ಸಿದ್ಧರಾಮಯ್ಯ ಉರುಳಿಸಿದ ದಾಳದ ಪರಿಣಾಮ ಏನಾಗಬಹುದು?

0
959

@ ಸಲೀಮ್ ಬೋಳಂಗಡಿ
ರಾಜ್ಯದಲ್ಲಿ ಚುನಾವಣಾ ಪ್ರಚಾರದ ಭರಾಟೆ ದಿನೇ ದಿನೇ ತೀವ್ರವಾಗುತ್ತಿದೆ. ಸಂಕಟ ಬಂದಾಗ ವೆಂಕಟರಮಣ ಎಂಬ ಗಾದೆ ಮಾತಿನಂತೆ ರಾಜಕೀಯ ನಾಯಕರ ದಂಡು ದೇವಸ್ಥಾನ, ಚರ್ಚು, ಮಸೀದಿಗಳಿಗೆ ಪ್ರದಕ್ಷಿಣೆ ಹಾಕುತ್ತಿವೆ. ಹಿಂದೆಂದೂ ಕಾಣದ ಸಮುದಾಯ ಪ್ರೇಮದ ಅನಾವರಣವಾಗುತ್ತಿದೆ. ದೇವ ಭಯವೋ ಪ್ರಜೆಗಳ ಭಯವೋ ಅಂತೂ ಧಾರ್ಮಿಕ ಕ್ಷೇತ್ರಗಳು ಕಂಗೊಳಿಸುತ್ತಿವೆ. ಯಾವುದೇ ಉತ್ಸವಾದಿಗಳನ್ನು ರಾಜಕಾರಣಿಗಳು ಮಿಸ್ ಮಾಡುತ್ತಿಲ್ಲ. ಜನರು ಕೂಡಾ ತಮ್ಮ ಅಹವಾಲುಗಳನ್ನು ಸಲ್ಲಿಸಿ ಬೇಡಿಕೆಯನ್ನು ಈಡೇರಿಸಿಕೊಳ್ಳಲು ಇದು ¸ ಸಕಾಲವೆಂದು ಬಗೆದು ಸದುಪಯೋಗ ಪಡಿಸಿಕೊಳ್ಳುತ್ತಿರುವುದು ಕಂಡುಬರುತ್ತದೆ. ರಾಜಕೀಯ ಕುರುಕ್ಷೇತ್ರದಲ್ಲಿ ದಿನೇ ದಿನೇ ಹೊಸ ಹೊಸ ಬ್ರೇಕಿಂಗ್ ನ್ಯೂಸ್‍ಗಳು ಬರುತ್ತಿವೆ.

ಚುನಾವಣೆಯಲ್ಲಿ ಲಾಭ ಗಳಿಸಲು ಜನರ ಭಾವನೆಗಳನ್ನು ಕೆರಳಿಸುವ ಶ್ರಮಗಳೂ ನಡೆಯುತ್ತಿವೆ. ಸಿದ್ದರಾಮಯ್ಯರ ಸರಕಾರವು ಲಿ ಂಗಾಯುತರ ಪ್ರತ್ಯೇಕ ಧರ್ಮಕ್ಕೆ ಶಿಫಾರಸ್ಸು ಮಾಡಿರುವುದು ಕೂಡಾ ಅದರ ಒಂದು ಭಾಗವಾಗಿದೆ. ಅದರ ಅಂತಿಮ ಅಂಗೀ ಕಾರಕ್ಕೆ ಕೇಂದ್ರದ ಅಂಗಣಕ್ಕೆ ಕಳುಹಿಸಿದೆ. ಜನಸಂಖ್ಯೆಯಲ್ಲಿ ಶೇಕಡಾ 17ರಷ್ಟಿರುವ ಲಿಂಗಾಯುತರ ಬಹು ಹಿಂದಿನ ಬೇಡಿಕೆಯನ್ನು ಕಾಂಗ್ರೆಸ್ ಈಡೇರಿಸಿದೆ. ಚುನಾವಣೆ ಆಸನ್ನವಾಗಿರುವ ಈ ಸಂದರ್ಭದಲ್ಲಿ ಇದನ್ನು ಬಳಸಿಕೊಂಡದ್ದು ಚುನಾವಣಾ ತಂತ್ರದ ಭಾಗವೆಂದು ವಿಶ್ಲೇಷಿಸಬೇಕಾಗುತ್ತದೆ. ಲಿಂಗಾಯತ ನಾಯಕರು ಇದರಿಂದ ಹರ್ಷಗೊಂಡರೂ ವೀರಶೈವರು ನಮ್ಮನ್ನು