ಹೊನ್ನಾವರದ ‘ಜಿಹಾದಿ’ಗಳನ್ನು ಹುಡುಕುತ್ತಾ..

0
469


1.I have no hesitation in apologizing to the sikh community. I apologies not only to the sikh community. But to the whole Indian nation because what took place in 1984 was a negation of the concept of enshrined in our constitution. –
“ಸಿಖ್ ಸಮುದಾಯದೊಂದಿಗೆ ಕ್ಷಮೆ ಯಾಚಿಸುವುದಕ್ಕೆ ನನಗಾವ ಹಿಂಜರಿಕೆಯೂ ಇಲ್ಲ. ನಾನು ಸಿಖ್ ಸಮುದಾಯದೊಂದಿಗೆ ಮಾತ್ರವಲ್ಲ, ಇಡೀ ದೇಶದೊಂದಿಗೆ ಕ್ಷಮೆಯಾಚಿಸು ತ್ತೇನೆ. ಯಾಕೆಂದರೆ, 1984ರಲ್ಲಿ ಏನು ನಡೆದಿದೆಯೋ ಅದು ನಮ್ಮ ಸಂವಿಧಾನದ ಮೌಲ್ಯಗಳಿಗೆ ವಿರುದ್ಧ” – ಹಾಗಂತ ಪ್ರಧಾನಿ ಮನ್‍ಮೋಹನ್ ಸಿಂಗ್ ಅವರು ಪಾರ್ಲಿಮೆಂಟ್‍ನಲ್ಲಿ ಘೋಷಿಸಿದ್ದರು. ಅದು ಕಾಂಗ್ರೆಸ್ ಪಕ್ಷದ ಅಧಿಕೃತ ನಿಲುವೂ ಆಗಿತ್ತು.
2. 2012ರಲ್ಲಿ ಅಮೇರಿಕದ ವಾಲ್ ಸ್ಟ್ರೀಟ್ ಜರ್ನಲ್‍ನ ಪತ್ರಕರ್ತರೋರ್ವರು ಗುಜರಾತ್‍ನ ಮುಖ್ಯ ಮಂತ್ರಿ ನರೇಂದ್ರ ಮೋದಿಯವರ ಸಂದರ್ಶನ ನಡೆಸಿ ದ್ದರು. 2002ರ ಗುಜರಾತ್ ಹತ್ಯಾಕಾಂಡಕ್ಕೆ ಕ್ಷಮೆ ಯಾಚಿಸುತ್ತೀರಾ ಎಂದವರು ಪ್ರಶ್ನಿಸಿದ್ದರು. ಆದರೆ ಮೋದಿ ನಿರಾಕರಿಸಿದ್ದರು. ಮಾತ್ರವಲ್ಲ, 2013ರಲ್ಲಿ ರಾಯಟರ್ಸ್ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ‘ಗುಜರಾತ್ ಹತ್ಯಾಕಾಂಡದ ಸಂತ್ರಸ್ತರನ್ನು ಕಾರಿನಡಿಗೆ ಬೀಳುವ ನಾಯಿ ಮರಿಗೆ’ ಹೋಲಿಸಿದ್ದರು.
