ಆರ್ಟ್ ಆಫ್ ಲಿವಿಂಗ್ : ಶ್ರೀ ಶ್ರೀ ರವಿಶಂಕರ್‍ರನ್ನು ಅಣಕಿಸಿದ ಟ್ವಿಟರ್ ಜಗತ್ತು

0
1620

ನಮ್ಮ ಪ್ರತಿನಿಧಿಯಿಂದ

ಅಯೋದ್ಯೆಯ ಬಾಬರಿ ಮಸೀದಿ ವಿವಾದವನ್ನು ತಕ್ಷಣ ಪರಿಹರಿಸದಿದ್ದರೆ ಭಾರತ ಮತ್ತೊಂದು ಸಿರಿಯಾ ಆಗಿ ಮಾರ್ಪಡುವುದು ಎಂಬ ರವಿಶಂಕರ್ ಗುರೂಜಿಯವರ ವಿವಾದಿತ ಹೇಳಿಕೆಯ ಕುರಿತು ದಿ ವೈರ್” ನ ಅರ್ಫಾ ಖಾನ್ ಅವರು ನಡೆಸಿದ ಸಂದರ್ಶನದಲ್ಲಿ ಪ್ರಶ್ನಿಸಿದಾಗ ಕೋಪಗೊಂಡು ಅರ್ಧದಲ್ಲಿಯೇ ಸಂದರ್ಶನ ಮೊಟಕುಗೊಳಿಸಿ ಎದ್ದು ಹೋದ ಘಟನೆಯು ವಿವಾದವಾಗಿದೆ. ಸಂದರ್ಶನದ ಮಧ್ಯೆ ಅಯೋದ್ಯಾ ಸಮಸ್ಯೆ ನ್ಯಾಯಾಲಯದ ಹೊರಗೆ ಪರಿಹರಿಸಲು ಶ್ರಮಿಸುವುದನ್ನು ಬಯಸುವ ತಾವು ಆರೆಸ್ಸೆಸ್ ನಿಲುವನ್ನು ಪ್ರತಿಪಾಸುತ್ತಿದ್ದೀರಲ್ಲವೇ” ಎಂಬ ಪ್ರಶ್ನೆಯು ಅವರನ್ನು ಕೆರಳಿಸಿತ್ತು. ಈ ಪ್ರಶ್ನೆ ಕೇಳಿ ಪೂರ್ತಿಗೊಳ್ಳುವ ಮೊದಲೇ ಕೋಪ ಪ್ರಕಟಿಸಿದರು. ಕೂಡಲೇ ಅವರ ಅನುಯಾಯಿಗಳು ಮಧ್ಯೆ ಪ್ರವೇಶಿಸಿ ಕ್ಯಾಮರಾ ಆಫ್ ಮಾಡಿದರು. “ನೀವು ಅವರಿಗೆ ಗೌರವ ನೀಡಿ ಮಾತನಾಡಬೇಕು. ಧನಾತ್ಮಕ ವಿಚಾರಗಳ ಕುರಿತು ಮಾತ್ರ ಪ್ರಶ್ನೆ ಕೇಳಿ ” ಎಂದು ಅವರ ಭಕ್ತೆ ಮಹಿಳೆಯೊಬ್ಬರು ಹೇಳಿದರು. ಪುನಃ ಸಂದರ್ಶನ ಪ್ರಾರಂಭವಾದಾಗ ಸಂದರ್ಶಕನು” ಆರ್‍ಎಸ್‍ಎಸ್, ಬಿಜೆಪಿ ಜೊತೆ ನೀವು ಸಹಮತ ಹೊಂದಿದ್ದೀರಾ ಎಂದು ಕೇಳಿದರು, ಅಷ್ಟರಲ್ಲಿ ರವಿಶಂಕರ್ ಸಂದರ್ಶನವನ್ನು ಕೊನೆಗೊಳಿಸಿದರು.
ಅಯೋದ್ಯಾ ವಿವಾದದ ಕುರಿತು ರವಿಶಂಕರ್ ಆಡಿದ ಪ್ರಚೋದನಾತ್ಮಕ ಹೇಳಿಕೆಗಳು ಅನೆಕ ವಿವಾದಗಳಿಗೆ ಕಾರಣವಾಗಿತ್ತು. ಕೋಮುಭಾವನೆ ಕೆರಳಿಸುವ ಕಾರಣದಿಂದ ಅವರ ವಿರುದ್ದ ಪೃಕರಣಗಳನನ್ನು ದಾಖಲಿಸಲಾಗಿದೆ.
” ಉತ್ತಮ ರೀತಿಯಲ್ಲಿ ಅಯೋದ್ಯೆಯ ಕುರಿತ ಹಕ್ಕು ಪ್ರತಿಪಾದನೆಯಿಂದ ಮುಸ್ಲಿಮರು ಹಿಂದೆ ಸರಿಯಬೇಕು. ಅಯೋಧ್ಯೆಯೆಂಬುದು ನಿಮಗೆ ಪ್ರಾರ್ಥಿಸಲು ಇರುವ ಸ್ಥಳವಲ್ಲ ಎಂಬುದನ್ನು ಅರಿತು ವ್ವವಹರಿಸಿರಿ. ಇಲ್ಲದಿದ್ದರೆ ಭಾರತವು ಮತ್ತೊಂದು ಸಿರಿಯಾ ಆಗುವುದು” ಎಂದು ಇಂಡಿಯಾ ಟುಡೇಗೆ ನೀಡಿದ ಸಂದರ್ಶನದಲ್ಲಿ ಶ್ರೀ ಶ್ರೀ ರವಿಶಂಕರ್ ಹೇಳಿದ್ದರು.
ದಿ ವೈರ್” ನ ಅರ್ಫಾ ಖಾನ್ ಅವರು ನಡೆಸಿದ ಸಂದರ್ಶನ
ಸಂಪೂರ್ಣ ವಿಡಿಯೋ