ಬೋಪಯ್ಯ ಆಯ್ಕೆ ಪ್ರಶ್ನಿಸಿದ್ದ ಅರ್ಜಿ ವಜಾ

0
898

ನ್ಯೂಸ್ ಡೆಸ್ಕ್
ವಿಧಾನ ಸಭೆಯ ಹಂಗಾಮಿ ಸ್ಪೀಕರ್ ಆಗಿ ಬೋಪಯ್ಯರನ್ನು ಆಯ್ಕೆಗೊಳಿಸಿದ್ದನ್ನು ಪ್ರಶ್ನಿಸಿ ಕಾಂಗ್ರೆಸ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಮ್ ಕೋರ್ಟು ರದ್ದುಗೊಳಿಸಿದೆ. ನಿಜವಾಗಿ ಹಿರಿತನಕ್ಕೆ ಮಹತ್ವ ನೀಡಿ ಸ್ಪೀಕರ್ ಆರಿಸಬೇಕಿತ್ತು. ಆದರೆ ಬಿಜೆಪಿ ಇಲ್ಲಿ ಬಹುಮತದ ವಿಚಾರವನ್ನೇ ಗಮನದಲ್ಲಿಟ್ಟುಕೊಂಡು ಬೋಪಯ್ಯರನ್ನು ಆರಿಸಿದೆ. ಈ ಆಯ್ಕೆ ಸಮಂಜಸವಲ್ಲವೆಂಬುದು ಕಾಂಗ್ರೆಸ್ ಮತ್ತು ಜೆಡಿಎಸ್ ನಿಲುವಾಗಿತ್ತು. ಯಾಕೆಂದರೆ ಬೋಪಯ್ಯನವರ ಇತಿಹಾಸವೂ ಅದಕ್ಕೆ ಪೂರಕವಾಗಿದೆ.  2010ರಲ್ಲಿ ಯಡಿಯೂರಪ್ಪ ವಿರುದ್ಧ ಬಂಡಾಯವೆದ್ದಿದ್ದ ಹನ್ನೊಂದು ಶಾಸಕರನ್ನು ಮತ್ತು ಇಬ್ಬರು  ಪಕ್ಷೇತರ ಶಾಸಕರನ್ನು ಅನರ್ಹಗೊಳಿಸಿ ಯಡಿಯೂರಪ್ಪ ಸರಕಾರಕ್ಕೆ ಜೀವ ನೀಡಿದ್ದರು. ಅದು ದೇಶದಾದ್ಯಂತ ಸುದ್ದಿಯಾಗಿತ್ತು.  ಆದ್ದರಿಂದ ಬಿಜೆಪಿ ಈಗ ಸಂಧಿಗ್ದ ಪರಿಸ್ಥಿತಿ ಎದುರಿಸುತ್ತಿರುವಾಗ ಇಂತಹ ಸ್ಪೀಕರ್‍ ರ ಅಗತ್ಯ ಮನಗಂಡು ಈ ತೀರ್ಮಾನ ಕೈಗೊಂಡಿದೆ. ಆರೆಸ್ಸೆಸ್ ಹಿನ್ನೆಲೆಯಿಂದ ಬಂದ ಬೋಪಯ್ಯ ಎಬಿವಿಪಿಯೊಂದಿಗೆ ಗುರುತಿಸಿಕೊಂಡಿದ್ದವರು.
ವಿಶ್ವಾಸ ಮತ ಯಾಚನೆ ಬೋಪಯ್ಯ ನಡೆಸಿದರೆ ಅದನ್ನು ಅಂಗೀಕರಿಸಲು ಸಿದ್ದವಿಲ್ಲವೆಂದು ಇದು ವಿಶ್ವಾಸ ಮತ ಯಾಚನೆಯನ್ನು ಬುಡಮೇಲುಗೊಳಿಸುವ ತಂತ್ರವೆಂದೂ  ಕಾಂಗ್ರೆಸ್ ನ ಕಪಿಲ್ ಸಿಬಲ್ ಸುಪ್ರೀಮ್ ಕೋರ್ಟಲ್ಲಿ ವಾದಿಸಿದ್ದರು. ಸ್ಪೀಕರ್ ಆಯ್ಕೆಗೆ ಪ್ರಾಯ ಮಾನದಂಡವಲ್ಲ. ವಿಧಾನ ಸಬೆಯಲ್ಲಿದ್ದ ಅವಧಿಯನ್ನು ಗಣನೆಗೆ ತೆಗೆದುಕೊಳ್ಳಬೇಕೆಂದೂ ಈ ಹಿಂದೆಯೂ ಹಿರಿತನ ಹೊಂದದವರು ಸ್ಪೀಕರ್ ಆಗಿದ್ದಾರೆಂದೂ  ನ್ಯಾಯಾಲಯ ಹೇಳಿತು. ವಿಶ್ವಾಸ ಮತದ ದೃಶ್ಯಗಳ ಚಿತ್ರೀಕರಣಕ್ಕೆ ಅವಕಾಶವನ್ನು ಕೋರ್ಟು ನೀಡಿದಾಗ ಕಾಂಗ್ರೆಸ್ ತನ್ನ ಅರ್ಜಿಯನ್ನು ಹಿಂಪಡೆಯಿತು.