ಬಿಜೆಪಿ ಮತ್ತು ಸಂಘಪರಿವಾರದ ಯೋಜನೆಯಂತೆ ಬಿಹಾರ ಹಿಂಸಾಚಾರ: ಸತ್ಯ ಶೋಧನಾ ಸಮಿತಿಯ ವರದಿಯಿಂದ ಬಹಿರಂಗ

0
2131

ಮೂಲ: ಟು ಸರ್ಕಲ್ ಡಾಟ್ ಇನ್
ಕನ್ನಡಕ್ಕೆ: ಆಯಿಷಾ ಅಫೀಫಾ

ಮಾನವ ಹಕ್ಕು ಕಾರ್ಯಕರ್ತರು ಮತ್ತು ಪತ್ರಕರ್ತರನ್ನು ಒಳಗೊಂಡಿರುವ ಯುನಿಟ್ ಎಗೇನ್ ಸ್ಟ್ ಹೇಟ್ (UAH) ಎಂಬ ಹೆಸರಲ್ಲಿ ರೂಪಿತವಾದ ಸತ್ಯ-ಶೋಧನಾ ತಂಡವು ಇತ್ತೀಚಿನ ಬಿಹಾರದಲ್ಲಿ ನಡೆದ ಗಲಭೆಗಳ ಬಗ್ಗೆ ತನ್ನ ವರದಿಯನ್ನು ಹೊಸ ದೆಹಲಿಯ ಪ್ರೆಸ್ ಕ್ಲಬ್ ನಲ್ಲಿ ಕಳೆದವಾರ ಬಿಡುಗಡೆ ಮಾಡಿತು. ನದೀಮ್ ಖಾನ್, ಪ್ರಶಾಂತ್ ಟಂಡನ್, ಹಸನುಲ್ ಬನ್ನಾ, ತಾರಿಕ್ ಅನ್ವರ್, ಸಾಗರಿಕ ಕಿಸ್ಮು, ಮಹ್ತಾಬ್ ಆಲಂ, ಫರ್ರಾ ಶಕೀಬ್ ಮುಂತಾದವರನ್ನು ಒಳಗೊಂಡ ತಂಡವು ಇತ್ತೀಚಿಗೆ ರಾಮನವಮಿಯಂದು ಕೋಮು ಹಿಂಸಾಚಾರಕ್ಕೀಡಾದ ಸಿವಾನ್ ,ಗಯಾ, ಕೈಮೂರ್, ಔರಂಗಾಬಾದ್, ಸಮಸ್ತಿಪುರ್, ಮುಂಗೇರ್, ನವಾಡಾ, ನಳಂದ, ಹೈದರ್ಗಂಜ್ ಮತ್ತು ರೋಸೆರಾ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿತು.
ಗಲಭೆ ಪೀಡಿತ ಸ್ಥಳಗಳಿಗೆ ಭೇಟಿ ನೀಡಿ ಮತ್ತು ಜನರನ್ನು ಸಂದರ್ಶಿಸಿದ ನಂತರ, ಈ ಹಿಂಸಾಚಾರವು ಸ್ವಾಭಾವಿಕವಲ್ಲ, ಬಿಜೆಪಿ ಮತ್ತು ಬಜರಂಗ ದಳದ ಕಾರ್ಯಕರ್ತರಿಂದ ಬಹಳ ಯೋಜಿತವಾಗಿ ಆಯೋಜಿಸಲ್ಪಟ್ಟ ಪೂರ್ವ ನಿಯೋಜಿತ ಕೃತ್ಯ ಎಂದು ತಂಡವು ಅಭಿಪ್ರಾಯಕ್ಕೆ ಬಂದಿದೆ.

ಇತ್ತೀಚಿನ ಬಿಹಾರದಲ್ಲಿ ನಡೆದ ಗಲಭೆಗಳ ಬಗ್ಗೆ ತನ್ನ ವರದಿಯನ್ನು ಹೊಸ ದೆಹಲಿಯ ಪ್ರೆಸ್ ಕ್ಲಬ್ ನಲ್ಲಿ ಕಳೆದವಾರ ಬಿಡುಗಡೆ ಗೊಳಿಸಿದ ಚಿತ್ರ

“ನಾವು ಭೇಟಿ ನೀಡಿದ ಪ್ರತಿಯೊಂದು ಸ್ಥಳದಲ್ಲಿ ಏಕ ಮಾದರಿಯ ಹಿಂಸಾಚಾರವು ಸಂಭವಿಸಿದೆ. ಪೊಲೀಸರು ಸಹ ರಾಮ ನವಮಿಯ ರಾಲಿಗಳಿಗೆ ಷರತ್ತುಬದ್ದ ಅನುಮತಿ ನೀಡಿದ್ದರು ಮತ್ತು ರಾಲಿಗೆ ನಿರ್ದಿಷ್ಟ ದಾರಿಗಳನ್ನು ನಿಗದಿಪಡಿಸಿದ್ದರು. ಆದರೆ ಈ ಎಲ್ಲಾ ಷರತ್ತುಗಳನ್ನು ಮತ್ತು ಮೆರವಣಿಗೆಗೆ ಸೂಚಿಸಿದ ದಾರಿಗಳನ್ನು ಮರುದಿನ ಉಲ್ಲಂಘಿಸಲಾಗಿದೆ. ರಾಲಿಯನ್ನು ಬಲವಂತವಾಗಿ ಮುಸ್ಲಿಮ್ ಪ್ರದೇಶಗಳಿಗೆ ಒಯ್ಯಲಾಗಿದೆ. ಅಲ್ಲಿ ಉದ್ರೇಕಕಾರಿ ಘೋಷಣೆಗಳನ್ನು ಕೂಗಲಾಯಿತು ಮತ್ತು ಹಾಡುಗಳನ್ನು ಹಾಡಲಾಯಿತು. ಇದರ ನಂತರ ದೊಡ್ಡ-ಪ್ರಮಾಣದ ಹಿಂಸಾಚಾರ ನಡೆಯಿತು. ವಿಶೇಷವಾಗಿ ಮಸೀದಿಗಳು ಮತ್ತು ಮುಸ್ಲಿಮರ ಆಸ್ತಿಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಯಿತು .ಹಲವು ಸ್ಥಳಗಳಲ್ಲಿ ಹಿಂದೂ ಸಮುದಾಯದ ಮಾಲೀಕತ್ವ ಹೊಂದಿರುವ ಆಸ್ತಿಗಳು ಮತ್ತು ಅಂಗಡಿಗಳು ಸಹ ನಾಶವಾಗಿವೆ ಎಂದು ವರದಿಯಲ್ಲಿ ಹೇಳಲಾಗಿದೆ.

ಉದ್ರೇಕಕಾರಿ ಹಾಡುಗಳು ಮತ್ತು ಘೋಷಣೆಗಳನ್ನು ಕೆಲ ದಿನಗಳ ಹಿಂದೆ CD ಮತ್ತು ಪೆನ್ ಡ್ರೈವ್ ಗಳಲ್ಲಿ ವಿತರಿಸಲಾಗಿದೆ. ಇದು ಹಿಂಸೆಯು ಪೂರ್ವನಿಯೋಜಿತವೆಂಬುದನ್ನು ಸೂಚಿಸುತ್ತದೆ. “ಟೋಪಿ ವಾಲಾ ಭಿ ಸರ ಜುಖಾ ಕೆ ಜೈ ಶ್ರೀ ರಾಮ ಬೊಲೆಗಾ” (ಟೊಪ್ಪಿ ಧರಿಸಿದವನೂ ತಲೆ ತಗ್ಗಿಸಿ ಜೈ ಶ್ರೀರಾಮ್ ಹೇಳುವನು ), ರಾಮ್ ಲಾಲ್ ಹಮ್ ಆಯೇಂಗೆ ಮಂದಿರ್ ವಹೀ ಮನಾಯೇಂಗೆ “(ರಾಮನ ಮಕ್ಳಳು ನಾವು. ರಾಮ ಮಂದಿರ ಅಲ್ಲಿಯೇ ನಿರ್ಮಿಸುವೆವು ) ಮತ್ತು “ಜೋ ಚ್ಯುಯೆಗ ಹಿಂದೂ ಕಿ ಹಸ್ತೀ ಕೋ, ಜಲಾ ಡಾಲೆಂಗೆ ಹರ್ ಕಿ ಬಸ್ತಿ ಕೋ “(ಹಿಂದೂವಿನ ಮೈ ಮುಟ್ಟಿದವರ ಬಸ್ತಿಯನ್ನೇ ಸುಡುವೆವು ) ನಂತಹ ಘೋಷಣೆಗಳು ಇವುಗಳಲ್ಲಿ ಕೆಲವು.

