ಚರ್ಚಿಸಿ ಚರ್ಚಿಸಿ ಗಂಟಲು ಒಣಗಿತು, ಆಕೆ ನೀರು ಕೊಟ್ಟಳು

0
1045

ದಿನದ ಮಿಂಚು-89

ಏ. ಕೆ. ಕುಕ್ಕಿಲ

ಮಹಿಳೆ ಮಸೀದಿ ಪ್ರವೇಶಿಸಬಾರದು ಅನ್ನುವ ವಿಚಾರದಲ್ಲಿ ಅವರಿಬ್ಬರ ನಡುವೆ ಭಿನ್ನಾಭಿಪ್ರಾಯ ಇರಲಿಲ್ಲ. ಮಹಿಳೆ ಮಸೀದಿ ಪ್ರವೇಶಿಸಿದರೆ ಆಗುವ ಹಾನಿ, ಆಕೆಯ ದೌರ್ಬಲ್ಯ, ಮಸೀದಿ ನಿಷೇಧಕ್ಕೆ ಇರುವ ಕಾರಣಗಳು, ಗತಿಸಿಹೋದ ವಿದ್ವಾಂಸರ ಅಭಿಪ್ರಾಯಗಳು.. ಇತ್ಯಾದಿ ಇತ್ಯಾದಿ ವಿಫುಲ ಮಾಹಿತಿಗಳನ್ನು ಒಬ್ಬರಿಗೊಬ್ಬರು ಪೈಪೋಟಿಯಲ್ಲೆಂಬಂತೆ ಮಂಡಿಸತೊಡಗಿದರು. ಒಬ್ಬಾತ ಒಂದು ಉದಾಹರಣೆ ಕೊಡುವಾಗ ಇನ್ನೊಬ್ಬಾತ ಎರಡು ಉದಾಹರಣೆಗಳನ್ನು ಕೊಡುತ್ತಿದ್ದ. ಮಸೀದಿ ಪ್ರವೇಶ ನಿಷೇಧಕ್ಕೆ ಇರುವ ಭೌತಿಕ ಮತ್ತು ಆಧ್ಯಾತ್ಮಿಕ ಕಾರಣಗಳನ್ನು ಅವರಿಬ್ಬರೂ ಪಟ್ಟಿ ಮಾಡಿ ಮಾಡಿ ದಣಿದರು. ಗಂಟಲು ಒಣಗಿದಂತಾಯಿತು.

ಮನೆಯ ಮಹಿಳೆ ತಂದಿಟ್ಟ ಬಿಸಿ ನೀರನ್ನು ಕುಡಿದು ಅವರು ಪುನಃ ಮಾತು ಮುಂದುವರಿಸಿದರು.