ಸೀಸಿ ತನ್ನ ಪ್ರಜೆಗಳನ್ನೇ ಕೊಲ್ಲುತ್ತಿದ್ದಾರೆಯೇ?

0
760

ಈಜಿಪ್ಟ್‍ನ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು 2013 ಜುಲೈಯಲ್ಲಿ ಅಬ್ದುಲ್ ಫತ್ತಾಹ್ ಅಲ್ ಸೀಸಿ ಬುಡಮೇಲುಗೊಳಿಸಿದ ಬಳಿಕ ಹಲವಾರು ಈಜಿಪ್ಟ್ ಜನರ ರಕ್ತ ಅಲ್ಲಿ ಹರಿದುಹೋಗಿದೆ. 1952ರ ನಂತರ ಅಲ್ಲಿನ ಸೇನಾಡಳಿತದ ದೌರ್ಜನ್ಯವನ್ನೂ ಅವರು ಮೀರಿಸಿದ್ದಾರೆ. ಸುಳ್ಳು ಸಮರ್ಥನೆ, ಸುಳ್ಳು ವಾದವನ್ನು ಎತ್ತಿಹಿಡಿದು ಇವನ್ನೆಲ್ಲ ಸೀಸಿ ಮಾಡಿ ಮುಗಿಸಿದ್ದಾರೆ. ಇದ ರೊಂದಿಗೆ ಈಜಿಪ್ಟ್‍ನ ಅಂತಸ್ತು ಗಾಳಿಗೆ ತೂರಿ ಹೋಯಿತು. ಒಂದನೆಯ ಬುಡಮೇಲು ಕೃತ್ಯ ಮಾಡಿದವರ ವಾದದಂತೆ ಅಭಿನಂದಿಸ ಬಹುದಾದ ಯಾವುದೂ ಅಲ್ಲಿಲ್ಲ. ಬದಲಾಗಿ ಸೀಸಿ ಮತ್ತು ಅವರ ಆಡಳಿತವನ್ನು ವಿರೋಧಿಸುವವರ ಮೇಲೆ ಶಕ್ತಿ  ಪ್ರಯೋಗ, ಕೊಲೆ, ಆಕ್ರಮಣಗಳ ಸಾಧ್ಯವಿರುವ ಎಲ್ಲವನ್ನೂ ಅವರು ಪ್ರಯೋಗಿಸಿ ದರು. ಸಹಮತ ವ್ಯಕ್ತಪಡಿಸದವರು ಮತ್ತು ವಿರೋಧಿಸುವವರನ್ನು ರಾಕ್ಷಸೀಕರಿಸುವ ಮಾಧ್ಯಮ ವ್ಯವಸ್ಥೆಯನ್ನು ಉಪಯೋಗಿಸಿ ಸತ್ಯ ವನ್ನು ಅಡಗಿಸಿಟ್ಟು, ಸುಳ್ಳುಪ್ರಚಾರವನ್ನು ನಡೆಸಲಾಯಿತು.
ಪ್ರಜೆಗಳಿಗೆ ರಕ್ಷಣೆಯೊದಗಿಸುವ ಜವಾಬ್ದಾರಿಕೆ ಯಿರುವ ಪೊಲೀಸರು ಮತ್ತು ಸೈನ್ಯ ಹಾಗೂ ಕೋರ್ಟುಗಳೆಲ್ಲವೂ ಅವರನ್ನು ಕೊಲ್ಲುವ ಸೀಸಿಯ ವ್ಯವಸ್ಥೆಯಾಗಿ ಪರಿವರ್ತನೆಗೊಂಡಿವೆ. ರಿಪಬ್ಲಿಕನ್ ಗಾರ್ಡ್ ಘಟನೆಯಲ್ಲಿ ಈಜಿಪ್ಟ್ ನಿವಾಸಿಗಳ ರಕ್ತಕ್ಕೆ ಯಾವ ಬೆಲೆಯೂ ಇಲ್ಲದಾಗುವುದನ್ನು ನಾವು ಕಂಡೆವು. ನಂತರ ರಾಬಿಯ, ಅನ್ನಹ್ದ ಚೌಕಗಳ ಪ್ರತಿಭಟನಾಕಾರರನ್ನು ತೆರವುಗೊಳಿಸುವ ವೇಳೆ ಸಾವಿರಾರು ಮಂದಿ ಕೊಲ್ಲಲ್ಪಟ್ಟರು. ಹೀಗೆ ಅಲೆಕ್ಸಾಂಡ್ರಿಯ, ಸುವೈಸ್, ಇಸ್ಮಾಯೀಲಿಯ್ಯ, ಬುರ್ಸವೂದ್‍ಗಳಲ್ಲಿ ಅಕ್ಟೋಬರ್ ಆರರಂದು ಕೂಡಾ ಈಜಿಪ್ಟ್ ಪ್ರಜೆಗಳನ್ನು ಸಿಸಿ ಆಡಳಿತ ಕಗ್ಗೊಲೆ ನಡೆಸಿತು. ಮನೆಗಳಿಂದ ಹೊರದಬ್ಬಲಾ ಯಿತು. ದೇಶದ ಹಲವು ಕಡೆಗಳಲ್ಲಿ ಯುವಕರು ನಿಷ್ಕರುಣೆಯಿಂದ ಕೊಲ್ಲಲ್ಪಟ್ಟರು. ಹಲವರು ನಾಪತ್ತೆಯಾದರು. ಸೀಸಿಯನ್ನು ವಿರೋಧಿಸುವವರು ಮತ್ತು ಸಮ್ಮತಿ ವ್ಯಕ್ತಪಡಿಸದ ನೂರಾರು ಮಂದಿಗೆ ಗಲ್ಲು ಶಿಕ್ಷೆ ಹಾಗೂ ಜೀವಾವಧಿ ಶಿಕ್ಷೆ ವಿಧಿಸಲಾಯಿತು.
