ಸಿರಿಯ ಎಂಬ ರಂಗ ಸ್ಥಳ

0
557
ನ್ಯೂಸ್ ಡೆಸ್ಕ್
ಎಪ್ರಿಲ್ ಏಳರಂದು ಧುಮಕ್ಕೆ ಕರಾಳ ದಿನ ಬಂದಪ್ಪಳಿಸಿತ್ತು. ಸಿರಿಯದ ಬಶರುಲ್ ಅಸದ್ ಸರಕಾರ ಅಂದು ಅಲ್ಲಿ ರಾಸಾಯನಿಕ ಆಯುಧ  ಪ್ರಯೋಗಿಸಿ ಅಮಾಯಕ ಮಹಿಳೆಯರು, ಮಕ್ಕಳ ಸಹಿತ ಹಲವಾರು ತನ್ನದೇ ಪ್ರಜೆಗಳನ್ನು ಬಲಿ ಪಡೆದಿತ್ತು. ಸಿರಿಯದ ಕರಾಳ ಅಧ್ಯಾಯಕ್ಕೆ  ಇದೊಂದು ಸೇರ್ಪಡೆಯೇ ಹೊರತು ಸಿರಿಯದಲ್ಲಿ ಬಶರ್ ಸರಕಾರ ರಾಸಾಯನಿಕ ಆಯುಧ ಪ್ರಯೋಗಿಸಿದ್ದು ಹೊಸ ವಿಚಾರವಲ್ಲ. ಆದರೆ  ಇಷ್ಟೆಲ್ಲ ಮಾಡಿಯೂ ಸರಕಾರ ರಾಸಾಯನಿಕ ಆಯುಧವನ್ನು ಪ್ರಯೋಗಿಸಿಲ್ಲ ಎಂದೇ ಹೇಳಿಕೊಂಡಿದೆ.
ಹೌದು, ಸಿರಿಯದ ಬಿಕ್ಕಟ್ಟು ಇಂದು ನಿನ್ನೆ ಆರಂಭವಾದದ್ದಲ್ಲ. ಎಂಟು ವರ್ಷವಾಯಿತು. ಕಳೆದ ಇಷ್ಟೆಲ್ಲ ವರ್ಷಗಳಲ್ಲಿ ಸಿರಿಯನ್ ಸರಕಾರ  ತನ್ನದೇ ಪ್ರಜೆಗಳ ಮೇಲೆ ಸುಮಾರು 34 ಬಾರಿ ಯಾದರೂ ರಾಸಾಯನಿಕ ಆಯುಧವನ್ನು ಪ್ರಯೋ ಗಿಸಿದೆ ಎಂದು ವಿವರಗಳಿವೆ. ಆಧುನಿಕ  ಜಗತ್ತಿನಲ್ಲಿ ಯಾವುದೇ ಸರಕಾರ ತನ್ನದೇ ಜನರ ವಿರುದ್ಧ ಇಂತಹ ನೀಚ ಕೆಲಸವನ್ನು ಮಾಡಿದ್ದಿಲ್ಲ. ಇರಾಕ್‍ನ ಸದ್ದಾಮ್ ಹುಸೇನ್ ರಾ¸ ಸಾಯನಿಕ ಅಸ್ತ್ರ ಪ್ರಯೋಗಿ ಸಿದ್ದಾರೆ ಎನ್ನುವ ಆರೋಪದಲ್ಲಿ ಅವರನ್ನು ಗಲ್ಲಿಗೇರಿಸಿದರು. ಆದರೆ ಬಶರ್ ರಾಸಾಯನಿಕ ಅಸ್ತ್ರ  ಪ್ರಯೋಗಿಸಿಯೂ ನಿರಾಳವಾಗಿದ್ದಾರೆ.
