ಹರ್ಯಾಣದ ಗುರುಗ್ರಾಮ್: ಬಯಲ ನಮಾಜ್ ಗೆ ಅಡ್ಡಿಪಡಿಸಲಾದ ಘಟನೆಗಳ ಹಿಂದೆ- ಮುಂದೆ

0
771

ತನಿಖಾ ಬರಹ

ಮೂಲ: ಹಿಂದೂಸ್ತಾನ್ ಟೈಮ್ಸ್, ಗುರುಗ್ರಾಮ್

ವರದಿ: ಸ್ನಿಗ್ಧ ಪೂನಮ್
ಕನ್ನಡಕ್ಕೆ: ಆಯಿಷತುಲ್ ಅಫೀಫಾ

ಜೂನ್ 10 ರಂದು ಮುಸ್ಲಿಮರ ಮೇಲೆ ಯುದ್ಧ ಘೋಷಿಸಲು ನರಸಿಂಹಾನಂದ ಸರಸ್ವತಿ ತುರ್ತು ಘೋಷಣೆಯನ್ನು ಮಾಡಿದರು, ”ನಾವು ಗುರ್ಗಾಂವ್ ಭೂಮಿಯಲ್ಲಿ ಒಂದು ಕ್ರಾಂತಿಯನ್ನು ಆರಂಭಿಸಲಿದ್ದೇವೆ”. ಗುರುಗ್ರಾಮದಲ್ಲಿ ಸಾರ್ವಜನಿಕ ನಮಾಝನ್ನು ಪ್ರತಿಭಟಿಸಿ ಹರಿಯಾಣದ ಮುಖ್ಯಮಂತ್ರಿಯ ನಿವಾಸದ ಮುಂದೆ ಸ್ವತಃ ಬೆಂಕಿಹಚ್ಚಲು ಪ್ರಯತ್ನಿಸಿ ಬಂಧನಕ್ಕೊಳಗಾಗಿದ್ದ ಸರಸ್ವತಿ, “ಹಿಂದೂಗಳ ಶತ್ರುಗಳನ್ನು ನಾಶಮಾಡಲು” ತಾವು ಮಹಾಹವನವನ್ನು ಆಯೋಜಿಸಲಿದ್ದೇವೆ ಎಂದು ಹೇಳಿದರು. ಐಸಿಸ್ ವಿರುದ್ಧ ಹೋರಾಡಲು 15,000 ಯುವ ಹಿಂದೂಗಳ ಸೈನ್ಯವನ್ನು ಕಟ್ಟಿದ, ಅಖಿಲ ಭಾರತ ಸಂತ ಆಯೋಗದ ಅಧ್ಯಕ್ಷರಾದ ಸರಸ್ವತಿಯವರಲ್ಲಿ ಪತ್ರಕರ್ತರು, ತಮ್ಮ “ಕ್ರಾಂತಿ” ಯಲ್ಲಿ ಭಾರತೀಯ ಜನತಾ ಪಕ್ಷದ ಬೆಂಬಲವನ್ನು ಗಣನೆಗೆ ತೆಗೆದುಕೊಳ್ಳುತ್ತೀರಾ ಎಂದು ಪ್ರಶ್ನಿಸಿದರು
“ಯಾವುದೇ ರಾಜಕೀಯ ಪಕ್ಷದಿಂದಲೂ ನಮ್ಮನ್ನು ಉಳಿಸಲು ಸಾಧ್ಯವಿಲ್ಲ . ಅಡ್ವಾಣಿ ಜೀ ನಿವೃತ್ತರಾಗಿದ್ದಾರೆ. ಮೋದಿ ಜೀ ನಾಲ್ಕು ವರ್ಷಗಳಲ್ಲಿ ಹಿಂದೂಗಳಿಗೆ ಏನೂ ಮಾಡಲಿಲ್ಲ. ಯೋಗಿ ಜೀ ನಮ್ಮೊಂದಿಗೆ ಇದ್ದಾರೆಯೇ ಅಥವಾ ಇಲ್ಲವೇ ಎಂದೂ ನನಗೆ ಗೊತ್ತಿಲ್ಲ” ಎಂದು ಅವರು ಪ್ರತಿಕ್ರಿಯಿಸಿದರು. ನನಗೆ ಬೇಕಾಗಿರುವುದು ಕ್ರೋಧದಿಂದ ಕುದಿಯುವ ಯುವ ಹಿಂದುಗಳು ಎಂದು ಅವರು ಹೇಳಿದರು, “ನಮ್ಮ ಧ್ಯೇಯವು: ಒಂದು ಕೈಯಲ್ಲಿ ಗೀತೆ ಮತ್ತು ಮತ್ತೊಂದರಲ್ಲಿ ಬಂದೂಕು” ಆಗಿದೆ ಎಂದರು.