ವರದಿಯ ಪ್ರಕಾರ, ಎರಡೂ ಸಮುದಾಯದ ಗಲಭೆಕೋರರಲ್ಲಿ ಒಂದು ವರ್ಗವು ಭಾರಿ ಪ್ರಮಾಣದಲ್ಲಿ ಖಡ್ಗಗಳನ್ನೂ ಹೊಂದಿದ್ದವು . ಗೃಹ ಖಾತೆಯ ಪ್ರಧಾನ ಕಾರ್ಯದರ್ಶಿ ಅಮೀರ್ ಸುಭಾನಿ ಇದನ್ನು ದೃಢಪಡಿಸಿದರು. ಚೂಪು ತುದಿ ಶಸ್ತ್ರಾಸ್ತ್ರಗಳನ್ನು ಹೊರಗಿನಿಂದ ಕೊರಿಯರ್ ಮೂಲಕ ಆಮದು ಮಾಡಿಕೊಳ್ಳಲಾಯಿತು ಮತ್ತು ಜಿಲ್ಲೆಯಾದ್ಯಂತ ಉಚಿತವಾಗಿ ವಿತರಿಸಲಾಯಿತು. “ದೊಡ್ಡ ಪ್ರಮಾಣದ ಮೆರವಣಿಗೆಯಲ್ಲಿ ಖಡ್ಗಗಳು ಇರುತ್ತವೆ ಎಂದು ನಾವು ತಿಳಿದಿದ್ದೇವೆ. ನಿಖರವಾಗಿ ಎಷ್ಟು ಗೊತ್ತಿಲ್ಲ. ಆನ್ ಲೈನ್ ನಲ್ಲಿ ಮಾರಾಟವನ್ನು ಟ್ರ್ಯಾಕ್ ಮಾಡುವುದು ಕಷ್ಟ. ಅಸ್ಥಿರವಾದ ಮತ್ತು ಸ್ಪೋಟಕ ಪರಿಸ್ಥಿತಿಯಲ್ಲಿ ನಾವು ಬದುಕುತ್ತಿದ್ದೇವೆ” ಎಂದು ಅವರು ಹೇಳಿದರು.

ಭಾಗಲ್ಪುರ್ ಟೈಮ್ಲೈನ್ ​​ಪ್ರಕಾರ, ಯುಎಹೆಚ್ ಸತ್ಯ-ಶೋಧನೆಯ ವರದಿ ಆಧಾರಿತ , “”ಮಾರ್ಚ್ 17 ರಂದು ಭಗಲ್ಪುರದಲ್ಲಿ ಎರಡು ಸಮುದಾಯಗಳ ನಡುವೆ ಘರ್ಷಣೆಗಳು ಉಂಟಾಗಿದೆ. ಗಂಗಾ ನದಿಯ ದಕ್ಷಿಣ ದಡದಲ್ಲಿರುವ ಸಿಲ್ಕ್ ಸಿಟಿಯಲ್ಲಿ ಕೇಂದ್ರ ಸಚಿವ ಅಶ್ವಿನಿ ಚೌಬೆ ಅವರ ಪುತ್ರ ಅರಿಜಿತ್ ಸಾರಸ್ವತ್ ನೇತೃತ್ವದಲ್ಲಿ ಹಿಂದೂ ಹೊಸವರ್ಷ ‘ವಿಕ್ರಂ ಸಂವತ್ ‘ಪ್ರಯುಕ್ತ ಬಿಜೆಪಿ, ಆರೆಸ್ಸೆಸ್ಸ್ ಮತ್ತು ಭಜರಂಗ ದಳದ ಕಾರ್ಯಕರ್ತರನ್ನೊಳಗೊಂಡ ಗುಂಪಿನಿಂದ ಅನಧಿಕೃತ ಮೆರವಣಿಗೆ ನಡೆಯಿತು.

