ಜಮಾಅತೆ ಇಸ್ಲಾಮಿ ಹಿಂದ್ ಹೂಡೆ ವತಿಯಿಂದ ಮನೆ ಹಸ್ತಾಂತರ

0
908

ಸನ್ಮಾರ್ಗ ವಾರ್ತೆ

ಹೂಡೆ: ಜಮಾಅತೆ ಇಸ್ಲಾಮಿ ಹಿಂದ್ ಹೂಡೆ ಘಟಕದ ವತಿಯಿಂದ ಜನಾಬ್ ತಾಜುದ್ದೀನ್ ಅವರ ಮನೆಯನ್ನು ಪೂರ್ಣಗೊಳಿಸಿ ಹಸ್ತಾಂತರಗೊಳಿಸಲಾಯಿತು.

ಸೂರಿಲ್ಲದವರಿಗೆ ಸೂರು ಒದಗಿಸುವ ಮಹತ್ವದ ಕಾರ್ಯದಲ್ಲಿ ದಾನಿಗಳ ಸಹಾಯದ ಮೂಲಕ ಜಮಾಅತೆ ಇಸ್ಲಾಮಿ ಹಿಂದ್ ಬಡವರ ಕಲ್ಯಾಣ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಇದೀಗ ಕೆಮ್ಮಣ್ಣು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಜಾತಿ, ಧರ್ಮ ನೋಡದೆ ಎಲ್ಲರಿಗೂ ಸಹಾಯ ಮಾಡುತ್ತಿದೆ. ಈಗಾಗಲೇ ದಾನಿಗಳ ಸಹಾಯ ಪಡೆದು ಹಲವರಿಗೆ ಮನೆ, ಉದ್ಯೋಗ, ಆರೋಗ್ಯ ಅರ್ಥಿಕ ನೆರವಿನ ಸಹಾಯ ಮಾಡಲಾಗಿದ್ದು, ದೇವರ ಅನುಗ್ರಹ ದಿಂದ ಜನರನ್ನು ಸಂಕಷ್ಟದಿಂದ ರಕ್ಷಿಸುವುದಕ್ಕಾಗಿ ನಮ್ಮ ಪುಟ್ಟ ಪ್ರಯತ್ನವೆಂದು ಜಮಾಅತೆ ಇಸ್ಲಾಮಿ ಹಿಂದ್’ನ ಹೂಡೆ ಘಟಕಾಧ್ಯಕ್ಷರಾದ ಅಬ್ದುಲ್ ಕಾದೀರ್ ತಿಳಿಸಿದರು.

ಜಮಾಅತೆ ಇಸ್ಲಾಮಿ ಹಿಂದ್ ವಲಯ ಸಂಚಾಲಕರಾದ ಅಬ್ದುಸ್ಸಲಾಮ್ ಉಪ್ಪಿನಂಗಡಿ ಮನೆಯ ಕೀಲಿ ಕೈಯನ್ನು ಮನೆಯ ಮಾಲಿಕ ತಾಜುದ್ದೀನ್ ಅವರಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ವೆರೋನಿಕಾ ಕರ್ನೆಲಿಯೊ, ಶಬ್ಬೀರ್ ಮಲ್ಪೆ, ಪ್ರೊ.ಅಬ್ದುಲ್ ಅಝೀಝ್, ಮೌ.ಆದಮ್ ಸಾಹೇಬ್, ಮೌ. ಅಸ್ಘರ್ ಅಲಿ ಖಾಸ್ಮಿ, ಇದ್ರಿಸ್ ಹೂಡೆ ಮುಂತಾದವರು ಉಪಸ್ಥಿತರಿದ್ದರು.