ಜೀವನ ಮತ್ತು ಮರಣ ಹಿಂದುಗಳಿಗಾಗಿ

ಸರಸ್ವತಿಯ ಎಡಬದಿಯಲ್ಲಿ ಕುಳಿತಿರುವ ಬಲಿಷ್ಠ ಸ್ನಾಯುಗಳ ಯುವಕ ಅಮಿತ್ ಹಿಂದೂ, ಗ್ರಾಮದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಾಡಾದಲ್ಲಿ ತರಬೇತಿ ಪಡೆದ ಕುಸ್ತಿಪಟು. ತನ್ನ ಕೊನೆಯ ಹೆಸರಿನಿಂದಲೇ ಸಂಭೋದಿಸಬೇಕೆಂದು ಒತ್ತಾಯಿಸುತ್ತಿರುವ ೨೩ ವರ್ಷದ ಯುವಕ ಹೇಳಿದನು, ಅವನ ಜೀವನದ ಏಕೈಕ ಗುರಿ: ”ಹಿಂದುಗಳಿಗಾಗಿ ಜೀವಿಸು ಹಿಂದುಗಳಿಗಾಗಿ ಮರಣಿಸು”. ತನ್ನ ನಿರುದ್ಯೋಗಿ ಮಿತ್ರರ ಗುಂಪಿನೊಂದಿಗೆ, ಸ್ಥಳೀಯ ಹಿಂದು ಸಂಘಟನೆಯೊಡನೆ ಸೇರಿ ಗುರುಗ್ರಾಮದ ಸೆಕ್ಟರ್ 53 ರಲ್ಲಿರುವ ಕನ್ಹೈ ಗ್ರಾಮದ ಖಾಲಿ ಮೈದಾನದಲ್ಲಿ ಒಟ್ಟು ಸೇರುವುದಾಗಿದೆ ಅವನ ದಿನನಿತ್ಯದ ಕೆಲಸ. “ನಾವು ಈ ಖಾಲಿ ಸ್ಥಳವನ್ನು ನಮ್ಮ ಕಛೇರಿಯಾಗಿ ಪರಿಗಣಿಸಿದ್ದೇವೆ. ನಾವು ಹಸುಗಳ ಕಳ್ಳಸಾಗಾಣಿಕೆಯಂತಹ ಸಮಸ್ಯೆಗಳನ್ನು ಚರ್ಚಿಸುತ್ತೇವೆ ಮತ್ತು ಕಾರ್ಯತಂತ್ರಗಳನ್ನು ರೂಪಿಸುತ್ತೇವೆ ” ಎಂದು ಅವನು ಹೇಳಿದನು. ಶುಕ್ರವಾರ ಮಧ್ಯಾಹ್ನ ಮುಸ್ಲಿಮರು ನಮಾಝಿಗೆ ಒಟ್ಟು ಸೇರುವ ಕಾರಣ ಆ ದಿನ ಹೊರತು ಪಡಿಸಿ ವಾರದ ಉಳಿದ ದಿನಗಳಲ್ಲಿ ಮಾತ್ರ ಈ ಮೈದಾನವು ಅವರ ಅಡ್ಡೆಯಾಗಿರುತ್ತಿತ್ತು. ಇದು ಅವರ ಕೋಪಕ್ಕೆ ಕಾರಣವಾಗಿತ್ತು.

ಎಪ್ರಿಲ್ 20 ರಂದು, ಕನ್ಹೈ ಮತ್ತು ವಝೀರಾಬಾದ್ ನ ಎರಡು ಹಳ್ಳಿಗಳ ಎಂಟು ಅಥವಾ ಹತ್ತು ಯುವಕರು, ತಮ್ಮ ಮೋಟಾರು ಬೈಕುಗಳನ್ನು ಈ ಸಾರ್ವಜನಿಕ ಮೈದಾನದಲ್ಲಿ ಓಡಿಸಿದರು. ತಾವು ಪ್ರಾರ್ಥನೆಯನ್ನು ಪ್ರಾರಂಭಿಸುವುದಾಗಿ ಮತ್ತು ಹಿಂದಿರುಗುವಂತೆ ಮುಸ್ಲಿಮರು ಅವರೊಂದಿಗೆ ಕೇಳಿಕೊಂಡರು. ಜೈ ಶ್ರೀ ರಾಮ್’ ಹೇಳುವ ಮೂಲಕ ಯುವಕರು ಪ್ರಾರ್ಥನಾ ನಿರತರ ಮೇಲೆ ಮುಗಿಬಿದ್ದರು. ಮೊಬೈಲ್ ನಲ್ಲಿ ಚಿತ್ರೀಕರಿಸಿದ ಈ ಘಟನೆಯ ವಿಡಿಯೋ ತಕ್ಷಣವೇ ವೈರಲ್ ಆಗಿ ರವಾನೆಯಾಯಿತು. (ಐದು ದಿನಗಳಲ್ಲಿ ಐದು ಲಕ್ಷ ಆ ವಿಡಿಯೋಗಾಗಿ ಯೂಟ್ಯೂಬ್ ನಲ್ಲಿ ಹುಡುಕಿದರೂ.) ಮತ್ತು ಮುಂದಿನ ಶುಕ್ರವಾರದ ನಮಾಝಿಗೆ ಅಡ್ಡಿಯನ್ನುಂಟುಮಾಡಲಾಯಿತು. ಏಪ್ರಿಲ್ 27 ರಂದು, ಧಾರ್ಮಿಕ ಭಾವನೆಗೆ ಧಕ್ಕೆ, ಆರಾಧನೆಗೆ ಅಡ್ಡಿಪಡಿಸಿದ ಮತ್ತು ಕ್ರಿಮಿನಲ್ ಬೆದರಿಕೆಗಳನ್ನು ಹಾಕುವ ಮೂಲಕ ಸೆಕ್ಟರ್ 53 ರ ಪೊಲೀಸರು ಅಮಿತನ ಆರು ಸ್ನೇಹಿತರನ್ನು ಬಂಧಿಸಿದರು ಮತ್ತು ಮೂರು ದಿನಗಳ ನಂತರ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. ಜೂನ್ 10 ರೊಳಗೆ ಇಬ್ಬರನ್ನು ಬಂಧಿಸಿ ಮತ್ತೆ ಬಿಡುಗಡೆ ಮಾಡಲಾಯಿತು.