ಧುಮದಲ್ಲಿ ರಾಸಾಯನಿಕ ಆಯುಧವನ್ನು ಅಧ್ಯಕ್ಷ ಬಶರುಲ್ ಅಸದ್‍ರ ಸೇನೆ ಪ್ರಯೋಗಿಸಿತೇ ಎಂದು ತನಿಖೆಗಾಗಿ ಬಂದ ಅಂತಾರಾಷ್ಟ್ರೀಯ  ತನಿಖಾ ತಂಡ(ಒಪಿಸಿಡಬ್ಲ್ಯೂ)ಕ್ಕೆ ಬಶರ್ ಸರಕಾರ ಧುಮ ಪ್ರವೇಶಿಸಲು ಬಿಟ್ಟಿಲ್ಲ. ಸಿರಿಯ- ರಷ್ಯ ದೇಶಗಳು ಒಪಿಸಿಡಬ್ಲ್ಯೂವನ್ನು ಅಲ್ಲಿಗೆ  ಹೋಗ ಗೊಡಲಿಲ್ಲ. ಆದರೆ ಸಿರಿಯದ ಮಾಧ್ಯಮಗಳಲ್ಲಿ ಅಂತಾರಾಷ್ಟ್ರೀಯ ತಂಡ ಧುಮಕ್ಕೆ ಬಂತು ಎಂದು ವರದಿ ಮಾಡಿದವು. ಆದರೆ  ಅಂತಾರಾಷ್ಟ್ರೀಯ ತನಿಖಾ ತಂಡವೇ ಅದನ್ನು ಒಪ್ಪಿಕೊಂಡಿಲ್ಲ.
ಕಳೆದ ದಿವಸ ರಾಸಾಯನಿಕ ಆಯುಧ ನಿರೋಧ ತಂಡವನ್ನು ಅಲ್ಲಿಗೆ ಕಳುಹಿಸಿ ವಸ್ತುನಿಷ್ಠ ತನಿಖೆ ನಡೆಸಲು ತೀರ್ಮಾನಿಸಲಾಗಿತ್ತು. ವಿಶ್ವ ¸ ಸಂಸ್ಥೆಯ ಭದ್ರತಾ ಸಮಿತಿಯ ಸದಸ್ಯರು ಧುಮ ನಗರ ಪ್ರವೇಶಿಸಿ ವಸ್ತುನಿಷ್ಠ ತನಿಖೆಗೆ ಸಂಬಂಧಿಸಿ ಸಮೀಕ್ಷೆ ನಡೆಸಿದರು. ಇದರ ಆಧಾರದಲ್ಲಿ  ರಾಸಾಯನಿಕ ನಿರೋಧ ತಂಡವನ್ನು ಅಲ್ಲಿಗೆ ಕಳುಹಿಸಲು ತೀರ್ಮಾನಿಸಲಾಗಿತ್ತು.
ಸಿರಿಯದ ಇಂತಹ ಯುದ್ಧ ವಿದ್ಯಮಾನ ಗಳಿಂದ ಎಷ್ಟೋ ಮಂದಿ ಕೊಲ್ಲಲ್ಪಟ್ಟರು. ಎಷ್ಟೋ ಮಂದಿ ಊರು ಮನೆ ತೊರೆದು ಬೇರೆ ದೇಶಗಳಿಗೆ ಪಲಾಯನ ಮಾಡಿದರು. ಸರಕಾರದ ವಿರುದ್ಧ ಹೋರಾಟ ಎನ್ನುವುದು ಅಲ್ಲಿ ಆಡಳಿತ ಗಾರರು ಮತ್ತು ಊರಿನವರಿಗೆ ಸಂಬಂಧಿಸಿದ  ವಿಷಯವಷ್ಟೇ. ಸಿರಿಯದಲ್ಲಿ ಅದು ಹಾಗೆ ಆಗಲೇ ಇಲ್ಲ. ಅಲ್ಲಿನ ಆ ಹೋರಾಟಕ್ಕೆ ವಿಸ್ತಾರ ವಾದ ಮಗ್ಗುಲು ಇದೆ.
