ಜಸ್ಟಿಸ್ ಲೋಯಾ ಮರಣೋತ್ತರ ಪರೀಕ್ಷೆ ನಡೆಸಿದ್ದು ಬಿಜೆಪಿ ಸಚಿವರ ಸಂಬಂಧಿ: ಕಾರವಾನ್ ಬಹಿರಂಗ

0
1118

ನವದೆಹಲಿ: ಕೊಲ್ಲಲ್ಪಟ್ಟ ಸುಪ್ರೀಮ್ ಕೋರ್ಟಿನ ನ್ಯಾಯಾಧೀಶ ಜಸ್ಟಿಸ್ ಬಿ.ಹೆಚ್. ಲೋಯಾ ರವರ ಮರಣೋತ್ತರ ಪರೀಕ್ಷೆಯಲ್ಲಿ ವಂಚನೆ ನಡೆದಿದೆಯೆಂಬ ವರದಿ ಬಹಿರಂಗವಾಗಿದೆ. ಮಹಾರಾಷ್ಟ್ರದ ಬಿಜೆಪಿ ನಾಯಕ ಸಚಿವ ಸುಧೀರ್ ಮಗಂದಿವಾರ್ ಅವರ ನಿರ್ದೇಶದನುಸಾರ ಅವರ ಪತ್ನಿಯ ಸಹೋದರ ಡಾಕ್ಟರ್ ಮಕರಂದ್ ವ್ಯವಹಾರಿಯ ನೇತೃತ್ವದಲ್ಲಿ ಮರಣೋತ್ತರ ಪರೀಕ್ಷೆ ನಡೆದಿದೆಯೆಂದು “ಕಾರವಾನ್ ಮ್ಯಾಗಝಿನ್” ವರದಿ ಮಾಡಿದೆ.

ಅಧಿಕೃತ ವರದಿಗಳಲ್ಲಿ ಡಾಕ್ಟರ್ ಎನ್.ಕೆ ತುಮ್ರಾಮ್ ಮರಣೋತ್ತರ ಪರೀಕ್ಷೆ ನಡೆಸಿರುವುದಾಗಿ ಇದೆ. ಆದರೆ ಮಕರಂದ್ ವ್ಯವಹಾರಿಯ ನೇತೃತ್ವದಲ್ಲಿ ಮರಣೋತ್ತರ ಪರೀಕ್ಷೆ ನಡೆದಿದೆಯೆಂದು ಮಾದ್ಯಮ ಬಹಿರಂಗ ಪಡಿಸಿದೆ. ನಾಗ್ಪುರದ ವೈದ್ಯಕೀಯ ಕಾಲೇಜೊಂದಲ್ಲಿ ಫ್ರೊಫೆಸರ್ ಆಗಿರುವ ಮಕರಂದ್ ವ್ಯವಹಾರಿಯವರಿಗೆ ರಾಜಕೀಯದೊಂದಿಗೆ ನಿಕಟ ಸಂಬಂಧವಿರುವ ಕಾರಣ ಉದ್ಯೋಗದ ಸ್ಥಳದಲ್ಲಿ ತಮ್ಮ ಅಧಿಕಾರವನ್ನು ವ್ಯಾಪಕವಾಗಿ ದುರುಪಯೋಗಪಡಿಸಿದ್ದರು ಎಂದೂ ಮಾದ್ಯಮ ವರದಿ ತಿಳಿಸಿದೆ. ಜಸ್ಟಿಸ್ ಲೋಯಾ ರವರ ಮರಣೋತ್ತರ ಪರೀಕ್ಷೆಗೆ ಅವರು ವಿಶೇಷ ಮುತುವರ್ಜಿ ವಹಿಸಿದ್ದರು ಎಂದೂ ಕಾರವಾನ್ ತಿಳಿಸಿದೆ.