ನಾಸಿರ್ ಹಾಗೂ ದುರ್ರಾ ಹತ್ಯೆ: ಈರುಳ್ಳಿಗೂ ಬಂದೂಕಿಗೂ ವ್ಯತ್ಯಾಸ ಗೊತ್ತಿಲ್ಲದ ಇಸ್ರೇಲ್!

0
1376
ನಾಸಿರ್ ಅಲ್-ಮೂಸಬ್

ಶುಕ್ರವಾರ, ಸೆಪ್ಟೆಂಬರ್ 28 ರಂದು,12 ವರ್ಷ ವಯಸ್ಸಿನ ನಾಸಿರ್ ಅಲ್-ಮೂಸಬ್ ಹತ್ಯೆಯಿಂದ ಇತಿಹಾಸವು ಅತ್ಯಂತ ದುರಂತ ರೀತಿಯಲ್ಲಿ ಪುನರಾವರ್ತನೆಯಾಯಿತು.

ಹುತಾತ್ಮರ ಸಾಲಿನಲ್ಲಿ ನಾಸಿರ್ ಮತ್ತೊಂದು ಸೇರ್ಪಡೆಯೆಷ್ಟೇ. ಇಸ್ರೇಲಿ ಸೈನ್ಯದಿಂದ ನಾಸಿರ್ ಹತ್ಯೆಯು 18 ವರ್ಷಗಳ ಹಿಂದಿನ, ಸೆಪ್ಟೆಂಬರ್ 30, 2000 ರಂದು ಮುಹಮ್ಮದ್ ಅಲ್-ದುರ್ರಾ ಹತ್ಯಾಕಾಂಡವನ್ನು ನೆನಪಿಸುತ್ತದೆ .ಈ ಎರಡು ದಿನಾಂಕಗಳ ನಡುವೆ ನೂರಾರು ಫೆಲಸ್ತೀನ್ ಮಕ್ಕಳು ಇದೆ ರೀತಿಯಲ್ಲಿ ಮರಣಹೊಂದಿದ್ದಾರೆ.

ಹಕ್ಕುಗಳ ಗುಂಪು ಬಿಟ್ಸೆಲೆಮ್ ಅಂಕಿ-ಅಂಶಗಳ ಪ್ರಕಾರ: 2000 ದಿಂದ 2008 ರ ನಡುವೆ ಆಪರೇಷನ್ ಕ್ಯಾಸ್ಟ್ ಲೀಡ್ ಎಂದು ಕರೆಯಲ್ಪಡುವ ಗಾಜಾ ಇಸ್ರೇಲ್ ಯುದ್ಧದಲ್ಲಿ 954 ಫೆಲೆಸ್ತೀನಿ ಮಕ್ಕಳು ಕೊಲ್ಲಲ್ಪಟ್ಟರು. ನಂತರದ ಯುದ್ಧದಲ್ಲಿ 345 ಮಕ್ಕಳನ್ನು ಕೊಲ್ಲಲಾಯಿತು,ಇಸ್ರೇಲ್ ನ ಇತ್ತೀಚಿನ ಯುದ್ಧವಾದ , 2014 ರ ‘ಪ್ರೊಟೆಕ್ಟಿವ್ ಎಡ್ಜ್’ ನಲ್ಲಿ 367 ಮಕ್ಕಳ ಸಾವು ವರದಿಯಾಗಿದೆ.

ಆದರೆ ಮುಹಮ್ಮದ್ ಮತ್ತು ನಾಸಿರ್ – ಮತ್ತು ಅವರಂತೆ ಸಾವಿರಾರು ಮಕ್ಕಳು – ಕೇವಲ ಸಂಖ್ಯೆಗಳಲ್ಲ; ಇಸ್ರೇಲಿ ಯೋಧರ ವಿಕೃತ ಸಂತೋಷಕ್ಕಾಗಿ ಬಲಿಪಶುಗಳಾಗುತ್ತಿರುವ ದುರ್ದೈವಿಗಳು .

ಗುಂಡು ಹಾರಿಸದಂತೆ ಇಸ್ರೇಲಿ ಸೈನಿಕರಲ್ಲಿ ತಂದೆ ಜಮಾಲ್ ಮನವಿ ಮಾಡುತ್ತಿದ್ದಂತೆಯೇ ಮುಹಮ್ಮದ್ ಗುಂಡೇಟಿಗೆ ಬಲಿಯಾದರು. 18 ವರ್ಷಗಳ ನಂತರ, ನಾಸಿರ್ ತನ್ನ ಸಾವಿರಾರು ಸಹಚರರೊಂದಿಗೆ ಇಸ್ರೇಲ್ ನಿಂದ ಗಾಜಾವನ್ನು ಬೇರ್ಪಡಿಸುವ ಬೇಲಿಯ ಬಳಿ ಸ್ವತಂತ್ರ ಫೆಲೇಸ್ತೇನಿಗಾಗಿ ಹಾಡು ಹೇಳುತ್ತಿದ್ದಾಗ ಕೊಲ್ಲಲ್ಪಟ್ಟರು.

