ಏರುತ್ತಿರುವ ತೈಲ ಬೆಲೆ: ಮಹಾ ಮೌನದಲ್ಲಿ ಜನತೆ

0
1152
All the effects are created with gradient mesh, blending and transparent effects. Open the file only in transparency supported software.

ನ್ಯೂಸ್ ಡೆಸ್ಕ್

ಪೆಟ್ರೋಲ್ ಬೆಲೆ ದಿನಂದಿನ ದಿನಕ್ಕೆ ಹೆಚ್ಚುತ್ತಾ ಇದೆ. ಆದರೂ ಮೋದಿ ಸರಕಾರದ ಗುಣಗಾನದಲ್ಲಿ ಜನರು ಇದನ್ನೆಲ್ಲ ಗಮನಿಸುವ ಸ್ಥಿತಿಯಲ್ಲಿಲ್ಲ . ಹೀಗೆ ಪೆಟ್ರೋಲ್-ಡೀಸೆಲ್ ದರ ಹೆಚ್ಚುತ್ತಾ ಹೋದರೆ ಈ ಭಾರತ ಉಳಿದೀತಾ ಎನ್ನುವ ಪ್ರಶ್ನೆ ಮುಖ್ಯವಾಗುತ್ತದೆ. ಕಳೆದ ತಿಂಗಳು ಬಿಜೆಪಿಯ 38ನೇ ವರ್ಷದ ಕಾರ್ಯಕ್ರಮದಲ್ಲಿ ಮುಂಬೈಯಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ- ‘ನೋಡುತ್ತಾ ಇರಿ ಆದಷ್ಟು ಬೇಗನೆ ಈ ಪೆಟ್ರೋಲ್ ಡೀಸೆಲ್ ಬೆಲೆ ಜಿಎಸ್ಟಿ ಅಡಿಗೆ ತರುತ್ತೇವೆ’ ಎಂದು ಘೋಷಿಸಿದ್ದರು. ಕರ್ನಾಟಕದಲ್ಲಿ ಬಿಜೆಪಿ ಅಧಿಕಾರ ಕಸಿಯಲು ಸಾಧ್ಯವಾಗದ ಕೋಪವೊ ಗೊತ್ತಿಲ್ಲ, ಕರ್ನಾಟಕ ಚುನಾವಣೆ ನಂತರ ಪೆಟ್ರೋಲ್-ಡೀಸೆಲ್ ಬೆಲೆ ಒಂದೇ ಸವನೆ ಹೆಚ್ಚುತ್ತಿದೆ. ಮೋದಿಜಿ ಮಾಸ್ಕೊ ಚೀನ ¸ಸುತ್ತಾಡು ತ್ತಿದ್ದಾರೆ. ದೇಶಕ್ಕೆ ಒಳ್ಳೆಯದಾಗಲು ಒಳ್ಳೆಯ ಪ್ರವಾಸ ಅವರದ್ದಾಗಿರ ಬಹುದು. ಆದರೆ ಪೆಟ್ರೋಲು-ಡೀಸೆಲ್ ಈ ದೇಶದ ಜನಸಮಾನ್ಯರ ಕೊರಳು ಹಿಂಡುತ್ತಿದೆ.

ದಕ್ಷಿಣ ಏಶ್ಯಾದಲ್ಲಿ ಪೆಟ್ರೋಲ್ ಡೀಸೆಲ್‍ಗೆ ಅತಿ ಹೆಚ್ಚು ಹಣ ಕೀಳುವ ದೇಶ ಭಾರತ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದರದಲ್ಲಾದ ಹೆಚ್ಚಳ, ವಿವಿಧ ತೈಲೋತ್ಪಾದಕ ದೇಶಗಳು ತೈಲೋತ್ಪಾದನೆ ಕಡಿಮೆ ಮಾಡಿದ್ದು, ಡಾಲರ್ ಮುಂದೆ ರೂಪಾಯಿ ಮೌಲ್ಯ ಕುಸಿದದ್ದು ಮುಂತಾದುವು ತೈಲದರ ಹೆಚ್ಚಳಕ್ಕೆ ಕಾರಣ ಎಂದು ಸೂಚಿಸುವುದು ರೂಢಿ. ಆದರೆ ಈ ಎಲ್ಲ ಕುಸಿತಕ್ಕೆ ಸಹಸ್ರ ಕೋಟಿ ನುಂಗಿ ಓಡಿ ಹೋದ ನೀರವ್ ಮೋದಿ, ಮಲ್ಯಾಗಳು ಕಾರಣವಲ್ಲವೇ.