ಜೈಲಿಗೆ ಹೋದ ಮಾತ್ರಕ್ಕೆ ಎಲ್ಲರೂ ಅಪರಾಧಿಗಳಾಗುವುದಿಲ್ಲ ಎಂದು ಸುಬೇ ಸಿಂಗ್ ಬೊಹ್ರಾ ವಾದಿಸುತ್ತಾರೆ. ವಜೀರಾಬಾದ್ ನ ಮಾಜಿ ಮುಖ್ಯಸ್ಥ ಮತ್ತು ಹಳ್ಳಿಯ ಬಿಜೆಪಿ ಕೌನ್ಸಿಲರ್ ನ ತಂದೆಯಾದ, ಇವರು ಆರು ಯುವಕರಿಗೆ ಜಾಮೀನು ಪಡೆಯಲು ಹೋರಾಟ ನಡೆಸಿದವರಾಗಿದ್ದಾರೆ. ಹಳ್ಳಿಯ ಹಿರಿಯರು ಮನೆಯಲ್ಲಿ ತಯಾರಾದ ಸಿಹಿ ತಿಂಡಿಗಳ ತಟ್ಟೆ ಹಿಡಿದು ಅವರ ಪರವಾಗಿ ಸಮರ್ಥಿಸಿದರು

“ಬಿಜೆಪಿ ಅಧ್ಯಕ್ಷ ಅಮಿತ್ ಷಾ ಕೂಡಾ ಆರೋಪದ ಮೇಲೆ ಜೈಲಿನಲ್ಲಿದ್ದರು. ಇದು ಯಾವ ಅರ್ಥವನ್ನು ಕೊಡುವುದಿಲ್ಲ ”

”ನಾನು ಸಹ ಜಾಮೀನು ಪಡೆದುಕೊಂಡಿದ್ದೇನೆ. ಗುರೂಗ್ರಾಮ್ ಪೊಲೀಸ್ ಕಮಿಷನರ್ ಗೆ ಬೆದರಿಕೆ ಹಾಕಿದ್ದಕ್ಕಾಗಿ ನನ್ನನ್ನು ಬಂಧಿಸಲಾಗಿತ್ತು . ”

ಗ್ರಾಮಗಳಲ್ಲಿ ಹೆಚ್ಚುತ್ತಿರುವ ಮುಸ್ಲಿಂ ವಲಸಿಗರಿಂದಾಗಿ ಸ್ಥಳೀಯ ಹಿಂದುಗಳಿಗೆ ಬೇರೆ ಯಾವುದೇ ಆಯ್ಕೆ ಉಳಿದಿಲ್ಲದ ಕಾರಣ ಬದುಕುಳಿಯಲು ಹೋರಾಟ ನಡೆಸುತ್ತಾರೆ ಎಂದು ಬೋಹ್ರಾ ಹೇಳಿದ್ದಾರೆ. “ಇಲ್ಲದಿದ್ದರೆ ನಮ್ಮ ಅಸ್ತಿತ್ವವೇ ಇಲ್ಲದಾಗುವ ಒಂದು ದಿನ ಬರುತ್ತದೆ”.

ನಮ್ಮ ಹಳ್ಳಿಯಲ್ಲಿ ಮುಸ್ಲಿಮರ ಜನಸಂಖ್ಯೆಯ ಶೇಕಡಾ 2 ಕ್ಕಿಂತಲೂ ಕಡಿಮೆಯಿತ್ತು ಎಂದು ಅವರು ಸ್ಮರಿಸುತ್ತಾರೆ.

ಈ ನಗರವು ಕೋವಿಮದ್ದಿನ ಕೊಳವೆಗಳ ಮೇಲೆ ಕುಳಿತಿದೆ ” ಎಂದು ಸಂಯುಕ್ತ ಹಿಂದೂ ಸಂಘರ್ಷ ಸಮಿತಿಯನ್ನು ಮುನ್ನಡೆಸುತ್ತಿರುವ ರಾಜೀವ್ ಮಿತ್ತಲ್ ಹೇಳುತ್ತಾರೆ.

