ಹಿಂದೂಗಳ ವಿರುದ್ಧ ಆಕ್ಷೇಪಾರ್ಹವಾಗಿ ಬರೆದ ಆ ಟ್ವೀಟರ್ ಖಾತೆ ಯಾರದು?

0
1122

 
ಒಂದು ಸತ್ಯಶೋಧನಾ ವರದಿ 

ಪ್ರತೀಕ್ ಸಿನ್ಹ 

“ಪ್ರಧಾನಿ ನರೇಂದ್ರ ಮೋದಿಯವರು ನೆಲಕಚ್ಚುವ 2019 ನೇ ಇಸವಿಯ  ನಿರೀಕ್ಷೆಯಲ್ಲಿದ್ದೇನೆ. ನನ್ನನ್ನು ನಂಬಿ. ಹಿಂದೂಗಳ ಬದುಕನ್ನು ಮುಸ್ಲಿಮರು ನರಕವಾಗಿಸಲಿದ್ದಾರೆ. ಹಿಂದುಗಳನ್ನು ಮುಸ್ಲಿಮರು ಗುಲಾಮರಾಗಿಸಲಿದ್ದಾರೆ. ನನ್ನನ್ನು ನಂಬಿ, ಮೋದಿ ಪರಾಜಯದ ಬಳಿಕ ಈ ದೇಶವನ್ನು ಮುಸ್ಲಿಮರು ಆಳಲಿದ್ದಾರೆ… ”
ಇಂಥದ್ದೊಂದು ಟ್ವೀಟ್ ಕಳೆದ ಫೆ. 26 ರಂದು ಮುಹಮ್ಮದ್ ಜೀಶಾನ್ ಎಂಬ ಟ್ವೀಟರ್ ಖಾತೆಯಲ್ಲಿ ಕಾಣಿಸಿಕೊಂಡು ಭಾರೀ  ಸುದ್ದಿ ಮಾದಿತ್ತು. ಟ್ವೀಟರ್ ಖಾತೆಯ ಹೆಸರು @Muhammadzee69. ಧೀರೂಭಾಯಿ ಅಂಬಾನಿ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ಈತ ಶಿಕ್ಷಕನಾಗಿರುವುದಾಗಿ ಟ್ವೀಟರ್ ಖಾತೆ ಹೇಳುತ್ತಿತ್ತು. ಅತ್ಯಂತ ಆಕ್ಷೇಪಾರ್ಹವಾದ ಮತ್ತು ಸಮಾಜದ ಸ್ವಾಸ್ಥ್ಯವನ್ನು ಕೆಡಿಸಬಲ್ಲ ಈ ಬರಹವನ್ನು ಅಂಬಾನಿ ಶಾಲೆಯ ಓರ್ವ ಶಿಕ್ಷಕ ಬರೆದಿದ್ದಾನೆ ಅನ್ನುವುದು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಯಿತು.