ಹಾಗಿದ್ದೂ ತನ್ನ ವೈಫಲ್ಯಕ್ಕೆ ನೂರೊಂದು ಸಬೂಬು ಹೇಳುವ ಮೋದಿ ಆಡಳಿತವನ್ನು ಭಾರತೀಯರು ಆಸ್ವಾದಿಸಬೇಕಾಗಿದೆ ಅಥವಾ ಆ¸ ಸ್ವದಿಸಬೇಕೆಂದು ಒಂದು ವರ್ಗ ಇಲ್ಲಿ ಬಲವಂತ ಪಡಿಸುತ್ತಿದೆ. ಜನರು ಹಿಂದುತ್ವ ಆ ತತ್ವ, ಈ ತತ್ವ ಎಂದು ಬಡಿದಾಡಿಕೊಳ್ಳುವಾಗ ಇತ್ತ ಮೋದಿಗಿರಿ ತನ್ನ ಗಾದಿ ಗಟ್ಟಿ ಮಾಡಿಕೊಳ್ಳುತ್ತಿದೆ. ಕೊಳ್ಳಲಿ ಬಿಡಿ ಎನ್ನುವ ಉಡಾಫೆ, ಉದಾಸೀನ ದೇಶದ ಜನಸಾಮಾನ್ಯರಿಗಿಲ್ಲವಾಗಿದ್ದರೆ ಈಗ ಬೀದಿಯಲ್ಲಿ ಪೆಟ್ರೋಲ್-ಡೀಸೆಲ್ ಬೆಲೆಗಳು ಮಾತಾಡುತ್ತಿದ್ದವು, ಗುಡುಗುತ್ತಿದ್ದವು. ಈಗ ಹಾಗೆ ಆಗಿಯೇ ಇಲ್ಲ. ದನಿಯಡಗಿದ ಕಾಂಗ್ರೆಸಿನವರು ಹೋ ಎನ್ನುವುದನ್ನು ಬಿಟ್ಟರೆ ಜನರ ಹಿತರಕ್ಷಕರೆಂದು ಫೋಸು ಕೊಡುವ ಸಂಘಟನೆಗಳೂ ಇನ್ನೂ ಮೌನ ಮುರಿದೇ ಇಲ್ಲ. ಹೀಗೇಕೆ, ಮೋದಿ ಭೀತಿ, ಸಂಘಪರಿವಾರ ಭಯ ಇರಬಹುದೇ. ಹೀಗೆಲ್ಲ ಯಾಕೆ ಕೇಳಬೇಕೆಂದರೆ 2013ರಲ್ಲಿ ಇದಕ್ಕೆ ಸಮಾನವಾದ ಅವಸ್ಥೆ ಇದ್ದಾಗ ಇಷ್ಟು ರೇಟು ಇತ್ತೇ ಎಂದು ನಾವು ಯೋಚಿಸಬೇಕು. ಅಂದು ಕಚ್ಚಾ ತೈಲಕ್ಕೆ 124 ಡಾಲರ್ ಆಗಿತ್ತು. ಆದರೆ ಪೆಟ್ರೋಲ್‍ಗೆ 75 ರೂಪಾಯಿ ದಾಟಿಯೇ ಇಲ್ಲ. ಈಗ ಮೋದಿ ಎಲ್ಲವನ್ನೂ ಐತಿಹಾಸಿಕ ಎಂದು ಕರೆಯುತ್ತಾರೆ. ಆದ್ದರಿಂದ ಐತಿಹಾಸಿಕವಾಗಿ ಮೋದಿ ಪೆಟ್ರೋಲನ್ನು ನೆನಪಿಟ್ಟುಕೊಳ್ಳುವಂತೆ ಮಾಡಿದ್ದಾರೆ. ಯುಪಿಎ ಸರಕಾರದ ತಪ್ಪು ಹೆಜ್ಜೆ ಇಷ್ಟೆಲ್ಲ ಹಾನಿ ತಂದೊಡ್ಡಿದೆ ಎಂಬುದನ್ನು ಹೇಳದೇ ವಿಧಿಯಿಲ್ಲ. ಅವರು ತೈಲ ಕಾರ್ಪೊರೇಟ್ ಕಂಪೆನಿಗಳಿಗೆ ಬೆಲೆಯ ನಿಯಂತ್ರಣ ಬಿಟ್ಟುಕೊಟ್ಟರು. ಈ ಪಾಪ ವೆಸಗಿದ ಬೆನ್ನಿಗೆ ಅಂದರೆ ಆನಂತರ 2014ರಲ್ಲಿ ಕಾರ್ಪೊರೇಟ್ ಮಿತ್ರ ಮೋದಿ ಸರಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ಆಡಳಿತಗಾರರು ಮತ್ತು ಕಾರ್ಪೊರೇಟ್ ದೊರೆಗಳ ಅಪವಿತ್ರ ಮೈತ್ರಿ ರಾರಾಜಿಸುತ್ತಿದೆ. ಪೆಟ್ರೋಲ್ ಕಂಪೆನಿಗಳು ಮತ್ತು ಸರಕಾರ ಲಾಭ ಕೊಳ್ಳೆಹೊಡೆಯುತ್ತಿದೆ. ಜನ¸ ಸಮಾನ್ಯರು ನರಳುತ್ತಿದ್ದಾರೆ. ಕಚ್ಚಾ ತೈಲಕ್ಕೆ ಬ್ಯಾರಲ್‍ಗೆ 40 ರೂಪಾಯಿ ಇದ್ದಾಗಲೂ ಮೋದಿ ಸರಕಾರ ಪೆಟ್ರೋಲ್- ಡೀಸೆಲ್ ಬೆಲೆ ಇಳಿಸಲು ಮನಸ್ಸೇ ಮಾಡಿರಲಿಲ್ಲ. ತೈಲ ಕಂಪೆನಿಗಳ ಲಾಸು ತುಂಬಿಸಲು ಹೊರಟು ಜನಸಾಮಾನ್ಯರನ್ನು ಅವು ಕೊಳ್ಳೆ ಹೊಡೆದವು. ಈಗ ಜನ ಯಾಕೆ ಸುಮ್ಮನಿದ್ದಾರೆ? ತಮಗಾಗುವ ಅನ್ಯಾಯವನ್ನು ಮೌನವಾಗಿ ಯಾಕೆ ಸಹಿಸುತ್ತಾರೆ.

ಮೋದಿ ಸರಕಾರದ ಎಷ್ಟು ಯೋಜ ನೆಗಳು ಜನರಿಗೆ ಲಾಭ ತಂದಿವೆ? ಅವರು ನೋಟು ಬ್ಯಾನ್ ಮಾಡಿದರು, ಆಧಾರ್ ಕಡ್ಡಾಯ ಅಂದರು, ಕಪ್ಪು ಹಣ ತಂದೇ ಬಿಟ್ಟೆ ಅಂದರು, ಹೀಗೆ ಏನೆಲ್ಲ ಹೇಳಲಿಲ್ಲಾ ಪ್ರಧಾನಿ ಮೋದೀ. ಆದರೆ ಯಾವು ದಾದರೂ ಆಯಿತೇ. ಆದರೂ ಇದನ್ನು ಯಾರೂ ಪ್ರಶ್ನಿಸುವುದಿಲ್ಲ. ಪ್ರಶ್ನೆ ಕೇಳುವ ಪ್ರಕಾಶ್ ರೈ ಕೂಡಾ ಈಗ ಕರ್ನಾಟಕ ಚುನಾವಣೆಯ ನಂತರ ಮೌನವಾಗಿ ದ್ದಾರೆ. ರೈಗೆ ಪ್ರಶ್ನೆ ಕೇಳುವ ಎಲ್ಲ ಹಕ್ಕುಗಳನ್ನು ಬಿಟ್ಟುಕೊಟ್ಟಿದ್ದೇವೆ ಅನ್ನುವ ರೀತಿಯಲ್ಲಿ ಈ ದೇಶದ ಮಹಾಜನತೆ ಮೌನವಾಗಿದೆ. ಇದನ್ನು ಹೇಡಿತನದ ಮೌನವೆಂದಲ್ಲದೇ ವಿಶ್ಲೇಷಿಸುವ ಪದ ಇನ್ಯಾವುದಿದೆ?
