ಕರ್ನಾಟಕ ಚುನಾವಣೆ: ದೊರೆಸ್ವಾಮಿ ಬಿಚ್ಚು ಮಾತು

0
1257

ಸ್ವಾತಂತ್ರ್ಯ ಹೋರಾಟಗಾರರಾದ ಹೆಚ್. ಎಸ್. ದೊರೆಸ್ವಾಮಿಯವರು ಏಪ್ರಿಲ್ ಹತ್ತಕ್ಕೆ ಶತಾಯುಷಿಯಾಗಲಿದ್ದಾರೆ‌. ಈ ಸಂದರ್ಭದಲ್ಲಿ ಅವರೊಂದಿಗೆ ನಡೆಸಿದ ಸಂದರ್ಶನದ ಒಂದು ನೋಟ ಇಲ್ಲಿದೆ.

ಕೆ.ವಿ.ಆದಿತ್ಯ ಭಾರದ್ವಾಜ್
ಬೆಂಗಳೂರು
ಸ್ವತಂತ್ರ ಭಾರತದ ಎಲ್ಲ ಚುನಾವಣೆಗಳನ್ನು ನೀವು ಕಂಡಿದ್ದೀರಿ. ಕರ್ನಾಟಕದ 2018 ನೇ ಸಾಲಿನ ಚುನಾವಣೆಯ ಪ್ರಾಮುಖ್ಯತೆ ಏನು?
ನಾನು ಈ ಬಾರಿಯ ಚುನಾವಣೆಯನ್ನು ಮೋದಿ v/s ಕರ್ನಾಟಕ ಎಂದು ಹೇಳಲು ಬಯಸುತ್ತೇನೆ. ಒಂದು ವೇಳೆ ಬಿಜೆಪಿ ಕರ್ನಾಟಕದಲ್ಲಿ ತನ್ನ ಬೇರನ್ನು ಬಿಚ್ಚಿದರೆ ನರೇಂದ್ರ ಮೋದಿ ಸಂಪೂರ್ಣ ಸರ್ವಾಧಿಕಾರಿಯಾಗುವಲ್ಲಿ ಸಫಲರಾಗುವರು. ಪ್ರಜಾಪ್ರಭುತ್ವವು ಈಗಾಗಲೇ ಅಳಿವಿನ ಅಂಚಿಗೆ ತಲುಪಿದೆ. ಈ ಹೊಸ ಅವತಾರವನ್ನು ನಿಲ್ಲಿಸಬೇಕಿದೆ‌. ನಾಗರಿಕ ಸಮಾಜದ ಕಾರ್ಯಕರ್ತರೆಂಬ ನೆಲೆಯಲ್ಲಿ ನಾವು ಇತರೆ ಜಾತ್ಯತೀತ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿ(ಎಸ್) ನತ್ತ ಜನರ ಚಿತ್ತವನ್ನು ಹರಿಸಲು ಪ್ರಯತ್ನಿಸಿತ್ತಿದ್ದೇವೆ. ಜೆಡಿ(ಎಸ್) ಒಂದು ವೇಳೆ ಗೆಲುವು ಸಾಧಿಸಿದ ನಂತರ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳದೇ ಇದ್ದರೆ ಉತ್ತಮ ಮತ್ತು ದೇವೆಗೌಡರೊಂದಿಗೆ ನಾವು ಈ ವಿಷಯದ ಪ್ರಸ್ತಾಪವನ್ನಿರಿಸಿದ್ದೇವೆ. ದೇಶದಲ್ಲಿ ಈ ರೀತಿಯ ಕಾರ್ಯಚಟುವಟಿಕೆಗಳು ಬಿಜೆಪಿಯನ್ನು 2019 ರ ಚುನಾವಣೆಯಲ್ಲಿ ಸೋಲಿಸಲು ಸಾಧ್ಯವಾಗಬಲ್ಲದು‌.

