ಉರಿಯುತ್ತಿರುವ ಪೆಟ್ರೋಲ್-ಡೀಸೆಲ್: ಎಲ್ಲಿದ್ದಾರೆ ಪ್ರತಿಭಟನಾಕಾರರು?

0
1165

ಪೆಟ್ರೋಲಿಯಂ ಬೆಲೆ ಹೆಚ್ಚಳ ವ್ಯಾಪಕ ಆತಂಕ ಸೃಷ್ಟಿಸಿದೆ. ಕುಟುಂಬದ ಬಜೆಟ್, ವ್ಯಾಪಾರ ವಹಿವಾಟು ಎಲ್ಲವೂ ಸಂದಿಗ್ಧ ಪರಿಸ್ಥಿತಿಯಲ್ಲಿ ಸಿಲುಕಿದೆ. ಪೆಟ್ರೋಲ್ ನಿಯಂತ್ರಣವನ್ನು ತೈಲ ಕಂಪೆನಿಗಳಿಗೆ ಬಿಟ್ಟುಕೊಟ್ಟ ನಂತರವಂತೂ ಈ ಶೋಷಣೆ ಮುಗಿಲು ಮುಟ್ಟಿದೆ. ತೈಲ ವಿತರಕ ಕಂಪೆನಿಗಳು ಮಾತ್ರವಲ್ಲ ಕೇಂದ್ರ ಮತ್ತು ರಾಜ್ಯ ಸರಕಾರಗಳು ಕೂಡಾ ಜನರನ್ನು ದೋಚುವಲ್ಲಿ ಪರಸ್ಪರ ಸಮರ್ಥನೆಗಿಳಿದಿವೆ. ಜನರು ಸಂಕಷ್ಟದಲ್ಲಿದ್ದಾರೆ.

ಆದರೆ ಈ ಬಗ್ಗೆ ಮಾತಾಡಿದರೆ ಕಿವಿ ಕೇಳದವರರಿರುವ ದಿನಗಳು ಇವು. ಕೇಂದ್ರ ಸರಕಾರ ಜಿಎಸ್ಟಿ ತಂದು ಇಡೀ ದೇಶದಲ್ಲಿ ಒಂದೇ ತೆರಿಗೆ ಜಾರಿಗೆ ಪ್ರಯತ್ನಿಸಿತು. ಆದರೆ ಅದು ಕೂಡಾ ಜನಜೀವನಕ್ಕೆ ಎರವಾಯಿತು. ಜಿಎಸ್ಟಿ ವ್ಯಾಪ್ತಿಯಿಂದ ಪೆಟ್ರೋಲ್ ಡಿಸೇಲ್ ಇತ್ಯಾದಿ ಇಂಧನಗಳನ್ನು ಹೊರಗಿಟ್ಟು ಜನ ರಿಗೆ ಸಿಗಬೇಕಾದ ಪ್ರಯೋಜನವನ್ನು ತಪ್ಪಿಸಲಾಯಿತು. ಹಾಗಿದ್ದರೆ ನೀವು ಬಯಸಿದ್ದು ಏನೂ ಆಗಬ ಹುದು. ದೇಶದ ಸಾರ್ವಜನಿಕರು ತಮ್ಮತಾಳಕ್ಕೆ ತಕ್ಕಂತೆ ಕುಣಿಯಬೇಕೆನ್ನುವ ನೀತಿ ಮೋದಿ ಸರಕಾರದ್ದು. ಬೃಹತ್ ಉದ್ಯಮಿಗಳಿಂದ ಕಿಸೆ ತುಂಬಿಸಿಕೊಂಡು ಅಧಿಕಾರಕ್ಕೆ ಬಂದ ನಂತರ ಬ್ಯಾಂಕನ್ನು ಮುಳುಗಿಸಿ ಮಾಯಾವದ ವರೆಷ್ಟು ಮಂದಿ? ಇದನ್ನು ಭರ್ತಿಮಾಡುವುದಕ್ಕೆ ಮೋದಿ ಕಂಡುಕೊಂಡ ಹೊಸ ರೀತಿ ಪೆಟ್ರೋಲ್ ಇತ್ಯಾದಿಗಳಲ್ಲಿ ಜನರಿಂದ ಕಸಿಯುವುದು ಮತ್ತು ಬಸಿಯುವುದು ಆಗಿದೆ ಎಂದನ್ನಿಸುತ್ತಿದೆ. ಹಿಂದಿನ ಯುಪಿಎ ಮತ್ತು ಈಗಿನ ಎನ್‍ಡಿಎ ಅಲ್ಲದೇ ರಾಜ್ಯ ಸರಕಾರಗಳು ಕೂಡ ಜಿಎಸ್ಟಿ ವ್ಯಾಪ್ತಿಗೆ ಪೆಟ್ರೋಲ್ ಡೀಸೆಲ್ ತರುವುದು ಬೇಡ ಅಂತಲೇ ಹೇಳುತ್ತಿದ್ದವು. ಆಡಳಿತಗಾರರ ಇಂಥ ನೆಗೆಟಿವ್ ನೀತಿಯಿಂದ ಶ್ರೀ ಸಾಮಾನ್ಯ ಬಸವಳಿದು ಕಂಗೆಟ್ಟು ಕಂಗಾಲಾಗಿ ಹೋಗಿದ್ದಾನೆ. ಜಿಎಸ್ಟಿ ದೊಣ್ಣೆ, ನೋಟು ಬ್ಯಾನ್ ಉರುಳು ಉರುಳಿದ್ದೆಲ್ಲ ಜನಸಾಮಾನ್ಯರ ಜೀವನದ ಮೇಲೆಯೇ ಆಗಿದೆ. ಮದ್ಯವನ್ನು ಮಾರಿ ಅದರ ಲಾಭವನ್ನು ಖಜಾನೆಗೆ ಸೇರಿಸಿ ಮಧ್ಯಾಹ್ನದೂಟ ಶಾಲೆಗಳಿಗೆ ವಿತರಿಸುವುದು ಇಲ್ಲಿ ಆಳುವವರ ನೀತಿ ಆಂತಿರುವಾಗ ಯಾವಾಗ ಯಾವ ಕೊರಳಿಗೆ ಕುಣಿಕೆ ಬೀಳುವುದೊ ಎನ್ನುವುದಕ್ಕೆ ಖಾತರಿ ಖಚಿತತೆ ಏನಿಲ್ಲ.

