ಕಾಂಗ್ರೆಸ್- ಜೆಡಿಎಸ್ ಮುನಿಸು ಉದ್ದೇಶಪೂರ್ವಕವೇ? ಬಿಜೆಪಿ ತಂತ್ರಕ್ಕೆ ಪ್ರತಿತಂತ್ರದ ಭಾಗವೇ?

0
1127

ನ್ಯೂಸ್ ಡೆಸ್ಕ್

ರಾಜ್ಯದಲ್ಲಿ ಜೆಡಿಎಸ್ – ಕಾಂಗ್ರೆಸ್ ಪಕ್ಷಗಳು ಸರಕಾರ ರಚಿಸಿದಂದಿನಿಂದ ಪರಸ್ಪರರಲ್ಲಿ ಉಂಟಾಗಿರುವ ಮುನಿಸು ಇನ್ನೂ ಆರಿಲ್ಲ. ನಿಜಕ್ಕೂ ಇದು ಸಹಜ ಮುನಿಸೋ ಅಥವಾ ಉದ್ದೇಶಪೂರ್ವಕ ಮುನಿಸೋ? ಬಿಜೆಪಿ ಇವತ್ತು ಮಾಧ್ಯಮ ಗಮನದಿಂದ ಬದಿಗೆ ಸರಿದಿದೆ. ಪ್ತಿದಿನ ಸರಕಾರದ ಸುತ್ತವೇ ಮಾಧ್ಯಮಗಳು ಸುದ್ದಿ ರಚಿಸಬೇಕಾದ ಅನಿವಾರ್ಯತೆ ಸ್ರಷ್ಟಿಯಾಗಿದೆ. ಸಾಲ ಮನ್ನಾದ ಬಗ್ಗೆ ರಾಜ್ಯ ಬಂದ್ ಘೋಷಿಸಿ ಸುದ್ದಿಯಲ್ಲಿರಲು ಯತ್ನಿಸಿದ ಬಿಜೆಪಿಗೆ ಆ ಬಳಿಕ ಈ ಸರಕಾರ ಸ್ಪೇಸನ್ನೇ ಕೊಟ್ಟಿಲ್ಲ. ಯಡಿಯೂರಪ್ಪ, ಈಶ್ವರಪ್ಪ, ಶೆಟ್ಟರ್ … ಎಲ್ಲರೂ ಒಳಪುಟದ ಸುದ್ದಿಗೆ ಸೀಮಿತವಾಗುವಷ್ಟು ಈ ಸರಕಾರದ ಸಮಸ್ಯೆ ರಸವತ್ತಾಗಿ ಬಿಟ್ಟಿದೆ.
ಈ ಬಗ್ಗೆ ತುಸು ಒಳಹೋಗಿ ಯೋಚಿಸಿದರೆಇದು ನಿಜಕ್ಕೂ ಸಹಜ ಜಗಳವೇ ಎಂಬ ಅನುಮಾನ ಮೂಡುತ್ತದೆ. ಈ ಸರಕಾರ ಉಳೀಬೇಕಾದುದು ಎರಡೂ ುಕ್ಷಗಳಿಗೆ ಅಗತ್ಯ. ಮುಂದಿನ ಪಾರ್ಲಿಮೆಂಟ್ ಚುನಾವಣೆವರೆಗಾದರೂ ಬೀಳದಂತೆ ನೋಡಿಕೊಳ್ಳುವ ಜರೂರತ್ತು ಕಾಂಗ್ರೆಸ್ ನ ಹೆಗಲಮೇಲಿದೆ. ಜೆಡಿಎಸ್ ಗೆ ಮೈತ್ರಿ ಮುರಿದುಕೊಳ್ಳುವ ಇಚ್ಛೆ ಇಲ್ಲ. ಕಾಂಗ್ರೆಸ್ ಗಂತೂ ಈ ಸರಕಾರ ಉಳೀಬೇಕಾದುದು ಅನಿವಾರ್ಯ. ಹೀಗಿರುವಾಗ, ಸರಕಾರ ಬೀಳಿಸು ರೀತಿಯ ವರ್ತನೆ ಕಾಂಗ್ರೆಸ್ ತೋರುತ್ತಿರುವುದೇಕೆ? ಸಿದ್ದರಾಮಯ್ಯ ವೀಡಿಯೋ ಹೊರಬಿದ್ದದ್ದು ಹೇಗೆ? ಬಹುಶಃ ಇವೆಲ್ಲ ಕಾಂಗ್ರೆಸ್ ನ ತಂತ್ರ ಇರಬಹುದೇ? ಸದಾ ಚರ್ಚೆಯಲ್ಲಿರಬೇಕೆಂಬ ಉದ್ದೇಶವೇ? ಅಥವಾ ಜೆಡಿಎಸ್ ಅನ್ನು ಅಂಕೆಯಲ್ಲಿಟ್ಟುಕೊಳ್ಳುವ ತಂತ್ರವೇ?
ಬಹುಶಃ ಎರಡೂ ುಕ್ಷಗಳಿಗೂ ಸರಕಾರ ಬೇಕೆಂದ ಮೇಲೆ, ಈ ಜಗಳ ಉದ್ದೇಶಪೂರ್ವಕ ಸ್ರಷ್ಟಿ ಎಂದು ತೋರುತ್ತದೆ. ಏನಿದ್ದರೂ ಯಡಿಯೂರಪ್ಪ ಈ ಜಗಳದ ಜೋರಿನಲ್ಲಿ ಮಸುಕಾಗಿದ್ದಾರೆ. ಅವರ ಪುಕ್ಷಕ್ಕೆ ಮಾಧ್ಯಮ ಕವರೇಜ್ ಸಿಗದಂತೆ ಮಾಡಲು ಈ ಜಗಳ ಯಶಸ್ವಿಯಾಗಿದೆ. ಬಹುಶಃ, 2019 ರ ಪಾರ್ಲಿಮೆಂಟ್ ಚುನಾವಣೆವರೆಗೆ ಅಂತರವಿಟ್ಟುಕೊಂಡು ಮಾತಾಡುವುದು ಮತ್ತು ಬಳಿಕ ಫಲಿತಾಂಶ ನೋಡಿಕೊಂಡು ಈ ಸರಕಾರದ ಆಯುಷ್ಯವನ್ನು ನಿರ್ಧರಿಸುವುದು ಇನ್ನೊಂದು ಸಾಧ್ಯತೆಯಾಗಿ ಗೋಚರಿಸುತ್ತದೆ.