“ಕಿಡಿ ಎರಡು ಬದಿಗಳಲ್ಲೂ ಹಾರುತ್ತಿವೆ. ಹಿಂದೂಗಳ ಸಹಿಷ್ಣುತೆಯಿಂದ ಪರಿಸ್ಥಿತಿ ನಿಯಂತ್ರಣದಲ್ಲಿದೆ, ಆದರೆ ಯಾವ ದಿನ ಬೇಕಾದರೂ ಸ್ಫೋಟಿಸಬಹುದು “ಎಂದು ಅವರು ಹೇಳಿದರು. ”ನಾವು ನಮ್ಮ ಸ್ವಂತ ಮುಸ್ಲಿಮರೊಂದಿಗೆ ಬದುಕಬಹುದು, ಆದರೆ ಗುರಗ್ರಾಮಕ್ಕೆ \ಹೆಚ್ಚಿನ ಮುಸ್ಲಿಮರು ಬಾಂಗ್ಲಾದೇಶದಿಂದ ಬಂದಿದ್ದಾರೆ. ಅವರಲ್ಲಿ ಹೆಚ್ಚಿನವರು ದಾಖಲೆ ರಹಿತ ರೋಹಿಂಗ್ಯನ್ನರು. ಅವರು ಜನರನ್ನು ಸುಟ್ಟುಹಾಕುತ್ತಾರೆ ಮತ್ತು ಅವರ ಮಾಂಸವನ್ನು ತಿನ್ನುತ್ತಾರೆ ಎಂದು ನಿಮಗೆ ತಿಳಿದಿದೆಯೇ? ” ” ಎಂದು , ತನ್ನ ಫೋನಿನಲ್ಲಿ ಹಿಂದೂ ಒಕ್ಕೊಟಗಳ ವಾಟ್ಸ್ ಆಪ್ ಗುಂಪುಗಳಿಂದ ಬರುವ ಎಚ್ಚರಿಕೆಯ ಸಂದೇಶಗಳನ್ನು ಪರಿಶೀಲಿಸುತ್ತಾ ಅವರು ಹೇಳಿದರು .

ಆದರೆ ನಗರದಲ್ಲಿ ಬಾಂಗ್ಲಾದೇಶದಿಂದ ಬಂದ ದಾಖಲೆರಹಿತ ವಲಸೆಗಾರರ ಉಪಸ್ಥಿತಿಯನ್ನು ಗುರುಗ್ರಾಮದ ಪೊಲೀಸರು ನಿರಾಕರಿಸಿದ್ದಾರೆ.

ಗುರ್ಗಾಂವ್ ನಲ್ಲಿ ಮುಸ್ಲಿಮರಾಗಿರುವುದು:

ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ಅಕ್ಬರ್ ಅಲಿ ಮೀನು ಸಾರಿನಿಂದಲೇ ಬದುಕಬಲ್ಲರು. ಹತ್ತು ವರ್ಷಗಳ ಹಿಂದೆ ತನ್ನ ಗ್ರಾಮವನ್ನು ತೊರೆದ ನಂತರ ಅವರು ಜೀವನಕ್ಕೆ ಪ್ರತಿ ದಿನ ಇದನ್ನೇ ಮಾಡುತ್ತಿದ್ದಾರೆ. ಎರಡು ತಿಂಗಳುಗಳ ಹಿಂದೆ, ಗುರಗಾಂವ್ ನ ಸೆಕ್ಟರ್ 49 ರ ಬಂಗಾಳಿ ಮಾರುಕಟ್ಟೆಯಲ್ಲಿರುವ ತನ್ನ ಚಿಕ್ಕಪ್ಪನ ಉಪಾಹಾರ ಗೃಹವನ್ನು ಸೇರಲು ಅವರು ಮುಂಬೈಯ ತಮ್ಮ ಅಡುಗೆ ಕೆಲಸವನ್ನು ತೊರೆದರು. ಈ ಮಾರುಕಟ್ಟೆಯು ಅನೇಕರಿಗೆ ಬದುಕನ್ನು ನೀಡುತ್ತಿದೆ. ನಾಡಿಯಾದಿಂದ ಬಂದಿದ್ದ ಡಜನ್ಗಟ್ಟಲೆ ಜನರು ಇಲ್ಲಿ ಗುತ್ತಿಗೆಯಡಿಯಲ್ಲಿ ವಾಸಿಸುತ್ತಾರೆ; ಇತರ ಜಿಲ್ಲೆಗಳ ನೂರಾರು ಜನರು ಬಂಗಾಳಿ ಮಾರುಕಟ್ಟೆಯ ಆಸುಪಾಸಿನಲ್ಲಿ ವಾಸಿಸುತ್ತಾರೆ ಮತ್ತು ಅವರ ರಾಜ್ಯದ ಸಾವಿರಾರು ಜನರು ಶಾಪಿಂಗ್ ಮಳಿಗೆಗಳ ಹಿಂಭಾಗದಲ್ಲಿ ಮತ್ತು ಗುರುಗ್ರಾಮದಾದ್ಯಂತ ಹೊಸದಾಗಿ ಅಭಿವೃದ್ಧಿ ಹೊಂದಿದ ಪಟ್ಟಣಗಳಲ್ಲಿ ವಾಸಿಸುತ್ತಾರೆ. ಅಕ್ಬರಲೀ ಆಧಾರ್ ಕಾರ್ಡನ್ನು ಹೊಂದಿದ್ದಾನೆ ಮತ್ತು ಅದರ ಒಂದು ಪ್ರತಿಯು ಭೂಮಾಲೀಕನ ಬಳಿ ಉಳಿದಿದೆ.