ಈಗ ಒಬ್ಬರು ಮಾಜಿ ಮತ್ತು ಇನ್ನೊಬ್ಬರು ಹಾಲಿ ಪ್ರಧಾನಿಗಳಾಗಿದ್ದಾರೆ. ಮಾಜಿ ಪ್ರಧಾನಿ ಮನ್‍ಮೋಹನ್ ಸಿಂಗ್‍ರು ಈಗ ಪಾರ್ಲಿಮೆಂಟ್‍ನಲ್ಲಿ ಹಾಲಿ ಪ್ರಧಾನಿ ನರೇಂದ್ರ ಮೋದಿಯವರಿಂದ ಕ್ಪಮೆಯಾಚನೆಯನ್ನು ಆಗ್ರಹಿಸುತ್ತಿದ್ದಾರೆ. ಗುಜರಾತ್ ಚುನಾವಣೆಯ ವೇಳೆ ಪ್ರಧಾನಿ ನರೇಂದ್ರ ಮೋದಿ ಯವರು – ಮನ್‍ಮೋಹನ್ ಸಿಂಗ್, ಮಾಜಿ ಉಪರಾಷ್ಟ್ರಪತಿ ಹಾಮಿದ್ ಅನ್ಸಾರಿ, ನಿವೃತ್ತ ಸೇನಾ ಮುಖ್ಯಸ್ಥರನ್ನು ಪಾಕ್ ಏಜೆಂಟ್ ಎಂದು ಕರೆದಿದ್ದರು. ಪಾಕ್ ಜೊತೆ ಸೇರಿ ನನ್ನ ಹತ್ಯೆಗೆ ಇವರು ಸಂಚು ಹೂಡಿದ್ದಾರೆ ಎಂದು ಆರೋಪಿಸಿದ್ದರು. ಈಗ ಚುನಾವಣೆ ಮುಗಿದಿದೆ. ಆದರೆ ಈ ದೇಶದ ಪ್ರಧಾನಿ ಯನ್ನೇ ಹತ್ಯೆಗೈಯಲು ಸಂಚು ರೂಪಿಸಿದವರ ವಿರುದ್ಧ ನರೇಂದ್ರ ಮೋದಿಯವರು ಈ ವರೆಗೂ ಕೇಸು ದಾಖಲಿಸಿಲ್ಲ ಅಥವಾ ಆರೋಪಕ್ಕೆ ಪೂರಕವಾದ ದಾಖಲೆಯನ್ನೂ ಬಿಡುಗಡೆಗೊಳಿಸಿಲ್ಲ. ಇಷ್ಟೊಂದು ಗಂಭೀರ ಪ್ರಕರಣದಲ್ಲಿ ಮೋದಿಯವರು ಮೌನ ವಾಗಿರುವುದರ ಅರ್ಥವೇನು? ಅವರು ತಪ್ಪಾಗಿ ಹಾಗೆ ಹೇಳಿ ದರೇ? ಹೌದು ಎಂದಾದರೆ ಅವರೇಕೆ P್ಷÀಮೆ ಯಾಚಿಸುವ ಸೌಜನ್ಯ ತೋರುತ್ತಿಲ್ಲ ಅಥವಾ ಅದೊಂದು ಚುನಾವಣಾ ತಂತ್ರವೇ? ಹಾಗಾದರೆ 2002ರ ಹತ್ಯಾಕಾಂಡವೂ ಚುನಾವಣಾ ತಂತ್ರದ ಭಾಗವಾಗಿತ್ತೇ?
ಅಷ್ಟಕ್ಕೂ, ಕ್ಷಮೆ ಯಾಚನೆಯಿಂದ ಸಂತ್ರಸ್ತರಿಗೆ ನ್ಯಾಯ ಸಿಗುವುದಿಲ್ಲ ಎಂಬುದು ಎಲ್ಲರಿಗೂ ಗೊತ್ತು. ಸತ್ತವರನ್ನು ಮರಳಿ ಬದುಕಿಸಲು ಸಾಧ್ಯವಿಲ್ಲದ, ಅಂಗ ಊನಗೊಂಡವರನ್ನು ಮೊದಲಿ ನಂತಾಗಿಸದ ಮತ್ತು ಅನಾಥ ಮಕ್ಕಳಿಗೆ ತಮ್ಮವರನ್ನು ಮರಳಿಸಲಾಗದಷ್ಟು ದುರ್ಬಲವಾದುದು – ಕ್ಷಮೆ. ಆದರೆ ಅಂಥದ್ದೊಂದು  ಕ್ಷಮೆ ಸಂತ್ರಸ್ತರ ಮನಸ್ಸಿಗೆ ಒಂದಿಷ್ಟು ಸಾಂತ್ವನವನ್ನು ಕೊಡುತ್ತದೆ. ಕ್ಷಮೆ ಕೋರುವವನ ಬಗ್ಗೆ ಸಮಾಜದ ಮನಸ್ಸು ತುಸುವಾದರೂ ಮೃದುವಾಗುತ್ತದೆ. ‘ನನ್ನನ್ನು ಕ್ಷಮಿಸಿ’ ಅನ್ನುವ ಮೂಲಕ ಆತನೊಳಗೆ ಪಶ್ಚಾತ್ತಾಪಭಾವ ಮೂಡುತ್ತದೆ. ಇಲ್ಲದಿದ್ದರೆ 1984ರ ಸಿಕ್ಖ್ ಹತ್ಯಾಕಾಂಡಕ್ಕೆ ಎರಡು ಶತಮಾನಗಳ ಬಳಿಕ ಮನ್‍ಮೋಹನ್ ಸಿಂಗ್ ಕ್ಷಮೆ ಯಾಚಿಸಬೇಕಾದ ಅಗತ್ಯವೇ ಇರಲಿಲ್ಲ. 2002ರ ಗುಜರಾತ್ ಹತ್ಯಾಕಾಂಡವನ್ನು ‘ಕ್ರಿಯೆಗೆ ಪ್ರತಿಕ್ರಿಯೆ’ ಎಂದು ನರೇಂದ್ರ ಮೋದಿಯವರು ಸಮರ್ಥನೆಯನ್ನು, ‘ದೊಡ್ಡ ಮರ ಉರುಳುವಾಗ ಸುತ್ತಲಿನ ಭೂಮಿ ಅಲುಗಾಡುವುದು ಸಹಜ’ ಎಂಬ ರಾಜೀವ್ ಗಾಂಧಿಯವರ ತಕ್ಷಣದ ಸಮರ್ಥನೆಯೊಂದಿಗೆ ಜೋಡಿಸಿ ಸಿಕ್ಖ್ ನರಮೇಧವನ್ನು ನಿರ್ಲಕ್ಷಿಸಬಹುದಿತ್ತು. ಆದರೆ ಮನ್‍ಮೋಹನ್ ಸಿಂಗ್‍ರೊಳಗಿನ ಸಜ್ಜನಿಕೆಯು ಕಾಂಗ್ರೆಸ್ ಪಕ್ಷದ ಮೇಲೆಯೇ ಪ್ರಭಾವ ಬೀರಿತು. ಕ್ಷಮೆ ಯಾಚನೆಯಿಂದ ಮನ್‍ಮೋಹನ್‍ರದ್ದಾಗಲಿ, ಕಾಂಗ್ರೆಸ್ ಪಕ್ಷದ್ದಾಗಲಿ ವರ್ಚಸ್ಸಿಗೆ ಧಕ್ಕೆಯೇನೂ ಆಗಲಿಲ್ಲ. ನಿಜವಾಗಿ, ಕ್ಷಮೆಯಾಚನೆ ಯಿಂದ ಯಾರೂ ಸಣ್ಣವರಾಗುವುದಿಲ್ಲ. ಕಳೆದ ನವೆಂಬರ್ 28ರಂದು ಕೆನಡದ ಪ್ರಧಾನಿ ಜಸ್ಟಿನ್ ಟ್ರುಡೇವ್‍ರು ತನ್ನ ದೇಶದ ಐಉಃಖಿ ಸಮುದಾಯದೊಂದಿಗೆ ಕ್ಷಮೆ ಯಾಚಿಸಿದರು. ಸರಕಾರಿ ಪ್ರಾಯೋಜಿತ ಪೀಡನೆ ಮತ್ತು ದೌರ್ಜನ್ಯಕ್ಕಾಗಿ ತಮ್ಮನ್ನು ಕ್ಷಮಿಸಬೇಕೆಂದು ಕೋರಿಕೊಂಡರು. ಇದಕ್ಕಿಂತ ಮೊದಲು ಇದೇ ಟ್ರುಡೇವ್ ಅವರು, ಸಿಕ್ಖ್ ಮತ್ತು ಇತರ ಪ್ರಯಾಣಿಕರಿಗೆ ಕೆನಡ ಪ್ರವೇಶಕ್ಕೆ ನಿರಾಕರಿಸಲಾದ 1914ರ ಕುಖ್ಯಾತ ಕೊಮಗತ ಮರು ಘಟನೆಗೆ ಕ್ಷಮೆ ಯಾಚಿಸಿದ್ದರು. ಇತ್ತೀಚೆಗಷ್ಟೇ ನ್ಯೂಝಿಲ್ಯಾಂಡ್ ಸರಕಾರವು ಮಾವೊಲಿ ಬುಡಕಟ್ಟಿನ ಮೇಲೆ ವಸಾಹತುಶಾಹಿ ವ್ಯವಸ್ಥೆ ಎಸಗಿದ ಅನ್ಯಾಯಕ್ಕಾಗಿ ಕ್ಷಮೆ ಯಾಚಿಸಿತು. ಮಾತ್ರವಲ್ಲ, ಸಂತ್ರಸ್ತ ಪೀಳಿಗೆಗೆ ಪರಿಹಾರವನ್ನು ಕೊಡುವ ಅಭೂತಪೂರ್ವ ತೀರ್ಮಾನವನ್ನೂ ಪ್ರಕಟಿಸಿತು. ಬ್ರಿಟನ್ನಿನ ಮಾಜಿ ಪ್ರಧಾನಿ ಟೋನಿ ಬ್ಲೇರ್‍ರು 1840ರ ಐರಿಶ್ ಪೊಟಾಟೋ ಪ್ರಕರಣಕ್ಕೆ ಸಂಬಂಧಿಸಿ ಆ ಸಮುದಾಯದ ಕ್ಷಮೆ ಯಾಚಿಸಿದ್ದರು. ದುರಂತ ಏನೆಂದರೆ, ಭಾರತೀಯ ರಾಜಕಾರಣಿಗಳು ತಪ್ಪನ್ನೇ ಎಸಗದ ಮಹಾ ಸಂಭಾವಿತರಂತೆ ವರ್ತಿಸುತ್ತಾರೆ. ಕಣ್ಣೆದುರೇ ತಪ್ಪು ಸಾಬೀತಾದರೂ ಪಶ್ಚಾತ್ತಾಪರಹಿತ ಭಾವ ಪ್ರದರ್ಶಿಸುತ್ತಾರೆ. ವಾರಗಳ ಹಿಂದೆ ಹೊನ್ನಾವರ ಹೊತ್ತಿ ಉರಿಯಿತು. ಶಾಲಾ ಬಾಲಕಿಯ ಮೇಲೆ ಲೈಂಗಿಕ ಹಲ್ಲೆ ನಡೆದ ಬಗ್ಗೆ ವದಂತಿಗಳೂ ಹಬ್ಬಿದುವು. ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ತಕ್ಷಣ ಹೀಗೆ ಟ್ವೀಟ್ ಮಾಡಿದರು,
Jehadist tried to rape and murder a girl studying in 9th std near Honnavara. Why is the govt silent about this incident? Arrest those who molested and injured this girl. Where are you CM @Siddaramaiah? – “9ನೇ ಕ್ಲಾಸಿನಲ್ಲಿ ಕಲಿಯುತ್ತಿರುವ ಹೊನ್ನಾವರದ ಯುವತಿಯನ್ನು ಅತ್ಯಾಚಾರ ನಡೆಸಿ ಕೊಲೆಗೈಯಲು ಜಿಹಾದಿಗಳು ಯತ್ನಿಸಿದ್ದಾರೆ. ಯಾಕೆ ಸರಕಾರ ಈ ಘಟನೆಯ ಕುರಿತು ಮೌನವಾಗಿದೆ? ಈ ಹುಡುಗಿಯನ್ನು ಚುಡಾಯಿಸಿದ ಮತ್ತು ಗಾಯಗೊಳಿಸಿದವರನ್ನು ಬಂಧಿಸಿ. ಎಲ್ಲಿದ್ದೀರಿ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ?”
