ಬಿಜೆಪಿಯ ಹಿಡಿ ಅಕ್ಕಿ ಅಭಿಯಾನಕ್ಕೆ ನೀತಿ ಸಂಹಿತೆಯ ಕೊಕ್ಕೆ?

0
958

ಭಾರತೀಯ ಜನತಾ ಪಾರ್ಟಿಯು ರಾಜ್ಯದಾದ್ಯಂತ ಆರಂಭಿಸಿದ್ದ ಮುಷ್ಠಿ ಧಾನ್ಯ ಅಭಿಯಾನದ ಪ್ರಯುಕ್ತ ಅದು ಹಲವು ಮನೆಗಳಿಂದ ಒಂದು ಹಿಡಿ ಅಕ್ಕಿಯನ್ನೇನೋ ಪಡೆದುಕೊಂಡಿದೆಯಾದರೂ; ಆ ಅಕ್ಕಿಯಿಂದ ಸಾಮೂಹಿಕ ಭೋಜನ ಕಾರ್ಯಕ್ರಮವನ್ನು ಏರ್ಪಡಿಸಲು ಸಾಧ್ಯವಾಗದೆ ಕೈ ಕೈ ಹಿಸುಕಿಕೊಳ್ಳುವಂತಾಗಿದೆ. ಇದಕ್ಕೆ ಚುನಾವಣಾ ನೀತಿ ಸಂಹಿತೆಯು ಅಡ್ಡಿಪಡಿಸುತ್ತಿದೆ. ಬಿಜೆಪಿಯು ರೈತರ ಆತ್ಮಹತ್ಯೆಯನ್ನು ನಿಯಂತ್ರಿಸಲು ರೈತರಿಂದಲೇ ಹಿಡಿ ಅಕ್ಕಿ ಸಂಗ್ರಹಿಸುವ ಹೊಸ ಪ್ರಯತ್ನಕ್ಕಿಳಿದಿತ್ತು ಮತ್ತು ಆ ಮೂಲಕ ಅವರು ಆತ್ಮಹತ್ಯೆಯನ್ನು ಮಾಡಿಕೊಳ್ಳದಂತಿರಲು ಏನು ಕ್ರಮಕೈಗೊಳ್ಳಬಹುದು ಎಂಬುದನ್ನು ಹೇಳುವ ಉದ್ದೇಶವನ್ನು ಹೊಂದಿತ್ತು. ಬಿಜೆಪಿಯ ಹಿಡಿ ಅಕ್ಕಿ ಅಭಿಯಾನದ ನಿರ್ವಾಹಕರಾದ ಮುರಳೀಧರ್ ರಾವ್ ರವರು ” ರಾಜ್ಯದಾದ್ಯಂತ ಎಪ್ರಿಲ್ 8, 9 ನೇ ತಾರೀಖಿನಂದು ಬಿಜೆಪಿ ನಾಯಕರು ಮತ್ತು ರೈತರು ಸೇರಿದಂತೆ 1೦,೦೦೦ ಜನರು ಸಾಮೂಹಿಕ ಭೋಜನವನ್ನು ಹಿಡಿ ಅಕ್ಕಿ ಅಭಿಯಾನದಿಂದ ತಯಾರಿಸಿ ಸೇವಿಸಲಿದ್ದಾರೆ” ಎಂದಿದ್ದರು. ಆದರೆ ಚುನಾವಣಾ ನೀತಿ ಸಂಹಿತೆಯ ಪ್ರಕಾರ ಇದು ನಿಯಮದ ಉಲ್ಲಂಘನೆಯಾಗಿದ್ದು ಈ ಕುರಿತು ಪ್ರಶ್ನಿಸಿದಾಗ ರಾವ್ ರವರು” ಸ್ಥಳೀಯ ಮಟ್ಟದಲ್ಲಿ ಈಗಾಗಲೇ ಅನುಮತಿ ಲಭಿಸಿರುವುದಾಗಿ ಹೇಳಿದ್ದಾರೆ.”

ಆದರೆ ಚುನಾವಣಾ ಅಧಿಕಾರಿಗಳು ಸಾರ್ವಜನಿಕ ಭೋಜನಗಳಿಗೆ ನಿಷೇಧ ಹೇರಿದ್ದು ಬಿಜೆಪಿಯ ಹಿಡಿ ಅಕ್ಕಿ ಅಭಿಯಾನದ ಭೋಜನವು ಇದೇ ನಿಯಮದ ಉಲ್ಲಂಘನೆಯಾಗಲಿದೆ ಮಾತ್ರವಲ್ಲದೆ ಬಿಜೆಪಿಯು ನಿಜವಾಗಿಯೂ ಹಿಡಿ ಅಕ್ಕಿಯನ್ನು ಮನೆಗಳಿಂದ ಯಾವ ಉದ್ದೇಶದಿಂದ ಸಂಗ್ರಹಿಸಿತ್ತು ಅಥವಾ ಆ ಅಕ್ಕಿಯು ಹಿಡಿ ಅಕ್ಕಿ ಅಭಿಯಾನದಲ್ಲಿ ಸಂಗ್ರಹಿಸಲಾದುದೇ ಎಂಬುದನ್ನು ಸಾಬೀತು ಪಡಿಸುವುದು ಕಷ್ಟಕರವಾದುದರಿಂದ ” ಅವರು ಅರ್ಜಿ ಸಲ್ಲಿಸಿದ ನಂತರ ಸೂಕ್ತ ಕ್ರಮ ಕೈಗೊಳ್ಳಲಿದ್ದೇವೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ‌.

ವರದಿ.ದ ಹಿಂದೂವಿನಿಂದ