ಹರ್ಯಾಣದ ಪ್ರತಿ ಗ್ರಾಮ ಗ್ರಾಮವನ್ನೂ ಬಿಜೆಪಿಗೆ ವಿರುದ್ಧವಾಗಿ ಪರಿವರ್ತಿಸುವೆವು: ಜಾಟರ ಬೆದರಿಕೆ.

0
282

ನ್ಯೂಸ್ ಡೆಸ್ಕ್

ಹರ್ಯಾಣದಲ್ಲಿ ಆಗಸ್ಟ್ 15ರಿಂದ ಆರಂಭವಾಗುವ ಬಿ. ಜೆ. ಪಿ. ಯ ರಾಜಕೀಯ ರಾಲಿಗೆ ಅವಕಾಶ ನೀಡುವುದಿಲ್ಲವೆಂದು ಜಾಟ್ ಸಂಸ್ಥೆಗಳು ಬೆದರಿಕೆ ಹಾಕಿವೆ.
ವಿವಿಧ ಜಾಟ್ ಸಂಸ್ಥೆಗಳ ಒಕ್ಕೂಟವಾದ ಅಖಿಲ ಭಾರತೀಯ ಜಾಟ್ ಆರಕ್ಷನ ಸಂಘರ್ಷ ಸಮಿತ(ABJASS)ದ ಅಧ್ಯಕ್ಷರಾದ ಯಶಪಾಲ್ ಮಲಿಕ್ ಅವರು ಜಾಟರಿಗೆ ಮೀಸಲಾತಿಯ ಭರವಸೆಯನ್ನು ಪೂರೈಸದ ಬಿ. ಜೆ. ಪಿ. ಸರಕಾರಕ್ಕೆ ರಾಲಿ ನಡೆಸಲು ಬಿಡುವುದಿಲ್ಲ ಎಂದು ಅವರು ಹೇಳಿದ್ದಾರೆ. ಒಂದು ವೇಳೆ ನಡೆಸಿದರೆ ಅದು ನಮ್ಮ ಪ್ರತಿಭಟನಾ ರಾಲಿಗಳಾಗಿ ಪರಿವರ್ತನೆಯಾಗಲಿವೆ ಎಂದವರು ಬೆದರಿಕೆ ಹಾಕಿದ್ದಾರೆ.
ಜೂನ್ 15ರಿಂದ ಆಗಸ್ಟ್ 15ರ ತನಕ ಜಾಟ್ ಸಂಘಟನೆಗಳು ರಾಜ್ಯದ ಪ್ರತೀ ಗ್ರಾಮ ,ಬ್ಲಾಕ್, ತಾಲೂಕು, ಜಿಲ್ಲೆಗಳಿಗೆ ಭೇಟಿ ನೀಡಿ ಸಮಾಜದ ಇತರ ದೌರ್ಜನ್ಯ ಪೀಡಿತ ವಿಭಾಗಗಳನ್ನು ರಾಜ್ಯ ಸರಕಾರದ ವಿರುದ್ಧ ಸಂಘಟಿಸುವ ಕೆಲಸದಲ್ಲಿ ನಿರತವಾಗಲಿವೆ. ಮುಂದಿನ ತಿಂಗಳುಗಳಲ್ಲಿ ಜಾಟ್ ಸಂಘಟನೆಗಳು ಬಿ.ಜೆ.ಪಿ. ಯ ವಿರುದ್ಧ ಪ್ರಚಾರ ನಡೆಸಲಿವೆ ಎಂದು ಮಲಿಕ್ ತಿಳಿಸಿದ್ದಾರೆ. 2019ರ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಹರ್ಯಾಣದ ಜೊತೆಗೆ ಪಂಜಾಬ್, ಉತ್ತರ ಪ್ರದೇಶ ಮತ್ತು ದೆಹಲಿಗಳಲ್ಲೂ ಬಿ.ಜೆ.ಪಿ.ಯ ವಿರುದ್ಧ ಧ್ವನಿ ಎತ್ತುವುದಾಗಿ ಅವರು ನುಡಿದಿದ್ದಾರೆ.