ದೇಶದ ಅರ್ಥವ್ಯವಸ್ಥೆ ಶಿಥಿಲಗೊಂಡಿತು. ಅಂದಂದಿನ ಅನ್ನಕ್ಕೆ ಗತಿ ಕಾಣಲಾಗದ ಬಡ ಕುಟುಂಬಗಳನ್ನು ಮತ್ತಷ್ಟು ಹಸಿವಿನೆಡೆಗೆ ದೂಡಿ ಸಾಯುವಂತೆ ಮಾಡಲಾಯಿತು. ಎಲ್ಲ ಈಜಿಪ್ಟ್ ಪ್ರಜೆಗಳು ಆರೋಗ್ಯ ಉಪಚಾರ ಕೊರತೆಯಿಂದ ನರಳಿದರು. ಹಾಗಿದ್ದೂ ಸೀಸಿ ಕಳೆದ ಫ್ರಾನ್ಸ್ ಸಂದರ್ಶನದಲ್ಲಿ ತಾನು ಆರೋಗ್ಯ ಮತ್ತು ವಿದ್ಯಾಭ್ಯಾಸಕ್ಕೆ ಆದ್ಯತೆ ಕೊಡುತ್ತಿದ್ದೇನೆ ಎಂದು ಹೇಳಿದರು. ಜೈಲಿನಲ್ಲಿರುವ ರಾಜಕೀಯ ಕೈದಿಗಳಿಗೆ ಮದ್ದು, ಚಿಕಿತ್ಸೆ ಕೊಡಿಸದೆ ಸಾವಿನೆಡೆಗೆ ದೂಡುತ್ತಿದ್ದಾರೆ. ಇದರ ಅತಿ ನಿಕಟ ಬಲಿಪಶು ಮುಸ್ಲಿಂ ಬ್ರದರ್ ಹುಡ್ ಮಾಜಿ ಅಧ್ಯಕ್ಷ ಮಹ್ದಿ ಅಕಿಫ್. ತೊಂಬತ್ತು ವರ್ಷ ವಯಸ್ಸಾಗಿಯೂ ಅವರು ಜೈಲಿನೊಳಗೆಯೇ ಇಹಲೋಕಕ್ಕೆ ವಿದಾಯ ಕೋರಿದರು.
ಯಾವುದೇ ಮಾನ್ಯತೆಯಿಲ್ಲದ ಸರ್ವಾಧಿಕಾರ ವನ್ನು ಸೀಸಿ ತನ್ನ ಎದುರಾಳಿಗಳ ವಿರುದ್ಧ ಪ್ರಯೋ ಗಿಸುತ್ತಿದ್ದಾರೆ. ಅವರನ್ನು ಇಲ್ಲವಾಗಿಸಲು ಕಾನೂನು ಮೂಲಕವೂ ಅಲ್ಲದೆಯೂ ಎಲ್ಲ ದಾರಿಗಳನ್ನು ಅವರು ಸ್ವೀಕರಿಸುತ್ತಾರೆ. ಎದುರಾಳಿಗಳನ್ನು ಕೊಂದು ರಾಜಕೀಯ ರಂಗದಿಂದ ಸಂಪೂರ್ಣ ನಿರ್ಮೂ ಲನಗೊಳಿಸಲು ಯಾವುದೇ ಹಿಂಜರಿಕೆ ಅವರಿಗಿಲ್ಲ.

