ಉತ್ತರಾಖಂಡ ಸರಕಾರಿ ಶಾಲೆಗಳಲ್ಲಿ ಮಧ್ಯಾಹ್ನದ ಊಟಕ್ಕೆ ಮೊದಲು ಭೋಜನ ಮಂತ್ರ ..

0
1254

ಉತ್ತರಾಖಂಡ್ ಶಾಲಾ ಶಿಕ್ಷಣ ಇಲಾಖೆಯು 18,000ಕ್ಕೂ ಹೆಚ್ಚು ಶಾಲೆಯ ಸುಮಾರು 12 ಲಕ್ಷ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟದ ಮೊದಲು ಭೋಜನ ಮಂತ್ರವನ್ನು ಪಠಿಸಲು ಸೂಚನೆ ನೀಡಿದೆ. ಎಲ್ಲಾ ಶಾಲೆಗಳಲ್ಲಿ ಅಡುಗೆಮನೆಗಳ ಗೋಡೆಗಳ ಮೇಲೆ ಸಂಸ್ಕೃತ ಮಂತ್ರವನ್ನು ಬರೆಸಬೇಕಾಗಿ ಆದೇಶ ಹೊರಡಿಸಿದೆ.
ಜುಲೈ ಮೊದಲ ವಾರದಲ್ಲಿ, ಶಾಲಾ ಶಿಕ್ಷಣ ಇಲಾಖೆಯ ಸಭೆಯಲ್ಲಿ ಉತ್ತರಾಖಂಡ್ ಶಾಲಾ ಶಿಕ್ಷಣ ಸಚಿವ ಅರವಿಂದ್ ಪಾಂಡೆ ಮತ್ತು ಸಭೆಯಲ್ಲಿನ ಅಧಿಕಾರಿಗಳು ಬೋಜನ ಮಂತ್ರದ ದೈನಂದಿನ ಪಠಣವನ್ನು ಶಾಲಾ ಪಠ್ಯಕ್ರಮದಲ್ಲಿ ಅಳವಡಿಸಬೇಕೆಂದು ಸೂಚಿಸಿದರು.
ಶಾಲಾ ಶಿಕ್ಷಣ ನಿರ್ದೇಶಕ ಆರ್. ಕೆ. ಕುನ್ವರ್ ಅವರು, “ಮಧ್ಯಾಹ್ನದ ಊಟವನ್ನು ತಿನ್ನುವ ಮೊದಲು ಬೋಜನ ಮಂತ್ರವನ್ನು ಪಠಿಸಬೇಕೆಂದು ಶಾಲೆಯ ಶಿಕ್ಷಣ ಸಚಿವ ಮತ್ತು ಶಾಲಾ ಶಿಕ್ಷಣ ಇಲಾಖೆಯ ಹಲವು ಅಧಿಕಾರಿಗಳು ಸಲಹೆ ನೀಡಿದ್ದಾರೆ. ಸಂಬಂಧಪಟ್ಟ ಕಚೇರಿಗಳಿಗೆ ಅದರ ಸೂಚನೆಗಳನ್ನು ಕಳುಹಿಸಲು ನಾವು ಯೋಜಿಸುತ್ತಿದ್ದೇವೆ. ಮಂತ್ರ ಪಠಣ ಅಥವಾ ಅಡುಗೆ ಮನೆ ಗೋಡೆಗಳಲ್ಲಿ ವರ್ಣಚಿತ್ರ ಕಡ್ಡಾಯವಾಗಿರುವುದಿಲ್ಲ. ಶಾಲೆಯ ಅಧಿಕಾರಿಗಳು ಮತ್ತು ವಿದ್ಯಾರ್ಥಿಗಳು ಸೇರಿ ಇದನ್ನು ತೀರ್ಮಾನಿಸಲಿದ್ದಾರೆ ”
ಭೋಜನ್ ಮಂತ್ರ ಏನು ಎಂದು ಕುನ್ವಾರ್ ಸೂಚಿಸಲಿಲ್ಲ. ಆದಾಗ್ಯೂ, ವಿಮರ್ಶೆ ಸಭೆಯಲ್ಲಿ ಹಲವಾರು ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದರು, ದಿನನಿತ್ಯದ ಪಠ್ಯಕ್ರಮದಲ್ಲಿ ಯೋಗ ಅಭ್ಯಾಸವನ್ನು ಸೇರಿಸಿಕೊಳ್ಳುವುದು ಸೇರಿದಂತೆ, “ಶ್ರೇಷ್ಠ ಭಾರತೀಯ ನಾಯಕರ” ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡುತ್ತಾ, ಶಾಲೆಯ ದಿನವನ್ನು ಗಾಯತ್ರಿ ಮಂತ್ರ ಅಥವಾ ಸರಸ್ವತಿ ವಂದನದೊಂದಿಗೆ ಪ್ರಾರಂಭಿಸುತ್ತದೆ ಎಂದರು.
ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ಉತ್ತರಾಖಂಡ್ ಮುಖ್ಯಮಂತ್ರಿ ಹರೀಶ್ ರಾವತ್ ಹೇಳುತ್ತಾರೆ , “ಉತ್ತರಖಂಡದ ಸರ್ಕಾರಿ ಶಾಲೆಗಳು ಕೆಟ್ಟ ಸ್ಥಿತಿಯಲ್ಲಿವೆ. ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟವನ್ನು ಕೇಂದ್ರೀಕರಿಸುವ ಅಗತ್ಯವಿದ. ಶಿಕ್ಷಣದಲ್ಲಿ ಮಹತ್ವದ ವಿಷಯಗಳಿಗೆ ಪ್ರಾಮುಖ್ಯತೆ ನೀಡುವ ಬದಲು ಬಿ.ಜೆ.ಪಿ. ಯು ಮಂತ್ರ ಹಾಗೂ ವಂದೇ ಮಾತರಂ ಹಾಡಿಸುವ ಮೂಲಕ ವಿವಾದಗಳನ್ನು ಸೃಷ್ಟಿಸುತ್ತಿವೆ ”
ಉತ್ತರಖಾಂಡ ಬಿಜೆಪಿ ಅಧ್ಯಕ್ಷ ಅಜಯ್ ಭಟ್ ಹೇಳಿದರು, “ಅನೇಕ ಶಾಲೆಗಳು ದಿನಾಲು ಬೆಳಿಗ್ಗೆ ಸರಸ್ವತಿ ವಂದನೆ (ಸರಸ್ವತಿ ದೇವತೆಗಾಗಿ ಪ್ರಾರ್ಥನೆ) ಯಿಂದ ಪ್ರಾರಂಭವಾಗುತ್ತದೆ. ಭೋಜನ್ ಮಂತ್ರವನ್ನು ಯಾವುದೇ ಶಾಲೆಯಲ್ಲಿ ಪಠಿಸಿಲ್ಲ. ಈ ಉಪಕ್ರಮದ ಮೂಲಕ, ವಿದ್ಯಾರ್ಥಿಗಳು ತಮ್ಮ ಸಂಸ್ಕೃತಿ ಮತ್ತು ಸಂಪ್ರದಾಯದೊಂದಿಗೆ ಪರಿಚಿತರಾಗಲು ನಾವು ಪ್ರಯತ್ನಿಸುತ್ತಿದ್ದೇವೆ. ಇದು ಏಕೆ ಆಕ್ಷೇಪಾರ್ಹ ಎಂದು ನನಗೆ ಅರ್ಥವಾಗುತ್ತಿಲ್ಲ . ”

ಮೂಲ: ದ ಇಂಡಿಯನ್ ಎಕ್ಸ್ ಪ್ರೆಸ್