ಇಸ್ರೇಲ್ ನ  ಕ್ರೌರ್ಯದ ಪ್ರತೀಕವಾದ ಲೈಲಾ 

0
1354

ನ್ಯೂಸ್ ಡೆಸ್ಕ್

ಜೆರುಸಲೇಮ್ ನಲ್ಲಿ ಅಮೇರಿಕ ತನ್ನ ರಾಯಭಾರ ಕಚೇರಿಯನ್ನು ಆರಂಭಿಸಿದ್ದನ್ನು ವಿರೋಧಿಸಿ  ಫೆಲೆಸ್ತೀನಿಯರು ನಡೆಸುತ್ತಿರುವ ಪ್ರತಿಭಟನೆಯ ಮೇಲೆ ಇಸ್ರೇಲಿ ಸೇನೆ ನಡೆಸಿರುವ ದೌರ್ಜನ್ಯ ಎಷ್ಟು ಹಿಂಸಾತ್ಮಕವಾದುದು ಅನ್ನುವುದಕ್ಕೆ ಎಂಟು ತಿಂಗಳ ಫೆಲೆಸ್ತೀನಿ ಹಸುಳೆ ಲೈಲಾ ಅನ್ವರುಲ್ ಗಂದೂರ್ ಸಾಕ್ಷಿಯಾಗಿದ್ದಾಳೆ. ಕಳೆದ ಮುಂಜಾನೆ ಗಾಜಾದ ಮೇಲೆ ಇಸ್ರೇಲ್ ನಡೆಸಿದ ಟಿಯರ್ ಗ್ಯಾಸ್ ದಾಳಿಯಲ್ಲಿ ಈ ಹೆಣ್ಮಗು ಅಸುನೀಗಿದ್ದು, ಈ ಸಾವು ಜಾಗತಿಕವಾಗಿ ಆಕ್ರೋಶಕ್ಕೆ ಕಾರಣವಾಗಿದೆ. 1948 ಮೇ15 ರಂದು ಸಾವಿರಾರು ಫೆಲೆಸ್ತೀನಿಯರನ್ನು ಅವರ ಮನೆಗಳಿಂದ ಇಸ್ರೇಲ್ ಓಡಿಸಿತ್ತು  ಮತ್ತು ಆ ಕರಾಳ ಘಟನೆಗೆ 70 ವರ್ಷಗಳು ತುಂಬಿದ ಸ್ಮರಣೆಯಲ್ಲಿ ಫೆಲೆಸ್ತೀನಿಯರು ಕಳೆದ ಮಾರ್ಚ್ ನಿಂದಲೂ ಪ್ರತಿಭಟನಾ ಕಾರ್ಯಕ್ರಮಗಳನ್ನೂ ಹಮ್ಮಿಕೊಂಡಿದ್ದಾರೆ. ಇದರ ವಿರುದ್ಧ  ಇಸ್ರೇಲ್ ನಡೆಸಿರುವ ದಾಳಿಗೆ 108 ಕ್ಕಿಂತಲೂ ಅಧಿಕ ಫೆಲೆಸ್ತೀನಿಯರು  ಸಾವಿಗೀಡಾಗಿದ್ದು 12 ಸಾವಿರಕ್ಕಿಂತಲೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಇದೀಗ ಲೈಲಾ ಇಸ್ರೇಲ್ ಕ್ರೌರ್ಯದ ಪ್ರತೀಕವಾಗಿ ಗುರುತಿಸಿಕೊಂಡಿದ್ದು, ಜಾಗತಿಕವಾಗಿ ಇಸ್ರೇಲ್ ಖಂಡನೆಗೆ ಒಳಗಾಗಿದೆ.