ಪ್ರಧಾನಿ ನರೇಂದ್ರ ಮೋದಿಯವರನ್ನು ಟ್ವೀಟರ್ ನಲ್ಲಿ ಫಾಲೋ ಮಾಡುವ ಶೆಫಾಲಿ ವೈದ್ಯ ಎಂಬವರು ಮುಂಬೈ  ಪೊಲೀಸ್ ಗೆ  ಈ ಟ್ವೀಟನ್ನು ಟ್ಯಾಗ್ ಮಾಡುತ್ತಾರೆ. ಇದು 1200 ಬಾರಿ ಮರುಟ್ವೀಟ್ ಗೆ ಒಳಗಾಗುತ್ತದೆ. ಅಲ್ಲದೆ, @saffireGem ಮತ್ತು @goyalsanjeev ಇತ್ಯಾದಿ ಟ್ವೀಟ್ ಖಾತೆಗಳ ಮೂಲಕ ಇದು ಭಾರೀ ಮರುಟ್ವೀಟ್ ಗೆ ಒಳಗಾಗಿ ಅಸಂಖ್ಯ ಮಂದಿಗೆ ತಲುಪುತ್ತದೆ. ನಕಲಿ ಟ್ವೀಟರ್ ಖಾತೆಗಳ ಬಗ್ಗೆ ಎಚ್ಚರಿಕೆ ವಹಿಸುವ ಮಧು ಕಿಶ್ವರ್ ಎಂಬವರೂ ಇದನ್ನು ನಂಬಿ ಹಾಗೆಯೇ ಟ್ವೀಟ್ ಮಾಡುತ್ತಾರೆ ಮತ್ತು ಬಳಿಕ ಅದನ್ನು ಅಳಿಸಿ ಹಾಕುತ್ತಾರೆ. ಆದರೆ ಹಲವಾರು ಬಲಪಂಥೀಯ ಫೇಸ್ ಬುಕ್  ಪುಟಗಳಲ್ಲಿ ಮತ್ತು ವಾಟ್ಸಪ್ ಗಳಲ್ಲಿ ಆ ಟ್ವೀಟ್ ನ ಸ್ಕ್ರೀನ್ ಶಾಟ್ ವ್ಯಾಪಕ ಪ್ರಮಾಣದಲ್ಲಿ ಹರಿದಾಡುತ್ತದೆ. 
ಬಳಿಕ ಧೀರೂಭಾಯಿ ಅಂಬಾನಿ ಸ್ಕೂಲ್ ನ ಮುಖ್ಯಸ್ಥರಾದ Abhimanyu Basu ರು ಈ ಕುರಿತಂತೆ ಪ್ರತಿಕ್ರಿಯೆ ನೀಡಿದರಲ್ಲದೆ, ಮುಹಮ್ಮದ್ ಜೀಶಾನ್ ಅನ್ನುವ ವ್ಯಕ್ತಿ ಶಾಲೆಯಲ್ಲಿ ಇಲ್ಲ ಮತ್ತು ಆ ಟ್ವೀಟರ್ ಖಾತೆಯ ವ್ಯಕ್ತಿಗೂ ಶಾಲೆಗೂ ಯಾವ ಸಂಬಂಧವೂ ಇಲ್ಲ ಎಂದು ಟ್ವೀಟ್ ಮಾಡಿದರು. 
ಈ ಬಗ್ಗೆ ಪತ್ತೆ ಕಾರ್ಯಕ್ಕೆ ಮುಂದಾದ Alt News ಎಂಬ ವೆಬ್ ಪತ್ರಿಕೆಯು ಮುಹಮ್ಮದ್ ಜೀಶಾನ್ ಹೆಸರಿನ ಟ್ವೀಟರ್ ಖಾತೆಯಲ್ಲಿ ಈ ಹಿಂದೆ ಪ್ರಕಟವಾಗಿರುವ ಟ್ವೀಟ್ ಗಳ  ಪರಿಶೀಲನೆ ನಡೆಸಿತು. ಅಚ್ಚರಿಯ ವಿಷಯ ಏನೆಂದರೆ, ಹಿಂದೂ ವಿರೋಧಿ ಎಂಬ ಹೆಸರು ಗಿಟ್ಟಿಸಿಕೊಂಡಿದ್ದ ಆ ವ್ಯಕ್ತಿಯ ಟ್ವೀಟ್ ಗಳಲ್ಲಿ ತೀವ್ರ ವಿರೋಧಾಭಾಸಗಳಿದ್ದುವು. ಒಂದೋ ಅಲ್ಪ ಸಂಖ್ಯಾಕ ಸಮುದಾಯವನ್ನು ದೂಷಿಸುವ ಅಥವಾ ಬಲಪಂಥೀಯ ರಾಜಕಾರಣ ಮತ್ತು ರಾಜಕಾರಣಿಗಳನ್ನು ಸಮರ್ಥಿಸುವ ಟ್ವೀಟ್ ಗಳೇ ಅಲ್ಲಿದ್ದುವು. 
ಈ ಟ್ವೀಟರ್ ಖಾತೆ ಆರಂಭವಾದುದು ೨೦೧೭ ಅಕ್ಟೋಬರ್ ನಲ್ಲಿ. ಅದರಲ್ಲಿರುವ ಮೊದಲ ಮೂರು ಟ್ವೀಟ್ ಗಳು ಮೇಲೆ ಆರಂಭದಲ್ಲಿ ಉಲ್ಲೇಖಿಸಲಾದ ಟ್ವೀಟ್ ಗೆ ತೀರಾ ಅನುರೂಪವಾಗಿ ಇದ್ದುವು. ಇದೊಂದು ನಕಲಿ ಖಾತೆ ಎಂಬುದಾಗಿ ತೀರ್ಮಾನಿಸುವುದಕ್ಕೆ ಹೆಚ್ಚಿನ ತನಿಖೆಯ ಅಗತ್ಯವಿರಲಿಲ್ಲ. 
ಇಂಥ ಟ್ವೀಟ್ ಗಳು ಲಂಗು ಲಗಾಮಿಲ್ಲದೆ ಸಾಮಾಜಿಕ ತಾಣಗಳಲ್ಲಿ ಬಹುಬೇಗ ಹರಡುತ್ತವೆ ಮತ್ತು ಸಮಾಜದ ಸ್ವಾಸ್ಥ್ಯವನ್ನು ಕೆಡಿಸುತ್ತದೆ. ಸತ್ಯವೋ ಸುಳ್ಳೋ ಎಂಬ ಪರಿಶೀಲನೆ ಆಗುವಾಗ ಅದು ಮಾಡಬೇಕಾದ ಹಾನಿಯನ್ನು ಅದಾಗಲೇ ಮಾಡಿರುತ್ತದೆ. ಇದು ಅಪಾಯಕಾರಿ. 

How a fake account with anti-Hindu tweets is tripping the right-wing

ಕೃಪೆ- Alt News