ಸೀಸಿಯ ಕೃತಕ ವಾದಗಳು

..ಸಂಘರ್ಷ ಭರಿತ ಈ ಪರಿಸ್ಥಿತಿಯಲ್ಲಿ ಹತ್ತೂವರೆ ಕೋಟಿ ಈಜಿಪ್ಟ್ ಜನರ ಜವಾಬ್ದಾರಿ ನನ್ನ ಮೇಲಿದೆ. ಇತರರನ್ನು ಅಂಗೀಕರಿಸದ ತೀವ್ರವಾದಿ ಚಿಂತನೆಗಳಿದ್ದರೂ ನಾವು ದೌರ್ಜನ್ಯದ ದಾರಿಯನ್ನು ಸ್ವೀಕರಿಸುವುದಿಲ್ಲ. ಮಾನವಹಕ್ಕು ಸಂಘಟನೆಗಳು ಬಹಿರಂಗಗೊಳಿಸುವ ವಿವರಗಳ ಆಧಾರದಲ್ಲಿ ನೀವೆಲ್ಲರೂ ಅದನ್ನು ಅಂದಾಜಿಸಿ ಕೊಳ್ಳಬೇಕು.
..ಈಜಿಪ್ಟ್ ಸಮಾಜದ ಸೇವೆಗೆ ನಲ್ವತ್ತು ಸಾವಿರಕ್ಕೂ ಹೆಚ್ಚು ಸಂಘಟನೆಗಳು ಕೆಲಸ ಮಾಡುತ್ತಿವೆ. ಶಾಂತಿ, ಈಜಿಪ್ಟ್‍ನ ಬೆಳವಣಿಗೆಯಲ್ಲಿ ಅವು ಸ್ತುತ್ಯರ್ಹ ಸೇವೆ ಸಲ್ಲಿಸುತ್ತಾ ಮುಂದುವರಿ ಯುತ್ತಿವೆ. ಹೊರಗೆ ಬರುವ ಸುದ್ದಿಗಳನ್ನು ನೀವು ಎಚ್ಚರದಿಂದ ಪರಿಗಣಿಸಬೇಕಾಗಿದೆ. ಕಾರಣ ಈಜಿಪ್ಟಿನ ಸುಸ್ಥಿರತೆಯನ್ನು ನಾಶಮಾಡುವ ಕೆಲಸಗಳು ಅದರಲ್ಲಿವೆ.
..ಈಜಿಪ್ಟ್‍ನಲ್ಲಿ ಬೀದಿ ಕಲಹ ಪೀಡನೆಗಳಿಲ್ಲ. ಹುತಾತ್ಮರಾದವರು, ಗಾಯಗೊಂಡವರು ಇವರ ಹಕ್ಕಿನ ಕುರಿತು, ಮನುಷ್ಯರ ಶಿಕ್ಷಣ, ಆರೋಗ್ಯದ ಹಕ್ಕಿನ ಕುರಿತು ನೀವೇಕೆ ಪ್ರಶ್ನೆ ಎತ್ತುವುದಿಲ್ಲ?
ಪ್ರತಿಯೊಂದು ವಿದೇಶ ಸಂದರ್ಶನದಲ್ಲಿಯೂ ತನ್ನ ಮುಖ ಮಿನುಗುವ ಇಂತಹ ಕೆಲವು ಸುಳ್ಳುಗಳನ್ನು ಅವರು ಹೇಳುವುದನ್ನು ಕಾಣಬಹು ದಾಗಿದೆ. ಈಜಿಪ್ಟಿಯನ್ನರು ಜೀವಿಸುತ್ತಿರುವ ಸತ್ಯ ಸ್ಥಿತಿಗೆ ತೀರ ವಿಪರೀತವಾಗಿ ಸೀಸಿ ಕೊಚ್ಚಿ ಕೊಳ್ಳುತ್ತಿದ್ದಾರೆ.
ವಿಮೋಚನೆ ಎಲ್ಲಿದೆ?
