ಪಟೇಲರ ಮುನಿಸು ಬಿಜೆಪಿಯನ್ನು ಮುಗಿಸೀತೆ?

0
1543

ಗುಜರಾತ್‍ನಲ್ಲಿ ಪಟೇಲ್ ಚಳುವಳಿ ನಾಯಕ ಹಾರ್ದಿಕ್ ಪಟೇಲ್‍ರೊಂದಿಗಿನ ಸಖ್ಯ ಕಾಂಗ್ರೆಸ್ಸಿಗೆ ಲಾಭವಾದೀತೆ? ಎರಡೂವರೆ ದಶಕಗಳ ಬಳಿಕ ಅಧಿಕಾರಕ್ಕೆ ಬರುವ ಕಾಂಗ್ರೆಸ್ ಕನಸು ನಿಜವಾದೀತೆ. ಪಾಟಿದಾರ್ ವೋಟ್‍ಬ್ಯಾಂಕ್ ಸುತ್ತ ತಿರುಗುವಾಗ ಎದ್ದು ನಿಲ್ಲುವ ಪ್ರಧಾನ ಪ್ರಶ್ನೆಯಿದು. ರಾಜ್ಯದ ಜನಸಂಖ್ಯೆಯ ಶೇ. 15ರಷ್ಟಿರುವ ಪಾಟೀದಾರ್ ಸಮುದಾಯವು ಸೌರಾಷ್ಟ್ರ, ಉತ್ತರ-ಮಧ್ಯ ಗುಜರಾತ್, ಅಹ್ಮದಾಬಾದ್, ಸೂರತ್ ವಿಧಾನಸಭಾ ಕ್ಷೇತ್ರಗಳಲ್ಲಿ ನಿರ್ಣಾಯಕರಾಗಿದ್ದಾರೆ. ಈಗ 51 ಮಂದಿ ಪಾಟೀದಾರ ಶಾಸಕರಿದ್ದಾರೆ. ಇವರಲ್ಲಿ 44 ಮಂದಿ ಬಿಜೆಪಿಯವರು. ಜನಸಂಖ್ಯೆಯ ಅನುಪಾತ, ಪ್ರಭಾವಗಳನ್ನು ಪರಿಗಣಿಸಿದರೆ ಇದಕ್ಕಿಂತಲೂ ಹೆಚ್ಚು ಶಾಸಕರಿರಬೇಕಿತ್ತು. ಕಾಂಗ್ರೆಸ್‍ನೊಂದಿಗಿನ ಮೈತ್ರಿಯಲ್ಲಿ ಹಾರ್ದಿಕ್‍ರ ಉದ್ದೇಶವೂ ಇದುವೇ ಆಗಿದೆ.
ನಗರಗಳಲ್ಲಿ ಶ್ರೀಮಂತರು, ಗ್ರಾಮಗಳಲ್ಲಿ ಬಡವರು:
ಪಾಟಿದಾರ್ ಸಮುದಾಯ ಬಹುತೇಕ ಶ್ರೀಮಂತರಾಗಿದ್ದಾರೆ. ಖಾಸಗಿ ಶಿಕ್ಷಣ ಸಂಸ್ಥೆಗಳು ಇವರ ಒಡೆತನದಲ್ಲಿವೆ. ಸೂರತ್‍ನಲ್ಲಿ ವಜ್ರ ವ್ಯಾಪಾರ, ಬೃಹತ್ ಉದ್ಯಮವನ್ನು ಇವರು ಹೊಂದಿದ್ದಾರೆ. ನಗರೀಕರಣದಿಂದಾಗಿ ಜಮೀನಿನ ಬೆಲೆಯಲ್ಲಿ ಆದ ಹೆಚ್ಚಳವು ರೈತರು ಮತ್ತು ಭೂಮಾಲಿಕರಾದ ಇವರನ್ನು ಶ್ರೀಮಂತರನ್ನಾಗಿಸಿತು. ಜಮೀನು ಮಾರಿ ಇವರು ವ್ಯಾಪಾರದಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಅದೇ ವೇಳೆ, ಗ್ರಾಮದಲ್ಲಿ ಪಾಟಿದಾರ್ ವಿಭಾಗವು ಬಡತನ ಅನುಭವಿಸುತ್ತಿದೆ. ಜೊತೆಗೆ ಠಾಕೂರ್, ಚೌಧರಿ, ಕೊಲಿ ವಿಭಾಗಗಳು ಮೀಸಲಾತಿಯಿಂದ ಮುಂದುವರಿದಾಗ ಗ್ರಾಮೀಣ ಭಾಗದ ಪಾಟಿ ದಾರರು ಬಡವರಾಗಿ ಮುಂದುವರಿದರು. ಶಿಕ್ಷಿತರಾದ ಪಾಟಿದಾರ ಯುವಕ, ಯುವತಿಯರಿಗೆ ಇದು ಅತೃಪ್ತಿಯುಂಟು ಮಾಡಿತು. ಸರಕಾರಿ ಕೆಲಸಗಳಲ್ಲಿ ಅವಕಾಶ ಕಡಿಮೆಯಾಗುವುದರೊಂದಿಗೆ ಯುವಕರಲ್ಲಿ ಆಕ್ರೋಶ ದ್ವಿಗುಣಗೊಂಡಿತು.