ಗುರೂಗ್ರಾಮದ ಹತ್ತು ಅಧಿಕೃತ ಮಸೀದಿಗಳಲ್ಲಿ, ಎಂಟು ಹಳೆಯ ಪ್ರದೇಶಗಳಲ್ಲಿದೆ. ಜಿಲ್ಲೆಯ ಇನ್ನೊಂದು ತುದಿಯಲ್ಲಿ ನೆಲೆಸಿರುವ ಮುಸ್ಲಿಂ ವಲಸೆಗಾರರಿಗೆ ದೂರ ಪ್ರಯಾಣವನ್ನು ಕ್ರಮಿಸದ ಹೊರತು ಮಸೀದಿ ಪ್ರವೇಶಿಸಲು ಸಾಧ್ಯವಿಲ್ಲ . ಶುಕ್ರವಾರ ಊಟದ ಸಮಯದಲ್ಲಿ ಅವರಲ್ಲಿ ಅನೇಕರು ತಮ್ಮ ಹತ್ತಿರದ ಖಾಲಿ ಮೈದಾನ, ಪಾದಚಾರಿ ರಸ್ತೆ , ಪಾರ್ಕಿಂಗ್ ಸ್ಥಳಕ್ಕೆ ತೆರಳುತ್ತಾರೆ.. ಅಲಿ ಕೂಡ ಹೆಚ್ಚಿನ ಆಯ್ಕೆಗಳನ್ನು ಹೊಂದಿಲ್ಲ . ಮಾರುಕಟ್ಟೆ ಮಧ್ಯದಲ್ಲಿ ತಗಡು ಶೀಟಿನಿಂದ ನಿರ್ಮಿತವಾದ ಮಸೀದಿಯಲ್ಲಿ ನಮಾಜ್ ಮಾಡುತ್ತಾರೆ. ಆದರೆ ಅದರ ಮೇಲ್ಮೈ ಬೇಸಿಗೆಯಲ್ಲಿ ಬಿಸಿಯಾಗಿ ಬೆಂದು ಹೋಗುವಂತಿರುತ್ತದೆ. ಈಗ, ಅವರು ತಮ್ಮ ಚಿಕ್ಕಪ್ಪನ ಆಟೋ ರಿಕ್ಷಾದಲ್ಲಿ ಹೊಸ ಗುರುಗ್ರಾಮದ ಸೆಕ್ಟರ್ 57 ರಲ್ಲಿರುವ ಏಕೈಕ (ಪೂರ್ಣಗೊಳಿಸದ) ಮಸೀದಿಗೆ ತೆರಳುತ್ತಾರೆ, ಅಲ್ಲಿ ಪ್ರತಿ ಶುಕ್ರವಾರವೂ ಸಾವಿರಾರು ಮುಸ್ಲಿಮರು ನಾಲ್ಕು ಪಾಳಿಯಲ್ಲಿ ನಮಾಝ್ ನಿರ್ವಹಿಸುತ್ತಾರೆ .

“5,00,000 ಮುಸ್ಲಿಮರು ಗುರುಗ್ರಾಮದಲ್ಲಿ ವಾಸಿಸುತ್ತಾರೆಂದು ಅಂದಾಜಿಸಲಾಗಿದ್ದರೂ ಕನಿಷ್ಠ 1,00,000 ಮುಸ್ಲಿಮರು ಪ್ರತಿ ಶುಕ್ರವಾರದಂದು ನಮಾಝ್ ನಿರ್ವಹಿಸಬೇಕಾಗುತ್ತೆ” ಎಂದು ಗೇಟೆಡ್ ಕಾಲೊನಿಯಲ್ಲಿ ವಾಸಿಸುವ ಉದ್ಯಮಿ ಅಲ್ತಾಫ್ ಅಹಮದ್ ಹೇಳಿದರು. ವರ್ಷಗಳವರೆಗೆ ಅವರು ಶುಕ್ರವಾರದ ಪ್ರಾರ್ಥನೆಗಳನ್ನು ವಲಯ 45 ರಲ್ಲಿರುವ ತೆರೆದ ಮೈದಾನದಲ್ಲಿ ಮಾಡುತ್ತಿದ್ದರು . “ನಾನು ಸೆಕ್ಟರ್ 39 ರಲ್ಲಿ ಯೂನಿಟೆಕ್ ಸೈಬರ್ ಪಾರ್ಕ್ ನಲ್ಲಿ ಕೆಲಸ ಮಾಡುತ್ತಿದ್ದೆ ಮತ್ತು ಅದು ನನ್ನ ಕಛೇರಿ ಬಳಿ ಇರುವ ಸಮೀಪದ ಸಾರ್ವಜನಿಕ ಸ್ಥಳವಾಗಿದೆ. ಅಲ್ಲಿ ಪ್ರಾರ್ಥಿಸುವ ಹೆಚ್ಚಿನ ಜನರು ಕಚೇರಿ ಕೆಲಸಕ್ಕೆ ಹೋಗುವವರಾಗಿದ್ದಾರೆ”ಎಂದು ಅವರು ಹೇಳಿದರು.