ಸ್ವಾತಂತ್ರ್ಯ ಸಂಗ್ರಾಮದ ನಂತರ ದೇಶದಲ್ಲಿ ಪ್ರಸ್ತುತ ಭುಗಿಲೆದ್ದಿರುವ ದೇಶಪ್ರೇಮವನ್ನು ತಾವು ಹೇಗೆ ನೋಡುತ್ತೀರಿ?
ದೇಶಪ್ರೇಮ ಎಂಬುದು ಅಧಿಕಾರ ಮತ್ತು ಆಡಳಿತ ಹೊಂದಿದ ವ್ಯಕ್ತಿಯು ನಿರ್ಧರಿಸಬೇಕಾದ ಸೊತ್ತಲ್ಲ. ನನ್ನ ದೇಶಪ್ರೇಮವು ನಾಗರಿಕ ಹಿತಾಸಕ್ತಿಗಳಿಂದ ಕೂಡಿದುದೇ ಹೊರತು “ಹಿಂದೂ-ಹಿಂದಿ- ಹಿಂದುಸ್ತಾನ್ ” ಎಂಬ ಪದಘೋಷಗಳಿಗೆ ಸೀಮಿತವಾದುದಂತೂ ಅಲ್ಲವೇ ಅಲ್ಲ. ಭಾಷಾತೀತತೆಯೊಂದಿಗೆ ಪ್ರಾದೇಶಿಕತೆಯನ್ನು ತಾಳೆಹಾಕಿ ದೇಶಪ್ರೇಮವನ್ನು ಕಟ್ಟುವ ಕೆಲಸಗಳು ಹಾಸ್ಯಾಸ್ಪದ ವಾದವುಗಳು. ಕನ್ನಡದ ಗುರುತು ಮತ್ತು ನನ್ನ ದೇಶಪ್ರೇಮವು ವಿರುದ್ಧವಾದವುಗಳಲ್ಲ; ಬದಲಾಗಿ ಅವುಗಳು ಪರಸ್ಪರ ಪೂರಕವಾದವುಗಳಾಗಿವೆ. ಭಾಷಾವಾರು ಪ್ರದೇಶಗಳ ಅಧಿಕಾರದ ವಿಭಜನೆಗೆ ಮತ್ತು ತನ್ನ ಸಂಸ್ಕೃತಿಗಳ ಉಳಿವಿಗೆ ಪ್ರೇರಕವಾಗುತ್ತವೆ. ಅವುಗಳನ್ನು ವಿರೋಧಿಸುವುದೆಂದರೆ ಸಂಯುಕ್ತ ಭಾವನೆಗಳನ್ನು ಒಡೆದು ಹಾಕುವುದಾಗಿದೆ.
ನಿಮ್ಮ ಯುವತ್ವದಲ್ಲಿ ನೀವು ಓರ್ವ ಕಾಂಗ್ರೆಸ್ ಕಾರ್ಯಕರ್ತರಾಗಿದ್ದರೂ ಚುನಾವಣೆಗಳಲ್ಲಿ ನಾಗರಿಕ ಕಾರ್ಯಚಟುವಟಿಕೆಗಳ ಕುರಿತು ಆಸಕ್ತಿ ಹೊಂದಿದ್ದೀರಿ. ನಾಗರಿಕ ಸಮುದಾಯಗಳು ಯಾವ ರೀತಿ ರಾಜಕೀಯ ಒಲವುಗಳನ್ನು ಬದಲಾಯಿಸಬಲ್ಲದು?.
ಮಹಾತ್ಮ ಗಾಂಧೀಜಿ ಹಾಗೂ ವಿನೋಭಾ ಭಾವೆಯವರಿಂದ ಪ್ರೇರಿತನಾದ ನಾನು ರಾಜಕೀಯ ಕಾರ್ಯಚಟುವಟಿಕೆಗಳಿಗಿಂತ ನಾಗರಿಕ ಕಾರ್ಯಚಟುವಟಿಕೆಗಳನ್ನು ಬಲವಾಗಿ ನಂಬುತ್ತೇನೆ. ಇಂದು ಕೇಂದ್ರ ಸರಕಾರಕ್ಕೆ ವಿರೋಧಿ ಬಣಗಳಾಗಿಯೂ ನುಂಗಲಾರದ ತುತ್ತಾಗಿಯೂ ನಿಂತಿರುವುದು ವಿದ್ಯಾರ್ಥಿಗಳು, ದಲಿತರು ಹಾಗೂ ರೈತರಂತಹ ಸಾಮಾನ್ಯ ಜನರಾಗಿದ್ದಾರೆ. ಇಂತಹ ಪ್ರಬಲ ವಿರೋಧಗಳನ್ನು ಸಾರಿ ಹೇಳುವಲ್ಲಿ ಕಾಂಗ್ರೆಸ್ ನಂತಹ ಘಟಾನುಘಟಿ ಪಕ್ಷಗಳು ಇಂದು ಸೋತು ನೆಲಕಚ್ಚಿವೆ. ಇದು ನಾಗರಿಕರ ಶಕ್ತಿಯಾಗಿದೆ ಎಂಬುದನ್ನು ಯಾವುದೇ ಸರಕಾರಗಳು ಮರೆಯಬಾರದು.

ಕೃಪೆ- ದಿ ಹಿಂದು