ತೂತುಕುಡಿ: ವ್ಯವಸ್ಥೆಯ ತೂತುಗಳ ಕತೆ

0
1178

@ ಸಲೀಮ್ ಬೋಳಂಗಡಿ
ಬಹುರಾಷ್ಟ್ರೀಯ ಕಂಪೆನಿಗಳು ತಮ ಗಾಗದವರ ದನಿಯಡಗಿಸಲು ಯಾವ ರೀತಿಯ ಪ್ರಯೋಗವೆಲ್ಲಾ ಮಾಡುತ್ತದೆ ಯೆಂಬುದಕ್ಕೆ ತಮಿಳು ನಾಡಿನ ತೂತುಕುಡಿಯ ಪ್ರತಿಭಟನಾ ನಿರತರ ಮೇಲೆ ನಡೆದ ಗುಂಡಿನ ದಾಳಿ ಸ್ಪಷ್ಟ ಉದಾಹರಣೆಯಾಗಿದೆ. ತೂತುಕುಡಿಯಲ್ಲಿ 1996ರಿಂದ ಕಾರ್ಯಾ ಚರಿಸುತ್ತಿರುವ ವೇದಾಂತ ಗ್ರೂಪ್‍ನ ಸ್ಟರ್ಲೈಟ್ ತಾಮ್ರದ ಕಾರ್ಖಾನೆಯ ಪರವಾನಿಗೆಯನ್ನು ನವೀಕರಿಸದಂತೆ ಮತ್ತು ಕಾರ್ಖಾನೆಯನ್ನು ಮುಚ್ಚುವಂತೆ ಪರಿಸರವಾಸಿಗಳು ಬೀದಿಗಿಳಿದಿ ದ್ದರು. ಈ ಹೋರಾಟಕ್ಕೆ ಎರಡು ದಶಕಗಳ ಇತಿಹಾಸವಿದೆ. ಈ ಬಾರಿಯ ಪ್ರತಿಭಟನೆಯು ನೂರು ದಿನಗಳ ವರೆಗೆ ಸಾಗಿತ್ತು. ಮುಖ್ಯಮಂತ್ರಿ ಪಳನಿ ಸ್ವಾಮಿ ಹೇಳುವಂತೆ ಸುಮಾರು 20 ಸಾವಿರ ಜನರು ಪ್ರತಿಭಟನಾ ರ್ಯಾಲಿಯಲ್ಲಿ ಸೇರಿದ್ದರು. ಈ ರ್ಯಾಲಿಯ ವಿರುದ್ಧ ನಡೆದ ಗೋಲಿಬಾರ್‍ನಲ್ಲಿ ಹದಿಮೂರು ಮಂದಿ ಬಲಿ ಯಾಗಿ ಸುಮಾರು ಇಪ್ಪತ್ತಕ್ಕೂ ಹೆಚ್ಚಿನ ಜನರು ಗಂಭೀರ ಗಾಯಗೊಳ್ಳುವಂತಾಗಿದೆ.