ಸಂಯುಕ್ತ ಹಿಂದೂ ಸಂಘರ್ಷ ಸಮಿತಿಯಿಂದ ಒತ್ತಡಕ್ಕೆ ಮಣಿದು ಜಿಲ್ಲಾಡಳಿತವು ವಲಯ 73 ರಿಂದ 37 ರವರೆಗೆ ನಮಾಝಿಗಾಗಿ ಅನುಮೋದಿತ ಸಾರ್ವಜನಿಕ ಸ್ಥಳಗಳ ಸಂಖ್ಯೆಯನ್ನು ಕಡಿಮೆ ಮಾಡಿದೆ. ”ತೆರೆದ ಪ್ರದೇಶದಲ್ಲಿ ನಮಾಝ್ ನಿರ್ವಹಿಸುವುದು ಜನರ ಮೊದಲ ಆದ್ಯತೆಯಲ್ಲ, ನಮಗೆ ಮಸೀದಿ ನಿರ್ಮಿಸಲು ಸ್ಥಳವನ್ನು ಕೊಡಿ” ಎಂದು ಅಹ್ಮದ್ ಹೇಳಿದರು.

ಒಂದು ವಿಭಜಿತ ನಗರ:

11 ವರ್ಷಗಲಿಂದ ಗುರುಗ್ರಾಮದಲ್ಲಿ ವಾಸವಾಗಿರುವ ಅಹ್ಮದ್ ಹೇಳುತ್ತಾರೆ, ”ಕಛೇರಿಗಳಲ್ಲಿ ಯಾವೊಬ್ಬ ಮುಸ್ಲಿಮರೂ ತಮ್ಮ ಮುಸ್ಲಿಂತನವನ್ನು ಮೇಜಿನವರೆಗೆ ತರಲು ಬಯಸುವುದಿಲ್ಲ. ಇತರರು ತಮ್ಮ ಬಗ್ಗೆ ತಪ್ಪು ಗ್ರಹಿಕೆಯನ್ನು ಹೊಂದಿದ್ದಾರೆ: ನಾವು ಹಲವಾರು ಬಾರಿ ಮದುವೆಯಾಗುತ್ತೇವೆ, ನಾವು ಮಾಂಸವನ್ನು ಬೆಳಗ್ಗೆ ರಾತ್ರಿ ತಿನ್ನುತ್ತೇವೆ, ನಮ್ಮ ಪತ್ನಿಯರು ಬರ್ಕಾಗಳನ್ನು ಧರಿಸುತ್ತಾರೆ ಮತ್ತು ನಮ್ಮ ತಂದೆಯಂದಿರು ಗಡ್ಡವನ್ನು ಬಿಡುತ್ತಾರೆ ” ಎಂಬ ನಂಬಿಕೆ ಮತ್ತು ಆರೋಪ ಹಿಂದೂಗಳಲ್ಲಿದೆ. ‘ನೀವು ಪಾಕಿಸ್ತಾನದಿಂದ ಬಂದಿದ್ದೀರಾ?’ ಎಂದು ನನ್ನ ಮಗಳಲ್ಲಿ ಕೇಳಲಾಗುತ್ತದೆ. ಪಾಕಿಸ್ತಾನ ಏನೆಂಬುದನ್ನು ತಿಳಿಯಲು ಕೂಡ ಅವಳು ತುಂಬಾ ಚಿಕ್ಕವಳ.”

ಇತಿಹಾಸಕಾರ್ತಿ ವೀನಾ ಓಲ್ಡೆನ್ಬರ್ಗ್ 13 ವರ್ಷಗಳ ಹಿಂದೆ ಡಿಎಲ್ಎಫ್ ನ ಹಂತ 3 ರಲ್ಲಿರುವ ಸೈಬರ್ ಸಿಟಿಯಿಂದ ತನ್ನ ಮನೆಗೆ ಕೆಲಸಗಾರನನ್ನು ನೇಮಿಸಿದಾಗ, ಅವಳು ಉಷಾ ಎಂದು ತಿಳಿದಿದ್ದಳು “ನಂತರ, ಅವರು ಕೊಹಿನೂರ್ ಎಂದು ಬಹಿರಂಗಪಡಿಸಿದರು. ಇದು ಸಾಮಾನ್ಯ ಕಥೆ. ಅವರು ತಮ್ಮನ್ನು ತಾವು ಮುಸ್ಲಿಮ್ ಎಂದು ಗುರುತಿಸಿಕೊಂಡರೆ ನಗರದಲ್ಲಿ ಯಾರೂ ಅವರಿಗೆ ಉದ್ಯೋಗ ಕೊಡುವುದಿಲ್ಲ” ಎಂದು ಅವರು ಹೇಳಿದರು. ನಗರದಲ್ಲಿ ಅವರು ಎದುರಿಸುತ್ತಿರುವ ತಾರತಮ್ಯದ ಹೊರತಾಗಿಯೂ, ಬಂಗಾಳಿ ವಲಸಿಗರು ಗುರಗ್ರಾಮದಲ್ಲಿ ಅವಕಾಶ ಹುಡುಕಾಲು ಮುಂದಾಗುತ್ತಾರೆ. ಮೊದಲು ಕೋಹಿನೂರ್ ಮಾತ್ರ ಅವಳ ಮಗಳ ಜೊತೆ ಬಂದಿದ್ದಳು. ನಂತರ ಅವಳ ಸಂಬಂಧಿಕರಲ್ಲಿ ಮೂವತ್ತು ಜನರು ಅವಳನ್ನು ಸೇರಿಕೊಂಡಿದ್ದಾರೆ: ಮೂರು ಸಹೋದರಿಯರು, ಇಬ್ಬರು ಸಹೋದರರು, ಅವರ ತಾಯಿ ” ಎಂದು ಒಂದು ದಶಕಕ್ಕೂ ಹೆಚ್ಚು ಕಾಲ ಗುರುಗ್ರಾಮ್ ಇತಿಹಾಸವನ್ನು ಸಂಶೋಧಿಸುತ್ತಿರುವ ಓಲ್ಡೆನ್ಬರ್ಗ್ ಹೇಳಿದರು