ಮಧ್ಯಪ್ರಾಚ್ಯದ ದೇಶಗಳ ಪ್ರಜಾಪ್ರಭುತ್ವವಾದಿ ಆಂದೋಲನಗಳನ್ನು ಎಂದೂ ಹೊರಗಿನವರು ಗೌರವದಿಂದ ನೋಡಿಲ್ಲ. ಪ್ರತಿಕ್ರಿಯಿಸಿಲ್ಲ. ಮಧ್ಯ  ಪ್ರಾಚ್ಯದ ಜನರು ಬಯಸಿದ್ದು ಎಲ್ಲಿಯಾದರೂ ನಡೆದರೆ ನಾವು ಭಾವಿಸುವುದನ್ನು ಎಂದಿಗೂ ಅಲ್ಲಿ ಜಾರಿ ಮಾಡಲು ಸಾಧ್ಯವಿಲ್ಲವೆಂದು ¸ಸಾಮ್ರಾಜ್ಯಶಾಹಿ ಲೋಕ ಲೆಕ್ಕ ಹಾಕಿವೆ. ಆದ್ದರಿಂದ ಪ್ರಜಾಪ್ರಭುತ್ವ ವಾದಿಗಳನ್ನು ಮತ್ತು ಅವರ ಹೋರಾಟಗಳನ್ನು ಭಯೋತ್ಪಾದಕ ಹೋರಾಟ  ವನ್ನು ಚಿತ್ರಿಸಲಾಯಿತು. ಸಿರಿಯ ಸರ್ವಾಧಿಕಾರಿಯ ಹಿಡಿತದಲ್ಲಿರುವ ದೇಶವಾಗಿದೆ. ತಮ್ಮನ್ನು ಪ್ರಜಾ ಪ್ರಭುತ್ವ ರೀತಿಯ ಒಂದು ಸರಕಾರ  ಆಳಬೇಕು ಎಂದು ಊರವರು ಬಯಸುತ್ತಿದ್ದಾರೆ. ಆ ಹೋರಾಟವನ್ನು ಸರಕಾರ ಬಲವಾಗಿ ಎದುರಿಸಿತು. ಸಿರಿಯದಲ್ಲಿ ಮಾತ್ರವಲ್ಲ. ಈಜಿಪ್ಟ್,  ಯಮನ್
ಮೊದಲಾದೆಡೆಯ ಕತೆ ಇದು. ಸಿರಿಯದಲ್ಲಿ ಅಲ್ಪ ಸಂಖ್ಯಾತ ಶಿಯಾ ವಿಭಾಗದ ಸರಕಾರ ಇದೆ. ಅಲ್ಲಿ ವಾಸವಿರುವುದು ಶೇ. 75ರಷ್ಟು ಸುನ್ನಿ  ಮುಸ್ಲಿಮರು.
ರಷ್ಯ, ಇರಾನ್ ಮೊದಲಾದ ದೇಶಗಳು ಮಧ್ಯಪ್ರವೇಶಿಸಿದ್ದರಿಂದ ಅಲ್ಲಿನ ಪರಿಸ್ಥಿತಿ ಇಷ್ಟು ಅಗಾಧವಾಗಿ ಹದಗೆಟ್ಟಿತು. ಸಿರಿಯ ರಷ್ಯದ ಮಿತ್ರ.  ಬಹಳ ಹಿಂದಿನಿಂದಲೂ ರಷ್ಯದ ಬೆಂಬಲಿ ಗನಾಗಿಯೇ ಮುಂದುವರಿದ ದೇಶ ಅದು. ಆದ್ದರಿಂದ ಎಷ್ಟು ಬೆಲೆತೆತ್ತಾದರೂ ಅಸದ್ ಸರ  ಕಾರವನ್ನು ಉಳಿಸುವುದು, ಅದಕ್ಕೆ ಆಧಾರಸ್ತಂಭ ವಾಗುವುದು ರಷ್ಯದ ಅಗತ್ಯವೂ ಆಗಿಬಿಟ್ಟಿತು. ರಷ್ಯದ ಮುಸ್ಲಿಮ್ ವಿರೋಧ ಇದಕ್ಕೆ  ಇನ್ನೊಂದು ಕಾರಣವೂ ಆಗಿದೆ. ಶಿಯಾಗಳ ಆಡಳಿತ ಎನ್ನು ವುದು ಸಿರಿಯವನ್ನು ಬೆಂಬಲಿಸಲು ಇರಾನ್‍ನ ಕಾರಣ. ಲೆಬನಾನ್‍ನ  ಹಿಝ್ಬುಲ್ಲ ಕೂಡಾ ಶಿಯಾ ಸರಕಾರ ಎನ್ನುವ ಕಾರಣದಿಂದ ಸಿರಿಯದ ಬಶರುಲ್ ಅಸದ್ ಸರಕಾರವನ್ನು ಬೆಂಬಲಿಸುತ್ತಿದೆ. ಇದು ಬಶರ್‍ರಲ್ಲಿ ಅತ್ಯಂತ ಧೈರ್ಯ ತುಂಬಿದೆ. ಆಕಾಶದಿಂದ ಆಯುಧ ಸುರಿಸಲು, ರಾಸಾಯನಿಕ ಅಸ್ತ್ರ ಪ್ರಯೋಗಿಸಿ ಅಮಾಯಕರನ್ನು ಕೊಲ್ಲಲು  ಯಾವುದೇ ಹಿಂಜರಿಕೆ ಇಲ್ಲದ ಸ್ಥಿತಿಯನ್ನು ತಂದುಕೊಟ್ಟಿತು. ಶಿಯಾಗಳು ಒಂದು ನೇತೃತ್ವದ ಹಿಂದೆ ನಿಂತರು. ಅಲ್ಲಿನ ಕ್ರೈಸ್ತ ಸಮುದಾಯ  ಬಶರ್‍ರನ್ನು ಬೆಂಬಲಿಸಿದರು. ಇದೇ ವೇಳೆ, ಬಹುಸಂಖ್ಯಾತ ಸುನ್ನಿ ವಿಭಾಗಗಳು, ಹಲವು ಕವಲು ದಾರಿಹಿಡಿದವು. ಹಲವು ವಿಭಾಗಗಳಲ್ಲಿ  ಹರಿಹಂಚಿ ಹೋದರು. ಹಲವರು ನಾಯಕತ್ವದಮ
ಪೋಸು ಕೊಟ್ಟರು. ಇವೆಲ್ಲದ್ದರ ಜೊತೆ ಇವರ ನಡುವೆ ಐಸಿಸ್ ಕೂಡಾ ಬಂದು ನಿಂತಿತು.  ಯಾರು ಐಸಿಸ್ ಯಾರಲ್ಲ ಎಂದು ಗುರುತಿಸುವುದು ಕಷ್ಟವಾಯಿತು.
ಬೃಹತ್ ಶಕ್ತಿಗಳೇನಾದರೂ ಬಯಸಿದ್ದಿದ್ದರೆ ಸಿರಿಯನ್ ಬಿಕ್ಕಟ್ಟು, ಸಮಸ್ಯೆ ಎಂದೋ ಪರಿಹಾರ ವಾಗಿ ಬಿಡುತ್ತಿತ್ತು. ಆದರೆ ಅಲ್ಲಿ  ನಡೆಯುತ್ತಿರುವ ಕ್ರೂರ ಘಟನೆಗಳು ಯಾರನ್ನೂ ಅಷ್ಟಾಗಿ ನೋಯಿಸಿಲ್ಲ ಎನ್ನುವುದು ಸಿರಿಯದ ಜನರು ಅನುಭವಿಸುವ ಇನ್ನೊಂದು  ದುರಂತವೆನ್ನಬಹುದು. ಅಮೆರಿಕ ಮಿತ್ರ ಶಕ್ತಿಗಳು ಹೆಸರಿಗೆ ಮಾತ್ರ ಮಧ್ಯ ಪ್ರವೇಶಿಸುವ ನಾಟಕ ಆಡುತ್ತಿವೆ. ಇದೇ ವೇಳೆ ರಷ್ಯ ಅಲ್ಲಿ  ದೃಢವಾಗಿ ತಳ ಊರಿದೆ. ಬಶರ್‍ರ ಕ್ರೌರ್ಯ, ಭ್ರಷ್ಟಾಚಾರಗಳಿಗೆ ಬೆಂಬಲ ನೀಡಿತ್ತದೆ. ಇತ್ತೀಚೆಗೆ ಅಮೆರಿಕ ಮತ್ತು ಸಖ್ಯ ಕೂಟ ಹಠಾತ್  ದಾಳಿ ನಡೆಸಿವೆ. ಧುಮದಲ್ಲಿ ರಾಸಾಯನಿಕ ಅಸ್ತ್ರವನ್ನು ಪ್ರಯೋಗಿಸಿದ್ದಕ್ಕೆ ನಾವು ಹಸ್ತಕ್ಷೇಪ ಮಾಡಿದೆವು ಎನ್ನುತ್ತಿವೆ. ಅದೇ ನಿಜವಾದ  ಕಾರಣವೆಂದು ಒಪ್ಪಿಕೊಳ್ಳುವುದು ತೀರಾ ಕಷ್ಟಕರ ವಿಷಯವಾಗಿದೆ.
