ದುಬೈ ಗುರುದ್ವಾರದಲ್ಲಿ ಮುಸ್ಲಿಮರಿಗೆ ಇಫ್ತಾರ್- ವೀಡಿಯೊ

0
546

ದುಬೈ,ಮೇ 20: ಸಹಿಷ್ಣುತೆಯನ್ನು ಎತ್ತಿ ಹಿಡಿದು ದುಬೈಯಲ್ಲಿ ಸಿಖ್ ಗುರುದ್ವಾರವೊಂದು ಇಫ್ತಾರ್ ಮತ್ತು ಮಗ್ರಿಬ್ ನಮಾಝ್‍ಗೆ ವ್ಯವಸ್ಥೆ ಮಾಡುತ್ತಿದೆ. ಇದರಲ್ಲಿ ಮುಸ್ಲಿಮ್ ಸಮುದಾಯದವರ ಜೊತೆ ಬೇರೆ ಬೇರೆ ಧರ್ಮದವರು ಪಾಲ್ಗೊಳ್ಳುತ್ತಾರೆ. ದುಬೈ ಗುರು ನಾನಕ್ ದರಬಾರ್ ಸಿಖ್ ಗುರುದ್ವಾರದಲ್ಲಿ ಬುಧವಾರ ಸಂಜೆ ಮುಸ್ಲಿಮ್ ಮತ್ತು ಸಿಖ್ ಸಮುದಾಯದ ಇನ್ನೂರಕ್ಕೂ ಹೆಚ್ಚು ಸದಸ್ಯರು ಇಫ್ತಾರ್‌ನಲ್ಲಿ ಭಾಗವಹಿಸಿದರು. ಜೆಬೆಲ್ ಅಲಿಯಲ್ಲಿ ಅಂದಾಜು 50,000 ಮಂದಿ ಗುರುದ್ವಾರ ಸದಸ್ಯರಿದ್ದಾರೆ. ಏಳು ವರ್ಷದ ಹಿಂದೆ ಇಲ್ಲಿ ಗುರುದ್ವಾರ ಸ್ಥಾಪಿಸಲು ಅನುಮತಿ ದೊರಕಿತ್ತು. ಇಫ್ತಾರ್, ಮತ್ತು ನಮಾಝ್‍ಗೆ ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ಸ್ಥಳ ವ್ಯವಸ್ಥೆ ಮಾಡಲಾಗಿತ್ತು. ಬಾಂಗ್ಲಾದೇಶದ ಇಸ್ಲಾಮಿಕ್ ವಿದ್ವಾಂಸ ಹಾಫಿಝ್ ಅಬ್ದುಲ್ ಹಕ್‍ರ ನೇತೃತ್ವದಲ್ಲಿ ಮಗ್ರಿಬ್ ನಮಾಝ್ ನಡೆಯಿತು.