ಸಿಬಿಐ ತನಿಖೆಗೆ ಜುನೈದ್ ಕುಟುಂಬ ಸಲ್ಲಿಸಿದ ಅರ್ಜಿ ತಿರಸ್ಕರಿಸಿದ ಹೈಕೋರ್ಟು

0
439

ಹರ್ಯಾಣ, ನ. 29: ಪಂಜಾಬ್ ಹರ್ಯಾಣದ ಹೈಕೋರ್ಟು ಸೋಮವಾರ ಜುನೈದ್ ಕುಟುಂಬ ಸಲ್ಲಿಸಿದ ಸಿಬಿಐ ತನಿಖೆ ಆಗ್ರಹಿಸಿ ಸಲ್ಲಿಸಿದ ಅರ್ಜಿಯನ್ನು ತಿರಸ್ಕರಿಸಿದೆ. ಹದಿನೇಳು ವರ್ಷದ ಜುನೈದ್‍ನನ್ನು ಕಳೆದ ಜೂನ್‍ನಲ್ಲಿ ಹೊಡೆದು ಕೊಲ್ಲಲಾಗಿತ್ತು.
ನ್ಯಾಯ ಮೂರ್ತಿ ರಾಜನ್ ಗುಪ್ತರ ಏಕ ಸದಸ್ಯ ಪೀಠ ಪ್ರಕರಣವನ್ನು ಪೊಲೀಸರು ತನಿಖೆ ನಡೆಸುತ್ತಿರುವುದನ್ನು ಬೆಟ್ಟು ಮಾಡಿ ಸಿಬಿಐ ತನಿಖೆಗೆ ತಿರಸ್ಕರಿಸಿದೆ ಎಂದು ಜುನೈದ್ ತಂದೆ ಜಲಾಲುದ್ದೀನ್‍ರ ವಕೀಲ ಅರ್ಶದೀಪ್ ಸಿಂಗ್ ಚೀಮಾ ತಿಳಿಸಿದ್ದಾರೆ.
ನ್ಯಾಯಾಧೀಶರ ಆದೇಶದಲ್ಲಿ ಈಗ ನಡೆಯುತ್ತಿರುವ ತನಿಖೆಯಲ್ಲಿ ಗಂಭೀರ ಕೊರತೆ ಕಂಡು ಬರುತ್ತಿದೆ ಎನ್ನುವುದನ್ನು ಬೆಟ್ಟು ಮಾಡಿ ತೋರಿಸಲು ಅರ್ಜಿದಾರ ವಿಫಲರಾಗಿದ್ದು, ಆದ್ದರಿಂದ ಈಗ ನಡೆಯುತ್ತಿರುವ ಪೊಲೀಸ್ ತನಿಖೆ ದುರ್ಬಲವಾಗಿದೆ ಮತ್ತು ಪ್ರಮಾದ ಪೂರಿತವೆಂದು ನಿರ್ಧರಿಸಲು ಸಾಧ್ಯವಿಲ್ಲ ಎಂದು ಬರೆಯಲಾಗಿದೆ.
ಈ ಘಟನೆಯಲ್ಲಿ ಯಾವುದೇ ರಾಷ್ಟ್ರೀಯ ಅಥವಾ ಅಂತಾರಾಷ್ಟ್ರೀಯ ಒತ್ತಡ ಇದೆ ಎನ್ನುವುದು ಕಂಡು ಬಂದಿಲ್ಲ. ಆದ್ದರಿಂದ ಸಿಬಿಐಗೆ ಒಪ್ಪಿಸುವ ಮತ್ತು ಅದರ ಅಸಮಾನ್ಯ ಶಕ್ತಿಯನ್ನು ಉಪಯೋಗಿಸುವುದಕ್ಕೆ ಈ ಪ್ರಕರಣ ಸೂಕ್ತವಾಗಿಲ್ಲ ಎಂದು ನ್ಯಾಯಾಧೀಶರು ಬೆಟ್ಟು ಮಾಡಿದ್ದಾರೆ.