ಡಿ.ಐ.ಜಿ. ರೂಪಾ “ನಮ್ಮ ಬೆಂಗಳೂರು” ಪ್ರಶಸ್ತಿವಿಜೇತರಲ್ಲ.: ಸಂಸ್ಥೆಯಿಂದ ಸ್ಪಷ್ಟನೆ

0
1062

ಬೆಂಗಳೂರು: ಡಿ.ಐ.ಜಿ. ರೂಪಾರವರಿಗೆ “ನಮ್ಮ ಬೆಂಗಳೂರು” ಪ್ರಶಸ್ತಿ ಲಭಿಸಿಲ್ಲವೆಂದು “ನಮ್ಮ ಬೆಂಗಳೂರು ಫೌಂಡೇಶನ್” ತಿಳಿಸಿದೆ. ಈ ಬಾರೀ ಮೊತ್ತದ ಪುರಸ್ಕಾರವನ್ನು ರೂಪಾರವರು ತಿರಸ್ಕರಿಸಿದ್ದ ಬಳಿಕ ಫೌಂಡೇಶನ್ ಈ ರೀತಿ ಹೇಳಿದೆ.
“ಐ,ಜಿ. ರೂಪಾರಿಗೆ ಈ ಪ್ರಶಸ್ತಿ ನೀಡುತ್ತೇವೆಂದು ನಾವು ಬಹಿರಂಗಪಡಿಸಿಲ್ಲ. ಆದ್ದರಿಂದ ಪ್ರಶಸ್ತಿ ನಿರಾಕರಿಸುವ ಸಂಭವವೇ ಇಲ್ಲ. ಈ ಪ್ರಶಸ್ತಿಗೆ ಅವರ ಹೆಸರು ಸೂಚಿಸಿದಾಗ ಅವರು ಏನೋ ಸಂಚು ನಡೆಸಿದರು. ಆದರೆ ಕೊನೇಯ ಹಂತದಲ್ಲಿ ಅದು ಫಲಿಸದಿದ್ದಾಗ ಪ್ರಶಸ್ತಿ ತಿರಸ್ಕರಿಸಿದ್ದನ್ನು ಘೋಶಿಸಿದರು”. ಎಂದು ಸಂಘಟನೆ ಆರೋಪಿಸಿದೆ.
ಉದ್ಯಮಿ ರಾಜ್ಯಸಬಾ ಸದಸ್ಯ ರಾಜೀವ್ ಚಂದ್ರಶೇಖರ್ ಒಡೆತನದ “ನಮ್ಮ ಬೆಂಗಳೂರು ಫೌಂಡೇಶನ್” ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸೇವೆ ಸಲ್ಲಿಸಿದವರನ್ನು ಗುರುತಿಸಿ ಪ್ರಶಸ್ತಿ ನೀಡುತ್ತಾ ಬಂದಿದೆ. ಇದು ಒಂಬತ್ತನೇಯ ವರ್ಷದ ಪ್ರಶಸ್ತಿಯಾಗಿದೆ. “ಗವರ್ನ್‍ಮೆಂಟ್ ಆಫ್ ದ ಇಯರ್” ಎಂಬ ಪುರಸ್ಕಾರಕ್ಕೆ ರೂಪರವರ ಹೆಸರು ಸೂಚಿಸಲಾಗಿತ್ತು. ಎಂಟು ಸರಕಾರಿ ಅಧಿಕಾರಿಗಳಲ್ಲಿ ಆರಿಸಿದ ವಿಜಯಿಯ ಹೆಸರನ್ನು ಬೆಂಗಳೂರಲ್ಲಿ ಸಂಘಟಿಸುವ ಕಾರ್ಯಕ್ರಮದಲ್ಲಿ ಪ್ರಕಟಿಸಲಾಗುತ್ತಿತ್ತು.
“ಎಲ್ಲಾ ಸರಕಾರಿ ಅಧಿಕಾರಿಗಳು ರಾಜಕೀಯ ಗುರಿಯಿರುವ ಸಂಘಟನೆಗಳಿಂದ ಅಂತರ ಕಾಯ್ದುಕೊಳ್ಳಬೇಕು. ನಿಸ್ಪಕ್ಷಪಾತದಿಂದ ಇರಬೇಕು. ಆಗ ಮಾತ್ರ ಜನರ ಮುಂದೆ ನಿಶ್ಕಳಂಕರಾಗಿದ್ದು ನಮ್ಮತನವನ್ನು ಕಾಪಾಡಬಹುದು” ಎಂದು ರೂಪಾರವರು “ನಮ್ಮ ಬೆಂಗಳೂರು ಫೌಂಡೇಶನ್”ಗೆ ಕಳುಹಿಸಿದ ಪತ್ರದಲ್ಲಿ ತಿಳಿಸಿದ್ದರು.