ವಿಭಜಿಸುವ ತಂತ್ರವೆಂದು ಹೇಳುತ್ತಿದ್ದಾರೆ. ಸಿದ್ದರಾಮಯ್ಯನವರು ಲಿಂಗಾಯತ ಧರ್ಮಕ್ಕೆ ಶಿಫಾರಸ್ಸು ನೀಡಿ ಕೇಂದ್ರಕ್ಕೆ ಕಳುಹಿಸಿರುವುದರಿಂದ ಬಿಜೆಪಿಯು ಕೂಡಾ ಇಕ್ಕಟ್ಟಿಗೆ ಸಿಲುಕಿದೆ. ‘ಅತ್ತ ದರಿ ಇತ್ತ ಪುಲಿ’ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ವೀರಶೈವರು ಕೂಡಾ ವಿಜಯಪುರದಲ್ಲಿ ಬೃಹತ್ ಸಮಾವೇಶವೊಂದನ್ನು ಹಮ್ಮಿಕೊಂಡರು. ಸಿದ್ದರಾಮಯ್ಯನವರ ಚಾಣಾಕ್ಷ ನಡೆಯ ಮುಂದೆ ಚಾಣಕ್ಯ ಅಮಿತ್ ಶಾ ಕೂಡಾ ಮುಗ್ಗರಿಸುವಂತಾಗಿದೆ. ಯಾಕೆಂದರೆ ಯಡಿಯೂರಪ್ಪ ಕೂಡಾ ಲಿಂಗಾಯತರು. ಸುಮಾರು ನೂರು ವಿಧಾನಸಭಾ ಕ್ಷೇತ್ರ ದಲ್ಲಿ ಲಿಂಗಾಯತರ ಮತಗಳು ನಿ ರ್ಣಾಯಕವಾಗಿರುವಾಗ ಅದರತ್ತ ಕಾಂಗ್ರೆಸ್ ಚಿತ್ತ ಹರಡಿದೆ. ಲಿಂಗಾಯತರನ್ನು ಹಿಂದೂ ಧರ್ಮದಿಂದ ಪ್ರತ್ಯೇಕಿಸುವುದನ್ನು ತೀವ್ರವಾಗಿ ವಿರೋಧಿಸುತ್ತಿದ್ದ ಆರೆಸ್ಸೆಸ್‍ನ ಗೆರೆಯನ್ನು ಮೀರಿ ಬಿಜೆಪಿ ಮುಂದಡಿ ಇಡಬಹುದೇ?

ಲಿಂಗಾಯತರು ಬಹಳ ಹಿಂದಿನಿಂದಲೇ ತಮ್ಮನ್ನು ಪ್ರತ್ಯೇಕ ಧರ್ಮವಾಗಿ ಗುರುತಿಸಬೇಕೆಂಬ ಬೇಡಿಕೆ ಇಡುತ್ತಲೇ ಬಂದಿ ದ್ದರು. ಕೆಲ ಪ್ರಗತಿಪರ ನಾಯಕರು ಇದಕ್ಕೆ ಒತ್ತಡವನ್ನು ಹೇರುತ್ತಲೇ ಇದ್ದರು.
ಎಂ.ಎಂ. ಕಲ್ಬುರ್ಗಿ ಮತ್ತು ಗೌರಿ ಲಂಕೇಶ್ ಮುಂತಾದವರು ಲಿಂಗಾಯತರು ಹಿಂದುತ್ವದಿಂದ ಪ್ರತ್ಯೇಕವಾಗಿರಬೇಕೆಂಬ ಪ್ರಬಲವಾದ ವಾದ ಮಂಡಿಸಿದವರಾಗಿದ್ದರು. ಲಿಂಗಾಯತ ವೀರಶೈವರು ಹೇಗೆ ಹಿಂದೂ ಧರ್ಮದಿಂದ ಪ್ರತ್ಯೇಕವಾಗುತ್ತದೆ ಎಂಬುದನ್ನು ಸಂಶೋ ಧನಾತ್ಮಕ ಅಧ್ಯಯನಗಳ ಮುಖಾಂತರ ಅವರು ಬಹಿರಂಗವಾಗಿ ಸಾರುತ್ತಿದ್ದರು. ಇವರೀರ್ವರ ಹತ್ಯೆಗೆ ಇದು ಪ್ರಮುಖ ಕಾರಣ ವೆಂಬ ಶಂಕೆಯೂ ಇದೆ.