ಇಬ್ಬರು ಹುಡುಗರ ಮೂಲಕ ಫೆಲೆಸ್ತೀನ್ ನ ಸಂಪೂರ್ಣ ಇತಿಹಾಸವನ್ನು ಬರೆಯಬಹುದು. ಹಿಂಸೆ ಮತ್ತು ಹಿಂಸಾಚಾರ ಮಾತ್ರವಲ್ಲದೆ, ಒಂದು ತಲೆಮಾರಿನ ನಂತರದವರೆಗೂ ಅಂಗೀಕರಿಸಿದ ದೃಢತೆ ಮತ್ತು ಗೌರವವನ್ನೂ ಸಹ ಬರೆಯಬಹುದು.

ನಾಸಿರ್ ವೈದ್ಯನಾಗುವ ಕನಸನ್ನು ಹೊಂದಿದ್ದರು. ಗಾಝ ಬೇಲಿಯ ಬಳಿ ವೈದ್ಯಕೀಯ ಸ್ವಯಂಸೇವಕರಾಗಿ ಸೇವೆ ಸಲ್ಲಿಸುತ್ತಿರುವ ತನ್ನಿಬ್ಬರು ಸಹೋದರಿಯರಿಗೆ ನಾಸಿರ್ ಸಹಾಯಕನಾಗಿದ್ದನು.

ಇಲ್ಲಿಯವರೆಗೆ, ಸುಮಾರು ಇನ್ನೂರು ನಿರಾಯುಧ ಪ್ರತಿಭಟನಾಕಾರರು ಕೊಲ್ಲಲ್ಪಟ್ಟಿದ್ದಾರೆ.
ಮುಹಮ್ಮದ್ ಅಲ್-ದುರ್ರಾಹ್ 18 ವರ್ಷಗಳ ಹಿಂದೆ ಕೊಲ್ಲಲ್ಪಟ್ಟಾಗ, ಇಸ್ರೇಲಿ ಸೈನಿಕರ ಗುಂಡುಗಳಿಂದ ತನ್ನ ಮಗನ ದೇಹವನ್ನು ತನ್ನ ಬರಿಗೈಯಿಂದ ರಕ್ಷಿಸಲು ಪ್ರಯತ್ನಿಸುವ ,ಆತನ ತಂದೆಯ ಚಿತ್ರವು ಪ್ರಪಂಚದಾದ್ಯಂತ ಲಕ್ಷಾಂತರ ಜನರನ್ನು ಮೂಕರನ್ನಾಗಿಸಿತು. ಈ ಚಿತ್ರವು ಮಕ್ಕಳನ್ನು ಗುರಿಯಾಗಿಸುವ ತನ್ನ ನೀತಿಯ ಬಗ್ಗೆ ಇಸ್ರೇಲ್ ನಾಚಿಕೆಪಟ್ಟು ಅಂತ್ಯಗೊಳಿಸಬಹುದೆಂಬ ಭರವಸೆಯನ್ನು ಹುಟ್ಟು ಹಾಕಿತು.

ಆರಂಭದಲ್ಲಿ ಮುಹಮ್ಮದ್ ಕೊಲೆಯ ಹೊಣೆ ಹೊತ್ತ ಇಸ್ರೇಲ್ ಒಂದು ನಕಲಿ ತನಿಖೆಯ ಮೂಲಕ ಮೊಹಮದ್ ಹತ್ಯೆ ಒಂದು ವಂಚನೆ ಎಂದು ತೀರ್ಮಾನಿಸಿತು,, ಫ್ರಾನ್ಸ್ 2 ಪತ್ರಕರ್ತ ಚಿತ್ರೀಕರಿಸಿದ ವೀಡಿಯೊ ‘ಇಸ್ರೇಲ್ ಅನ್ನು ಪ್ರತಿನಿಧಿಸಲು’ ಪಿತೂರಿಯ ಭಾಗವಾಗಿತ್ತು.

ಇಸ್ರೇಲಿ ಮತ್ತು ಝಿಯಾನಿಸ್ಟ್ ಪ್ರಚಾರಕರು , ಫೆಲೆಸ್ತೀನಿಯರು ತಮ್ಮ ಮಕ್ಕಳಿಗೆ ಯಹೂದಿಗಳನ್ನು ದ್ವೇಷಿಸಲು ಕಲಿಸುತ್ತಾರೆ ಎಂದು ಹೇಳಿದ್ದಾರೆ.

ಜುಲೈನಲ್ಲಿ ಇಸ್ರೇಲಿ ಸೇನೆಯು ಫೆಲೇಸ್ಟಿನಿಯನ್ ಮಕ್ಕಳು ಉದ್ದೇಶಪೂರ್ವಕವಾಗಿ ನಕಲಿ ಗಲಭೆಗಳನ್ನು ಸೃಷ್ಟಿಸುತ್ತಾರೆ. ಹೀಗಾಗಿ ಅದು ಅವುಗಳನ್ನು ಹಿಂಸಾತ್ಮಕ ಹೊಡೆದಾಟಕ್ಕೆ ಒತ್ತಾಯಿಸುತ್ತದೆ ಎಂದು ಹೇಳಿದೆ.

