ಸಂವಿಧಾನಕ್ಕೆ ಬದ್ಧವಾಗಿರುವ ಪ್ರತಿನಿಧಿಗಳನ್ನು ನಾವು ಆರಿಸಿ ಕಳಿಸಬೇಕಿದೆ. – ಎಸ್. ಆರ್ ಹಿರೇಮಠ್

0
399

ಬೆಳಗಾವಿ ನವಂಬರ್ 13:ಹಲವು ವರ್ಷಗಳಿಂದ ಬೇರೆ ಬೇರೆ ಪ್ರಕಾರದ ಹೋರಾಟಗಳಿಂದ ಎಚ್ಚರಿಕೆ ಕೊಡ್ತ ಬಂದಿದೀವಿ. ನೀವೆಲ್ಲ ತುಂಬಾ ತಾಳ್ಮೆಯಿಂದ ಎಲ್ಲ ಅವರಿಗೆ ಹೇಳಿದ್ರೆ ಹೇಗೆ. ಯಾವ ಮುಖ್ಯಮಂತ್ರಿಗಳು ಸಾಮಾಜಿಕ ನ್ಯಾಯ ಅಂತ ಹೇಳ್ತಾರೆ , ಸೆಗಣಿ ತಿನ್ನೋದು ಅಂತಾರೆ ನಮ್ಮ ಕಡೆ, ಈ ರೀತಿ ಬುದ್ದಿ ಇಲ್ಲದ ಜನ ಯಾಕೆ ಅಧಿಕಾರದಲ್ಲಿ ಕೂತಿದಾರೆ ಎಂದು ನಾವು ಯೋಚಿಸಬೇಕು.
ಮನುಷ್ಯ ಭೂಮಿಗೆ ಬಂದಮೇಲೆ ಬದುಕಲು ಒಂದು ಜೀವಿತದ ಹಕ್ಕನ್ನು ನಾವು ಕೇಳ್ತಿದೀವಿ. ನಮ್ಮ ಉಪಜೀವನಕ್ಕಾಗಿ ಭೂಮಿ ಮತ್ತು ಇರಲಿಕ್ಕೆ ಮನೆ ಕೇಳ್ತಿದೀವಿ. ಸ್ವಾತಂತ್ರ ಹೋರಾಟಗಾರರಿಗೆ ಈ ಕನಸಿತ್ತು ತುಂಡು ಭೂಮಿಗೆ ಜನರು ಹೇಗೆ ಅವಲಂಬಿಸಿದ್ದಾರೆ ಎಂದು. ಅರಣ್ಯದ ಕಟ್ಟಿಗೆ, ದನಕ್ಕೆ ಮೇವು, ಒಲೆಗೆ ಕಟ್ಟಿಗೆ ಇವೆಲ್ಲವೂ ಒಂದಕ್ಕೊಂದು ಸಂಬಂಧವಿದೆ. ಬಡಜನರ ಗೌರವಯುತ ಜೀವನಕ್ಕೆ ನಾವು ಆಸ್ಪದ ಕೊಡಬೇಕು. ಬೇಜಾವಬ್ದಾರಿತನದ ಅನೈತಿಕ ಸಂಪತ್ತಿನ ಶೇಖರಣೆಗೆ ಜನಪ್ರತಿನಿಧಿಗಳು ಮುಂದಾಗಬಾರದು.
ಅಧಿಕಾರದಲ್ಲಿರುವವರಿಗೆ ಸರಿಯಾದ ಪಾಠ ಕಲಿಸಬೇಕಿದೆ. ರಾಜಕೀಯವಾಗಿ ಸಂಘಟಿತರಾಗಬೇಕಿದೆ. ಪ್ರತಿನಿಧಿಗಳು ಮೊದಲು ಶಪಥ ಪಡೆದಂತೆ ನಡೆದುಕೊಳ್ಳುತ್ತಿಲ್ಲ. ಈ ಹೋರಾಟ ಸಣ್ಣ ಹೋರಾಟವಲ್ಲ. ಇಂದು ನಾವು 1947 ರ ಹೋರಾಟಕ್ಕಿಂತ ದೊಡ್ಡ ಹೋರಾಟವನ್ನು ಕಟ್ಟಬೇಕಿದೆ. ಬಡವರು- ಶ್ರೀಮಂತರ ನಡುವಿನ ಅಂತರ ಜಾಸ್ತಿ ಆಗಿದೆ. ನಾವಿಂದು ಸಂವಿಧಾನಕ್ಕೆ ಬದ್ಧವಾಗಿರುವ ಪ್ರತಿನಿಧಿಗಳನ್ನು ನಾವು ಆರಿಸಿ ಕಳಿಸಬೇಕಿದೆ. ಸಾಮಾಜಿಕ ಹೋರಾಟಗಾರ ಎಸ್.ಆರ್. ಹಿರೇಮಠ್ ಬೆಳಗಾವಿಯಲ್ಲಿ ಭೂಮಿ ಮತ್ತು ವಸತಿಗಾಗಿ ಧರಣಿ ಹೋರಾಟವನ್ನು ಉದ್ದೇಶಿಸಿ ಮಾತನಾಡಿದ ಮಾತನಾಡಿದರು