ಲಿಂಗಾಯತರ ಹೋರಾಟವು ಪ್ರಬಲವಾಗುತ್ತಿದ್ದಂತೆ ಈ ಹೋರಾಟದಿಂದ ಹಿಂದೆ ಸರಿಯುವಂತೆ ಆರೆಸ್ಸೆಸ್‍ನ ಮೋಹನ್ ಭಾಗವತ್ ಆಗ್ರಹಿಸಿದ್ದರು. ಆಗ ಲಿಂಗಾಯತ ಸಮುದಾಯದ ನಾಯಕರು ನಮ್ಮ ವಿಚಾರದಲ್ಲಿ ಆರೆಸ್ಸೆಸ್ ಮಧ್ಯ ಪ್ರವೇಶಿಸಬಾರ ದೆಂದು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು. ನಿಜವಾಗಿ, ಲಿಂಗಾ ಯತ ಮತ್ತು ವೀರಶೈವದ ದೊಡ್ಡ ವಿಭಾಗವು ರಾಜಕೀಯ ವಾಗಿ ಬಿಜೆಪಿಯೊಂದಿಗಿದೆ. ಉತ್ತರ ಕರ್ನಾಟಕದ ಪ್ರಧಾನ ಓಟ್ ಬ್ಯಾಂಕ್ ಆಗಿರುವ ಈ ವಿಭಾಗದವರನ್ನು ವಿಭಜಿಸುವುದನ್ನು ಬಿಜೆಪಿ ಒಪ್ಪುವುದು ಸಾಧ್ಯವೇ? ಇದು ತಮ್ಮ ಓಟ್ ಬ್ಯಾಂಕ್‍ಗೆ ದೊಡ್ಡ ಕಂದರ ಬೀಳಲಿದೆ ಯೆಂಬ ವಾಸ್ತವ ಬಿಜೆಪಿಯ ಅರಿವಿಗೆ ಬಂದಿರುವುದರಿಂದ ಇದನ್ನು ಹೇಗಾ ದರೂ ತಡೆಯ¨ಬೇಕೆಂಬ ಹುನ್ನಾರದಲ್ಲಿ ಅದು ತೊಡಗಿಸಿಕೊಂಡಿದೆ. ಸರಕಾರದ ಈ ತೀರ್ಮಾನದ ವಿರುದ್ಧ ಹೋರಾ ಡಲು ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಮತ್ತವರ ಪುತ್ರ ಸಿದ್ದರಾಮಯ್ಯ ಸಂಪುಟದ ಸಚಿವ ಮಲ್ಲಿಕಾರ್ಜುನ ಬಿಜೆಪಿ ಸೇರುವ ಬಗ್ಗೆ ಪುಂಖಾನುಪುಂಖ ವರದಿಗಳು ಬರುತ್ತಲೇ ಇತ್ತು. ಪಂಚಪೀಠಗಳ ಸ್ವಾಮೀಜಿಗಳನ್ನು ಸರಕಾರದ ವಿರುದ್ಧ ಎತ್ತಿ ಕಟ್ಟಲಾಗುತ್ತಿದೆ. ಒಂದುವೇಳೆ ಇದರಲ್ಲಿ ಅವರು ಯಶಸ್ವಿಯಾದರೆ ಸರಕಾರಕ್ಕೆ ವ್ಯತಿರಿಕ್ತ ಪರಿಣಾಮವುಂಟು ಮಾಡುವ ಸಾಧ್ಯತೆಯನ್ನು ಅಲ್ಲಗಳೆಯ ಲಾಗದು. ಯಾಕೆಂದರೆ, ಆಂಧ್ರ ಮತ್ತು ತೆಲಂಗಾಣ ವಿಭಜನೆಯ ಸಂದರ್ಭ ದಲ್ಲೂ ಯುಪಿಎ ಸರಕಾರ ಇಂತಹ ದ್ದೊಂದು ಯೋಜನೆ ಹಾಕಿ ವಿಫಲ ವಾಗಿದ್ದನ್ನು ಸ್ಮರಿಸಬಹುದು. ಟಿ.ಆರ್.ಎಸ್. ತೆಲಂಗಾಣದಲ್ಲಿ ಹೆಜ್ಜೆ ಬದಲಿಸಿತು. ಆಂಧ್ರದಲ್ಲಿ ಕಾಂಗ್ರೆಸ್ ಚಿಗುರಲೇ ಇಲ್ಲ. ಆಂಧ್ರಕ್ಕೆ ವಿಶೇಷ ದರ್ಜೆ ನೀಡುವೆವೆಂದು ಯುಪಿಎ ಸರಕಾರ ನೀಡಿದ ಭರವಸೆ ಈಡೇರಿಕೆ ಗಾಗಿ ಕೇಂದ್ರದ ವಿರುದ್ಧ ತೆಲುಗು ದೇಶಮ್ ಹೋರಾಡುತ್ತಿದೆ. ಆದ್ದರಿಂದ ಎಲ್ಲ ಸರಕಾರಗಳು ಭವಿಷ್ಯದ ಬಗ್ಗೆ ಚಿಂತಿಸದೆ ನಾಲ್ಕು ಮತಗಳಿಗಾಗಿ ದುಡುಕಬಾರದು.