ಈ ವೇದಾಂತ ಗ್ರೂಪ್ ಕೇಂದ್ರ ಸರಕಾರವನ್ನೇ ನಿಯಂತ್ರಣದಲ್ಲಿಟ್ಟುಕೊಳ್ಳುವಷ್ಟು ಪ್ರಬಲವಾಗಿದೆ. ಈ ಕಾರ್ಖಾನೆಯು ಎಲೆಕ್ಟ್ರಾನಿಕ್ ಸಕ್ರ್ಯೂಟ್ ವಿಭಾಗಗಳು, ತಾಮ್ರದ ತಂತಿ, ಮುಂತಾದ ತಾಮ್ರದ ವಸ್ತುಗಳ ತಯಾರಿಕಾ ಘಟಕವಾಗಿತ್ತು. ಇಂಡಸ್ಟ್ರೀಸ್ (ಇಂಡ್ಯ) ಎಂಬ ಕಂಪೆನಿಯು ¸ ಸ ಲ್‍ಫ್ಯೂರಿಕ್ ಆಸಿಡ್, ಫೋ ನ್ ಫೋರಿಕ್ ಆಸಿಡ್ ಮುಂತಾದ ರಾಸಾಯನಿಕ ವಸ್ತುಗಳನ್ನು ತಯಾರಿಸುತ್ತದೆ. ಮೂಲದ ಭಾರತೀಯ ವಂಶಜ ನಾದ ಮಿಲಿಯಾಧೀಶ ಅನಿಲ್ ಅಗರ್ವಾಲ್ ವೇದಾಂತ ಗ್ರೂಪ್‍ನ ಒಡೆಯರಾಗಿದ್ದಾರೆ. ಸಾವಿ ರಾರು ಜನರಿಗೆ ಉದ್ಯೋಗ, 2000 ಜನರಿಗೆ ಗುತ್ತಿಗೆ ಹುದ್ದೆಗಳು, ಪರೋಕ್ಷವಾಗಿ 25 ಸಾವಿರ ಜನರಿಗೆ ಉದ್ಯೋಗ ಕಲ್ಪಿಸಲಾಗುತ್ತಿದೆಯೆಂದು ಹೇಳಿಕೊಳ್ಳುವ ಕಂಪೆನಿಯ ವಿರುದ್ಧ ಜನರು ಪ್ರತಿಭಟಿಸಲು ತೊಡಗಿ ಎರಡು ದಶಕಗಳು ಕಳೆದವು. ಪ್ಯಾಂಟ್‍ಗಳಿಂದ ವಿಶಾನಿಲ ಹೊರ ಬರುತ್ತಿದೆ. ಕೃಷಿ ವಲಯಗಳಿಗೆ ಹರಿಯು ತ್ತಿರುವ ಟನ್‍ಗಟ್ಟಲೆ ಮಾಲಿನ್ಯಕಾರಕ ವಸ್ತು ಗಳು ಕ್ಯಾನ್ಸರ್ ಹರಡಲು ಮತ್ತು ಶ್ವಾಸಕೋಶ ಸಂಬಂಧಿ ಕಾಯಿಲೆಗಳು ಹರಡಲು ಕಾರಣ ವಾಗಿದೆಯೆಂದು ಜನರು ಬೀದಿಗಿಳಿದರು. 2013ರಲ್ಲಿ ಪ್ಯಾಂಟ್‍ನಿಂದಾದ ಅನಿಲ ಸೋರಿಕೆಯಿಂದ ಪರಿಸರವಾಸಿಗಳಿಗೆ ಗಂಟಲು ಉಬ್ಬುವುದು, ಉಸಿರಾಟದ ತೊಂದರೆ ಮುಂತಾದ ರೋಗಗಳು ಕಾಣಿಸತೊಡಗಿ ದವು. ಇದರ ವಿರುದ್ಧ ಪ್ರತಿಭಟನೆಗಳು ಭುಗಿ ಲೆದ್ದಾಗ ತಮಿಳುನಾಡು ಮಾಲಿನ್ಯ ನಿರ್ಮೂಲನ ಘಟಕವು ಇದರಲ್ಲಿ ಕಾನೂನು ಉಲ್ಲಂಘನೆ ಯಾಗಿದೆಯೆಂದು ಹೇಳಿ ಕಂಪೆನಿಯನ್ನು ಮುಚ್ಚುವಂತೆ ಆದೇಶ ನೀಡಿತ್ತು.