ಯುಎಸ್-ಇಸ್ರೇಲಿ ಪ್ರಚಾರವು ಫೆಲೇಸ್ತೀನಿಯನ್ ಹೋರಾಟಗಾರರು ಅಥವಾ ಬಣಗಳನ್ನು ಮಾತ್ರ ಗುರಿಯಾಗಿಸಿಲ್ಲ,, ಫೆಲಸ್ತೀನಿಯನ್ ಮಕ್ಕಳ ಕೊಲೆಯನ್ನೂ ಸಮರ್ಥಿಸಿ ಅಮಾನವೀಯತೆಯನ್ನು ಪ್ರದರ್ಶಿಸಿದೆ.

“8 ವರ್ಷ ವಯಸ್ಸಿನ ಮಕ್ಕಳು ಬಾಂಬರ್ ಗಳು, ಷೂಟರ್ಸ್, ಕೊಲೆಗಡುಕರಾಗಿ ಬದಲಾವಣೆ ” ವಾಷಿಂಗ್ಟನ್ ಫ್ರೀ ಬೀಕನ್ ನಲ್ಲಿ ಆಡಮ್ ಕ್ರೆಡೊವನ್ನು ಹೀಗೆ ವರದಿ ಮಾಡಿದರು, ಇದನ್ನು ಅವರು “ಮಕ್ಕಳ ಭಯೋತ್ಪಾದಕರು ಮತ್ತು ಅವರ ಅನುಯಾಯಿಗಳ ಬಗ್ಗೆ ಹೊಸ ವರದಿ” ಎಂದು ಉಲ್ಲೇಖಿಸಿದ್ದಾರೆ.

ಇದು ಕೇವಲ ಕೆಟ್ಟ ಪತ್ರಿಕೋದ್ಯಮ ಮಾತ್ರವಲ್ಲ, ನಾಸಿರ್ ಮತ್ತು ಮೊಹಮ್ಮದ್ ರಂತಹ ಸಾವಿರಾರು ಮಕ್ಕಳ ಹತ್ಯೆಯನ್ನು ಸಮರ್ಥಿಸುವ ಇಸ್ರೇಲಿ ಉದ್ದೇಶಿತ ಅಭಿಯಾನದ ಭಾಗವಾಗಿದೆ.

ಇಸ್ರೇಲ್ ನ ನ್ಯಾಯ ಮಂತ್ರಿ ಅಯೆಲೆಟ್ ಷೇಕೆಡ್ ”ಮರಿ ಹಾವುಗಳಿಗೆ ” ಜನ್ಮ ನೀಡುವ ಫೆಲೇಸ್ತೀನಿಯನ್ ತಾಯಂದಿರನ್ನು ವಧಿಸಬೇಕೆಂದು ಹೇಳಿದ್ದಾರೆ

ನಾಸಿರ್ ಮತ್ತು ಮುಹಮ್ಮದ್ ದುರ್ರಾ ಹತ್ಯೆಯನ್ನು ಸೇನಾ ಕಾರ್ಯಾಚರಣೆಗಳ ಭಾಗವಾಗಿ ನೋಡಲಾಗುವುದಿಲ್ಲ, ಆದರೆ ಅಮಾನವೀಯ ಮಾಧ್ಯಮಗಳಿಗೆ ಒಂದು ಗನ್ ಹೊತ್ತೊಯ್ಯುವ ಪ್ರತಿರೋಧ ಹೋರಾಟಗಾರ ಮತ್ತು ಈರುಳ್ಳಿ ಅಥವಾ ಆಮ್ಲಜನಕದ ಮುಖ ಕವಚವನ್ನು ಒಯ್ಯುವ ಮಗುವಿನ ನಡುವಿನ ವ್ಯತ್ಯಾಸ ತಿಳಿದಿಲ್ಲ.

ನಾಸಿರ್ ಅಲ್-ಮೂಸಬ್ ಮತ್ತು ಮೊಹಮ್ಮದ್ ಅಲ್-ದುರ್ರಾ ಅವರು 18 ವರ್ಷಗಳ ಅಂತರದಲ್ಲಿ ಏಕ ಪ್ರಕಾರವಾಗಿ ನಿರೂಪಿಸಲ್ಪಟ್ಟ ಒಂದೇ ಪುಸ್ತಕದ ಅಧ್ಯಾಯಗಳು ಎಂಬುದನ್ನು ನಾವು ಮರೆಯಬಾರದು.

ಮೂಲ: ಕೌ೦ಟರ್ ಕರೆಂಟ್ಸ್ ಡಾಟ್ ಆರ್ಗ್
ಡಾ| ರಂಜೀ ಬಾರೂದ್
ಕನ್ನಡಕ್ಕೆ: ಆಯಿಷತುಲ್ ಅಫೀಫಾ