ಕಾರ್ಪೊರೇಟ್ ಕಂಪೆನಿಗಳು ಮೋದಿ ಸರಕಾರಾವಧಿಯಲ್ಲಿ ಜನರನ್ನು ಕೊಳ್ಳೆಹೊಡೆಯುವುದನ್ನು ಬಾಣದಷ್ಟೇ ವೇಗದಲ್ಲಿ ಮಾಡಿಕೊಂಡರು. ಮೊದಲು ಎರಡು ವಾರಕ್ಕೊಂದು ಸಲ ತೈಲಕ್ಕೆ ಹೊಸ ರೇಟು ಪಿಕ್ಸ್ ಆಗುತ್ತಿದ್ದವು. ಕಳೆದ ವರ್ಷ ಪ್ರತಿದಿನ ಹೆಚ್ಚಿಸುವ ಚಾಳಿ ಆರಂಬಿಸಲಾಯಿತು. ಇದಲ್ಲದೆ ಎಕ್ಸೈಸ್ ತೆರಿಗೆ ಕ್ರಮಾತೀತ ಹೆಚ್ಚಳ. ಮೋದಿ ಅಧಿಕಾರಕ್ಕೆ ಬಂದ ಮೇಲೆ ಒಂಬತ್ತು ಬಾರಿ ಎಕ್ಸೈಸ್ ಡ್ಯೂಟಿ ಹೆಚ್ಚಳ ವಾಗಿದೆ. ಕಳೆದ ಅಕ್ಟೋಬರ್‍ನಲ್ಲಿ ಒತ್ತಡಕ್ಕೆ ಮಣಿದು ಎಕ್ಸೈಸ್ ತೆರಿಗೆಯಲ್ಲಿ ಎರಡು ರೂಪಾಯಿ ಕಡಿತ ಗೊಳಿಸಿ ದರು. 2013ರಲ್ಲಿ ಪೆಟ್ರೋಲಿನ ಮೂಲ ಬೆಲೆಗೆ ಕೇಂದ್ರ ತೆರಿಗೆ ಶೇ. 9.30ರಷ್ಟಿ ದ್ದರೆ, ಐದು ವರ್ಷದಲ್ಲಿ ಈಗ ಶೇ. 105ರಷ್ಟು ಹೆಚ್ಚಿದೆ. ಸಬ್‍ಕಾ ಸಾತ್, ಸಬ್‍ಕಾ ವಿಕಾಸ್ ನಾಖಾವೂಂಗಾ ನಾಖಾನೆ ದೂಂಗಾ ಹೀಗೆ ನಿಜಕ್ಕೂ ಕೇಂದ್ರ ಸರಕಾರದ ನಾಲ್ಕನೆ ವರ್ಷ ಆಚರಿಸುವ ಈ ಹೊತ್ತಿನಲ್ಲಿ ಮೋದಿ ಯೇ ಸ್ವಯಂ ಘೋಷಿಸಿಕೊಂಡಿ ರುವ ಐತಿಹಾಸಿಕ ತೀರ್ಮಾನದಿಂದ ಜನರು ಖಂಡಿತವಾಗಿಯೂ ಬಸವಳಿ ದಿದ್ದಾರೆ. ಆದರೆ ಅವರು ಮಾತಾಡು ತ್ತಿಲ್ಲ. ಪ್ರತಿಭಟಿಸುತ್ತಿಲ್ಲ. ಯಾವುದೊ ಅವ್ಯಕ್ತ ಹೆದರಿಕೆ ಜನರಲ್ಲಿ ಆವರಿಸಿದೆ. ಬಹುಶಃ ಮೋದಿ ಬೆಂಬಲಿಗರ ಕುರಿತ ಭೀತಿ ಅದು ಎನ್ನಬಹುದು. ಈ ಎಲ್ಲ ಭೀತಿಯನ್ನು ಕೊಡವಿ ಎದ್ದು ಹೋರಾಟಕ್ಕಿಳಿಯಬೇಕು. ಅಭಿ ವೃದ್ಧಿ ಬರೇ ಬಾಯಿ ಬಡುಕುತನವಲ್ಲ. ಸಮಾಜದಲ್ಲಿ ಅದು ಗೋಚರಿಸಬೇಕು. ಪ್ರಜಾಪ್ರಭುತ್ವ ಎನ್ನುವುದಕ್ಕೆ ಅರ್ಥ ಬರುವುದು ಆಗ. ಪ್ರಶ್ನೆ ಇರುವುದೇ ಇಲ್ಲಿ. ನಮ್ಮಲ್ಲಿ ಪ್ರಜಾಪ್ರಭುತ್ವ ಇದೆಯೇ. ಭಿನ್ನ ಧ್ವನಿಗಳಿಗೆ ಅವಕಾಶ ಇದೆಯೇ? ಸರಕಾರದ ವಿರುದ್ಧ ಮಾತಾಡಿದರೆ ಕೊನೆಯ ಪರಿಣಾಮ ಏನು?