ಆದರೆ ಆ ಇಡೀ ಪ್ರಕರಣದ ಹಿಂದೆ ಗಣೇಶ್ ನಾಯ್ಕ ಎಂಬ ಯುವಕನ ಪಾತ್ರವಿದ್ದು, ಶೋಭಾರ ‘ಜಿಹಾದಿಗಳಿಗೂ’ ಆ ಪ್ರಕರಣಕ್ಕೂ ಯಾವ ಸಂಬಂಧವೂ ಇಲ್ಲ ಎಂಬುದನ್ನು ಆ ಯುವತಿ ನ್ಯಾಯಾಧೀಶರೆದುರೂ ಪೊಲೀಸರೆದುರೂ ಬಹಿ ರಂಗವಾಗಿ ಹೇಳಿಕೊಂಡಳು. ಗಣೇಶ್ ನಾಯ್ಕ ಆಕೆಯನ್ನು ನಿತ್ಯ ಚುಡಾಯಿಸುತ್ತಿದ್ದ. ಜೊತೆಗೇ ಆಕೆಗೆ ಪರೀಕ್ಷಾ ಭಯವೂ ಇತ್ತು. ನಿತ್ಯ 8 ಕಿ.ಮೀ. ಕಾಲ್ನಡಿಗೆಯಲ್ಲಿ ಶಾಲೆಗೆ ಹೋಗುತ್ತಿದ್ದ ಹುಡುಗಿಯು ಕೈಯನ್ನು ನಿಂಬೆ ಗಿಡದ ಮುಳ್ಳಿನಿಂದ ಸ್ವತಃ ಗೀರಿ ಕೊಂಡಿದ್ದಳು. ಇದನ್ನೇ ಶೋಭಾ ಕರಂದ್ಲಾಜೆ ಜಿಹಾದಿಗಳ ಕೃತ್ಯವಾಗಿ ಟ್ವೀಟ್ ಮಾಡಿದ್ದರು. ಇಷ್ಟಿದ್ದೂ, ಶೋಭಾ ಈ ವರೆಗೆ ಕ್ಷಮೆ ಯಾಚಿಸಿಲ್ಲ. ಸಂಸದೆಯಾಗಿ ಶೋಭಾ ಹೊರಿಸಿದ ಆರೋಪ ಅತ್ಯಂತ ಗಂಭೀರವಾದುದು. ಒಂದು ಸಮುದಾಯದ ಮೇಲೆ ಸಮಾಜ ತಿರುಗಿ ಬೀಳುವುದಕ್ಕೆ ಪ್ರೇರಣೆ ಕೊಡುವಂತಹದ್ದು. ಆದರೂ ಈ ಬಗ್ಗೆ ಪಶ್ಚಾತ್ತಾಪ ವ್ಯಕ್ತಪಡಿಸುವುದಿಲ್ಲವೆಂದರೆ ಅದು ಸಾರುವ ಸಂದೇಶವೇನು?
ಬಾಬರಿ ಮಸೀದಿ ಧ್ವಂಸ ಘಟನೆಯನ್ನು ಈ ದೇಶದ ನ್ಯಾಯಾಂಗವು ಕ್ರಿಮಿನಲ್ ಕೃತ್ಯವಾಗಿ ಪರಿಗಣಿಸಿದೆ. ಬಿಜೆಪಿ ನಾಯಕರಾದ ಅಡ್ವಾಣಿ, ಉಮಾಭಾರತಿ, ಜೋಶಿ ಸೇರಿದಂತೆ ಹಲವು ಪ್ರಮುಖರ ಮೇಲೆ ಕೇಸು ದಾಖಲಾಗಿದೆ. ಈ ದೇಶದ ಸಂವಿಧಾನಕ್ಕೆ ಮತ್ತು ನ್ಯಾಯಾಂಗದ ವಿಶ್ವಾಸಾರ್ಹತೆಗೆ ಧಕ್ಕೆ ತರಲಾದ ದಿನವಾಗಿ ಡಿಸೆಂಬರ್ 6ನ್ನು ಪರಿಗಣಿಸಲಾಗುತ್ತದೆ. ಅಡ್ವಾಣಿಯವರ ನಾಯಕತ್ವದಲ್ಲಿ ಹೊರಟ ರಥಯಾತ್ರೆಯಲ್ಲೇ  ಬಾಬರಿ ಮಸೀದಿ ಧ್ವಂಸಗೊಂಡಿತ್ತು. ಬಳಿಕ ಸುಮಾರು 2 ಸಾವಿರ ಮಂದಿಯ ಹತ್ಯೆಯೂ ನಡೆಯಿತು. ಆದರೂ ಬಿಜೆಪಿ ಅಧಿಕೃತವಾಗಿ ಈ ಕೃತ್ಯಕ್ಕೆ ದೇಶದ ಕ್ಷಮೆ ಯಾಚಿಸಿಲ್ಲ. ಧ್ವಂಸ ಕೃತ್ಯಕ್ಕೆ 25 ವರ್ಷಗಳು ಸಂದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದು ಹೀಗೆ,
‘ವರ್ಷಗಳಿಂದ ಒತ್ತಿಡಲಾಗಿದ್ದ ಹಿಂದೂಗಳ ಶಕ್ತಿಯನ್ನು 1992 ಈ ದಿನದಂದು (ಡಿಸೆಂಬರ್ 6) ಕರಸೇವಕರು ಪ್ರದರ್ಶಿಸಿದರು’.