ತುಂಡು ಭೂಮಿಗಾಗಿ :

ಈ ಪ್ರದೇಶವು ಕೋಮುವಾದದ ಯಾವುದೇ ಆಳವಾದದ ಇತಿಹಾಸವನ್ನು ಹೊಂದಿಲ್ಲ ಎಂದು ಓಲ್ಡೆನ್ಬರ್ಗ್ ಉಲ್ಲೇಖಿಸಿದ್ದಾರೆ. ಏಕೆಂದರೆ ಕಳೆದ ಕೆಲವು ವರ್ಷಗಳವರೆಗೆ ಕೇವಲ ಬೆರಳೆಣಿಕೆಯಷ್ಟು ಮಾತ್ರ ಮುಸ್ಲಿಮರಿದ್ದರು. “ಇದು ಹಿಂದೂ ಪ್ರಾಬಲ್ಯದ ಸಮಾಜವಾಗಿದ್ದು, ಸಮುದಾಯಗಳ ನಡುವೆ ಉದ್ವಿಗ್ನತೆಯು ಜಾತಿ ಆಧಾರಿತವಾಗಿದೆ. ಖಪ್ ಪಂಚಾಯತ್ ಗಳ ಮೂಲಕ ಸಾಮಾಜಿಕ ಸಂಘರ್ಷಗಳು ತೀರ್ಮಾನವಾಗುತ್ತಿದ್ದವು. ಅವರ ಗಮನವೆಲ್ಲ ಮಹಿಳೆಯರನ್ನು ನಿಯಂತ್ರಿಸುವುದರಲ್ಲಿದ್ದವು. ಮುಸ್ಲಿಮರ ಆಗಮನವು ಗ್ರಾಮಗಳ ಸಾಮಾಜಿಕ ಚಿತ್ರಣವನ್ನು ಬದಲಿಸಿದೆ ಎಂದು ಓಲ್ಡನ್ಬರ್ಗ್ ವಾದಿಸುತ್ತಾರೆ.

ಗುರುಗ್ರಾಮದ ಹೆಚ್ಚಿನ ವಿವಾದಗಳಂತೆ, ಇದು ಸಹ ತುಂಡು ಭೂಮಿಯ ಸುತ್ತಲು ತಿರುಗುತ್ತಿದೆ .

ಗ್ರಾಮಸ್ಥರು ತಮ್ಮ ಭೂಮಿಯ ಮಾರಾಟ ಮತ್ತು ಗುತ್ತಿಗೆಯೊಂದಿಗೆ ಗುರಗ್ರಾಮದ ಅಭಿವ್ರದ್ಧಿಯನ್ನು ಆರಂಭಿಸಿದರು. ಕೆಲವು ಭೂಮಾಲೀಕರು ತಮ್ಮ ಭೂಮಿಯನ್ನು ಮಾರಾಟ ಮಾಡಿದರು ಮತ್ತು ಇದ್ದಕ್ಕಿದ್ದಂತೆ ಅವರು ಊಹಿಸಿದಕ್ಕಿಂತ ಹೆಚ್ಚು ಹಣವನ್ ನುಪಡೆದರು. ಕೆಲವರು ಅದನ್ನು ಮದ್ಯ ಸೇವಿಸಲು ಉಪಯೋಗಿಸಿದ್ದಾರೆ, ಇನ್ನು ಕೆಲವರು ದೊಡ್ಡ ಕಾರುಗಳನ್ನು ಖರೀದಿಸಿದರು, ದೊಡ್ಡ ರಜಾವಿರಾಮಗಳಿಗೆ ಹೋದರು, ಅದ್ದೂರಿ ಮದುವೆಗಳನ್ನು ನಡೆಸಿದರು. ಹಲವರು ದಿವಾಳಿಯಾದರು. ಅವರು ಅಶಿಕ್ಷಿತ, ಕೌಶಲ್ಯರಹಿತರಾಗಿದ್ದರು, ಆದರೆ ಹಿಂದೆ ಭೂಮಿಯನ್ನು ಹೊಂದಿದ್ದ ಬಗ್ಗೆ ಗರ್ವ ಪಡುತ್ತಿದ್ದರು. ತಮ್ಮ ಹಳ್ಳಿಗಳಲ್ಲಿ ಯಾವುದೇ ಮಧ್ಯಪ್ರವೇಶವನ್ನು ದ್ವೇಷಿಸುವವರಲ್ಲಿ ಇವರು ಪ್ರಮುಖರು. ಅವರಿಗೆ ಬಾಡಿಗೆಗೆ ನೀಡಲು ಯಾವುದೂ ಉಳಿದಿಲ್ಲ. ಅವರು ಬಡ ವಲಸೆಗಾರರನ್ನು ಗುರಿಮಾಡುತಿದ್ದಾರೆ” ಎಂದು ಓಲ್ಡನ್ಬರ್ಗ್ ಹೇಳಿದರು.

