ಔಲಾ ಅಲ್ ಕರ್ಜಾವಿ ದಂಪತಿಯನ್ನು ಬಿಡುಗಡೆಗೊಳಿಸಿ: ಈಜಿಪ್ಟ್ ಗೆ ವಿಶ್ವ ಸಂಸ್ಥೆ ಆಗ್ರಹ

0
1032

ಪ್ರಸಿದ್ಧ ವಿದ್ವಾಂಸ ಯೂಸುಫುಲ್ ಕರ್ಜಾವಿಯವರ ಮಗಳು ಔಲಾ ಅಲ್ ಕರ್ಜಾವಿ ಮತ್ತು ಅವರ ಪತಿ ಹಸಾಂ ಖಲಫ್ ರನ್ನು ಬಿಡುಗಡೆಗೊಳಿಸುವಂತೆ ವಿಶ್ವ ಸಂಸ್ಥೆಯ ಮಾನವ ಹಕ್ಕು ಗಳ ಕಚೇರಿಯು ಈಜಿಪ್ಟನ್ನು ಒತ್ತಾಯಿಸಿದೆ.
ಯಾವ ಆರೋಪವನ್ನೂ ಹೊರಿಸದೆ ಇವರಿಬ್ಬರನ್ನು ಬಂಧಿಸಿ ಬೇರೆ ಬೇರೆ ಜೈಲಲ್ಲಿಟ್ಟಿರುವುದನ್ನು ಪ್ರಶ್ನಿಸಿರುವ ವಿಶ್ವ ಸಂಸ್ಥೆಯ ಮಾನವಹಕ್ಕುಗಳ ಕಚೇರಿಯ ವಕ್ತಾರರಾದ Liz Throssell ಅವರು, ಬಂಧಿತರ ದೈಹಿಕ ಮತ್ತು ಮಾನಸಿಕ ಆರೋಗ್ಯವೂ ಕಳವಳಕಾರಿಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಔಲಾ ಅಲ್ ಕರ್ಜಾವಿ ಮತ್ತು ಅವರ ಪತಿ ಹಸಾಂ ಖಲಫ್ ಅವರನ್ನು ಕಳೆದ ವರ್ಷದ ಜೂನ್ ಮೂವತ್ತರಂದು ಈಜಿಪ್ಟ್ ಸರಕಾರವು ಬಂದಿಸಿತ್ತು ಮತ್ತು ಮುಸ್ಲಿಂ ಬ್ರದರ್ ಹುಡ್ ನೊಂದಿಗೆ ಅವರಿಗೆ ಸಂಬಂಧವಿದೆ ಎಂಬ ಕಾರಣವನ್ನು ಕೊಟ್ಟಿತ್ತು. ಆದರೆ ಅವರ ಕುಟುಂಬವು ಈ ಆರೋಪವನ್ನು ನಿರಾಕರಿಸಿತ್ತು. ಅಲ್ಲದೆ, ಕಳೆದ ವರ್ಷದ ಸೆಪ್ಟ೦ಬರ್ ನಲ್ಲಿ ಈ ಬಂಧನವನ್ನು ವಿಶ್ವ ಸಂಸ್ಥೆಯ ಗಮನಕ್ಕೆ ತರಲಾಗಿತ್ತು.