ಬಳಿಕ ಕಂಪೆನಿಯು ಕಾನೂನಿನ ಮೊರೆ ಹೋಗಿ ಅದಕ್ಕೆ ತಡೆಯಾಜ್ಞೆಯನ್ನು ತಂದಿತು. ಬಳಿಕ ಎಂ.ಡಿ.ಎಂ.ಕೆ. ನಾಯಕ ಗೋಪಾಲ ¸ ಸ್ವಾಮಿಯವರು ಸುಪ್ರೀಮ್ ಕೋರ್ಟಿನಲ್ಲಿ ದಾವೆ ಹೂಡಿದಾಗ ಸಂಸ್ಥೆಯು ನೂರು ಕೋಟಿ ದಂಡ ತೆರಬೇಕೆಂದು ಆದೇಶ ಬಂದಿದ್ದರೂ ಅದನ್ನು ನಿರ್ಲಕ್ಷಿಸಿ ತಾನು ಕಾನೂನುಬದ್ಧವಾಗಿ ಕಾರ್ಯಾಚರಿಸುತ್ತಿರುವೆನೆಂದು ಹೇಳಿಕೊಂಡಿತು. ಕಳೆದ ಐದು ವರ್ಷಗಳಿಂದ ವೇದಾಂತ ಕಂಪೆನಿಯು ಸಾವಿರ ಟನ್‍ಗಟ್ಟಲೆ ರಾಸಾ ಯನಿಕ ಮಾಲಿನ್ಯಗಳನ್ನು ಹೊರಬಿಡುತ್ತಿದೆಯೆಂದು ತಮಿಳುನಾಡು ಪೊಲ್ಯೂಶನ್ ಕಂಟ್ರೋಲ್ ¨ಬೋರ್ಡ್ ಹೇಳಿದೆ.
ಈ ಕಂಪೆನಿಯ ವಿರುದ್ಧ ಪ್ರತಿಭಟನೆಗಳು ತೀವ್ರಗೊಂಡಂತೆ ಹಲವು ಆಮಿಷಗಳ ಮೂಲಕ ಪ್ರತಿಭಟನಾ ನಿರತರನ್ನು ಖರೀದಿಸಲು ಕಂಪೆನಿಯು ಪ್ರಯತ್ನಿಸಿತು. ಅವೆಲ್ಲವೂ ವಿಫಲವಾದಾಗ ಸರಕಾರದ ಮೂಲಕ ಪೊಲೀಸರನ್ನು ಬಳಸಿ ಪ್ರತಿಭಟನೆಯನ್ನು ಹತ್ತಿಕ್ಕುವ ಪ್ರಯತ್ನದಲ್ಲಿ ತೊಡಗಿತು. ಹೋರಾಟಕ್ಕೆ ಕಾವು ನೀಡುತ್ತಿದ್ದ ಮುಂಚೂಣಿಯಲ್ಲಿದ್ದವರನ್ನು ಹುಡುಕಿ ಹುಡುಕಿ ಗುಂಡಿಕ್ಕಿ ಕೊಲ್ಲುವ ಪ್ರಯತ್ನ ಈ ಗೋಲಿಬಾ ರ್‍ನಲ್ಲಿ ನಡೆದಿದೆ ಎನ್ನಲಾಗುತ್ತಿದೆ. ಸೊಂಟದ ಕೆಳಗೆ ಗುಂಡು ಹಾರಿಸಬೇಕೆಂಬ ಕಾನೂನುಗಳಿದ್ದು ಯಾವುದೇ ಮುನ್ಸೂಚನೆಯಿಲ್ಲದೆ ಆಕಾಶದತ್ತ ಗಾಳಿಯಲ್ಲಿ ಗುಂಡು ಹಾರಿಸದೆ ಉಗ್ರರನ್ನು ಸದೆಬಡಿಯುವ ಕಮಾಂಡೂ ಶೈಲಿಯಲ್ಲಿ ನೇರವಾಗಿ ತಲೆಗೆ ಗುರಿಯಿಟ್ಟು ಗುಂಡು ಹಾರಿಸ ಲಾಗಿದೆ. ಈ ಮಧ್ಯೆ ಗುಂಡು ತಗುಲಿ ನರಳುತ್ತಿರುವ 22ರ ಹರೆಯದ ಕಾಳಿಯಪ್ಪನ್ ಎಂಬಾತನನ್ನು `ನಟನೆ ನಿಲ್ಲಿಸು’ ಎಂದು ಪೊಲೀಸ್ ನೋರ್ವ ದೌರ್ಜನ್ಯವೆಸಗಿದ ದೃಶ್ಯಗಳು ಸೆರೆಯಾಗಿದೆ. ಆತ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತನಾದನು. ಇಲ್ಲಿ ಶಾರ್ಪ್ ಶೂಟರ್‍ಗಳನ್ನು ಬಳಸ ಲಾಗಿದೆ ಎಂದೂ ಹೇಳಲಾಗುತ್ತಿದೆ. ಇಂತಹ ಪ್ರತಿಭಟನೆಗಳು ಮತ್ತೆ ಎಲ್ಲಿಯೂ ತಲೆ ಎತ್ತಬಾರದು ಎಂಬ ಶೈಲಿಯಲ್ಲಿ ಕಾಪೆರ್Çರೇಟ್ ಕಂಪೆನಿ ಸರಕಾರಿ ಅಧಿಕಾರಿಗಳನ್ನು ಬಳಸಿಕೊಂಡು ಮಾರಣಹೋಮ ನಡೆಸಿದೆ. ಸಾಕ್ಷರತೆಯಲ್ಲಿ ಬಹಳ ಹಿಂದೆ ಇರುವ ಈ ಪ್ರದೇಶದ ಜನರನ್ನು ಶೋಷಿಸುವ ಮುಖಾಂತರ ಕಾಪೆರ್Çರೇಟ್ ದಣಿಗಳ ಹಿತ ಕಾಪಾಡಲು ತಮಿಳು ನಾಡು ಸರಕಾರ ಮುಂದಾಗಿದೆ. ಇಲ್ಲಿ ಗುಂಡು ಹಾರಿಸಿದ ಪೊಲೀಸರಿಗೆ ಶಿಕ್ಷೆ ನೀಡಿ ಅಥವಾ ಸಾವಿಗೀಡಾದವರ ಕುಟುಂಬಗಳಿಗೆ ಒಂದಷ್ಟು ಲಕ್ಷ ಪರಿಹಾರ ನೀಡಿ ಸರಕಾರ ಸುಮ್ಮನಾಗಿಸ ಬಹುದು. ಹಾಗಾಗಬಾರದು. ಆ ಕಂಪೆನಿಯನ್ನು ಮುಚ್ಚಲು ತಮಿಳುನಾಡು ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶವನ್ನು ನೀಡಿ ದ್ದರೂ ಅದನ್ನು ಜಾರಿ ಮಾಡದ ಕಂಪೆನಿಯ ವಿರುದ್ಧ ತನಿಖೆ ಆರಂಭವಾಗಬೇಕು. ಇಲ್ಲದೇ ಹೋದಲ್ಲಿ ಈ ಘಟನೆ ತಣ್ಣಗಾದ ಬಳಿಕ ಮತ್ತೊಂದು ದಾರಿಯಲ್ಲಿ ಬಂದು ಕಂಪೆನಿಯನ್ನು ಮತ್ತೆ ಪ್ರಾರಂಭಿಸುವ ಸಾಧ್ಯತೆಯಿದೆ. ಆ ಕಂಪೆನಿಯು ಎಷ್ಟೊಂದು ಬಹಿರಂಗವಾಗಿ ಕಾನೂನು ಉಲ್ಲಂಘಿಸುತ್ತಿತ್ತು ಎಂದರೆ 45 ಸಾವಿರ ಟನ್ ಉತ್ಪನ್ನದ ಅನುಮತಿಯಲ್ಲಿ ಅದರ ನಾಲ್ಕು ಪಟ್ಟು ಹೆಚ್ಚಳ ಅಂದರೆ 1 ಲಕ್ಷದ ಎಪ್ಪತ್ತು ಸಾವಿರ ಲಕ್ಷ ಟನ್ ಉತ್ಪಾದಿಸುತ್ತಿತ್ತು. ಆದ್ದರಿಂದ ಇಷ್ಟು ಪ್ರಬಲವಾಗಿರುವ ಈ ಕಂಪೆನಿ ಮತ್ತೆ ತಲೆ ಎತ್ತದಂತೆ ಮಾಡಬೇಕು. ಕಾಪೆರ್Ç ರೇಟ್ ದಿ ಗ್ಗಜರು ಸಂಪತ್ತನ್ನು ಶೇಖರಿಸಲು ಸ್ಪರ್ಧಿಸುತ್ತಿದ್ದಾರೆಯೇ ಹೊರತು ಜನಸಾಮಾನ್ಯರ ಜೀವ, ಆರೋಗ್ಯಕ್ಕೆ ಅವರು ಸ್ವಲ್ಪವೂ ಬೆಲೆ ಕೊಡಲಾರರು.