ಇದಲ್ಲದೆ, ಭಾರತೀಯ ನವವರ್ಶ್ ಜಾಗ್ರಣ್ ಸಮಿತಿಯಿಂದ ಆಯೋಜಿಸಲ್ಪಟ್ಟ ಮೆರವಣಿಗೆಯು 15 ಕಿ.ಮೀ ದೂರವನ್ನು ಕ್ರಮಿಸಿತು, ಇದರಲ್ಲಿ ಕನಿಷ್ಠ ಅರ್ಧ ಡಜನ್ ಮುಸ್ಲಿಂ ಬಾಹುಳ್ಯದ ಪ್ರದೇಶಗಳು ಸೇರಿದ್ದವು. ನಾತ್ನಗರ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಮುಸ್ಲಿಂ ಬಾಹುಳ್ಯ ಪ್ರದೇಶವಾದ ಮೆಡಿನಿ ಚೌಕ್ ನಲ್ಲಿ ಘರ್ಷಣೆಗಳು ಸಂಭವಿಸಿವೆ.
ಸಮಸ್ತಿಪುರವು ಗಲಭೆಗಳಿಂದ ಹೆಚ್ಚು ಪ್ರಭಾವಿತವಾಗಿರುವ ಪ್ರದೇಶಗಳಲ್ಲಿ ಒಂದಾಗಿದೆ “ಕೇಸರಿ ರಿಬ್ಬನ್ ಗಳು ಮತ್ತು ಖಡ್ಗಗಳನ್ನು ಹೊಂದಿರುವ ನೂರಾರು ಜನ ಗುಡ್ರಿ ಬಜಾರ್ ಪ್ರದೇಶದ ಮೂಲಕ ಪ್ರಚೋದಕಾರಿ ಘೋಷಣೆಗಳನ್ನು ಕೂಗುತ್ತಾ ಹಾದು ಹೋಗುತ್ತಿದ್ದಾಗ ಮೇಲ್ಛಾವಣಿಯ ಮೇಲಿನಿಂದ ಹೆಂಚು ಬಿದ್ದು ಒಬ್ಬನಿಗೆ ಬಡಿಯಿತು. ಉದ್ದೇಶಪೂರ್ವಕವಾಗಿ ಅದನ್ನು ಎಸೆಯಲಾಗಿದೆಯೇ ಎಂದು ನನಗೆ ಗೊತ್ತಿಲ್ಲ. ನಂತರ, ಪೋಲೀಸರ ಸಮ್ಮುಖದಲ್ಲೇ ಎರಡು ಸಮುದಾಯಗಳ ನಡುವೆ ಹಿಂಸಾಚಾರ ಸ್ಫೋಟಿಸಿತು. ಪೊಲೀಸರು ಮೂಕ ಪ್ರೇಕ್ಷಕರಾಗಿದ್ದರು .ಹೇಗಾದರೂ, ಎರಡೂ ಗುಂಪುಗಳ ನಡುವಿನ ಗಲಭೆಯನ್ನು ಶಮನಗೊಳಿಸಲಾಯಿತು. ಮೆರವಣಿಗೆದಾರರು ಚದುರಿದರು. ಮಾರುಕಟ್ಟೆಯನ್ನು ಸಂಪೂರ್ಣ ಸ್ಥಗಿತಗೊಳಿಸಲಾಯಿತು . ಬೆಂಕಿಗಾಹುತಿ ಮಾಡುವ ಮೊದಲು ಮುಸ್ಲಿಂ ಒಡೆತನದ ಅಂಗಡಿಗಳನ್ನು ದೋಚಲಾಯಿತು” ಎಂದು ಸ್ಥಳೀಯರು UAH ತಂಡಕ್ಕೆ ತಿಳಿಸಿದರು .