NDAಆಡಳಿತದಲ್ಲಿ ಶೋಷಣೆಯ ವ್ಯಾಪ್ತಿ ಆಳವಾದ ಗೋರಿ ತೋಡಿದೆ. ಅದರ ಆಳ್ವಿಕೆಯ ನಾಲ್ಕೇ ವರ್ಷಗಳಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ದಾಖಲೆ ಬರೆಯಿತು. 2014ರ ಮೇಯಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ 106.85 ರೂಪಾಯಿ. ಈಗ 2018ರಲ್ಲಿ 63.80 ಡಾಲರ್‍ಗೆ ಇಳಿಕೆಯಾಗಿದೆ. ಆದರೆ ಯುಪಿಎ ಆಳ್ವಿಕೆಯ ಕಾಲವನ್ನೂ ಮೀರಿ ಕಚ್ಚಾ ತೈಲ ಬ್ಯಾರೆಲ್‍ಗೆ ಅಂದಿಗಿಂತ ಇವತ್ತು ಅರ್ಧದಷ್ಟು ದರ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇರುವಾಗ ಇಂದು ಡೀಸೆಲ್ ಪೆಟ್ರೋಲ್ ದರ ಹೆಚ್ಚುತ್ತಲೇ ಇದೆ. ಜನ ಮಾತಾಡುತ್ತಿಲ್ಲ. ದಿನಾಲೂ ಹತ್ತೈದು. ಇಪ್ಪತ್ತೈದು ಪೈಸೆ ಹೆಚ್ಚಿಸಿದರೆ ಅವರಿಗೆ ಗೊತ್ತೇ ಆಗುವುದಿಲ್ಲ

ಪಿಪಿಎಸಿ ವೆಬ್ ಸೈಟ್ ತೋರಿಸುವ ದಾಖಲೆ ಇಂತಿದೆ:

ನೀವು ನೆರೆದೇಶಗಳಿಗೆ ನೋಡಿದರೆ ಅಲ್ಲಿ ಡೀಸೆಲ್ ಪೆಟ್ರೋಲ್ ಬೆಲೆ ತುಂಬ ಕಡಿಮೆ ಇದೆ. ಕಚ್ಚಾ ತೈಲಗಳಿಗೆ ಬೆಲೆ ಕಡಿಮೆ ಆದ ಲಾಭವನ್ನು ಆ ದೇಶಗಳು ಜನರಿಗೆ ಹಂಚಿಕೊಟ್ಟಿವೆ. ಸರ್ವೇ ಜನಸುಖಿನೋಭವಂತು ಎಂದು ಲೋಕಕ್ಕೆ ಬುದ್ಧಿವಾದ ಹೇಳುವ ಭಾರತದಲ್ಲಿ ಆಡ ಳಿಗಾರರು ರಕ್ತ ಹೀರುವ ತಿಗಣೆಗಳಾಗುತ್ತಿದ್ದಾರೆ. ಅವರಿಗೆ ಮದ್ದು ಕೂಡಾ ನಾಟುವುದಿಲ್ಲ. ಈ ದೇಶದಲ್ಲಿ ಇತ್ತಿತ್ತಲಾಗಿ ಎಷ್ಟು ಪ್ರತಿಭಟನೆ ಆಗುತ್ತಿವೆ? ಇಂದಿನ ಆಡಳಿತಗಾರರಿಗೆ ಕಿವಿಯೇ ಇಲ್ಲ. ಮಹಾ ಮನುಷ್ಯ ಅಣ್ಣಾ ಹಝಾರೆ ಲೋಕಪಾಲ್ ಜಾರಿ ಆಗ್ರಹಿಸಿ ರಾಮಲೀಲಾ ಮೈದಾನದಲ್ಲಿ ಮತ್ತೊಮ್ಮೆ ಕುಳಿತರು. ಮೂಸುವವರೇ ಇರಲಿಲ್ಲ. ಸುಖಾ ಸುಮ್ಮನೆ ಬಂದ ದಾರಿಗೆ ಸುಂಕವಿಲ್ಲ ಎನ್ನುವಂತೆ ಅವರು ತನ್ನ ಊರನ್ನು ಸೇರಿದರು. ಇಂತಹವರ ಪ್ರತಿಭಟನೆಯನ್ನು ಕೂಡಾ ನಿರರ್ಥಕಗೊಳಿಸಲಾಯಿತೊ ಅಥವಾ ಅವರ ಹಿಂದಿನ ಪ್ರತಿಭಟನೆಗೆ ಇಂದಿನ ಆಳುವ ಬಿಜೆಪಿ ಆರೆಸ್ಸೆಸ್ಸ್ ಬೆಂಬಲವಿತ್ತೋ? ಯುಪಿಎ ಅವಧಿಯಲ್ಲಿ ಪ್ರತಿಭಟನೆ ಮಾಡಿದಾಗ ಅವರನ್ನು ಬೆಂಬಲಿಸಿದವರಿಗೆ ಅಪಾರ್ಥ ಆಗಬಾರದೆಂದು ಎನ್‍ಡಿಎ ಅವಧಿಯಲ್ಲಿ ಅವರು ರಾಮಲೀಲ ಮೈದಾನದಲ್ಲಿ ಕೂತೇಳುವ ನಾಟಕ ಮಾಡಿದರೋ ಯಾರಿಗೆ ಗೊತ್ತು? ಅಂತೂ ಅಡಳಿತ ಯಂತ್ರಕ್ಕೆ ಕಿವಿ ಕೇಳಲಿಲ್ಲ.

ಹೊಸದಿಲ್ಲಿಯ ರಾಮ್ ಲೀಲಾ ಮೈದಾನದಲ್ಲಿ ಅಣ್ಣಾ ಹಜಾರೆಯವರು ಮಾರ್ಚ್ 23ರಂದು ನಡೆಸಿದ ಪ್ರತಿಭಟನೆಯ ಫೋಟೋ.( ಚಿತ್ರ ಕ್ರಪೆ ಬಿ.ಬಿ. ಯಾದವ್, ಡಿಎನ್ಎ)