ಪ್ರತಿಭಟನೆಗೆ:
1981ರಲ್ಲಿ ಮಾಧವಸಿಂಗ್ ಸೋಳಂಕಿ ನೇತೃತ್ವದಲ್ಲಿ ಕಾಂಗ್ರೆಸ್ ಸರಕಾರವು ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ಸಮು ದಾಯಗಳಿಗೆ ಮೀಸಲಾತಿ ಜಾರಿಗೊಳಿಸಿದ್ದರು. ಹಿಂದುಳಿದಿಲ್ಲದ ಕಾರಣ ಮೀಸಲಾತಿ ನಿಷೇಧಿಸಲಾಗಿದ್ದ ಪಾಟಿದಾರ್ ಸಮಾಜ ಪ್ರತಿಭಟನೆ ನಡೆಸಿತು. 100 ಮಂದಿಯ ಸಾವಿನ ನಡುವೆ ಪ್ರತಿ ಭಟನೆಯು ಸೋಳಂಕಿಯವರ ರಾಜೀನಾಮೆಯಲ್ಲಿ ಕೊನೆಗೊಂಡಿತು. 1985ರಲ್ಲಿ ಕ್ಷತ್ರಿಯ, ಹರಿಜನ(ದಲಿತ), ಆದಿವಾಸಿ, ಮುಸ್ಲಿಮರ ಬೆಂಬಲದೊಂದಿಗೆ ಸೋಲಂಕಿ ಪುನಃ ಅಧಿಕಾರಕ್ಕೆ ಬಂದರು. ಅಂದಿನ 149 ಸೀಟುಗಳ ಬಹುಮತವನ್ನು ಯಾರಿಂದಲೂ ಮೀರಿ ಸಲು ಸಾಧ್ಯವಾಗಿಲ್ಲ. ಆದರೆ, ದಲಿತ, ಆದಿವಾಸಿ ಮುಸ್ಲಿಂ ಕೂಟ ಪಾಟಿದಾರರನ್ನು ಬಿಜೆಪಿಗೆ ಸೇರುವಂತೆ ಮಾಡಿತು.
1981ರಲ್ಲಿ 81 ಸಮುದಾಯ ಒಬಿಸಿಯಲ್ಲಿದರೆ, ಸರ್ವೇಗಳಲ್ಲಿ ಇದು 146ಕ್ಕೆ ಏರಿತು. ಇವರ ಮೀಸಲಾತಿ ಶೇ. 10ರಿಂದ 27ಕ್ಕೇರಿತು. ಇದು ಆವರೆಗೆ ಇದ್ದ ಅನುಪಾತವನ್ನು ತಿದ್ದುಪಡಿ ಮಾಡಿತು. ಹಿಂದುಳಿದವರು ಧಾರಳವಾಗಿ ಸರಕಾರಿ ಕೆಲಸಕ್ಕೆ ಸೇರಿಕೊಂಡರು. ಇದು ಗ್ರಾಮಗಳ ವಿಭಜನೆಗೆ ಕಾರಣವಾಯಿತು. ಈ ಕೋಪದ ಲಾಭವೆತ್ತಿ ಬಿಜೆಪಿ ಅಧಿಕಾರಕ್ಕೇರುವ ಪ್ರಯಾಣ ಆರಂಭಿಸಿತು. ಆದರೆ, ಬಿಜೆಪಿ ತಮ್ಮನ್ನು ವಂಚಿಸಿದೆ ಎಂದು ತಿಳಿಯುವುದ ರೊಂದಿಗೆ ಪಾಟಿದಾರರು ಮೀಸಲಾತಿ ಚಳವಳಿಗಿಳಿದರು.
