಮಾತನ್ನು ತಿಳಿಯುವಂತಾಗಲು ನನ್ನ ನಾಲಗೆಯ ತೊಡಕನ್ನು ನೀಗಿಸು.”

14. “ನನ್ನ ಪ್ರಭೂ, ಈ ಕಿಡಿಗೇಡಿಗಳ ವಿರುದ್ಧ ನನಗೆ ಸಹಾಯ ನೀಡು.”

15. “ಪ್ರಭೂ, ನಿನ್ನ ಮಹಿಮೆಯಿಂದ ನನಗೆ ಸುನೀತ ಸಂತತಿ ದಯಪಾಲಿಸು.”

VI. ಯಾರು ಯಾರೊಂದಿಗೆ ಹೇಳಿದರು?

1. “ಅಲ್ಲಾಹನು ಸೂರ್ಯನನ್ನು ಪೂರ್ವ ದಿಕ್ಕಿನಿಂದ ಮೂಡಿಸುತ್ತಾನೆ. ನೀನು ಅದನ್ನು ಪಶ್ಚಿಮ ದಿಕ್ಕಿನಿಂದ ಮೂಡಿಸು.”

2. “ಪ್ರತಿಯೊಂದು ವಸ್ತುವಿಗೆ ಅದರ ಆಕೃತಿ ಪ್ರದಾನ ಮಾಡಿ ಆ ಬಳಿಕ ಅದಕ್ಕೆ ದಾರಿ ತೋರಿದವನೇ ನಮ್ಮ ಪ್ರಭು.”

3. “ದೇಶದ ಭಂಡಾರಗಳನ್ನು ನನ್ನ ವಶಕ್ಕೆ ಬಿಡಿರಿ. ನಿಶ್ವಯವಾಗಿಯೂ ನಾನು ಸಂರಕ್ಷಕ ಮತ್ತು ಜ್ಞಾನಿಯಾಗಿದ್ದೇನೆ.”

4. “ನಿನ್ನ ಸಿಂಹಾಸನ ಹೀಗೆಯೇ ಇದೆಯೇ… ಇದು ಗಾಜಿನ ನುಣುಪಾದ ಹಾಸು.”

VII. ಈ ಕೆಳಗಿನ ಸೂಕ್ತಗಳು ಯಾವ ಪ್ರವಾದಿಯ ಚರಿತ್ರೆಗೆ ಸಂಬಂಧಿಸಿವೆ?

1. “ನಾನು, ನನಗಿಂತ ಮೊದಲು ಬಂದಿರುವ ತೌರಾತನ್ನು ದೃಢೀಕರಿಸುವವನು ಮತ್ತು ನನ್ನ ಬಳಿಕ ಬರಲಿರುವ ಅಹ್ಮದ್ ಎಂಬ ಹೆಸರಿನ ರಸೂಲರ ಕುರಿತು ಸುವಾರ್ತೆ ನೀಡುವವ ನಾಗಿದೇನೆ.”

2. “ಇಳಿದು ಬಿಡಿರಿ, ನೀವು ಪರಸ್ಪರ ಶತ್ರುಗಳಾಗಿರುತ್ತೀರಿ ಮತ್ತು ನಿಮಗಾಗಿ ಒಂದು ನಿರ್ದಿಷ್ಟ ಕಾಲಾವಧಿಯ ವರೆಗೆ ಭೂಮಿಯ ಮೇಲೆಯೇ ವಾಸಸ್ಥಾನ ಮತ್ತು ಜೀವನ ಸಾಧನಗಳಿವೆ.”

3. “ರಾಜನ ಲೋಟೆಯು ಕಳೆದು ಹೋಗಿದೆ, ಅದನ್ನು ತಂದು ಕೊಟ್ಟವನಿಗೆ ಒಂದು ಒಂಟೆ ಹೊರುವಷ್ಟು ಧಾನ್ಯ ಬಹುಮಾನವಿದೆ.”