ನ್ಯಾಯಾ ಯಾವುದನ್ನೂ ನೋಡದೆ ಹಣ ಮಾಡುವ ಸುಲಭ ದಾರಿಯನ್ನು ತೈಲ ಕಂಪೆನಿ ಸರಕಾರಗಳಿಗೆ ಮಾಡಿಕೊಟ್ಟಿದ್ದಾರೆ. ಸೀಮೆ ಎಣ್ಣೆ ಮತ್ತು ಅಡಿಗೆ ಅನಿಲಕ್ಕೆ ಮುಂದಿನ ವರ್ಷಕ್ಕಾಗುವಾಗ ಸಬ್ಸಿಡಿ 24,933 ಕೋಟಿ ರೂಪಾಯಿಗೆ ಹೆಚ್ಚಳವಾಗುತ್ತದೆ. ಆದ್ದರಿಂದ ತೈಲ ದರ ನಿಯಂತ್ರಿಸಲು ಸಾಧ್ಯವಿಲ್ಲ ಎಂಬುದು ಕೇಂದ್ರ ಸರಕಾರದ ವಾದವಾಗಿದೆ. ಮುಂಬೈಯಲ್ಲಿ ಪೆಟ್ರೋಲಿಗೆ 81.7 ರೂಪಾಯಿ. ದಿಲ್ಲಿಯಲ್ಲಿ 74.02 ರೂಪಾಯಿ.. ಇನ್ನು ರಾಜ್ಯಗಳ ತೆರಿಗೆ ಹೆಚ್ಚು ಕಮ್ಮಿ ನೋಡಿ ಪೆಟ್ರೋಲಿಗೆ ಅತ್ತಿತ್ತ ಸ್ವಲ್ಪ ಹೆಚ್ಚು ಕಡಿಮೆ ಬೆಲೆ ಇರುತ್ತದೆ. ಆದರೆ ಕೇಂದ್ರ ಸರಕಾರ ಬೆಲೆ ಕಮ್ಮಿ ಮಾಡುವ ವಿಷಯದಲ್ಲಿ ಜಪ್ಪೆನ್ನುತ್ತಿಲ್ಲ. ಹೀಗಿರುವಾಗ ಯಾಕೆ ಡೀಸೆಲ್, ಪೆಟ್ರೋಲ್ ಬೆಲೆಯನ್ನು ಜಿಎಸ್‍ಟಿಗೆ ತಂದಿಟ್ಟು ಇಡೀ ದೇಶದಲ್ಲಿ ಒಂದೆ ಬೆಲೆ ಮಾಡಬಾರದು? ಬೆಲೆಯಂತು ಕೇಂದ್ರವೂ ಕಡಿಮೆ ಮಾಡುವುದಿಲ್ಲ. ರಾಜ್ಯವೂ ಮಾಡುವುದಿಲ್ಲ. ಇಂತಿರುವಾಗ ಜಿಎಸ್ಟಿಯೇ ಲೇಸಲ್ಲವೆ? ಬೇರೆಲ್ಲದ್ದಕ್ಕೂ ಎಲ್ಲ ಕಡೆ ಒಂದೇ ರೇಟು ಮಾಡುತ್ತೇವೆ ಎಂದು ಮೋಸ ಮಾಡಿದ ಸರಕಾರದ ಪೆಟ್ರೋಲ್, ಡೀಸೆಲ್ ಬೆಲೆ ಮುಂದಿಟ್ಟು ಸರಕಾರದ ಕಿವಿ ಹಿಂಡುವ ಕೆಲಸಕ್ಕೆ ಶ್ರೀಸಾಮಾನ್ಯ ಮುಂದಾಗಬೇಕು.

9- ಏಪ್ರಿಲ್ ಭಾರತದ ವಿವಿಧ ಪ್ರದೇಶಗಳ ಪೆಟ್ರೋಲ್ನ ಬೆಲೆ

City

PetrolPrice

Delhi 73.37
Kolkata 76.06
Mumbai 81.23
Chennai 76.11
Faridabad 74.13
Gurgaon 73.9
Noida 74.88
Ghaziabad 74.77
Agartala 69.22
Aizwal 69.36
Ambala 73.5
Bangalore 74.53
Bhopal 79.17
Bhubhaneswar 72.21
Chandigarh 70.56
Dehradun 75.34
Gandhinagar 72.96
Gangtok 76.35
Guwahati 75.42
Hyderabad 77.7
Imphal 71.51
Itanagar 69.42
Jaipur 76.34
Jammu 75.17
Jullunder 78.49
Kohima 71.86
Lucknow 74.84
Panjim 67.59
Patna 77.87
Pondicherry 72.2
Port Blair 63.34
Raipur 73.83
Ranchi 74
Shillong 72.8
Shimla 73.52
Srinagar 77.77
Trivandrum 77.3
Silvasa 71.36
Daman 71.29