ರಾಜಸ್ತಾನದ ಗುಜ್ಜಾರರ, ಹರಿಯಾಣದ ಜಾಟರ ಪ್ರತಿಭಟನೆಯಿಂದ ಪಾಟಿದಾರರು ಪಾಠ ಕಲಿತಿದ್ದರು. ಹಾರ್ದಿಕ್ ಪಟೇಲ್‍ರ ನೇತೃತ್ವದಲ್ಲಿ ಪಾಟಿದಾರ್ ಅನಾಮತ್ ಅಂದೋಳನ್ ಸಮಿತಿ (ಪಿಎಎಎಸ್) ರೂಪುಗೊಂಡು ಚಳವಳಿಗಿಳಿಯಿತು. ವಿದ್ಯಾಸಂಪನ್ನರಾದ ಯುವಕರು ಪಿಎಎಎಸ್‍ಗೆ ಸೇರಿದರು. ಲ್ಯೂವ, ಕಡ್ವ ಎನ್ನುವ ಎರಡು ಪಾಟಿದಾರ ಉಪವಿಭಾಗಗಳು ಇವರ ಅಡಿಯಲ್ಲಿ ಖೋದಾಲದಾಂ, ಉಮಿಯ ಮಾತಾ ಟ್ರಸ್ಟ್‍ಗಳ ಬೆಂಬಲ ಹಾರ್ದಿಕ್‍ರನ್ನು ಬಲಪಡಿಸಿತು. ಸಮುದಾಯದ ಪ್ರಭಾವ ಕೇಂದ್ರವಾದ ಉತ್ತರ ಗುಜರಾತ್ ಕೇಂದ್ರವನ್ನಾಗಿಸಿ ಹಾರ್ದಿಕ್ ಹೋರಾಟ ಆರಂಭಿಸಿದರು. 2015 ಆಗಸ್ಟ್ 25ಕ್ಕೆ ನಡೆಸಿದ ರಾಜ್ಯ ರ್ಯಾಲಿಯಲ್ಲಿ ಐದು ಲಕ್ಷ ಪಾಟಿದಾರರು ಭಾಗವಹಿಸಿದ್ದರು. ರ್ಯಾಲಿಯ ನಂತರದ ಸಭೆಯಲ್ಲಿ ಪೊಲೀಸರ ಗುಂಡಿಗೆ 14 ಯುವಕರು ಮೃತಪಟ್ಟಿದ್ದರು. ಅಹ್ಮದಾಬಾದ್ ಮುಹ್ಸಾನದಲ್ಲಿ ಪಾಟಿದಾರರ ಮನೆಗಳಿಗೆ ನುಗ್ಗಿ ಪೊಲೀಸರು ಮಹಿಳೆಯರನ್ನು ಬಿಡದೆ ಹೊಡೆದರು.
ಇವೆಲ್ಲಕ್ಕೆಲ್ಲ ಕಾರಣ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಆಗಿದ್ದರು. ಚಳವಳಿಕಾರರು ಅವರನ್ನು ಜನ ರಲ್ ಡಯರ್ ಎಂದು ಕರೆದರು. 14 ಯುವ ಕರ ಹುತಾತ್ಮೆಗೆ ಬದಲಾಗಿ ಬಿಜೆಪಿ ಸರಕಾರವನ್ನು ಕೆಳಗಿಳಿಸುವೆವು ಎಂದು ಹಾರ್ದಿಕ್ ಪ್ರತಿಜ್ಞೆಗೈದರು. ಪಟೇಲ್ ಸಮುದಾಯಕ್ಕೆ ಸೇರಿದ್ದ ಆನಂದಿಬೆನ್ ಪಟೇಲ್‍ರ ರಾಜಿನಾಮೆಯೊಂದಿಗೆ ಚಳವಳಿ ಕೊನೆಗೊಂಡಿತು. ರಾಜ್ಯದ ಜನಸಂಖ್ಯೆಯಲ್ಲಿ ಶೇ. 1 ರಷ್ಟಿರುವ ಜೈನ್ ಸಮುದಾಯದ ವಿಜಯ್ ರೂಪಾನಿ ಮುಖ್ಯಮಂತ್ರಿಯಾದರು.