ಸೇನಾಡಳಿತದಡಿಯಲ್ಲಿ ಈಜಿಪ್ಟಿನ ಜನರು ಹೆಚ್ಚು ಕಷ್ಟ ಅನುಭವಿಸಬೇಕಾಗಿ ಬಂದಿದೆಯಾ ದರೂ ಅದರಲ್ಲಿ ಬಿಡುಗಡೆಗೆ ಸಂಬಂಧಿಸಿದ ನಿರೀಕ್ಷೆ ನೆಲೆಸಿದೆ. ಅದಕ್ಕೆ ಹಲವಾರು ನಿಬಂಧನೆ ಗಳನ್ನು ದಾಟಬೇಕಾಗಿದೆ. ಸೇನೆಯ ಆಡಳಿತ, ಅದರ ಕ್ರಮಗಳು, ರಾಜಕೀಯ, ಆರ್ಥಿಕ ಸಾಮಾಜಿಕ ಮುಂತಾದ ಜೀವನದ ಎಲ್ಲ ಕ್ಷೇತ್ರ ಗಳಲ್ಲಿ ಈಜಿಪ್ಟ್‍ನ್ನು ಹಿಂದೊತ್ತಲಾಗುತ್ತಿದೆ ಎನ್ನುವ ಪ್ರಜ್ಞೆ ಈಜಿಪ್ಟ್ ಜನರಲ್ಲಿ ಮೂಡುತ್ತಿದೆ. ಎಲ್ಲ ರಾಜಕೀಯ, ಸಾಂಸ್ಕøತಿಕ ವ್ಯಕ್ತಿಗಳು, ಒಟ್ಟುಗೂಡಿ ದ್ದಾರೆ. ಎರಡನೆಯದು, ಆ ಮೂಲಕ ತಮ್ಮ ಜೀವನದ ಸ್ಥಿತಿಯನ್ನು ಉತ್ತಮಪಡಿಸಿಕೊಳ್ಳಬಹುದು ಎನ್ನುವ ಪ್ರಜ್ಞೆ ಅವರಲ್ಲಿದೆ. ರಾಷ್ಟ್ರದ ವ್ಯವಸ್ಥೆಯಲ್ಲಿ ಆಡಳಿತಗಾರನಲ್ಲ ಜನರು ಅದರ ಒಡೆಯರಾಗಿ ದ್ದಾರೆ. ಸೈನ್ಯ, ಪೊಲೀಸ್, ಕೋರ್ಟುಗಳ ಕೆಲಸ ಸರಿಯಿಲ್ಲದಿರಬಹುದು. ಆದರೆ ಅವುಗಳಲ್ಲಿ ನಿರಾಶರಾಗದೆ ಅವರನ್ನು ಸಂಸ್ಕರಿಸಲು ಮುಂದೆ ಬರಬೇಕಾಗಿದೆ. ಎಲ್ಲಾ ರೀತಿಯ ಅಕ್ರಮ ಚಟು ವಟಿಕೆಗಳನ್ನು ಕೈ ಬಿಡುವುದು ನಾಲ್ಕನೆಯ ವಿಷಯವಾಗಿದೆ. ಯಾಕೆಂದರೆ ಅವರ ವಿರುದ್ಧ ಆಯುಧವನ್ನು ಪ್ರಯೋಗಿಸಲು ಸೈನ್ಯ ಕಾದು ನಿಂತಿದೆ. ಅಕ್ರಮದ ದಾರಿ ಹಿಡಿಯುವುದೆಂದರೆ ನಮ್ಮನ್ನು ನಾವೇ ನಿರ್ಮೂಲಿಸುವ ದಾರಿ ಮಾಡಿಕೊಟ್ಟಂತಾಗುವುದು. ಹಾಗಿದ್ದರೆ ಭಯೋ ತ್ಪಾದನೆಯನ್ನು ಎದುರಿಸುವ ವಾದವನ್ನು ಎತ್ತಿಹಿಡಿದು ಸೀಸಿ ಅಂತಾರಾಷ್ಟ್ರೀಯ ಸ್ಥರದಲ್ಲಿ ಮಿತ್ರರನ್ನು ಸಂಪಾದಿಸಿಕೊಳ್ಳಬಹುದು. ಆಂದರೆ ಸೈನ್ಯದ ಎಲ್ಲ ಕೆಟ್ಟ ಕ್ರಮಗಳಿಗೆ ತಲೆಬಗ್ಗಿಸಿ ನಿಲ್ಲಬೇಕೆನ್ನುವುದು ಇದರ ಅರ್ಥವಲ್ಲ. ಬದಲಾವಣೆ ದಾರಿ ತುಂಬ ದೊಡ್ಡದು. ಹೆಚ್ಚು ತಾಳ್ಮೆ ಸಹನೆ ಆವಶ್ಯಕತೆ ಇರುವುದು. ಅದಕ್ಕಾಗಿ ಸಿದ್ಧತೆ ಮತ್ತು ಸಾಧ್ಯವಿರುವ ಎಲ್ಲ ದಾರಿಗಳನ್ನು ಸ್ವೀಕರಿಸಬೇಕಾಗಿದೆ