ಕಾಪೆರ್Çರೇಟ್ ದಿಗ್ಗಜರು ಸುರಿಯುವ ಹಣಗಳಿಗೆ ಜೊಲ್ಲು ಸುರಿಸುವ ರಾಜ ಕಾರಣಿಗಳು ಜನಹಿತಕ್ಕೆ ಪ್ರಜಾಹಿತಕ್ಕೆ ಗಮನಹರಿಸಲಾರರು. ಯಾಕೆಂದರೆ ಚುನಾವಣೆಯ ಸಂದರ್ಭಗಳಲ್ಲಿ ಈ ರಾಜಕಾರಣಿಗಳು ಅವರನ್ನು ಸಾಕಷ್ಟು ಸಮರ್ಪಕವಾಗಿ ಬಳಸಿಕೊಂಡಿರುತ್ತಾರೆ. ಅದರ ಋಣ ತೀರಿಸಲು ಈ ರಾಜಕಾರಣಿಗಳು ಬದ್ಧರಾಗುತ್ತಾರೆ. ಬಳಿಕ ಕಂಪೆನಿಯ ವಿರುದ್ಧ ಪ್ರತಿಭಟಿಸುವವರನ್ನು ಹತ್ತಿಕ್ಕಲು ಸರಕಾರಿ ನೆರವು ನಿ ೀಡಲಾಗುತ್ತಿದೆ. ಕಾಪೆರ್Çರೇಟ್ ದಿಗ್ಗಜರ ಕಂಪೆನಿಗಳು ಸ್ಥಾಪಿಸುವ ಕಡೆ ಇಂತಹ ವ್ಯವಹಾರಗಳು ಮಾಮೂಲಿಯಾಗಿ ನಡೆಯುತ್ತವೆ. ಅಲ್ಲಿ ಜನರ ಪ್ರಾಣ ಆರೋಗ್ಯ ಯಾವುದೂ ಲೆಕ್ಕಕ್ಕೆ ಬಾರದು. ಕೇವಲ ಕಾಪೆರ್Çರೇಟ್ ದೊರೆಗಳ ಹಿತಾಸಕ್ತಿ ಮಾತ್ರ ಕಾಪಾಡಲಾಗುತ್ತದೆ. ಪ್ರತಿ¨ ಭಾಟನಾಕಾರರ ನಡುವೆ ಬಿರುಕು ಮೂಡಿಸುವ ಪ್ರಯತ್ನಗಳು ಆಮಿಷ ಮುಂತಾದುವುಗಳೆಲ್ಲಾ ನಡೆಯುತ್ತದೆ. ಅವುಗಳ ಸಾಲು ಸಾಲು ಘಟನೆಗಳಲ್ಲಿ ತೂತುಕುಡಿಯ ಈ ಮಾರಣಹೋಮವೂ ಒಂದು.