ಕಾಂಗ್ರೆಸ್ಸಿನ ಹೆಜ್ಜೆ:
ಈ ರಾಜಕೀಯ ಬದಲಾವಣೆಯು ಸಂಘಟನೆಯ ಒಳಗೆ ಮತ್ತು ಹೊರಗೆ ಹಾರ್ದಿಕ್‍ರನ್ನು ಒಲಿಸಿಕೊಳ್ಳಲು ಪ್ರಯತ್ನ ನಡೆದವು. ಅಧಿಕಾರದ ಕನಸ್ಸಿನೊಂದಿಗೆ ಸಮರ್ಥವಾಗಿ ಕಾಂಗ್ರೆಸ್ ಹೆಜ್ಜೆ ಇಟ್ಟಿತು. ಪಾಟಿದಾರ್ ಸಮು ದಾಯದ ಅಗತ್ಯಗಳನ್ನು ಬೆಂಬಲಿಸಿ ಅವರು ಹಾರ್ದಿಕ್‍ರನ್ನು ಒಲಿಸಿಕೊಂಡರು. ಕೊನೆಗೆ ಅಧಿಕಾರಕ್ಕೆ ಬಂದರೆ ಪಟೇಲ್ ಸಮುದಾಯವನ್ನು ಒಬಿಸಿಗೆ ಸಮಾನವಾಗಿ ಮೀಸಲಾತಿ ಕೊಡುವು ದಾಗಿ ಕಾಂಗ್ರೆಸ್ ಭರವಸೆ ನೀಡಿತು. ಒಬಿಸಿ ಕೋಟದ ಮಾನದಂಡದ ಪ್ರಕಾರ ಮೀಸಲಾತಿಗೆ ಇತರ ಮುಂದುವರಿದವರಿಗೂ ಪಾಟಿದಾರರಿಗೂ ಎಷ್ಟು ಶೇಕಡ ಕೊಡುವುದು ಎನ್ನುವುದು ತೀರ್ಮಾನವಾಗಬೇಕಿದೆ. ನಂತರ ವಿಧಾನಸಭೆಯಲ್ಲಿ ಮಸೂದೆ ಮಂಡಿಸಲಾಗುವುದು ಎಂಬ
ಭರವಸೆಯನ್ನು ಹಾರ್ದಿಕ್‍ಗೆ ಕಾಂಗ್ರೆಸ್ ನೀಡಿದೆ.
ಬಿಜೆಪಿಗೆ ಪ್ರವೇಶವಿಲ್ಲ:
ಹಾರ್ದಿಕ್ ಮತ್ತು ಕಾಂಗ್ರೆಸ್ ಸಖ್ಯ ಬಿಜೆಪಿಯನ್ನು ನಡುಗಿಸಿದೆ. ಪಾಟಿದಾರ್ ಗ್ರಾಮಗಳಲ್ಲಿ ಬಿಜೆಪಿಯು ಉದ್ವಿಗ್ನತೆ ಸೃಷ್ಟಿಸುತ್ತಿದೆ. ನಂತರ ವಡೋದರ, ಇತರ ಕಡೆಗಳಲ್ಲಿ ಮತಯಾಚನೆಗೆ ಬರುವ ಬಿಜೆಪಿ ಅಭ್ಯರ್ಥಿಗಳನ್ನು ಯುವಕರು ವ್ಯಾಪಕವಾಗಿ ತಡೆಯುತ್ತಿದ್ದಾರೆ. ಸೂರತ್‍ನಲ್ಲಿ ಬಿಜೆಪಿ ಅಭ್ಯರ್ಥಿಗಳ ಕಚೇರಿ ತೆರೆಯಲು ಬಿಡಲಿಲ್ಲ. ಬಿಜೆಪಿ ಅಭ್ಯರ್ಥಿಗಳಿಗೆ ಪ್ರವೇಶವಿಲ್ಲ ಎಂಬ ಬೋರ್ಡುಗಳನ್ನು ಮೆಹ್ಸಾನ ಗ್ರಾಮದಲ್ಲಿ ಕಾಣಬಹುದಾಗಿದೆ. ಪಟೇಲ್ ಯುವ ಕರ ವಿರೋಧದಿಂದಾಗಿ ಎರಡು ವಾರಗಳಿಂದ ಬಿಜೆಪಿಗೆ ರ್ಯಾಲಿಗಳನ್ನು ಕೂಡಾ ನಡೆಸಲು ಆಗಿಲ್ಲ. ಡಿಸೆಂಬರ್ ಒಂಬತ್ತಕ್ಕೆ ಮೊದಲ ಹಂತದ ಚುನಾವಣೆ ನಡೆಯಲಿದೆ. ಪಾಟಿದಾರ್ ಓಟು ಬ್ಯಾಂಕ್ ಕಾಂಗ್ರೆಸ್‍ನ ಕೈಹಿಡಿಯಬಹುದೇ ಎಂದು ಕಾದು ನೋಡಬೇಕಾಗಿದೆ.

ಫಾತಿಮಾ ತನ್ವೀರ್