ಸಿರಿಯಕ್ಕೆ ಮಿಸೈಲ್ ಉಡಾಯಿಸಲಿದ್ದೇವೆ: ರಷ್ಯಾಗೆ ಟ್ರಂಪ್ ಎಚ್ಚರಿಕೆ.

0
413

ವಾಷಿಂಗ್ಟನ್: ಸಿರಿಯಾದೆಡೆಗೆ ಮಿಸೈಲ್ ಉಡಾಯಿಸಿದರೆ ಗುಂಡು ಹಾರಿಸುವೆವು ಎಂಬ ರಷ್ಯಾದ ಬೆದರಿಕೆಗೆ ಅದೇ ಧಾಟಿಯಲ್ಲಿ ಅಮೇರಿಕಾದ ಅಧ್ಯಕ್ಷ ಟ್ರಂಪ್ ಉತ್ತರಿಸಿದ್ದಾರೆ. ರಷ್ಯಾ ಸಿದ್ದವಾಗಿರಲಿ. ನಮ್ಮ ನೂತನ, ಕಠಿಣ ಮತ್ತು ತೀವ್ರತೆಯಿರುವ ಮಿಸೈಲ್ ದಾಳಿಯನ್ನು ನಾವು ನಡೆಸಲಿದ್ದೇವೆ ಎಂದು ಟ್ರಂಪ್ ಟ್ವೀಟ್ ಮಾಡಿದ್ದಾರೆ. ಗ್ಯಾಸ್ ಬಳಸಿ ಮನುಷ್ಯರನ್ನು ಕೊಲ್ಲುವ ಮೃಗೀಯತೆಯನ್ನು ನೋಡಿ ನಮಗಿನ್ನು ಸುಮ್ಮನೆ ಕೂರಲು ಸಾಧ್ಯವಿಲ್ಲ. ಆತ ತನ್ನ ಜನರನ್ನು ಕೊಲ್ಲುವುದರಲ್ಲಿ ಆಹ್ಲಾದಭರಿತನಾಗಿದ್ದಾನೆ ಎಂದು ಬಶಾರ್ ಅಸದ್‍ನನ್ನುದ್ದೇಶಿಸಿ ಟ್ರಂಪ್ ಹೇಳಿದ್ದಾರೆ. ಎಲ್ಲ ರೀತಿಯ ಸಿದ್ದತೆಗಳೊಂದಿಗೆ ನಾವು ಬರಲಿದ್ದೇವೆ. ನೀವೂ ಸಿದ್ದರಾಗಿರಿ ಎ೦ದು ಟ್ರಂಪ್ ಟ್ವೀಟ್ ಮಾಡಿದ್ದಾರೆ.