ಇದು ನಿಜವಾದ ಬಿಜೆಪಿ: ಆದರೆ ಬ್ರೇಕಿಂಗ್ ನ್ಯೂಸ್ ಮಾಧ್ಯಮಗಳು ಇದನ್ನು ಎಂದೂ ಹೇಳಲ್ಲ..

2
23387

ನ್ಯೂಸ್ ಡೆಸ್ಕ್

21 ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿದೆ ಎಂದು ಮಾಧ್ಯಮಗಳು ಆಗಾಗ್ಗೆ ಕೊಂಡಾಡುತ್ತಿರುವ ಬಿಜೆಪಿಯ ನಿಜವಾದ ಸಾಮರ್ಥ್ಯ ಏನು? ಯಾವೆಲ್ಲ ರಾಜ್ಯಗಳಲ್ಲಿ ಬಿಜೆಪಿ ಎಷ್ಟೆಷ್ಟು ಸ್ಥಾನಗಳನ್ನು ಪಡೆದಿವೆ ಎಂದು ಪರಿಶೀಲಿಸಿದರೆ ಅದರ ಬಗ್ಗೆ ಜನರ ಅಭಿಪ್ರಾಯ ಏನು ಅನ್ನುವುದು ಗೊತ್ತಾಗುತ್ತದೆ. ಕಾಂಗ್ರೆಸ್ ಜೆಡಿಎಸ್ ಮೈತ್ರಿಯನ್ನು ಟೀಕಿಸುತ್ತಿರುವ ಬಿಜೆಪಿಯು ಇಂಥದ್ದೇ ಮೈತ್ರಿ ಮೂಲಕ ಹೆಚ್ಚಿನ ರಾಜ್ಯಗಳಲ್ಲಿ ಅಧಿಕಾರದಲ್ಲಿದೆಯೇ ಹೊರತು ಜನಾದೇಶದ ಮೂಲಕವಲ್ಲ. ಸಣ್ಣ ಅಂಕಿಅಂಶ ಹೀಗಿದೆ.

ಸಿಕ್ಕಿಂ, ಮೀಜೊರಾಮ್ ಮತ್ತು ತಮಿಳುನಾಡಿನಲ್ಲಿ ಬಿಜೆಪಿಗೆ ಒಬ್ಬನೇ ಒಬ್ಬ ಶಾಸಕನಿಲ್ಲ.
ಆಂಧ್ರಪ್ರದೇಶ: ಒಟ್ಟು ಸ್ಥಾನಗಳು 294. ಬಿಜೆಪಿ 9. ಕೇರಳ: 140/1 . ಪಂಜಾಬ್: 117/3. ಪಶ್ಚಿಮ ಬಂಗಾಳ: 294/3. ತೆಲಂಗಾಣ: 119/5. ದೆಹಲಿ: 70/3. ಒಡಿಸ್ಸಾ: 147/10. ನಾಗಲಾಂಡ್: 60/12. ಮೇಘಾಲಯ: 60/2. ಬಿಹಾರ್: 243/53. ಜಮ್ಮು ಕಾಶ್ಮೀರ್: 87/25. ಗೋವಾ: 40/13.
ನೀವೇ ಹೇಳಿ ಬಿಜೆಪಿ ಎಷ್ಟು ಪವಿತ್ರ? ಎಷ್ಟು ಜನಪ್ರಿಯ? ಕೇಂದ್ರದಲ್ಲಿ ಅಧಿಕಾರದಲ್ಲಿ ಇಲ್ಲದೆ ಇರುತ್ತಿದ್ದರೆ, ಇವತ್ತು ಬಿಜೆಪಿ ಹೆಚ್ಚಿನ ರಾಜ್ಯಗಳಲ್ಲಿ ವಿರೋಧಪಕ್ಷವಾಗಿರುತ್ತಿತ್ತೇ ಹೊರತು ಆಡಳಿತ ಪಕ್ಶವಾಗಿರುತ್ತಿರಲಿಲ್ಲ. ಅಧಿಕಾರ ಬಲ ಮತ್ತು ಮಾಧ್ಯಮ ಬಲವೇ ಬಿಜೆಪಿಯನ್ನು ಇವತ್ತು ಜನಪ್ರಿಯ ಪಕ್ಷವೆಂಬಂತೆ ಬಿಂಬಿಸಲು ಕಾರಣವಾಗಿದೆ.

2 COMMENTS

  1. ಚುನಾವಣಾ ಪೂರ್ವ ಒಪ್ಪಂದಗಳ ಪ್ರಕಾರ ದೇಶದಲ್ಲಿ ಬಿಜೆಪಿ ಅಧಿಕಾರ ಮಾಡುತ್ತಿದೆ, ಈ ಬಗ್ಗೆ ಸನ್ಮಾರ್ಗ ಪತ್ರಿಕೆಯ ಸಂಪಾಧಕರು ಸರಿಯಾದ ಮಾಹಿತಿ ಪಡೆಯಬೇಕು.

  2. ನನಗೆ ತಿಳಿದಿರುವ ಮಟ್ಟಿಗೆ ಗೋವಾ, ಬಿಹಾರ ಕಾಶ್ಮೀರ ದಲ್ಲಿ ಬಿಜೆಪಿಯ ಬದ್ದ ವೈರಿಯಾಗಿ ಚುಣಾವಣೆ ಎದುರಿಸಿದ ಪಾರ್ಟಿ ಯೊಂದಿಗೆ ಬಿಜೆಪಿ ಸರಕಾರದಲ್ಲಿದೆ .

Comments are closed.