ಏನೇ ಆಗಲಿ ಸಿದ್ದರಾಮಯ್ಯರ ಈ ಒಂದು ನಿರ್ಧಾರ ಬಿಜೆಪಿಯಲ್ಲಿ ತಳಮಳ ಉಂಟು ಮಾಡಿ ದ್ದಂತೂ ಸತ್ಯ. ಆದ್ದರಿಂದಲೇ ಅಮಿತ್ ಶಾ ಕೇವಲ ವೀರಶೈವ ಮಠಗಳಿಗೆ ಹೋಗದೆ ಲಿಂಗಾಯುತ ಮಠಗಳಿ ಗೂ ಭೇಟಿ ನೀಡುತ್ತಿದ್ದಾರೆ. ಯಡಿಯೂರಪ್ಪ ಮತ್ತು ಈಶ್ವರಪ್ಪರನ್ನು ಒಂದಾಗಿಸಲು ತೀವ್ರ ಕಸರತ್ತು ನಡೆಸುತ್ತಲೂ ಇದ್ದಾರೆ. ಚುನಾವಣೆಯ ಅಖಾಡಕ್ಕೆ ಸಿದ್ಧವಾಗು ತ್ತಿರುವ ವೇಳೆಯಲ್ಲಿ ಸಿದ್ದು ಇಂತಹ ಒಂದು ದಾಳ ಉರುಳಿಸಿ ನಮ್ಮನ್ನು ಪೇಚಾಟಕ್ಕೆ ಸಿಲುಕಿಸಬಹುದೆಂದು ಬಹುಶಃ ಬಿಜೆಪಿ ಯೋಚಿಸಿರಲಿಕ್ಕಿಲ್ಲ. ಯಾಕೆಂದರೆ ಒಡೆದು ಆಳುವ ನೀತಿ ಯನ್ನು ಅಳವಡಿಸಿಕೊಂಡವರಿಗೆ ತಿರುಗು ಬಾಣದಂತಹ ಈ ನಿರ್ಧಾರ ಹಿಂದುತ್ವವನ್ನು ಒಗ್ಗೂಡಿಸುವೆವೆಂದು ಬುರುಡೆ ಬಿಡುವವರಿಗೂ ಅರಗಿಸಿಕೊಳ್ಳ ಲಾಗುತ್ತಿಲ್ಲ. ಹಿಂದುತ್ವದ ಹೆಸರಲ್ಲಿ ಏಕತೆ, ಐಕ್ಯತೆ ಪ್ರದರ್ಶಿಸುವುದು ಕೂಡಾ ತಮ್ಮ ರಾಜಕೀಯ ಲಾಭಗಳಿಗೇ ಹೊರತು ಆ ಸಮುದಾಯದ ಉದ್ಧಾ ರಕ್ಕೆ ಅಲ್ಲವೆಂಬುದು ಈಗಾಗಲೇ ಬಹಿ ರಂಗವಾದ ವಿಚಾರವಾಗಿದೆ. ದಲಿತರ ಮನೆಯ ಭೋಜನ, ಏಕತೆ ಮತ್ತು ವಿಭಜನೆ ಎರಡೂ ರಾಜಕೀಯ ಲಾಭದ ಲೆಕ್ಕಾಚಾರದ ಪ್ರತಿಫಲವಾಗಬಾರದು. ಅದು ಆಯಾ ಸಮುದಾಯದ ಏಳಿಗೆ, ಅಭಿವೃದ್ಧಿಯ ಭಾಗವಾಗ ಬೇಕು.