ನಿಜಕ್ಕೂ ಇದು ಹೆಮ್ಮೆ ಪಡಬೇಕಾದ ಸಂಗತಿಯೇ? ನ್ಯಾಯಾಲಯಕ್ಕೆ ಸಲ್ಲಿಸಿದ ಮುಚ್ಚಳಿಕೆಯನ್ನೇ ಧಿಕ್ಕರಿಸಿ ನಡೆಸಲಾದ ಕೃತ್ಯವೊಂದು ಕ್ಷಮೆಯಾಚನೆಯ ಬದಲು ಹೆಮ್ಮೆಯ ಸಂದರ್ಭವಾಗಿ ವ್ಯಾಖ್ಯಾನಕ್ಕೆ ಒಳಗಾಗುತ್ತಿರುವುದೇಕೆ? ತಪ್ಪನ್ನು ತಪ್ಪು ಎಂದು ಒಪ್ಪಿಕೊಳ್ಳುವುದಕ್ಕೂ ತಪ್ಪನ್ನೇ ಸರಿ ಎಂದು ಸಮರ್ಥಿಸಿಕೊಳ್ಳುವುದಕ್ಕೂ ತುಂಬಾ ವ್ಯತ್ಯಾಸ ಇದೆ. ಒಂದು ಸಂಸ್ಕೃತಿಯಾದರೆ ಇನ್ನೊಂದು ವಿಕೃತಿ. ಒಂದು ಮನುಷ್ಯ ಸಹಜವಾದರೆ ಇನ್ನೊಂದು ಮನುಷ್ಯ ವಿರೋಧಿ. ಎಲ್ಲ ರಾಜಕೀಯ ಪಕ್ಷಗಳಲ್ಲೂ ಮನುಷ್ಯರೇ ಇz್ದÁರೆ. ಮನುಷ್ಯರೆಂದ ಮೇಲೆ ಸರಿ-ತಪ್ಪುಗಳು ಸಹಜ. ಆದರೆ ಬಿಜೆಪಿಯು ತಪ್ಪಾತೀತದಂತೆ ವರ್ತಿಸುತ್ತಿರುವುದೇಕೆ? ನೋಟು ಅಮಾನ್ಯೀಕರಣವು ಈ ದೇಶದ ಮೇಲೆ ಆಘಾತಕಾರಿ ಪರಿಣಾಮಗಳನ್ನು ಬೀರಿತು. ಇದರಿಂದಾಗಿ ಅಸಂಖ್ಯ ಮಂದಿ ಉದ್ಯೋಗ ಕಳಕೊಂಡರು. ಸಣ್ಣ ಕೈಗಾರಿಕೆಗಳು ಬಾಗಿಲು ಮುಚ್ಚಿದುವು. ನೂರಕ್ಕಿಂತಲೂ ಅಧಿಕ ಮಂದಿ ಬ್ಯಾಂಕ್‍ಗಳೆದುರು ಸಾವಿಗೀಡಾದರು. ಇಷ್ಟೆಲ್ಲ ಆಗಿಯೂ ಆ ಇಡೀ ಪ್ರಕ್ರಿಯೆಯಿಂದ ದೇಶಕ್ಕಾದ ಲಾಭ ಏನೇನೂ ಇಲ್ಲ ಎಂಬುದನ್ನು ಸ್ವತಃ ಆರ್‍ಬಿಐಯೇ ಅಂಕಿ-ಅಂಶವನ್ನು ಮುಂದಿಟ್ಟುಕೊಂಡು ಸ್ಪಷ್ಟಪಡಿಸಿತು. ಆದರೂ ಬಿಜೆಪಿ ಈ ದೇಶದ ಜನರಲ್ಲಿ ಕ್ಷಮೆ ಯಾಚಿಸುವ ಸೌಜನ್ಯವನ್ನೇ ತೋರಲಿಲ್ಲ. ಅದರ ಬದಲು ನೋಟು ಅಮಾನ್ಯಕ್ಕೆ ಒಂದು ವರ್ಷ ತುಂಬಿದುದನ್ನು ‘ಭ್ರಷ್ಟಾಚಾರ ವಿರೋಧಿ ದಿನ’ ವಾಗಿ ಆಚರಿಸಿತು. ನಿಜಕ್ಕೂ ನೋಟು ಅಮಾನ್ಯದಿಂದ ಭ್ರಷ್ಟಾಚಾರದ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆಯೇ? ಬೀರಿದ್ದರೆ ಅದರ ವಿವರಗಳೇನು? ನೋಟು ಅಮಾನ್ಯಕ್ಕಿಂತ ಮೊದಲು ಮತ್ತು ಆ ಬಳಿಕದ ಭ್ರಷ್ಟಾಚಾರಗಳಲ್ಲಿ ಆಗಿರುವ ಬದಲಾವಣೆಗಳೇನು.. ಇಂಥ ಯಾವ ಪ್ರಶ್ನೆಗಳಿಗೂ ಉತ್ತರವನ್ನು ನೀಡದೇ ನವೆಂಬರ್ 8ರಂದು ಸಂಭ್ರಮಿಸುವುದೆಂದರೆ, ಅದನ್ನು ಏನೆಂದು ಕರೆಯಬೇಕು?
ಬಹುಶಃ, ಭಾರತೀಯ ರಾಜಕಾರಣಿಗಳ ಪಾಲಿಗೆ ಅದರಲ್ಲೂ ಬಿಜೆಪಿಯ ಮಟ್ಟಿಗೆ ಚಿಠಿoಟogಥಿ (ಕ್ಷಮೆಯಾಚನೆ) ಎಂಬುದು ಅನ್ಯ ಪದವಾಗಿದೆ. ಅಂದಹಾಗೆ, ಒಂದು ಪಕ್ಷ ಎಷ್ಟು ಪ್ರಾಮಾಣಿಕ ಎಂಬುದನ್ನು ಆ ಪಕ್ಷ ತನ್ನದೇ ತಪ್ಪುಗಳಿಗೆ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದರ ಆಧಾರದ ಮೇಲೆ ಅಳೆಯಬಹುದು. ತಪ್ಪನ್ನು ತಪ್ಪು ಎಂದು ಒಪ್ಪದ ಪಕ್ಷ ಜನಸ್ನೇಹಿಯಾಗುವುದಕ್ಕೆ ಸಾಧ್ಯವಿಲ್ಲ. ಉತ್ತರ ಪ್ರದೇಶದ ಗೋರಖ್‍ಪುರದ ಸರಕಾರಿ ಆಸ್ಪತ್ರೆಯಲ್ಲಿ 70ಕ್ಕಿಂತ ಅಧಿಕ ಮಕ್ಕಳು ಎರಡು ದಿನಗಳೊಳಗೆ ಸಾವಿಗೀಡಾದಾಗ, “ಭಾರತದಂತಹ ದೊಡ್ಡ ದೇಶದಲ್ಲಿ ಇವೆಲ್ಲ ಸಾಮಾನ್ಯ” ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‍ಷಾ ಹೇಳಿದ್ದರು.
ಸಮರ್ಥನೆಯೊಂದೇ ರಾಜಕೀಯ ಅಲ್ಲ. ಪಶ್ಚಾತ್ತಾಪ ಮತ್ತು ಕ್ಷಮಾಯಾಚನೆಯೂ ರಾಜಕೀಯವೇ. ಇದನ್ನು ತಿರಸ್ಕರಿಸುವ ಪಕ್ಷ ಖಂಡಿತ ಜನವಿರೋಧಿ.