ಬ್ರಿಟನ್ ರಾಣಿ ಎಲಿಜಬೆತ್  ಪ್ರವಾದಿ ಮುಹಮ್ಮದ್(ಸ)ರ ವಂಶಸ್ಥೆಯೇ? ಅರಬ್, ಬ್ರಿಟನ್ ಮಾಧ್ಯಮಗಳಲ್ಲಿ ಬಿರುಸಿನ ಚರ್ಚೆ 

0
1988

ದುಬೈ: ಪ್ರವಾದಿ ಮುಹಮ್ಮದ್‍ರ ವಂಶಕ್ಕೆ ಸೇರಿದವರಲ್ಲಿ ಬ್ರಿಟನ್‍ನ ರಾಣಿ ಎಲಿಜಬೆತ್ ಕೂಡ ಓರ್ವರಾಗಿದ್ದಾರೆ ಎಂದು ನಂಬುವ ಕೆಲ ಇತಿಹಾಸಕಾರರನ್ನು ಪತ್ತೆ ಮಾಡಲಾಗಿದೆ ಎಂದು ಅರಬ್ ಮತ್ತು ಬ್ರಿಟೀಷ್ ಮಾದ್ಯಮಗಳು ವರದಿ ಮಾಡಿವೆ. ಈ ವಂಶಪಾರಂಪರ್ಯತೆಯ ಕುರಿತ ಪೂರ್ಣ ಪಟ್ಟಿಯನ್ನು ಯುಎಇ ಮತ್ತು ಗಲ್ಫ್ ನ್ಯೂಸ್ ಬಹಿರಂಗ ಪಡಿಸಿದೆ.
ಎಲಿಜಬೆತ್ ರಾಣಿಯ ವಂಶಪರಂಪರೆಯಲ್ಲಿ 43 ತಲೆಮಾರುಗಳಷ್ಟು ಹಿಂದಕ್ಕೆ ಹೋದಾಗ ಅದು ಪ್ರವಾದಿ ಮುಹಮ್ಮದರ ವಂಶವನ್ನು ಸೇರುತ್ತದೆ ಎಂಬುದನ್ನು ಪತ್ತೆಹಚ್ಚಿರುವುದಾಗಿ ವರದಿಯಲ್ಲಿ ಹೇಳಲಾಗಿದೆ. ಇದರನುಸಾರ ರಾಣಿ ಎಲಿಜಬೆತ್  ವಂಶಪರಂಪರೆಯು ಹದಿನಾಲ್ಕನೇ ಶತಮಾನದ ಕ್ಯಾಂಬ್ರಿಡ್ಜ್ ದೊರೆಯ (ಎಲ್.ಎಫ್.ಕ್ಯಾಂಬ್ರಿಡ್ಜ್) ಮೂಲಕ  ಅರಬ್ ಸ್ಪೈನ್ ರಾಜವಂಶದ ಮೂಲಕ ಪ್ರವಾದಿ ಪುತ್ರಿ ಫಾತಿಮಾರಲ್ಲಿಗೆ ತಲುಪುತ್ತದೆ.
1986ರಲ್ಲಿ ಈ ವರದಿ ಪ್ರಥಮವಾಗಿ ಬಿಡುಗಡೆಯಾದರೂ ಇತ್ತೀಚೆಗೆ ಮೋರೋಕ್ಕೋದ ದಿನಪತ್ರಿಕೆಯೊಂದು ಈ ವರದಿ ಪ್ರಕಟಿಸುವುದರೊಂದಿಗೆ ಚರ್ಚಾ ವಿಷಯವಾಯಿತು. ಬ್ರಿಟೀಷ್ ರಾಜ ವಂಶದವರ ಕುರಿತು ಸಂಶೋಧನೆ ನಡೆಸುತ್ತಿರುವ ಬರ್ಕ್ಸ್ ಪೀಯಾರೀಜ್ ಎಂಬವರು 1986ರಲ್ಲಿ ಈ ವಿವರ ಬಹಿರಂಗ ಪಡಿಸಿದ್ದರು. ಪ್ರವಾದಿವರ್ಯರ ನೇರ ಸಂತಾನ ಪರಂಪರೆಗೆ ಎಲಿಜಬೆತ್ ರಾಣಿ ಸೇರಿದ್ದಾರೆ. ಆದ್ದರಿಂದ ರಾಣಿಗೆ ಹೆಚ್ಚು ಭದ್ರತೆ ಒದಗಿಸಬೇಕೆಂದು ಅಂದಿನ ಪ್ರದಾನಿ ಮಾರ್ಗರೇಟ್ ಥ್ಯಾಚರ್ ಗೆ ಪಿಯಾರೀಜ್ ಮನವಿ ಮಾಡಿದ್ದರು.
ಸ್ಪೈನ್‍ನಲ್ಲಿ ಆಡಳಿತ ನಡೆಸುತ್ತಿದ್ದ ಸೆವಿಲಿಲ್ ಅರಬ್ ರಾಜಕುಮಾರರ ಮುಖಾ೦ತರ ಈ ಪರಂಪರೆ ಬ್ರಿಟೀಷ್ ರಾಜ ಕುಟುಂಬಕ್ಕೆ ತಲುಪುತ್ತದೆ.  ಹನ್ನೊಂದನೇ ಶತಮಾನದಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರವಾಗಿ ಸೆವಿಲಿಯನ್ ಊರು ತೊರೆದ ಮುಸ್ಲಿಮ್ ರಾಜಕುಮಾರಿ ಸೈದಾರ ವಂಶ ಪರಂಪರೆಗೆ ಎಲಿಜಬೆತ್ ಸೇರುತ್ತಾರೆಂಬುದು ಬಕ್ರ್ಸ್‍ನ ವಾದವಾಗಿದೆ.
ಸೆವಿಲಿಲ್ ಅಲ್ ಮುತ್ತಾಮಿದ್ ಇಬ್ನು ಅಬ್ಬಾದ್‍ರ ನಾಲ್ಕನೇ ಪತ್ನಿ ಸೈದಾ. ಅಬ್ಬಾದ್ ನಿಂದ ಸೈದಾರಿಗೆ ಉಂಟಾದ ಮಗ ಸಾನ್ಚೋಯ್‍ರ ನಂತರದವರನ್ನು ಕ್ಯಾಂಬ್ರಿಡ್ಜ್ ದೊರೆ ವಿವಾಹವಾದರು. ಈ ವಾದವನ್ನು ಈಜಿಪ್ತ್ ನ ಪ್ರಮುಖ ವಿದ್ವಾಂಸರೂ ಮಾಜಿ ಗ್ರ್ಯಾಂಡ್ ಮುಫ್ತಿಯೂ ಆದ ಅಲೀ ಗಾಮೋ ಮುಂತಾದವರು  ಅಂಗೀಕರಿಸುವಾಗ ಸೈದಾರ ವಂಶಪಾರಂಪರ್ಯವೇ ಪ್ರಶ್ನಾರ್ಥಕವಾಗಿದೆಯೆಂಬುದು ಅದರ ವಿರೋಧಿ ಬಣದ ವಾದವಾಗಿದೆ.