ಕುಂಭ ಮೇಳದ ರಸ್ತೆ ನಿರ್ಮಾಣಕ್ಕೆ ಅಡ್ಡಿಯಾದ ಮಸೀದಿಯ ಒಂದು ಭಾಗವನ್ನು ಕೆಡವಿ ಸಹಕರಿಸಿದ ಮುಸ್ಲಿಮರು.

0
1047

ಅಲಹಾಬಾದ್: ಅಲಹಾಬಾದ್ ಅಭಿವೃದ್ಧಿ ಪ್ರಾಧಿಕಾರವು ಸ್ಥಳೀಯರನ್ನು ಭೇಟಿಯಾಗಿ ಮನವರಿಕೆ ಮಾಡಿ ಕುಂಭ ಮೇಳದ ಅಭಿವೃದ್ಧಿ ಯೋಜನೆಗಳಿಗೆ ಅಡ್ಡಿಯಾದ ಮಸೀದಿಯ ಭಾಗವನ್ನು ಕೆಡಹುವಂತೆ ಮಾಡಿದ ಮನವಿಗೆ ಮುಸ್ಲಿಮರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಮಸೀದಿಯ ಹೊಣೆಗಾರರು ಮುಂಬರುವ ಕುಂಭ ಮೇಳದ ಅಭಿವೃದ್ಧಿ ಯೋಜನೆಗಾಗಿ ಮಸೀದಿಯ ವಿಸ್ತೃತ ಭಾಗವನ್ನು ಕೆಡವಿದ್ದಾರೆ.
ಪ್ರತಿವರ್ಷ ಲಕ್ಷಾಂತರ ಭಕ್ತರು ಆಗಮಿಸುವ ಕುಂಭಕ್ಕೆ ಸಿದ್ಧತೆಗಳ ಹಿನ್ನೆಲೆಯಲ್ಲಿ; ಹಲವಾರು ರಸ್ತೆಗಳನ್ನು ವಿಸ್ತರಿಸಲಾಗುತ್ತಿದೆ ಮತ್ತು ವಿವಿಧ ಅಭಿವೃದ್ಧಿ ಯೋಜನೆಗಳು ನಡೆಯುತ್ತಿದೆ. ಆದರೆ, ಹಲವಾರು ಧಾರ್ಮಿಕ ಸ್ಥಳಗಳು ಇದಕ್ಕೆ ಅಡಚಣೆಗಳಾಗಿತ್ತು. ಏಕೆಂದರೆ ಅವುಗಳ ಕೆಲವು ವಿಸ್ತೃತ ಭಾಗಗಳನ್ನು ಕೆಡವಬೇಕಾಗಿತ್ತು.
ಕೋಮು ಸೌಹಾರ್ದವನ್ನು ಕಾಪಾಡಲು ಅಲಹಾಬಾದ್ ಅಭಿವೃದ್ಧಿ ಪ್ರಾಧಿಕಾರವು ಸ್ಥಳೀಯರನ್ನು ಭೇಟಿಯಾಗಿ ಯಶಸ್ವಿಯಾಗಿ ಮನವರಿಕೆ ಮಾಡಿತು. ಅದರ ನಂತರ ಧಾರ್ಮಿಕ ಸ್ಥಳದ ಹೊಣೆಗಾರರು ಸ್ವತಃ ಕುಂಭದ ಅಭಿವೃದ್ಧಿ ಯೋಜನೆಗಳಿಗೆ ಅಡ್ಡಿಯಾದ ಭಾಗಗಳನ್ನು ಕೆಡವಿದರು.
ಬಾಬರಿ ಮಸೀದಿಯನ್ನು ಕೆಡವಿದ ರಾಜ್ಯದಲ್ಲಿ ಇಂಥದ್ದೊಂದು ಬೆಳವಣಿಗೆ ನಡೆದಿರುವುದು ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.