, “ಹಲವು ಸ್ಥಳಗಳಲ್ಲಿ ಪೊಲೀಸರು ಮೂಕ ಪ್ರೇಕ್ಷಕರಂತೆ ಉಳಿದರು ಮತ್ತು ಇತರ ಕಡೆಗಲ್ಲಿ ಜನಸಮೂಹವನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ.” ಎಂದು UAH ಕಂಡುಕೊಂಡಿದೆ.
ಗಲಭೆಯಲ್ಲಿ ಕೇಂದ್ರ ಸಚಿವ ಅಶ್ವಿನಿ ಕುಮಾರ್ ಚೌಬೆ ಅವರ ಪುತ್ರ ಅರಿಜಿತ್ ಸರಸ್ವತ್, ಬಿಜೆಪಿ ಸಂಸದ ಸುಶೀಲ್ ಕುಮಾರ್ ಸಿಂಗ್ ಮತ್ತು ಕಾಂಗ್ರೆಸ್ ಶಾಸಕ ಆನಂದ್ ಶಂಕರ್ ಸಿಂಗ್ ರ ಪಾಲ್ಗೊಳ್ಳುವಿಕೆಯನ್ನು ಸ್ಪಷ್ಟಪಡಿಸುವ ಅನೇಕ ಪ್ರತ್ಯಕ್ಷ ಸಾಕ್ಷ್ಯಗಳು ಮತ್ತು ಛಾಯಾಚಿತ್ರ ಸಾಕ್ಷ್ಯಗಳು ಯುಎಹೆಚ್ ಗೆ ಸಿಕ್ಕಿದೆ. “ರಾಮನಾವಮಿ ಹೆಸರಿನಲ್ಲಿ ಗಲಭೆಯನ್ನು ಉಂಟುಮಾಡಲು ಆರೆಸ್ಸೆಸ್ಸ್, ಬಿಜೆಪಿ ಮತ್ತು ಬಜರಂಗ ದಳದ ಕೋಮುವಾದಿಗಳಿಗೆ ಪೊಲೀಸರು ಮತ್ತು ನಿತೀಶ್ ಕುಮಾರ್ ಸರಕಾರವು ಅನುಮತಿಸಿರುವುದು ಸ್ಪಷ್ಟವಾಗಿದೆ.
ಗಲಭೆಯನ್ನು ಪ್ರಚೋದಿಸಿದವರಿಗೆ ಮತ್ತು ಭಾಗವಹಿಸಿದವರಿಗೆ ಸೂಕ್ತ ಶಿಕ್ಷೆಯನ್ನು ನೀಡಬೇಕೆಂದು ತಂಡವು ಕೋರಿದೆ,.
ಬಲಿಪಶುಗಳಿಗೆ ಶೀಘ್ರದಲ್ಲೇ ಪರಿಹಾರವನ್ನು ನೀಡಲು ಸರಕಾರದೊಂದಿಗೆ ವಿನಂತಿಸಿದೆ. ಈ ಹಿಂಸಾಚಾರವನ್ನು ನ್ಯಾಯಾಂಗ ವಿಚಾರಣೆಗೊಳಪಡಿಸಬೇಕೆಂಬುದು UAH ತಂಡದ ಪ್ರಮುಖ ಬೇಡಿಕೆಗಳಲ್ಲಿ ಒಂದಾಗಿದೆ