ಅಕ್ಷಯ್ ನಾಯಕತ್ವದಲ್ಲಿ ಆರ್ ಎಸ್ ಎಸ್ ಸಿನಿಮಾ: 2019 ರಲ್ಲಿ ಮೋದಿ ಗೆಲುವಿಗೆ ತಯಾರಿಯೇ?

0
1272

ರಾಷ್ಟ್ರೀಯ ಸ್ವಯಂ ಸೇವಕ್ ಸಂಘ್(ಆರ್ ಎಸ್ ಎಸ್) ತನ್ನ ಇತಿಹಾಸದಲ್ಲಿ ಸಿನಿಮಾದ ಮೂಲಕ ಹೊಸ ಅಧ್ಯಾಯ ರಚಿಸಲು ಮುಂದಾಗಿದೆ‌. ಈ ಚಲನ ಚಿತ್ರವು ವಿವಿಧ ಭಾಷೆಗಳಲ್ಲಿ ನಿರ್ಮಾಣಗೊಳ್ಳಲಿದ್ದು, ತುಳಸಿ ರಾಂ ನಾಯ್ಡು (ಲಹರಿ ವೇಲು) ಹಾಗೂ ಮುಂಬೈ ಮೂಲದ ರಾಜಾ ಸಿಂಗ್ ಅವರು ಸಹನಿರ್ದೇಶಕರಾಗಿದ್ದಾರೆ. ವೇಲು ತಮ್ಮದೇ ಆದ ರೆಕಾರ್ಡಿಂಗ್ ಕಂಪೆನಿಯನ್ನು ಹೊಂದಿದ್ದು ಭಾರತೀಯ ಜನತಾ ಪಕ್ಷಕ್ಕೆ ಪ್ರವೇಶಿಸುವುದರೊಂದಿಗೆ ಕರ್ನಾಟಕ ಚುನಾವಣೆಯಲ್ಲಿ ಬೆಂಗಳೂರಿನ ಚಾಮರಾಜ ಪೇಟೆಯಿಂದ ಕಣಕ್ಕೆ ಇಳಿಯಲು ಮುಂದಾಗಿದ್ದಾರೆ. ಬಾಹುಬಲಿ ಚಿತ್ರದ ಸ್ರ್ಕಿಪ್ಟ್ ರೈಟರ್ ಆದ ಕೆ.ವಿ. ವಿಜಯೇಂದ್ರ ಪ್ರಸಾದ್ ರವರು ಆರ್ ಎಸ್ ಎಸ್ ಕುರಿತು ಕಥೆ ಹೆಣೆಯಲಿದ್ದು ಇದು ಹಿಂದಿ, ಮರಾಠಿ ಹಾಗೂ ಇತರ ನಾಲ್ಕು ಭಾಷೆಗಳಲ್ಲಿ ನಿರ್ಮಾಣಗೊಳ್ಳಲಿದೆ‌. ಬಾಹುಬಲಿ ಚಿತ್ರವು ಕರ್ನಾಟಕದಲ್ಲಿ ಸಂಚಲನ ಮೂಡಿಸಿದ ನಂತರ ಆರ್ ಎಸ್ ಎಸ್ ಕುರಿತು ಚಿತ್ರ ನಿರ್ಮಿಸಲು ವೇಲು ತಮ್ಮ ಚಿತ್ತ ಹರಿಸಿದ್ದಾರೆ.  ನಿರ್ಮಾಣ ವೆಚ್ಚ 120 ಕೋಟಿ ಯಿಂದ 2೦೦ ಕೋಟಿಗಳ ವರೆಗೆ ತಲುಪಬಹುದೆಂದು ಅಂದಾಜಿಸಲಾಗಿದೆ.

ಆರ್ ಎಸ್ ಎಸ್ ನಾಯಕರಾದ ವಿ.ಡಿ ಸಾವರ್ಕರ್, ಡಾ.ಕೇಶವ್ ಬಲಿರಾಮ್ ಹೆಡ್ಗೆವರ್ ಮತ್ತು ಗೋಲ್ವಾಲ್ಕರ್ ರವರ ಹೋರಾಟವನ್ನು ಈ ಚಿತ್ರದಲ್ಲಿ ಬಿಂಬಿಸಲು ತೀರ್ಮಾಬಿಸಲಾಗಿದೆ.  ಇದು ದೇಶದಾದ್ಯಂತ ಇರುವ 5 ಮಿಲಿಯನ್ ಆರ್ ಎಸ್ ಎಸ್ ಕಾರ್ಯಕರ್ತರನ್ನು ಒಳಗೊಂಡು 5೦,೦೦೦ ಶಾಖೆಗಳ ಕುರಿತು ತಿಳಿಸಲಿದೆ. ಎಲ್ಲವೂ ಸರಿಯಾಗಿ ನಡೆದಲ್ಲಿ ಚಿತ್ರವು ಜುಲೈನಲ್ಲಿ ತೆರೆ ಕಾಣುವುದು ಎಂದು ವೇಲು ತಿಳಿಸಿದ್ದಾರೆ. ಅಕ್ಷಯ್ ಕುಮಾರ್ ಈ ಚಿತ್ರದಲ್ಲಿ ಮುಖ್ಯಪಾತ್ರಧಾರಿಯಾಗಿ ನಟಿಸಲಿದ್ದಾರೆ ಎಂದು ಸಿನೆಮಾದ ಮೂಲಗಳು ತಿಳಿಸಿದ್ದು‌ ; ಬಿಜೆಪಿಯು   ಈ ಚಿತ್ರದಲ್ಲಿ ಶಿವಸೇನೆಯ ಬಾಳಾ ಠಾಕ್ರೆಯವರ ಪಾತ್ರಪರಿಚಯದ ಕುರಿತು ಆಸಕ್ತಿ ತೋರಿದೆ. ಎಂಬುದಾಗಿ ಮೂಲಗಳು ತಿಳಿಸಿವೆ.