ಇರಲಿ, ಪ್ರಧಾನಿ ಮೋದಿ ಅಧಿ ಕಾರಕ್ಕೆ ಬಂದಂದಿನಿಂದ ದೊಡ್ಡ ದೊಡ್ಡ ಘೋಷಣೆಗಳಿಗೆ ಜನ ಮರುಳಾಗಿದ್ದಾ ರೆಯೇ ಹೊರತು ಅವರು ತಾವು ನಿರಂತರ ಶೋಷಿಸಲ್ಪಡುತ್ತಿದ್ದೇವೆ ಎನ್ನು ವುದನ್ನು ಅರ್ಥ ಮಾಡಿಕೊಂಡಿಲ್ಲ. ಇದು ದುರಂತದೆಡೆಗೆ ಮುಖ ಮಾಡಿದ ಜನರ ಮನಸ್ಥಿತಿ. ಒಂದು ಜನವಿಭಾಗದ ದುಃಸ್ಥಿತಿ. ತತ್ವ ಮಾತಾಡುತ್ತಿದ್ದಾರೆ. ಅದರ ಮುಂದೆ ಬೇರೆಲ್ಲವೂ ನಗಣ್ಯ. ಮನುಷ್ಯನೇ ಬದುಕಿ ಉಳಿ ಯದಷ್ಟು ಹಣದುಬ್ಬರವಾದರೆ, ಬೆಲೆಯೇರಿಕೆ ಯಾದರೆ ಯಾವ ತತ್ವಕ್ಕೆ ಇಲ್ಲಿ ಉಳಿಗಾಲವಿದೆಯೋ ಗೊತ್ತಿಲ್ಲ.

ಮುಂಬೈಯಲ್ಲಿ ಬಿಜೆಪಿಯ 38ನೆ ವರ್ಷಾಚರಣೆಯಲ್ಲಿ ಅಮಿತ್ ಶಾ ಹೇಳಿದ ಪೆಟ್ರೋಲ್-ಡೀಸೆಲ್‍ನ್ನು ಜಿಎಸ್ಟಿ ಯಡಿಗೆ ತರುವ ವಿಚಾರವನ್ನು ಅಮಿತ್‍ಶಾ ರಲ್ಲೇ ಬಡಪಾಯಿ ಪತ್ರಕರ್ತ ರೊಬ್ಬರು ಕೇಳಿದಾಗ ಯಡಿಯೂರಪ್ಪರ ಪ್ರಮಾಣ ವಚನ, ರಾಜೀನಾಮೆಯ ಕುರಿತು ವಿವರಿಸುತ್ತಿದ್ದ ಶಾ ಅಮಿತ ಕೋಪದಿಂದ ಕೆಂಡಾಮಂಡಲವಾಗಿದ್ದರು. ಈ ಕೆಂಡಾ ಮಂಡಲ ಕೋಪ ತಾಪಗಳು ನಿಜಕ್ಕೂ ಜನರನ್ನು ತುಟಿ ಬಿಚ್ಚದಂತೆ ಮಾಡಿ ದೆಯೇ ಎಂದು ಪ್ರಜ್ಞಾವಂತರೆಲ್ಲರೂ ಯೋಚಿಸಿ ನೋಡ ಬೇಕು. ಒಂದು ವೇಳೆ ಇದ್ದರೂ ಇರ ಬಹುದೇನೋ ಎಂದು ನಮಗೆ ಅನಿಸುವುದಿದ್ದರೆ, ನಾವೇ ನಮ್ಮ ಬದುಕಿಗೆ ಗುಂಡಿ ತೋಡಿದ ಜನತೆ ಯಾಗಿ ಇತಿಹಾಸ ಸೇರುವ ದಿನ ದೂರ ವಿಲ್ಲ ಎಂಬುದು ಕೂಡಾ ನಮಗೆ ಹೊಳೆಯಬೇಕಾಗಿದೆ.