ನಂತರ ಅವರು ಗುರುಗ್ರಾಮದ ವಿವಿಧ ಭೂಮಾಲೀಕರ ಬಗ್ಗೆ ವಿವರಿಸಿದರು, ”ಅವರು ಉತ್ತಮ ಕೆಲಸ ಮಾಡಿದರು. ಕೆಲವರು ತಮ್ಮ ಭೂಮಿಯನ್ನು ಮಾರಾಟ ಮಾಡಿದರು ಮತ್ತು ಹಣವನ್ನು ಆಸ್ತಿ ವ್ಯವಹಾರಕ್ಕೆ ಮರು ಹೂಡಿಕೆ ಮಾಡಿದರು. ಕೆಲವರು ರಿಯಲ್ ಎಸ್ಟೇಟ್ ಕಂಪೆನಿಗಳ ಪಾಲುದಾರಿಕೆಯಲ್ಲಿ ತೊಡಗಿದರು. ಇತರರು ತಮ್ಮ ಭೂಮಿಯ ಒಂದು ಭಾಗದಲ್ಲಿ ಹೊಸ ಗುರುಗ್ರಾಮವನ್ನು ನಿರ್ಮಿಸಲು ಬರುವ ಕಾರ್ಮಿಕರಿಗಾಗಿ ಮೂಲ ಸೌಕರ್ಯಗಳಾದ ಕೊಠಡಿಗಳು ಮತ್ತು ಸಾಮಾನ್ಯ ಸ್ನಾನಗೃಹಗಳನ್ನು ಹೊಂದಿರುವ ಬಹು ಮಹಡಿಯ ಬಾಡಿಗೆ ಮನೆಗಳನ್ನು ನಿರ್ಮಿಸಿದರು. ವಲಸಿಗರನ್ನು ದೂರ ಓಡಿಸಲು ಅವರು ಬಯಸುವುದಿಲ್ಲ. ”

ಯುದ್ಧ ಮತ್ತು ಶಾಂತಿ:

ಮೇ 27 ರಂದು ನಮಾಝ್ ಗೆ ಅಡ್ಡಿಪಡಿಸಿದ ಎರಡು ವಾರಗಳ ನಂತರ, ಜಿಲ್ಲೆಯ 360 ಹಳ್ಳಿಗಳಿಂದ ವಿವಿಧ ನಂಬಿಕೆಗಳನ್ನು ಪ್ರತಿನಿಧಿಸುವ 200 ಜನರು “ನಗರದ ಸೌಹಾರ್ದ ಸಂಸ್ಕೃತಿಯನ್ನು” ಜೀವಂತವಾಗಿಡುವಂತೆ ಕೋಮು ಸಾಮರಸ್ಯಕ್ಕಾಗಿ ಕರೆ ಮಾಡಲು ಮಹಾಪಚಾಯತ್ ಸಭೆ ನಡೆಸಿದರು.

ಚಳುವಳಿ ನಿರತ ಹಿಂದುಗಳನ್ನು ತಮ್ಮ ಪಥದಿಂದ ಸಾಗಿಸಲು ಇದು ಸಾಕಾಗುವುದಿಲ್ಲ. ಅಮಿತ್ ಹಿಂದೂ ಹೇಳಿದನು ರಮ್ಝಾನ್ ತಿಂಗಳಿನ ನಂತರ ಸಾರ್ವಜನಿಕವಾಗಿ ನಮಾಝ್ ನಿರ್ವಹಿಸುವುದನ್ನು ಅವರ ಗುಂಪು ತಡೆಯುತ್ತದೆ. ಜೂನ್ ಮಧ್ಯದಲ್ಲಿ ರಮ್ಝಾನ್ ಕೊನೆಗೊಂಡಿದೆ. ಜೂನ್ 29 ರಂದು, ಡಿಎಫ್ಎಫ್ ಹಂತ 3 ರಲ್ಲಿ ಖಾಲಿ ಸ್ಥಳದಲ್ಲಿ ನಮಾಝ್ ನಿರ್ವಹಿಸದಂತೆ ಮುಸ್ಲಿಮರನ್ನು ಗುಂಪು ತಡೆದಿದೆ. ಸಾರ್ವಜನಿಕ ಭೂಮಿ ದುರ್ಬಳಕೆ ಕುರಿತು ದೂರು ನೀಡಲಾಗಿದೆ ಎಂದು ಸ್ಥಳೀಯ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಅದೇ ದಿನ ಸೆಕ್ಟರ್ 34 ರಿಂದ ಇದೇ ರೀತಿಯ ಘಟನೆ ವರದಿಯಾಗಿದೆ.

ಅಡೆತಡೆಗಳ ಹೊರತಾಗಿಯೂ, ನಗರದ ಜಾತ್ಯತೀತ ಸಮುದಾಯವು ತಮ್ಮ ಹಕ್ಕುಗಳಿಗಾಗಿ ಮುಂದುವರಿಯುತ್ತದೆ ಎಂದು ಅಲ್ತಾಫ್ ಅಹ್ಮದ್ ಹೇಳಿದರು. “ನಾವು ಅವರ ವಿರುದ್ಧ ಯುನೈಟೆಡ್ ಫ್ರಂಟ್ ಅನ್ನು ಸ್ಥಾಪಿಸುತ್ತೇವೆ.”