ಮಧ್ಯಪ್ರಾಚ್ಯದಲ್ಲಿ ಅಮೆರಿಕದ ಪ್ರಭಾವ ಕಡಿಮೆ ಆಗುತ್ತಿರುವುದು ಇದಕ್ಕೆ ಕಾರಣವೆಂದು ರಾಜಕೀಯ ವಿಶ್ಲೇಷಕರು ವಿವರಣೆ ನೀಡುತ್ತಾರೆ.  ಸಿರಿಯ, ಇರಾನ್ ಇರಾಕ್, ರಷ್ಯ ಮಿತ್ರ ಕೂಟಕ್ಕೆ ವಿರುದ್ಧ ವಾಗಿ ಹೊಸ ತಂತ್ರಗಳನ್ನು ಅಮೆರಿಕ ಮಿತ್ರಕೂಟ ಹೆಣೆಯುತ್ತಿದೆ ಎನ್ನುತ್ತಿದ್ದಾರೆ  ಅವರು. ಸಿರಿಯನ್ ಜನತೆ ಇವರ ಶೀತಲ ಸಮರದ ನಡುವೆ ಸಿಕ್ಕಿ ಇನ್ನಷ್ಟು ಸಾಯುವುದು, ಗಾಯಾಳು ಆಗುವುದು. ಕೊನೆಗೆ  ಅಪ್ಪಚ್ಚಿಯಾಗುವುದು. ಇಸ್ರೇಲ್, ಸೌದಿ ಕೂಟ ಸಿರಿಯ ಬಿಕ್ಕಟ್ಟಿನಲ್ಲಿ ಪಾತ್ರವಹಿಸುತ್ತಿದೆ ಎನ್ನುವ ಮಾತು ಕೂಡಾ ಇದೆ. ಸುನ್ನಿ-ಶಿಯಾ ವಿಭಜನೆಯನ್ನು ಇಸ್ರೇಲ್ ಮತ್ತು ಅಮೆರಿಕ ಬಯಸುತ್ತಿದೆ. ಅದನ್ನು ಅವರು ಬಯಸಿದ ರೀತಿಯಲ್ಲಿ ಈಡೇರಿಸಿ ಕೊಡಲಾಗುತ್ತಿದೆ ಅಷ್ಟೇ.
ಇತ್ತೀಚೆಗಿನ ಕಾಲದಲ್ಲಿ ಶಿಯಾ ಕ್ಷೇತ್ರದಲ್ಲಿ ರಷ್ಯ ಪ್ರಭಾವ ಹೆಚ್ಚಿಸಿಕೊಂಡಿರುವುದು ವ್ಯಕ್ತವಾಗು ತ್ತಿದೆ. ಹೀಗೆ ಹಳೆಯ ಶೀತಲ ಯುದ್ಧ ಮರಳಿ  ಬರುತ್ತಿದೆ. ಅಂತಾರಾಷ್ಟ್ರೀಯ ರಾಸಾಯನಿಕ ನಿರೋಧ ತಂಡವನ್ನು ಧುಮ ಪ್ರವೇಶಿಸಲು ಬಿಡದಿರುವ ವರ್ತನೆ ಇದನ್ನೇ ಮುಂದಿಡುತ್ತಿದೆ.  ಜಾಗತಿಕ ಶಕ್ತಿಗಳ ಹಟಮಾರಿತನಕ್ಕೆ ವೇದಿಕೆಯಾಗಿ ಸಿರಿಯ ಬಳಕೆಯಾಗುತ್ತಿದೆ. ಚುನಾವಣೆಯಲ್ಲಿ ವಿಜಯ ಪಡೆದವರನ್ನು ಪಾಶ್ಚಾತ್ಯರು  ಒಪ್ಪುವುದಿಲ್ಲ. ಅದಕ್ಕೆ ಈಜಿಪ್ಟ್, ಅಲ್ಜೀರಿಯದ ಘಟನೆಗಳು ನಮ್ಮ ಮುಂದಿವೆ. ಇಸ್ಲಾಮ್ ವಿರೋಧ ರಷ್ಯದ ನಿಲುವು. ಶಿಯಾ ¸ ಸಂಕುಚಿತ ವಾದ ಇರಾನಿನ ನಿಲುವು. ಇಸ್ರೇಲಿಗೆ ಪರಸ್ಪರ ಗಲಾಟೆ ಮಾಡು ತ್ತಿರುವ ಜನರು ಬೇಕು. ಈ ನಡುವೆ ಸಿರಿಯನ್ ಪ್ರಜೆಗಳು ನರಕ  ಯಾತನೆ ಅನುಭವಿಸುತ್ತಿದ್ದಾರೆ. ಅನುಭವಿಸುತ್ತಲೇ ಇದ್ದಾರೆ.