4. “ಇದರಲ್ಲಿ ಹತ್ತಿಕೊಳ್ಳಿರಿ, ಇದು ಚಲಿಸುವುದೂ ನಿಲ್ಲುವುದೂ ಅಲ್ಲಾಹನ ನಾಮದಿಂದಲೇ ಆಗಿದೆ. ನನ್ನ ಪ್ರಭು ಅತ್ಯಂತ ಕ್ಷಮಾಶೀಲನೂ ಕರುಣಾನಿಧಿಯೂ ಆಗಿರುತ್ತಾನೆ.”

5. “ನೀವು ಮೂರು ದಿನಗಳ ತನಕ ಜನರೊಡನೆ ಸನ್ನೆಗಳ ಮೂಲಕ ವಿನಾ ಏನೂ ಮಾತಾಡಲಿಕ್ಕಿಲ್ಲ (ಅಥವಾ ನಿಮ್ಮಿಂದ ಮಾತನಾಡಲಿಕ್ಕಾಗದು). ಇದೇ ನಿಮಗೆ ಕುರುಹು.

6. ಅವರ ಪೀಠದ ಮೇಲೆ ಒಂದು ಜಡ ಶರೀರವನ್ನು ತಂದು ಹಾಕಿದೆವು.

7. ತರುವಾಯ ಅದೃಷ್ಟ ಚೀಟಿ ಹಾಕುವುದರಲ್ಲಿ ಭಾಗವಹಿಸಿ ಅದರಲ್ಲಿ ಸೋತು ಹೋದರು.

VIII. ಈ ಕೆಳಗಿನವು ಯಾವ ಪ್ರವಾದಿಗಳ ಪವಾಡ?

1. ನಾವು ಅವರಿಗಾಗಿ ಗಾಳಿಯನ್ನು ನಿಯಂತ್ರಿಸಿಕೊಟ್ಟೆವು. ಅದು ಅವರ ಅಪ್ಪಣೆಯಂತೆ ಅವರು ಇಚ್ಛಿಸಿದ ದಿಕ್ಕಿಗೆ ಮಂದವಾಗಿ ಬೀಸುತ್ತಿತ್ತು.

2. “ನಿಮ್ಮ ಕಾಲನ್ನು ನೆಲಕ್ಕೆ ಬಡಿಯಿರಿ. ಇದೋ ತಣ್ಣೀರು, ಸ್ನಾನಕ್ಕಾಗಿ ಮತ್ತು ಕುಡಿಯಲಿಕ್ಕಾಗಿ.”

3. ಸ್ತುತಿಸುವ ಪರ್ವತಗಳನ್ನೂ ಪಕ್ಷಿಗಳನ್ನೂ ಅಧೀನಗೊಳಿಸಿಕೊಟ್ಟೆವು.

4. ಬಂಡೆಯಿಂದ ಹನ್ನೆರಡು ಚಿಲುಮೆಗಳು ಉಕ್ಕಿ ಬಂದುವು. ಪ್ರತಿಯೊಂದು ಪಂಗಡವು ನೀರು ಪಡೆಯಬೇಕಾದ ಸ್ಥಳವನ್ನು ನಿಶ್ಚಯಿಸಿಕೊಂಡಿತು.

5. “ಈ ಅಂಗಿಯನ್ನು ಕೊಂಡು ಹೋಗಿರಿ ಮತ್ತು ನನ್ನ ತಂದೆಯವರ ಮುಖದ ಮೇಲೆ ಹಾಕಿ ಬಿಡಿರಿ. ಅವರ ದೃಷ್ಟಿ ಮರಳಿ ಬರುವುದು.”

IX. ಹೊಂದಿಸಿ ಬರೆಯಿರಿ.

ಐಕಃ – ಅಣೆಕಟ್ಟು ಮುರಿದ ಮಹಾಪ್ರವಾಹ
ಲೂತ್ – ಛತ್ರಿಯ ದಿನದ ಯಾತನೆ
ಮದ್‍ಯನ್ – ಚಂಡಮಾರುತ
ಆದ್ – ಸುಟ್ಟಕಲ್ಲು
ಸಬಾ – ಭಯಾನಕ ಸ್ಫೋಟ