ಫೆಲಸ್ತೀನ್ ಮಕ್ಕಳ ಕಾಳಜಿಗೆ ಕುವೈಟ್ ಅಧಿವೇಶನ: ಕೃತಜ್ಞತೆ ಸಲ್ಲಿಸಿದ ಹಮಾಸ್

0
1671

ಫೆಲಸ್ತೀನ್ ಮಕ್ಕಳ ಕಾಳಜಿಗೆ ಕುವೈಟ್ ಅಧಿವೇಶನ:
ಕೃತಜ್ಞತೆ ಸಲ್ಲಿಸಿದ ಹಮಾಸ್
ಫೆಲೆಸ್ತೀನ್ ಮಕ್ಕಳ ಮೇಲೆ ಇಸ್ರೇಲಿ ಆಕ್ರಮಣಗಳಿಂದಾದ ದೌರ್ಜನ್ಯಗಳ ವಿರುದ್ಧ ಅಂತಾರಾಷ್ಟ್ರೀಯ ಅಧಿವೇಶನಕ್ಕೆ ಚಾಲನೆ ನೀಡಲು ತೀರ್ಮಾನಿಸಿದ ಕುವೈಟ್‍ನ ನಡೆಗೆ ಹಮಾಸ್ ಕೃತಜ್ಞತೆ ಸಲ್ಲಿಸಿದೆ.
ಇಸ್ರೇಲಿ ಆಕ್ರಮಣಗಳಿಂದಾದ ಮಕ್ಕಳ ಸಾವು-ನೋವುಗಳ ಕುರಿತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕುವೈಟ್ ಗಮನಸೆಳೆದಿರುವುದನ್ನು ಹಾಗೂ ಫೆಲೆಸ್ತೀನಿಯನ್ ಸಹೋದರರಿಗಾಗಿ ಧ್ವನಿ ಎತ್ತಿರುವುದನ್ನು ನಾವು ಸ್ವಾಗತಿಸು ತ್ತೇವೆ. ಕುವೈಟ್ ಸರಕಾರದ ಪ್ರಾಮಾಣಿಕ ನಿಲುವಿಗೆ ಕೃತಜ್ಞತೆ ಸಲ್ಲಿಸುತ್ತೇವೆ ಎಂದು ಹಮಾಸ್ ರಾಜಕೀಯ ಇಲಾಖೆಯ ಸದಸ್ಯ ಇಜ್ಜತ್ ಅಲ್ ರಾಶೀಕ್ ತಿಳಿಸಿದ್ದಾರೆ.
ಕುವೈಟ್‍ನ ಉಪ ವಿದೇಶಾಂಗ ಸಚಿವರಾದ ಖಾಲಿದ್ ಅಲ್ ಜರ್ರಲ್ಲಾಹ್ ರವರು ನವೆಂಬರ್ 12 ರಂದು ಅಂತಾರಾಷ್ಟ್ರೀಯ ಅಧಿವೇಶನಕ್ಕೆ ಚಾಲನೆ ನೀಡುವುದಾಗಿ ಘೋಷಿಸಿದ್ದಾರೆ.
ಕೈರೋದಲ್ಲಿ ನಡೆದ 148ನೇ ಅರಬ್ ಲೀಗ್ ಅಧಿವೇಶನವನ್ನುದ್ದೇಶಿಸಿ ಮಾತ ನಾಡಿದ ಅಲ್-ಜರ್ರಲ್ಲಾಹ್‍ರವರು “ಫೆಲೆಸ್ತೀನಿಯನ್ ಸಹೋದರರು ಬಳಲುತ್ತಿರುವ ಸಮಸ್ಯೆಗಳಿಂದ ಮೇಲೆ ತ್ತಲು ಕುವೈಟ್ ಸಹಾಯಹಸ್ತ ಚಾಚಲು ಬಯಸುತ್ತದೆ. ಪವಿತ್ರ ಅಲ್ ಅಕ್ಸಾ ಮಸೀದಿಯ ಮೇಲೆ ಹಾಗೂ ಫಲೆಸ್ತೀನಿ ಯನ್ ಜನತೆಯ ಮೇಲೆ ಇಸ್ರೇಲ್ ನಡೆಸುತ್ತಿರುವ ದಬ್ಬಾಳಿಕೆಗಳನ್ನು ಕುವೈಟ್ ಖಂಡಿಸುತ್ತದೆ” ಎಂದವರು ನುಡಿದಿದ್ದಾರೆ.
ವಿಶ್ವಸಂಸ್ಥೆಯು 1980ರಲ್ಲಿ 476 ಮತ್ತು 478ನೇ ಠರಾವು ಹಾಗೂ 2016ರಲ್ಲಿ 2,334ನೇ ಠರಾವನ್ನು ಹೊರ ಡಿಸಿದ್ದು ಇಸ್ರೇಲ್‍ಗೆ ಅಂತಾರಾಷ್ಟ್ರೀಯ ನಿಯಮಗಳನ್ನು ಮೀರಿ ಜೆರುಸಲೇ ಮ್‍ನ ಅಲ್ ಅಕ್ಸಾ ಮಸೀದಿಯ ಮೇಲೆ ಆಕ್ರಮಣ ನಡೆಸುವುದನ್ನು ನಿಲ್ಲಿಸಬೇಕೆಂದು ಆದೇಶಿಸಿರುವುದನ್ನು ಅಲ್-ಜರ್ರಲ್ಲಾಹ್ ಉಲ್ಲೇಖಿಸಿದರು.